ಬೆಂಗಳೂರು, ಸೆಪ್ಟೆಂಬರ್ 12: ಸಾಧಿಸಬೇಕೆಂಬ ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ, ಮರಳುಗಾಡಿನ ಯುವತಿಯ ಯಶೋಗಾಥೆಯ ಸಾಕ್ಷಿ. ಹಳ್ಳಿಗಾಡಿನ ಮೆಕ್ಯಾನಿಕ್ ಮಗಳಾದ ಈಕೆ ಇಂದು ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಉದ್ಯೋಗಿಯಾಗಿ ಸೇರ್ಪಡೆಗೊಂಡಿದ್ದಾರೆ.
ಈ ಯುವತಿಯೇ ಕವಿತಾ ಕಾಂಕರ್. ರಾಜಸ್ಥಾನದ ಬಾಲೋತ್ರ ಜಿಲ್ಲೆಯ ಹಳ್ಳಿಗಾಡಿನ ಹಾಗೂ ಮರುಭೂಮಿಯ ನಡುವೆ ಇರುವ ಮಧಾಸರ್ ಗ್ರಾಮದಲ್ಲಿ ಹುಟ್ಟಿ ಬೆಳೆದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಕವಿತಾ ತನ್ನದೇ ಆದ ಒಂದು ಹೊಸ ಅಧ್ಯಾಯವನ್ನು ಬರೆಯಹೊರಟಿದ್ದಾರೆ. ಮರಳುಗಾಡಿನ ಹುಟ್ಟಿ ಬೆಳೆದ ಕಾಂಕರ್ ದೈತ್ಯ ಸಂಸ್ಥೆ ಗೂಗಲ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಕವಿತಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಬಾಲೋತ್ರದ ಒಂದು ಖಾಸಗಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. 12ನೇ ತರಗತಿಯಲ್ಲಿ 79.80% ಅಂಕ ಗಳಿಸಿದ ಇವರು ಇದಾದ ಬಳಿಕ ಜೈಪುರದಲ್ಲಿ ಜೆಇಇ ಪ್ರವೇಶಕ್ಕಾಗಿ ತಯಾರಿ ಆರಂಭಿಸಿದ್ದರು. ಜೆಇಇ ಪರೀಕ್ಷೆಯನ್ನು ಉತ್ತೀರ್ಣಗೊಂಡ ನಂತರ, 2019ರಲ್ಲಿ ಖರ್ಗಪುರ ಐಐಟಿಯಲ್ಲಿ ಪ್ರವೇಶ ಪಡೆದಳು. ಹಳ್ಳಿಯಿಂದ ಬಂದ ಕಾರಣ ಆರಂಭದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕೊಂಚ ಕಷ್ಟ ಅನುಭವಿಸಿದ್ದು, ತನ್ನ ಅಣ್ಣನ ಸಹಾಯ ಪಡೆದುಕೊಂಡು ಅದನ್ನು ಜಯಿಸಿದರು.
ಖರ್ಗಪುರ ಐಐಟಿಯಿಂದ ಬಿ.ಟೆಕ್ ಇಂಜಿನಿಯರಿಂಗ್ (ಓಷನ್ ಎಂಜಿನಿಯರಿಂಗ್ ಅಂಡ್ ನೇವಲ್ ಆರ್ಕಿಟೆಕ್ಚರ್ ಮತ್ತು ಮೈಕ್ರೋ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಅಪ್ಲಿಕೇಶನ್) ಪದವಿಯನ್ನು ಪಡೆದ ನಂತರ, ಕವಿತಾ 2023ರಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆದರೆ ಈಗ ಬೆಂಗಳೂರಿನಲ್ಲಿ ಗೂಗಲ್‌ಗೆ ಸೇರಲು ಸಿದ್ಧರಾಗಿದ್ದಾರೆ.
ಕವಿತಾಳ ಅವರ ತಂದೆ ಗೋಮಾರಾಮ್ ಕಾಂಕರ್ ಬಾಲೋತ್ರದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾರೆ. ತಾಯಿ ಗೃಹಿಣಿ. ಕವಿತಾಳ ಇಬ್ಬರು ಅಣ್ಣಂದಿರು ಕೂಡ ಎಂಜಿನಿಯರಿಂಗ್ ಪದವೀಧರರು.ಹಿರಿಯ ಸಹೋದರ ಪ್ರೇಮ್ ಕಂಕರ್ ಐಐಟಿ ಖರಗ್ಪುರದಿಂದ ಪಾಸೌಟ್ ಆಗಿದ್ದು, ಎರಡನೇ ಸಹೋದರ ಹರೀಶ್ ಕೂಡ ಎನ್ಐಟಿ ಕ್ಯಾಲಿಕಟ್‌ನಲ್ಲಿ ಬಿಟೆಕ್ ಮಾಡಿ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದಾರೆ.
ಕವಿತಾ ಅವರ ಮೊದಲ ಸಂದರ್ಶನ ಜೂನ್ ತಿಂಗಳಲ್ಲಿ ನಡೆದಿತ್ತು. ಕಂಪನಿಯ ತಜ್ಞರ ಮೂಲಕ 7-8 ಸುತ್ತಿನ ಸಂದರ್ಶನಗಳನ್ನು ನಡೆಸಲಾಯಿತು. ಅಂತಿಮ ಸಂದರ್ಶನವು ಆಗಸ್ಟ್ ತಿಂಗಳಿನಲ್ಲಿ ನಡೆಯಿತು. ಇದಾದ ನಾಲ್ಕು ದಿನಗಳ ನಂತರ ಅವರು ಕಂಪನಿಯಿಂದ ಜಾಯಿಂಗ್ ಲೆಟರ್ ಪಡೆದರು. ಮುಂದಿನ ತಿಂಗಳಿನಿಂದ ಸಾಫ್ಟ್ವೇರ್ ಇಂಜಿನಿಯರ್ (SDE-II) ಹುದ್ದೆಗಾಗಿ ಗೂಗಲ್‌ಗೆ ಸೇರರಿದ್ದಾರೆ.
ಕವಿತಾಳ ಈ ಸಾಧನೆಗೆ ಮೆಕ್ಯಾನಿಕ್ ಆಗಿರುವ ಅವರ ತಂದೆಯ ಕಠಿಣ ಪರಿಶ್ರಮ ಮತ್ತು ಕುಟುಂಬದ ಬೆಂಬಲ ಕಾರಣ. ಓರ್ವ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಕವಿತಾ ಹೇಗೆ ತನ್ನ ಕನಸನ್ನು ನನಸಾಗಿಸಿಕೊಂಡರು ಎಂಬುದಕ್ಕೆ ಅವರ ಯಶೋಗಾಥೆ ಪ್ರೇರಣೆಯಾಗಿದ್ದಾರೆ.


Click it and Unblock the Notifications