ಶಾಲೆಯ ಮಕ್ಕಳು ಈಗ ತಾನೆ ದಸರಾ ರಜೆಯನ್ನ ಮುಗಿಸಿ ಮತ್ತೆ ಶಾಲೆಗೆ ಹೋಗುತ್ತಿದ್ದಾರೆ. ಈ ವೇಳೆಯೇ ನವೆಂಬರ್ ತಿಂಗಳಲ್ಲಿ ಮತ್ತೆ ಸಾಲು ಸಾಲು ರಜೆಗಳು ಬರಲಿವೆ. ಹಾಗಾದ್ರೆ ನವೆಂಬರ್‌ನಲ್ಲಿ ಮತ್ತೆ ಶಾಲೆಗಳು ಮುಚ್ಚಲಿವೆಯೇ ಎಂಬ ಪ್ರಶ್ನೆ ಕೂಡ ಎಲ್ಲರಿಗಿದೆ.
ಈ ವರ್ಷವಂತೂ ಶಾಲೆ ಮಕ್ಕಳಿಗೆ ಬರೀ ಹಬ್ಬವೇ ಎನ್ನುವಂತಾಗಿದೆ. ಒಂದರ ನಂತರ ಒಂದರಂತೆ ರಜೆಗಳು ಬರ್ತಾನೆ ಇವೆ. ಇದರ ಜೊತೆಗೆ ಬೆಸಿಗೆ ರಜೆ, ದಸರಾ ರಜೆ ಹಾಗೆ ಇನ್ನು ಕೆಲವು ಶಾಲೆಗಳಿಗೆ ಕ್ರಿಸ್ಮಸ್ ರಜೆಗಳು. ಇಷ್ಟು ರಜೆಗಳ ಮಧ್ಯೆ ನವೆಂಬರ್ ಕೂಡ ರಜೆಗಳ ತಿಂಗಲಾಗಿ ಬಿಟ್ಟಿದೆ. ಈ ತಿಂಗಳಲ್ಲೂ ಕೂಡ ವಾರ ಪೂರ್ತಿ ರಜೆಯೇ ತುಂಬಿಕೊಂಡಿವೆ.

ರಾಜ್ಯದ ವಿದ್ಯಾರ್ಥಿಗಳು ಈಗ ದೀರ್ಘ ಆರು ದಿನಗಳ ರಜೆಯನ್ನು ಎದುರುನೋಡಬಹುದು. ನವೆಂಬರ್ 13 ರಂದು ಪ್ರಾರಂಭವಾಗುವ ಈ ರಜೆಗಳು 18ರ ವರೆಗೆ ಒಂದರ ನಂತರ ಬಂದಿವೆ. ಹಾಗೆ ಅದರ ಹಿಂದಿನ ಕಾರಣ ನೋಡೋದಾದ್ರೆ ಕೆಲವು ಪ್ರಮುಖ ಹಬ್ಬಗಳು ಮತ್ತು ಕಾರ್ಯಕ್ರಮಗಳು ಒಟ್ಟಿಗೆ ಬಂದಿರುವುದೆ ಇದಕ್ಕೆ ಮುಖ್ಯ ಕಾರಣವಾಗಿದೆ.
ಅಲ್ಲದೆ ಈಗಷ್ಟೇ ದೀಪಾವಳಿ ಸರಣಿ ರಜೆ ಮುಗಿಸಿ ಶಾಲೆಗಳತ್ತ ಮುಖಮಾಡಿದ್ದ ವಿದ್ಯಾರ್ಥಿಗಳಿಗೆ ಇದೀಗ ಮತ್ತೊಮ್ಮೆ ಸಾಲು ಸಾಲು ರಜೆ ಅನುಭವಿಸುವಂತಾಗಿದೆ.
ದಸರಾ,ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಮಿಂದೆದ್ದ ರಾಜ್ಯದ ವಿದ್ಯಾರ್ಥಿಳು ಈಗಷ್ಟೇ ಶಾಲಾ ಕಾಲೇಜುಗಳತ್ತ ಮುಖ ಮಾಡಿದ್ದರು. ಇನ್ನು ಈ ಬಾರಿ ದಸರಾ ಜೊತೆಗೆ ಮಳೆರಾಯ ಕೂಡ ಶಾಲೆಯ ರಜೆಗಳಿಗೆ ಮುಖ್ಯ ಕಾರಣನಾಗಿದ್ದ. ಹೀಗಾಗಿ ಮಕ್ಕಳು ಈ ಬಾರಿ ಶಾಲೆಗಳಿಗೆ ಹೋದದ್ದಕ್ಕಿಂತ ರಜೆಯಲ್ಲಿ ಮುಳುಗಿದ್ದೆ ಹೆಚ್ಚು
ಇತ್ತೀಚಿನ ವರದಿಯ ಪ್ರಕಾರ, ಈ ವರ್ಷ ಅಂದರೆ 2024ರ ನವೆಂಬರ್ 13 ರಿಂದ ನವೆಂಬರ್ 18 ರವರೆಗೆ ಕರ್ನಾಟಕದಲ್ಲಿ ಶಾಲೆಯ ರಾಜ್ಯಗಳು ಮುಚ್ಚಿರುತ್ತವೆ ಎಂದು ವರದಿ ಹೇಳಿದೆ. ಇಲ್ಲಿದೆ ಎಲ್ಲಾ ರಜೆಗಳ ಪಟ್ಟಿ ಪರಿಶೀಲಿಸಿ.
ಕರ್ನಾಟಕ ಶಾಲಾ ರಜೆಗಳ ವಿವರ
ರಜೆಗಳನ್ನ ಮುಗಿಸಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ನವೆಂಬರ್ ತಿಂಗಳಿನಲ್ಲಿ ಮತ್ತೆ ಮಕ್ಕಳಿಗೆ ಸಾಲು ಸಾಲು ರಜೆಗಳು ಎದುರಾಗಲಿವೆ. ಅಂದರೆ ಮುಂಬರುವ ವಾರದಲ್ಲಿ ಕರ್ನಾಟಕದ ಶಾಲೆಗಳಿಗೆ ದೀರ್ಘ ರಜೆ ಇರುತ್ತದೆ. ನವೆಂಬರ್ 13, 2024 ರಿಂದ ಪ್ರಮುಖ ಹಬ್ಬಗಳು ಮತ್ತು ಆಚರಣೆಗಳು ನಡೆಯುವುದರಿಂದ ಶಾಲೆಗಳು ಬಂದ್ ಆಗಲಿವೆ. ನವೆಂಬರ್ 13, 2024 ರಂದು ತುಳಸಿ ಪೂಜೆಯೊಂದಿಗೆ ರಜಾ ದಿನಗಳು ಪ್ರಾರಂಭವಾಗಲಿವೆ. ನಂತರ ನವೆಂಬರ್ 14 ರಂದು ಮಕ್ಕಳ ದಿನ ಮತ್ತು ನವೆಂಬರ್ 15 ರಂದು ಗುರುನಾನಕ್ ಜಯಂತಿ. ನವೆಂಬರ್ 15 ರಂದು ಕಾರ್ತಿಕ ಪೂರ್ಣಿಮೆ ಇರುವುದರಿಂದ ಸಾಲುಗಟ್ಟಿ ರಜೆಗಳು ಬರಲಿವೆ. ಇದರ ಜೊತೆಗೆ ಮುಂಬರುವ ಶನಿವಾರ ಅಂದರೆ ನವೆಂಬರ್ 16 ರಂದು ಅರ್ಧ ದಿನ ಮತ್ತು ಭಾನುವಾರದಂದು ಶಾಲೆಗಳಿಗೆ ರಜೆ.
ಜೊತೆಗೆ ನವೆಂಬರ್ 18, ಕನಕದಾಸರ ಜಯಂತಿ ಇರುವುದರಿಂದ ಮತ್ತೆ ಶಾಲೆಗಳಿಗೆ ರಜೆ ಇದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಶಾಲಾ ರಜೆಗಳ ಕುರಿತು ವಿವರವಾದ ಮಾಹಿತಿಗಾಗಿ ಶಾಲಾ ಅಧಿಕಾರಿಗಳನ್ನು ಸಂಪರ್ಕಿಸಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಇನ್ನು ನವೆಂಬರ್ 13 ರಿಂದ 18 ರವರೆಗಿನ ಕರ್ನಾಟಕ ಶಾಲಾ ರಜೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ ಪರಿಶೀಲಿಸಿ.
ದಿನಾಂಕ ರಜೆಗಳು
ನವೆಂಬರ್ 13 ತುಳುಸಿ ಪೂಜೆ
ನವೆಂಬರ್ 14 ಮಕ್ಕಳ ದಿನಾಚರಣೆ
ನವೆಂಬರ್ 15 ಗುರುನಾನಕ್ ಜಯಂತಿ
ಕಾರ್ತಿಕ ಪೌರ್ಣಿಮ
ನವೆಂಬರ್ 16 ಅರ್ಧ ದಿನ
ನವೆಂಬರ್ 17 ಭಾನುವಾರ
ನವೆಂಬರ್ 18 ಕನಕದಾಸ ಜಯಂತಿ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications