ಇನ್ನೇನು 2025 ನೇ ವರ್ಷ ಮುಗಿಯುತ್ತಾ ಬಂತು. ಮುಂದಿನ ವರ್ಷ ಮತ್ತೆ ಮಕ್ಕಳ ಶೈಕ್ಷಣಿಕ ಪರೀಕ್ಷೆಗಳು ನಡೆಯಲಿದೆ. ಅದರಲ್ಲೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ (SSLC-PUC Exam) ಯಾವಾಗ? ಎಂಬ ಕುತೂಹಲ ಈಗಲೇ ಹೆಚ್ಚಾಗಿದೆ. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2026ರ ಎಸ್ಎಸ್‌ಎಲ್‌ಸಿ-1, ಎಸ್ಎಸ್‌ಎಲ್‌ಸಿ-2 ಹಾಗೂ ಪಿಯುಸಿ-1 ಮತ್ತು ಪಿಯುಸಿ-2 ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎನ್ನಲಾಗಿದೆ.

ಇದೀಗ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂತಿಮ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷಾ ತಯಾರಿ ಮಾಡಿಕೊಳ್ಳುವುದು ಉತ್ತಮ.
ಯಾವಾಗ SSLC ಪರೀಕ್ಷೆ?
ಎಸ್ಎಸ್‌ಎಲ್‌ಸಿ-1 ಪರೀಕ್ಷೆಗಳು ಮಾರ್ಚ್ 18, 2026 ರಂದು ಆರಂಭವಾಗಿ ಏಪ್ರಿಲ್ 2, 2026 ರಂದು ಕೊನೆಗೊಳ್ಳಲಿವೆ. ಅದೇ ರೀತಿ, ದ್ವಿತೀಯ ಪಿಯುಸಿ-1 ಪರೀಕ್ಷೆಗಳು ಫೆಬ್ರವರಿ 28 ರಿಂದ ಪ್ರಾರಂಭವಾದರೆ ಮಾರ್ಚ್ 17, 2026 ರವರೆಗೆ ನಡೆಯಲಿವೆ ಎಂದು ವರದಿಯಾಗಿದೆ.
ಕರ್ನಾಟಕ ಎಸ್ಎಸ್‌ಎಲ್‌ಸಿ-1 ಪರೀಕ್ಷೆಯ ವೇಳಾಪಟ್ಟಿ ಹೀಗಿದೆ:
| ದಿನಾಂಕ | ವಿಷಯ |
| ಮಾರ್ಚ್ 18 | ಪ್ರಥಮ ಭಾಷೆ |
| ಮಾರ್ಚ್ 23 | ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, |
| ಮಾರ್ಚ್ 25 | ದ್ವಿತೀಯ ಭಾಷೆ |
| ಮಾರ್ಚ್ 28 | ಗಣಿತ, ಸಮಾಜಶಾಸ್ತ್ರ ವಿಷಯ |
| ಮಾರ್ಚ್ 30 | ತೃತೀಯ ಭಾಷೆ ಹಾಗೂ NSQF ವಿಷಯಗಳು |
| ಏಪ್ರಿಲ್ 1 | ಜೂನಿಯರ್ ಟೆಕ್ನಿಕಲ್ ಸ್ಕೂಲ್ ವಿಷಯಗಳು |
| ಏಪ್ರಿಲ್ 2 | ಸಮಾಜ ವಿಜ್ಞಾನ ಪರೀಕ್ಷೆಗಳು ನಿಗದಿಯಾಗಿವೆ. |
ಎಸ್ಎಸ್‌ಎಲ್‌ಸಿ-2 ಪರೀಕ್ಷೆಗಳು ಮೇ 2026 ರಲ್ಲಿ ನಡೆಯಲಿದ್ದು, ಮೇ 18 ಪ್ರಥಮ ಭಾಷೆ
| ದಿನಾಂಕ | ವಿಷಯ |
| ಮೇ 18 | ಪ್ರಥಮ ಭಾಷೆ |
| ಮೇ 19 | ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ |
| ಮೇ 20 | ದ್ವಿತೀಯ ಭಾಷೆ ಪರೀಕ್ಷೆ |
| ಮೇ 21 | ಗಣಿತ, ಸಮಾಜಶಾಸ್ತ್ರ |
| ಮೇ 22 | ತೃತೀಯ ಭಾಷೆ ಮತ್ತು NSQF ವಿಷಯಗಳು |
| ಮೇ 23 | ಸಮಾಜ ವಿಜ್ಞಾನ |
| ಮೇ 25 | ಜೂನಿಯರ್ ಟೆಕ್ನಿಕಲ್ ಸ್ಕೂಲ್ ವಿಷಯಗಳ ಪರೀಕ್ಷೆ. |
ಪಿಯುಸಿ-1 ಪರೀಕ್ಷೆಗಳು ಫೆಬ್ರವರಿ 2026 ರಲ್ಲಿ ಆರಂಭವಾಗಿ ಮಾರ್ಚ್ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದೆ ಎಂದು ವರದಿಯಾಗಿದೆ. ಆದ್ದರಿಂದ ಮುಂದಿನ ವರ್ಷ ಬೇಗನೆ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
| ದಿನಾಂಕ | ವಿಷಯ |
| ಫೆಬ್ರವರಿ 28 | ಕನ್ನಡ, ಅರೇಬಿಕ್ |
| ಮಾರ್ಚ್ 2 | ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಶಾಸ್ತ್ರ |
| ಮಾರ್ಚ್ 3 | ಇಂಗ್ಲಿಷ್ ಪರೀಕ್ಷೆ |
| ಮಾರ್ಚ್ 4 | ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ |
| ಮಾರ್ಚ್ 5 | ಇತಿಹಾಸ |
| ಮಾರ್ಚ್ 6 | ಭೌತಶಾಸ್ತ್ರ ಪರೀಕ್ಷೆ |
| ಮಾರ್ಚ್ 7 | ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂವಿಜ್ಞಾನ |
| ಮಾರ್ಚ್ 9 | ರಸಾಯನಶಾಸ್ತ್ರ, ಶಿಕ್ಷಣ, ಮೂಲ ಗಣಿತ |
| ಮಾರ್ಚ್ 10 | ಅರ್ಥಶಾಸ್ತ್ರ |
| ಮಾರ್ಚ್ 11 | ತರ್ಕಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗೃಹ ವಿಜ್ಞಾನ |
| ಮಾರ್ಚ್ 12 | ಹಿಂದಿ ಪರೀಕ್ಷೆ |
| ಮಾರ್ಚ್ 13 | ರಾಜ್ಯಶಾಸ್ತ್ರ |
| ಮಾರ್ಚ್ 14 | ಲೆಕ್ಕಶಾಸ್ತ್ರ, ಗಣಿತ |
| ಮಾರ್ಚ್ 16 | ಸಮಾಜಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ |
ಮಾರ್ಚ್ 17 | ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್, ಅಪಾರೆಲ್ ಮೇಡ್‌ಅಪ್ಸ್ ಮತ್ತು ಹೋಮ್ ಫರ್ನಿಶಿಂಗ್, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್ ಪರೀಕ್ಷೆಗಳಿವೆ. |
ಪಿಯುಸಿ-2 ಪರೀಕ್ಷೆಗಳು ಏಪ್ರಿಲ್ 2026 ರಲ್ಲಿ ಆರಂಭವಾಗಿ ಮೇ ತಿಂಗಳಿನಲ್ಲಿ ಮುಗಿಯುತ್ತದೆ.
| ದಿನಾಂಕ | ವಿಷಯ |
| ಏಪ್ರಿಲ್ 25 | ಕನ್ನಡ, ಅರೇಬಿಕ್ |
| ಏಪ್ರಿಲ್ 27 | ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ಜೀವಶಾಸ್ತ್ರ |
| ಏಪ್ರಿಲ್ 28 | ರಾಜ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳಿವೆ. |
| ಏಪ್ರಿಲ್ 29 | ಗಣಿತ, ಗೃಹ ವಿಜ್ಞಾನ, ಮೂಲ ಗಣಿತ |
| ಏಪ್ರಿಲ್ 30 | ಅರ್ಥಶಾಸ್ತ್ರ |
| ಮೇ 2 | ಇತಿಹಾಸ, ರಸಾಯನಶಾಸ್ತ್ರ |
| ಮೇ 4 | ಇಂಗ್ಲಿಷ್ |
| ಮೇ 5 | ಹಿಂದಿ ಪರೀಕ್ಷೆ |
| ಮೇ 6 | ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣ |
| ಮೇ 7 | ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ |
| ಮೇ 8 | ಭೂಗೋಳಶಾಸ್ತ್ರ, ಮನಶಾಸ್ತ್ರ, ಭೂವಿಜ್ಞಾನ |
| ಮೇ 9 | ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್, ಅಪಾರೆಲ್ ಮೇಡ್‌ಅಪ್ಸ್ ಮತ್ತು ಹೋಮ್ ಫರ್ನಿಶಿಂಗ್, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಪರೀಕ್ಷೆ |
ಇದಿಷ್ಟು ಮುಂಬರುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು ಈಗಲೇ ಪರೀಕ್ಷೆಗೆ ತಯಾರಿ ನಡೆಸಿದರೆ ಉತ್ತಮ.
More From GoodReturns

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ



Click it and Unblock the Notifications