ಬೆಂಗಳೂರು, ಸೆಪ್ಟೆಂಬರ್ 26: ಕಾನೂನು ಸುವ್ಯವಸ್ಥೆ ಕಾಪಾಡುವ ವೇಳೆ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಾರೆ. ಈ ಸಮಯದಲ್ಲಿ ಅವರು ಆಕಸ್ಮಿಕ ಅಪಘಾತಗಳಿಗೆ ಒಳಗಾಗಬಹುದು ಅಥವಾ ಮೃತಪಡಬಹುದು. ಈ ಹಿನ್ನೆಲೆಯಲ್ಲಿ, ಮೃತಪಡುವ ಅಥವಾ ಗಾಯಗೊಂಡ ಆರಕ್ಷಕ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯ ಕುಟುಂಬಗಳಿಗೆ ಸರ್ಕಾರವು ನೀಡುವ ನೆರವು ಮಹತ್ವದ್ದಾಗಿದೆ.
ಈ ಆಧಾರದ ಮೇಲೆ, ರಾಜ್ಯ ಸರ್ಕಾರವು ಜೀವಾ ವಿಮಾ ಮೊತ್ತವನ್ನು 20 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗೆ ಏರಿಸಲು ಮಹತ್ವದ ಆದೇಶವನ್ನು ಹೊರಡಿಸಿದೆ. ಇದು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಮೂಲಕ, ಕುಟುಂಬದ ಆಧಾರ ಸ್ತಂಭವಾಗಿದ್ದ ಸಿಬ್ಬಂದಿಗೇನಾದರೂ ಆದರೆ ಅವರ ಮೇಲಿನ ಮಾನಸಿಕ ಒತ್ತಾಯವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಈ ಆದೇಶದ ಪ್ರಕಾರ ಫಾಲೋಯರ್ ಹುದ್ದೆಯಿಂದ ಮಹಾನಿರ್ದೇಶಕ ಹಾಗೂ ಆರಕ್ಷಕ ನಿರೀಕ್ಷಕರ ಹುದ್ದೆಯವೆರೆಗೂ ಈ ಜೀವ ವಿಮಾ ಸೌಲಭ್ಯ ಅನ್ವಯವಾಗಲಿದೆ. ರಾಜ್ಯದಲ್ಲಿ ಒಟ್ಟು 90,349 ಅಧಿಕಾರಿ/ ಸಿಬ್ಬಂದಿಗಳಿಗೆ ಈ ಆದೇಶ ಅನ್ವಯವಾಗುತ್ತದೆ. ಸರ್ಕಾರದ ಒಳಾಡಳಿತ ಇಲಾಖೆಯ ಕಾರ್ಯದರ್ಶಿ ಕೆಎನ್ ವನಜಾ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಈ ಯೋಜನೆಯ ವಿಶೇಷತೆಯು, ವಿಮಾ ಕಂಪನಿಗಳಿಗೆ ವಿಮಾ ಸಂಸ್ಥೆಗಳ ಪರಿಗಣನೆ ನೀಡದೆ, ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ ಮೃತರಾಗುವ ಉದ್ಯೋಗಿಗಳ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಲೆಕ್ಕಶೀರ್ಷಿಕೆಯಡಿಯಲ್ಲಿ ಪಾವತಿಸಲು ಸರ್ಕಾರವು ಸೂಚನೆಯನ್ನು ನೀಡಿದೆ.
ಪೊಲೀಸರ ಅಧಿಕಾರಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಮತ್ತು ಅವರ ಕುಟುಂಬಗಳ ಕಲ್ಯಾಣವನ್ನು ಪ್ರಾಮುಖ್ಯತೆಯೊಂದಿಗೆ ಪರಿಗಣಿಸುವುದು ಅಗತ್ಯವಾಗಿದೆ. ಹೀಗಾಗಿ ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಿಬ್ಬಂದಿ/ ಅಧಿಕಾರಿಗಳ ಕುಟುಂಬದ ಏಳಿಗೆಗೆ ಸರ್ಕಾರ ಪ್ರಥಮ ಆದ್ಯತೆ ನೀಡಬೇಕಾಗಿದೆ . ಈ ಯೋಜನೆಯು ಮೂಲಕ ಅಧಿಕಾರಿ- ಸಿಬ್ಬಂದಿಗಳ ಮನೋಸ್ಥಿತಿಯನ್ನು ಸುಧಾರಿಸುವ ಮೂಲಕ, ಮುಂದೆ ಅವರು ಮಾಡುವ ಕರ್ತವ್ಯದಲ್ಲಿ ಹೆಚ್ಚು ಪ್ರೇರಣೆ ಸಿಗಲಿದೆ ಎನ್ನುವುದು ಸರ್ಕಾರ ನಿರೀಕ್ಷೆಯಾಗಿದೆ
2023ರ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ, ಗುಂಪು ವಿಮಾ ಮೊತ್ತವನ್ನು ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿತ್ತು, ಇದು ಅಧಿಕಾರಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಕಾರಾತ್ಮಕ ಬೆಂಬಲವನ್ನು ನೀಡುತ್ತದೆ.


Click it and Unblock the Notifications