ಜನ ಸಾಮಾನ್ಯರಿಗೆ ಜನಪ್ರತಿಧಿಗಳ ಆಸ್ತಿ ಮೌಲ್ಯ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ನಮ್ಮ ಕರ್ನಾಟಕ ಕೋಟ್ಯಾಧಿಪತಿ ಶಾಸಕರ ರಾಜ್ಯ ಎಂದು ಮತ್ತೊಮ್ಮೆ ಹಣೆಪಟ್ಟಿ ಧರಿಸಿಕೊಂಡಿದೆ. ಸಾಮಾನ್ಯವಾಗಿ ಜನರ ತಲೆಯಲ್ಲಿ ಏನಿರುತ್ತದೆ ಅಂದರೆ, ಶಾಸಕರು, ಸಚಿವರು ಎಂದರೆ ಹೆಚ್ಚು ಹೆಚ್ಚು ಆಸ್ತಿ ಹೊಂದಿರುತ್ತಾರೆ ಎಂಬುದಾಗಿದೆ. ಇದರ ನಡುವೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ತೇಯು ಒಂದು ವರದಿ ತಯಾರಿಸಿದೆ. ಆ ವರದಿಯ ಪ್ರಕಾರ 100 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ 31 ಶಾಸಕರು ಕರ್ನಾಟಕದಲ್ಲಿ ಇದ್ದಾರೆ ಎನ್ನಲಾಗಿದೆ. ಹೀಗಾಗಿಯೇ ನಮ್ಮ ರಾಜ್ಯವು ಅತಿ ಶ್ರೀಮಂತ ಶಾಸಕರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ಈ ಪಟ್ಟಿಯಲ್ಲಿ ಯಾವ್ಯಾವ ಶಾಸಕರಿಗೆ ಎಷ್ಟು ಆಸ್ತಿ ಇದೆ ಎಂಬುದನ್ನು ತಿಳಿಸಲಾಗಿದೆ. ಪಟ್ಟಿಯ ಅನುಸಾರ ಎರಡನೇ ಸ್ಥಾನದಲ್ಲಿರುವುದು ನಮ್ಮ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಇವರು ಹೊಂದಿರುವ ಆಸ್ತಿಯ ಮೌಲ್ಯ 1,413 ಕೋಟಿ ರೂ. ಎನ್ನಲಾಗಿದೆ. ಅಲ್ಲದೇ ಪ್ರಥಮ ಸ್ಥಾನದಲ್ಲಿ ಮುಂಬೈನ ಬಿಜೆಪಿಯ ಪರಾಗ್ ಶಾ ಇದ್ದಾರೆ. ಇವರ ಆಸ್ತಿಯ ಮೊತ್ತ ₹3,400 ಕೋಟಿ ಎನ್ನಲಾಗಿದೆ. ಈ ವರದಿಯು ಭಾರತದ ರಾಜಕೀಯ ನಾಯಕತ್ವದಲ್ಲಿ ಆರ್ಥಿಕ ಅಸಮಾನತೆಯ ಸ್ಪಷ್ಟ ಚಿತ್ರಣ ನೀಡುತ್ತದೆ.
ಭಾರತದ ಶ್ರೀಮಂತ ಶಾಸಕರ ಪಟ್ಟಿ:
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯ ಪ್ರಕಾರ, ಬಿಲಿಯನೇರ್ ಶಾಸಕರ ಸಂಖ್ಯೆಯಲ್ಲಿ ದೇಶದ ಇತರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ.
1ನೇ ಸ್ಥಾನ - ಕರ್ನಾಟಕ (31 ಶಾಸಕರು)
2ನೇ ಸ್ಥಾನ - ಆಂಧ್ರಪ್ರದೇಶ (27 ಶಾಸಕರು)
3ನೇ ಸ್ಥಾನ - ಮಹಾರಾಷ್ಟ್ರ (18 ಶಾಸಕರು)
ಈ ವರದಿಯ ಪ್ರಕಾರ ಕರ್ನಾಟಕದ ಈ 31 ಶಾಸಕರ ಒಟ್ಟು ಘೋಷಿತ ಆಸ್ತಿಯ ಮೊತ್ತ ₹14,179 ಕೋಟಿ ಎನ್ನಲಾಗಿದೆ. ಅಲ್ಲದೇ ಇದು ಇದು ಇತರ ರಾಜ್ಯಗಳಿಗಿಂತ ಹೆಚ್ಚಾಗಿದೆ.
ಕರ್ನಾಟಕದ ಅತ್ಯಂತ ಶ್ರೀಮಂತ ಶಾಸಕರು:
ಡಿ.ಕೆ. ಶಿವಕುಮಾರ್ (₹1,413 ಕೋಟಿ) - ಕನಕಪುರ ಶಾಸಕ, ಕಾಂಗ್ರೆಸ್
ಕೆ.ಎಚ್. ಪುಟ್ಟಸ್ವಾಮಿ ಗೌಡ (₹1,267 ಕೋಟಿ) - ಪಕ್ಷೇತರ ಶಾಸಕ
ಪ್ರಿಯಕೃಷ್ಣ (₹1,156 ಕೋಟಿ) - ಗೋವಿಂದರಾಜನಗರ ಶಾಸಕ, ಕಾಂಗ್ರೆಸ್
ಭಾರತದಲ್ಲಿರುವ 119 ಬಿಲಿಯನೇರ್ ಶಾಸಕರ ಪೈಕಿ 76 ಮಂದಿ ಕರ್ನಾಟಕದವರಾಗಿದ್ದಾರೆ. ಈ ಸಂಪತ್ತಿನ ಮೌಲ್ಯ ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ, ರಾಜಕೀಯ ಸಂಪತ್ತಿನ ಹೆಚ್ಚಳವನ್ನು ತೋರಿಸುತ್ತದೆ. ಅಲ್ಲದೇ ಇದು ರಾಜಕೀಯ ಹಣೆಬರಹದ ಮೇಲೆ ಆರ್ಥಿಕ ಸ್ಥಿತಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ದರ್ಶನ ನೀಡುತ್ತದೆ.
ಇನ್ನು ಕರ್ನಾಟಕದಲ್ಲಿ ಅತಿಹೆಚ್ಚು ಶ್ರೀಮಂತ ಶಾಸಕರಿದ್ದಾರೆ. ಹೀಗಾಗಿ ಕರ್ನಾಟಕವನ್ನು ಕೋಟ್ಯಧಿಪತಿ ಶಾಸಕರನ್ನು ಹೊಂದಿರುವ ರಾಜ್ಯ ಎಂದು ಕರೆಯಲಾಗುತ್ತದೆ. ಶಾಸಕರ ಆರ್ಥಿಕ ವೃದ್ಧಿಯು ಜನಸಾಮಾನ್ಯರ ಜೀವನದೊಂದಿಗೆ ಹೋಲಿಸಿದಾಗ ವ್ಯತ್ಯಾಸ ಸ್ಪಷ್ಟವಾಗುತ್ತದೆ. ರಾಜಕೀಯದಲ್ಲಿ ಹಣದ ಪ್ರಭಾವ ಹೇಗೆ ಹೆಚ್ಚಾಗಿದೆ ಎಂಬುದನ್ನು ಈ ವರದಿ ಪ್ರತಿಬಿಂಬಿಸುತ್ತದೆ. ಹೀಗಾಗಿ, ರಾಜಕೀಯ ಸ್ವಚ್ಛತೆ, ತಾರ್ಕಿಕ ಚರ್ಚೆ ಮತ್ತು ಜನಪ್ರಭುತ್ವದ ಸಮಾನತೆಗಾಗಿ ಜನರು ಎಚ್ಚರಿಕೆಯಿಂದ ಆಗಬೇಕಾಗಿದೆ.
ಇನ್ನು ಇದೆಲ್ಲ ನೋಡುತ್ತಿದ್ದರೆ ರಾಜ್ಯ ಬೆಲೆ ಏರಿಕೆಯ ಬಿಸಿಯಿಂದ ನಲುಗುತ್ತಿದೆ. ಆದಾಯ ಕಡಿಮೆ ಹಾಗೂ ಖರ್ಚು ಹೆಚ್ಚಾಗಿರುವ ಸ್ಥಿತಿಯನ್ನು ಜನ ಅನುಭವಿಸುತ್ತಿದ್ದಾರೆ. ಇದರ ನಡುವೆ ಜನಪ್ರತಿನಿಧಿಗಳ ಆಸ್ತಿ ಮೌಲ್ಯ ಮಾತ್ರ ಹೆಚ್ಚಾಗಿರುತ್ತದೆ. ಅಲ್ಲದೇ ಈ ಹಣದ ಪ್ರಭಾವ ರಾಜಕೀಯ ಶುದ್ಧತೆಯನ್ನು ಕುಂದಿಸುತ್ತದೆ. ಹಾಗೂ ನಮ್ಮ ಸಮಾಜದ ಉನ್ನತಿಗಾಗಿ ಸಚೀವಸ್ತ್ರ ಮತ್ತು ಉತ್ತರದಾಯಕತೆ ಇರುವ ಆಡಳಿತ ಬೇಕಾಗಿದೆ. ಈ ರೀತಿಯ ಆರ್ಥಿಕ ಅಸಮಾನತೆ ಮುಂದುವರಿದರೆ, ಭವಿಷ್ಯದಲ್ಲಿ ರಾಜಕೀಯದ ಮೇಲೆ ಜನರ ನಂಬಿಕೆ ಕುಗ್ಗಬಹುದು. ಆದ್ದರಿಂದ, ರಾಜಕೀಯ ಶುದ್ಧತೆ ಮತ್ತು ಜನಪ್ರಭುತ್ವದ ಸಮಾನತೆಗಾಗಿ ಜನರು ಎಚ್ಚರಿಕೆಯಿಂದ ಆಗಬೇಕಾಗಿದೆ.


Click it and Unblock the Notifications