ಕರ್ನಾಟಕದ ಹೆಸರಾಂತ ಹಾಲಿನ ಉತ್ಪನ್ನಗಳ ಬ್ಯಾಂಡ್ ನಂದಿನಿ ಈಗ ಉತ್ತರಭಾರತದಲ್ಲೂ ರಾರಾಜಿಸಲಿದೆ. ಕನ್ನಡಿಗರ ಮನೆಮನಸ್ಸಿನಲ್ಲಿ ಉತ್ಕೃಷ್ಟ ಗುಣಮಟ್ಟ ಮತ್ತು ಹೊಸತನದೊಂದಿಗೆ ಎಲ್ಲೆಡೆ ಮನೆಮಾತಾಗಿರುವ ಕೆಎಂಎಫ್‌ನ ನಂದಿನಿ ಇನ್ನುಮುಂದೆ ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ. ಕರ್ನಾಟಕ ಮಾತ್ರವಲ್ಲದೇ ಇತ್ತೀಚೆಗೆ ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಮಾರುಕಟ್ಟೆಯಲ್ಲೂ ಕೂಡ ಹಿಡಿತ ಸಾಧಿಸಿರುವ ಹಾಲು ಒಕ್ಕೂಟ ಕೆಎಂಎಫ್ ನಂದಿನಿ ಬ್ರ್ಯಾಂಡ್ ಇದೀಗ ಉತ್ತರ ಭಾರತಲ್ಲೂ ಲಗ್ಗೆ ಇಡುತ್ತಿದೆ.
ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದಲ್ಲೀ ತನ್ನ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲು ನಂದಿನಿ ಹೊರಟಿದೆ. ನಂದಿನಿ ಬ್ರ್ಯಾಂಡ್‌ನ ಹಾಲು, ಮೊಸರು, ತುಪ್ಪ ಬೆಣ್ಣೆ ಹಾಗು ಇತರೆ ಉತ್ಪನ್ನಗಳು ಕರ್ನಾಕದಲ್ಲಿ ಉತ್ತಮ ಗುಣಮಟ್ಟದ ಹಗ್ಗುರುತನ್ನ ಹೊಂದಿವೆ. ಹೀಗಿರುವಾಗ ಇದೇ ಕೆಎಂಎಫ್‌ನ ಹಾಲು ಉತ್ಪನ್ನಗಳ ಬ್ರ್ಯಾಂಡ್ ನಂದಿನಿ ರಾಜಧಾನಿ ನವ ದೆಹಲಿಯನ್ನ ಪ್ರವೇಶಿಸಿದೆ.

ಕರ್ನಾಟಕದ ಅತ್ಯುನ್ನತ ಹಾಲಿನ ಉತ್ಪನ್ನಗಳ ಬ್ರ್ಯಾಂಡ್ ಎಂದೇ ಕರೆಸಿಕೊಳ್ಳುವ ನಂದಿನಿ ಉತ್ಪನ್ನಗಳನ್ನ ಗುರುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ದೆಹಲಿಯ ಅಶೋಕ ಹೋಟೆಲ್‌ನಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳನ್ನ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಮಾರಾಟಕ್ಕೆ ಚಾಲನೆ ನೀಡಲಾಯಿತು.
ನಂದಿನಿ ಬ್ರ್ಯಾಂಡ್‌ನ ಬಿಡುಗಡೆ ವೇಳೆ ಕೆಂಎಫ್‌ನ ಅಧ್ಯಕ್ಷ ಭೀಮಾನಾಯಕ್ ಮಾತನಾಡಿದ್ರು. ದೆಹಲಿಯಲ್ಲಿ 3 ರಿಂದ 4 ಲಕ್ಷ ಲೀಟರ್‌ವರೆಗೆ ಹಾಲನ್ನ ಮಾರಾಟ ಮಾಡಬೇಕು ಎಂದಕೊಂಡದ್ದೇವೆ. ಹಾಗೆ ಇನ್ನು ಮುಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉನ್ನತ ಗುಣಮಟ್ಟ ಹೊಂದಿರುವ ಪರಿಶುದ್ದ ಹಾಲು ಸಿಗಲಿದೆ. ಹಾಗೆ ನಮ್ಮ ನಾಡಿನ ಶುದ್ಧ ಹಸುವಿನ ಹಾಲನ್ನ ದೆಹಲಿ ಜನರಿಗೆ ನೀಡುತ್ತೇವೆ ಎಂದರು.
ಉತ್ತರ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದ ಕೆಎಂಎಫ್
ನಮ್ಮ ರಾಜ್ಯದಲ್ಲದೇ ಮಹಾರಾಷ್ಟ್ರದ ಮುಂಬೈ, ನಾಗಪುರ, ಪುಣೆ ಮತ್ತು ಸೋಲಾಪುರ, ಗೋವಾ, ಹೈದರಾಬಾದ್, ಚೆನ್ನೈ ಮತ್ತು ಕೇರಳ ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ಈಗಾಗಲೇ ಬಳಕೆಯಲ್ಲಿವೆ. ಇದರ ಜೊತೆಗೆ,ರಾಜಧಾನಿ ದೆಹಲಿಗೆ ಪ್ರವೇಶಿಸುವ ಮೂಲಕ, ಉತ್ತರ ಭಾರತದ ಜನರನ್ನ ತಲುಪುವುದೇ ಕೆಎಂಎಫ್‌ನ ಗುರಿಯಾಗಿದೆ.
ಸಧ್ಯದಲ್ಲೇ ನಂದನಿ ಬ್ರ್ಯಾಂಡ್‌ನ ದೋಸೆಹಿಟ್ಟು ಹಾಗು ಇಡ್ಲಿ ಹಿಟ್ಟನ್ನ ಕೆಎಂಎಫ್ ಪ್ರಾಯೋಗಿಕವಾಗಿ ಪರಿಚಯಿಸಲು ಮುಂದಾಗಿದೆ. ಇದೇ ನವೆಂಬರ್ 26 ರಂದು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಿದೆ. ಇನ್ನು ದಹಲಿ ಮಾರುಕಟ್ಟೆಗೆ ನಂದಿನಿ ಉತ್ಪನ್ನ ಪರವೇಶಿಸುವ ಮೂಲಕ ಗುಜರಾತ್ ಮೂಲದ ಅಮುಲ್, ಮದರ್ ಡೈರಿ, ಮಧುಸೂಧನ್ ಮತ್ತು ನಮಸ್ತೆ ಇಂಡಿಯಾ ಹಾಲು/ಮೊಸರು ಉತ್ಪನ್ನಗಳಿಗೆ ನಂದಿನಿ ಯಾವ ರೀತಿ ಪೈಪೋಟಿ ನೀಡಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ದೆಹಲಿ ಮಾರುಕಟ್ಟೆಯಲ್ಲಿ ಕೆಎಂಎಫ್ ಆಧಿಪತ್ಯವನ್ನು ಸ್ಥಾಪಿಸಲು ಸಕಲ ರೀತಿಯಲ್ಲಿ ಸಜ್ಜಾಗ್ತಿದೆ. ಈಗಾಗಲೇ ಟ್ರಯಲ್ ರನ್ ಮಾಡಿರುವ ಕೆಎಂಎಫ್, 54 ಗಂಟೆಯಲ್ಲಿ ರಸ್ತೆಯ ಮೂಲಕ ಮಂಡ್ಯದಿಂದ ದೆಹಲಿಗೆ ಹಾಲನ್ನು ಸಾಗಿಸಿದೆ. ಮತ್ತು, ಅದರ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಹೀಗಾಗಿ ಮಂಡ್ಯದಿಂದ ದೆಹಲಿಗೆ ಹಾಲನ್ನು ಸಾಗಿಸಲು 2,190 ಟ್ಯಾಂಕರುಗಳನ್ನು ಬಳಸಲು ಕೆಎಂಎಫ್ ನಿರ್ಧರಿಸಿದೆ.
ದೇಶದಲ್ಲಿ ನಂದಿನಿ ಬ್ರ್ಯಾಂಡ್‌ನ ಖ್ಯಾತಿ
ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ಯಶಸ್ವಿಯಾಗಿ ತನ್ನ 50 ವರ್ಷದ ಪ್ರಯಾಣವನ್ನ ಮುಂದುವರೆಸುತ್ತಿದೆ. ಹೀಗಿರುವಾಗ ನಂದಿನಿಯ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಪ್ರಖ್ಯಾತಿಯನ್ನ ಪಡೆದುಕೊಳ್ತಿವೆ. ಕೆಲವು ತಿಂಗಳ ಹಿಂದೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಸ್ಪೋನ್ಸರ್‌ಶಿಪ್ ಕೆಎಂಎಫ್ ವಹಿಸಿತ್ತು.
ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಜೆರ್ಸಿ ಮೇಲೆ 'ನಂದಿನಿ' ಬ್ರ್ಯಾಂಡ್ ಹೆಸರು ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ, ವಿಶ್ವಕಪ್ ವೇಳೆ ನಂದಿನಿ ಉತ್ಪನ್ನಗಳನ್ನ ಕೂಡ ಪೂರೈಸಲಾಗಿತ್ತು. ಆ ಮೂಲಕ ವಿಶ್ವಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ಗಮನ ಸೆಳೆದಿದ್ದವು.
ವಿಶ್ವಕಪ್ ವೇಳೆ ನಂದಿನಿ ಬ್ರ್ಯಾಂಡ್‌ನ ಸಿಹಿತಿಂಡಿಗಳು, ಹಾಲಿನಿಂದ ಕೂಡಿದ ಎನರ್ಜಿ ಡ್ರಿಂಕ್ಅನ್ನು ಕೆಎಂಎಫ್ ಅಮೆರಿಕಕ್ಕೆ ಪೂರೈಕೆ ಮಾಡಿತ್ತು. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಉತ್ಪನ್ನಗಳನ್ನ ಅಧಿಕೃತವಾಗಿ ಮಾರಾಟ ಮಾಡಲು ಶುರುಮಾಡಿದೆ.


Click it and Unblock the Notifications