ಬಡವರ ಆರ್ಥಿಕ ನೆರವಿಗಾಗಿ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ "ಅನ್ನಭಾಗ್ಯ" ಯೋಜನೆ (Anna Bhagya Scheme) ಕೂಡಾ ಒಂದು. ರೇಷನ್ ಕಾರ್ಡ್ (Ration Card) ಎಂಬುದು ಕರ್ನಾಟಕ ಸರ್ಕಾರದ (Karnataka Govt) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಒಂದು ಮುಖ್ಯ ದಾಖಲೆಯಾಗಿದೆ. ಇದು ಒಂದು ಕುಟುಂಬದ ಆರ್ಥಿಕ ಸ್ಥಿತಿಯ ಆಧಾರದಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು (ಅಕ್ಕಿ, ಗೋಧಿ, ಸಕ್ಕರೆ, ಧಾನ್ಯಗಳು) ಪಡೆಯಲು ಸಹಕಾರಿಯಾಗಿದೆ. ಇನ್ನು ಈ ದಾಖಲೆ ವಿಳಾದ ಪುರಾವೆಯಾಗಿ, ಆದಾಯ ಪುರಾವೆಯಾಗಿ ಮತ್ತು ಸರ್ಕಾರಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ ಹೀಗೆ ಮುಂತಾದ ಯೋಜನೆಗಳಿಗೆ ಅರ್ಹತೆ ಪಡೆಯಲು ಸಹಕಾರಿಯಾಗಿದೆ.

ಈಗಾಗಲೇ ಕರ್ನಾಟಕದಲ್ಲಿ ಸುಮಾರು 1.4 ಕೋಟಿಗೂ ಅಧಿಕ ರೇಷನ್ ಕಾರ್ಡ್ ಹೊಂದಿದ್ದಾರೆ. ಕರ್ನಾಟಕದಲ್ಲಿ ರೇಷನ್ ಕಾರ್ಡ್‌ಗಳನ್ನು ಕುಟುಂಬದ ಆದಾಯ ಮತ್ತು ಸ್ಥಿತಿಯ ಆಧಾರದಲ್ಲಿ ಹಲವು ರೀತಿಯಲ್ಲಿ ವಿಂಗಡಿಸಲಾಗಿದೆ. ಅದರಲ್ಲಿ ಅಂತ್ಯೋದಯ ಅನ್ನ ಯೋಜನೆ, ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್‌ಗಳು ಕೂಡಾ ಸೇರಿವೆ. ಅದರಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಬಳಕೆದಾರರು ಸರ್ಕಾರದಿಂದ ಹಲವು ಆರ್ಥಿಕ ಸಹಾಯಗಳನ್ನು ನೀಡಲಾಗುತ್ತಿದೆ.
ಯಾರೇ ಆಗಲಿ ರೇಷನ್ ಕಾರ್ಡ್ ಹೊಂದಿದ್ದು, ಅದರ ಪ್ರಯೋಜನಗಳನ್ನು ಪಡೆಯದಿದ್ದರೆ, ಆ ದಾಖಲೆ ಇದ್ದೂ ಇರದಂತಾಗುತ್ತದೆ. ಆದ್ದರಿಂದ ಬಿಪಿಎಲ್ ಆಗಲಿ, ಎಪಿಎಲ್ ಆಗಲಿ ಯಾವುದೇ ರೇಷನ್ ಕಾರ್ಡ್ ಹೊಂದಿದ್ದವರು ಈ ತಪ್ಪು ಮಾಡಲೇಬಾರದು. ರದ್ದಾಗೋದು ಪಕ್ಕಾ.
ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿ ಒಂದು ವೇಳೆ ಮಾರಿದರೆ, 6 ತಿಂಗಳು ನಿಮ್ಮ ರೇಷನ್ ಕಾರ್ಡ್ ತಾತ್ಕಾಲಿಕವಾಗಿ ರದ್ದಾಗುತ್ತದೆ. ಆದ್ದರಿಂದ ಎಚ್ಚರದಿಂದ ಇರುವುದು ಒಳ್ಳೆಯದು. ಸಾಮಾನ್ಯವಾಗಿ ಸರ್ಕಾರದ ಯಾವುದೇ ಯೋಜನೆ ಸೌಲಭ್ಯಗಳನ್ನು ಪಡೆಯಬೇಕೆಂದರೆ ಆಧಾರ್ ಕಾರ್ಡ್‌ನಂತೆ ರೇಷನ್ ಕಾರ್ಡ್ ಕೂಡಾ ಬೇಕಾಗುತ್ತದೆ. ಒಂದೇ ವೇಳೆ ರೇಷನ್ ಕಾರ್ಡ್ ರದ್ದಾದರೆ, ಹಲವು ಸೌಲಭ್ಯಗಳಿಂದ, ಹಲವು ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ಸರ್ಕಾರ ನೀಡುವ ಸೂಚನೆಗಳ ಬಗ್ಗೆ ಸದಾ ಗಮನಹರಿಸುತ್ತಿರಬೇಕು.
ಇ-ಕೆವೈಸಿ ಕಡ್ಡಾಯ: ಇನ್ನು ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಇಕೆವೈಸಿ ಸಂಪೂರ್ಣಗೊಳಿಸಬೇಕು. ಇದರಿಂದ ನಕಲಿ ರೇಷನ್ ಕಾರ್ಡ್‌ಗಳ ಮೇಲೆ ನಿಗಾ ವಹಿಸಲು ಸರ್ಕಾರಕ್ಕೆ ಸುಲಭವಾಗುತ್ತದೆ. ಅದೇ ಕಾರಣದಿಂದ ಸರ್ಕಾರ ಕೂಡಾ ಇ-ಕೆವೈಸಿ ಕಡ್ಡಾಯಗೊಳಿಸಿದೆ. ಒಂದು ವೇಳೆ ಕೆವೈಸಿ ಅಪ್ಡೇಟ್ ಮಾಡದೇ ಹೋದರೆ, ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಯಾರೆಲ್ಲಾ ಇನ್ನೂ ಇ-ಕೆವೈಸಿ ಅಪ್ಡೇಟ್ ಮಾಡದಿದ್ದರೆ, ತಕ್ಷಣ ಮಾಡಿಕೊಳ್ಳುವುದು ಸೂಕ್ತ.
ಅಕ್ಕಿ ಪಡೆಯದಿದ್ದರೆ ರೇಷನ್ ಕಾರ್ಡ್ ರದ್ದು: ಹೌದು, ಬಡವರ ಅನುಕೂಲಕ್ಕಾಗಿ ಸರ್ಕಾರ ಸಬ್ಸಿಡಿ ದರದಲ್ಲಿ ಅಕ್ಕಿ, ಆಹಾರ ಧಾನ್ಯಗಳನ್ನು ನೀಡುತ್ತದೆ. ಆದ್ರೆ ಒಂದು ವೇಳೆ 6 ತಿಂಗಳು ನೀವು ಸರ್ಕಾರದಿಂದ ನೀಡಲಾಗುವ ಅಕ್ಕಿ, ಆಹಾರ ಧಾನ್ಯಗಳನ್ನು ಪಡೆಯದಿದ್ದರೆ ರೇಷನ್ ಕಾರ್ಡ್ ರದ್ದಾಗುತ್ತದೆ. ಅಲ್ಲದೇ ಈಗಾಗಲೇ ಈ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಯಾರೆಲ್ಲಾ ಬಿಪಿಎಲ್ ಕಾರ್ಡ್ ಇದ್ದೂ, ಪಡಿತರ ಪಡೆಯುತ್ತಿಲ್ಲವೋ ಅವರ ಕಾರ್ಡ್ ರದ್ದು ಮಾಡಲು ಸರ್ಕಾರ ಮುಂದಾಗಿದೆ.
ಅಕ್ಕಿ ಮಾರಾಟ ಮಾಡಿದ್ರೂ ಕ್ರಮ: ಇನ್ನು ಜನರ ಅನುಕೂಲಕ್ಕಾಗಿ ಸರಕಾರ ಅಕ್ಕಿ ನೀಡಿದ್ರೆ, ಅದನ್ನೇ ಹೆಚ್ಚಿನವರು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳಿ ಕೇಳಿಬರುತ್ತಿದೆ. ಈ ಹಿನ್ನೆಲೆ ಸರ್ಕಾರ ಕೂಡಾ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ. ಒಂದು ವೇಳೆ ಅಕ್ಕಿ ಮಾರಾಟ ಮಾಡಿದ್ದು ಗೊತ್ತಾದ್ರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡಿ, ರೇಷನ್ ಕಾರ್ಡನ್ನೂ ರದ್ದು ಮಾಡಲಾಗುತ್ತದೆ.
ಆದಾಯ ಮೀರಿದ್ದರೂ, ಬಿಪಿಎಲ್ ಸ್ಟೇಟಸ್ ಬದಲಾಯಿಸದೇ ಇರುವುದು:
ಕುಟುಂಬದ ವಾರ್ಷಿಕ ಆದಾಯ ಲೆಕ್ಕಕ್ಕಿಂತ ಹೆಚ್ಚಿದ್ದರೂ ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಬಳಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಈ ಆರೋಪ ಸಂಬಂಧಿಸಿ ಇಲಾಖೆಯವರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಸತ್ಯ ಸಾಬೀತಾದರೆ, ಅಂತಹವರ ಕಾರ್ಡ್ ರದ್ದಾಗುವ ಸಾಧ್ಯತೆ ಹೆಚ್ಚಿದೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications