ಕರ್ನಾಟಕ (Karnataka) ರಾಜ್ಯದಾದ್ಯಂತ ಹವಾಮಾನ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಚಳಿಯಂತೂ ಕೆಲವು ಕಡೆಗಳಲ್ಲಿ ಮಾತ್ರ, ಬೆಳಗ್ಗೆ ಮಾತ್ರ ಇದ್ದು, ಮಧ್ಯಾಹ್ನ ಆಗುತ್ತಿದ್ದಂತೆ ತಾಪಮಾನ ಭಾರೀ ಏರಿಕೆಯಾಗುತ್ತಿದೆ. ದಿನವಡೀ ಚಳಿ, ತಂಪಾದ ಗಾಳಿ ಬೀಸುತ್ತಿದ್ದ ಬೆಂಗಳೂರಿನಲ್ಲಿ (Bengaluru) ಇದೀಗ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದೆ ಎನ್ನಲಾಗಿದೆ. ಫೆಬ್ರವರಿ ತಿಂಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತಲೂ ಭಾರೀ ಹೆಚ್ಚಾಗಿದ್ದು, ಮಾರ್ಚ್‌ನಿಂದ ಬೇಸಿಗೆ (Summer) ಆರಂಭವಾಗಲಿದೆ ಎಂದು ವರದಿಯಾಗಿದೆ.

ಇನ್ನು ಮಾರ್ಚ್ 1 ರಿಂದ ಬೇಸಿಗೆ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಬೇಸಿಗೆಯಲ್ಲಿ ತಾಪಮಾ 39 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಫೆಬ್ರವರಿಯ ಮಧ್ಯಭಾಗದಲ್ಲಿ ಗರಿಷ್ಠ ತಾಪಮಾನ 31-33 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಸಾಮಾನ್ಯ ದಿನಗಳಿಗೆ ಹೋಲಿಸಿದ್ರೆ, 1-2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ಕೆಲವು ಪ್ರದೇಶಗಳಲ್ಲಿ 34 ಡಿಗ್ರಿ ಸೆಲ್ಸಿಯಸ್ ಮೀರಿದೆ ಎಂದು ಹೇಳಲಾಗಿದೆ. ಇನ್ನು ಕನಿಷ್ಠ ತಾಪಮಾನ 19-20 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದು, ರಾತ್ರಿಯಲ್ಲೂ ಬಿಸಿಲಿನ ತಾಪದ ಪರಿಣಾಮ ಬೀರುತ್ತಿದೆ.
ಇನ್ನು ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ, 2026 ರಲ್ಲಿ ಮಾರ್ಚ್‌ನಿಂದ ಮೇವರೆಗೆ ಕರ್ನಾಟಕದಾದ್ಯಂತ ತಾಪಮಾನ ಭಾರೀ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಫೆಬ್ರವರಿಯಲ್ಲಿ ತಾಪಮಾನ ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಮಾರ್ಚ್ 1 ರಿಂ ಬೇಸಿಗೆ ಆರಂಭವಾಗಲಿದೆ ಎನ್ನಲಾಗಿದೆ. ಈ ಬೇಸಿಗೆಯಲ್ಲಿ ತಾಪಮಾನ ಸುಮಾರು 39 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಮಂಗಳವಾರದ ಬೆಂಗಳೂರಿನ ಹವಾಮಾನ!
ಮಂಗಳವಾರ ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 32.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದ್ರೆ ಇದು 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇನ್ನು ಹೆಎಎಲ್ ವಿಮಾನ ನಿಲ್ದಾಣವು ಸಾಮಾನ್ಯ ದಿನಗಳಿಗಿಂತ ನಿನ್ನೆ 32.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಇದೇ ರೀತಿ ತಾಪಮಾನ ಏರಿಕೆಯಾಗಿದ್ದು, ಗರಿಷ್ಠ ತಾಪಮಾನ 32.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸಾರ್ವಜನಿಕರಿಗೆ ಎಚ್ಚರಿಕೆ!
ದಿನೇ ದಿನೇ ತಾಪಮಾನ ಹೆಚ್ಚಾದಂತೆ, ಬೇಸಿಗೆ ಹೆಚ್ಚಾಗಲಿದೆ. ಈ ಪರಿಣಾಮ ಆರೋಗ್ಯ ಸಮಸ್ಯೆ, ನೀರಿನ ಅಭಾವ, ಕೃಷಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೇ ಉತ್ತರ ಕರ್ನಾಟಕ ಜಿಲ್ಲೆಗಳಾ ಬೀದರ್, ರಾಯಚೂರು, ಕಲಬುರಗಿ, ಬಾಗಲಕೋಟೆ ಸೇರಿದಂತೆ ಅನೇಕ ಕಡೆಗಳಲ್ಲಿ ತಾಪಮಾನ ನಾಲ್ಕೈದು ದಿನಗಳವರೆಗೆ ಭಾರೀ ಏರಿಕೆಯಲ್ಲಿರಲಿದೆ ಎಂದು ಹೇಳಲಾಗಿದೆ.
ವರದಿ ಪ್ರಕಾರ, ಈ ಬಾರಿ ಬೇಸಿಗೆಕಾಲ ನಿರೀಕ್ಷೆಗೂ ಮೊದಲೇ ಆರಂಭವಾಗಲಿದ್ದು, ಜನರೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಹೊರಗಿನ ಕೆಲಸಗಳನ್ನು ಆದಷ್ಟು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾಡಿಕೊಳ್ಳಿ. ಮಧ್ಯಾಹ್ನದ ವೇಳೆ ಹೊರ ಹೋಗುವುದನ್ನು ತಪ್ಪಿಸಿ. ಇನ್ನು ಬೇಸಿಗೆಯಲ್ಲಿ ಬೇಕಾದಷ್ಟು ನೀರು ಕುಡಿಯುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.


Click it and Unblock the Notifications