ಐಪಿಎಲ್ ಅಂದ್ರೆ ಅದೇನೋ ಸಂಭ್ರಮ ಸಡಗರ. 6 ವರ್ಷದ ಹುಡುಗರಿಂದ ಹಿಡಿದು 60 ವರ್ಷದ ವೃದ್ಧರವರಿಗೂ ಐಪಿಎಲ್ ಕಿಕ್ ಕೊಡುತ್ತೆ. ನಮ್ ಟೀಮ್ ನಿಮ್ ಟೀಮ್ ಅಂತಾ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನ ತೋರಿಸುತ್ತಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಐಪಿಎಲ್ ಅಂದರೆ ಈಗ ಕ್ರಿಕೆಟ್ ಮಾತ್ರ ಅಲ್ಲ. ಬದಲಾದ ಕಾಲದಲ್ಲಿ ವ್ಯಾಪಾರ ಕೂಡ ಹೌದು.

ಪಂದ್ಯಾವಳಿ ಆರಂಭವಾಗುವ ಮುನ್ನ ಕುಬೇರ ವರಕ್ಕೆ ಪ್ರಾಪ್ತರಾಗಿರುವ ತಂಡದ ಮಾಲೀಕರು ಒಂದು ಕಡೆ ಬಂದು ಕೂರುತ್ತಾರೆ. ಹಳಬರಿರಲಿ.. ಹೊಸ ಹುಡುಗರೇ ಇರಲಿ.. ಪ್ರತಿಭೆ ಇದ್ದರೆ ಎಷ್ಟೇ ಲಕ್ಷ- ಕೋಟಿ ಖರ್ಚಾದರೂ ಕೂಡ ಈ ತಂಡದ ಮಾಲೀಕರು ದೇಶ-ವಿದೇಶದ ಆಟಗಾರರ ಮೇಲೆ ಬಾಜಿ ಕಟ್ಟುತ್ತಾರೆ.
ಈ ಹಿನ್ನೆಲೆ ಪ್ರತಿ ವರ್ಷ ಕ್ರೀಡಾಂಗಣದಲ್ಲಿ ರಣಕಲಿಗಳ ಸಮರ ನೋಡುವ ಮೊದಲು ಹಲವರು ಈ ಹರಾಜು ಕಾರ್ಯಕ್ರಮ ಕಣ್ತುಂಬಿಕೊಳ್ಳುತ್ತಾರೆ. ಈ ಸೌಭಾಗ್ಯ ಈ ವರ್ಷ ಕೂಡ ಕ್ರೀಡಾಭಿಮಾನಿಗಳಿಗೆ ಸಿಕ್ಕಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಸ್ಟೇಡಿಯಂನಲ್ಲಿನ ಬೆಳಕು ಫ್ರಾಂಚೈಸಿ ಮಾಲೀಕರ ಕಡೆ ತಿರುಗಲಿದೆ. ಐಪಿಎಲ್ 2026ರ ಮಿನಿ ಹರಾಜು ನಡೆಯಲಿದೆ.
ಇಂದಿನ ಈ ಹರಾಜಿನಲ್ಲಿ 350ಕ್ಕೂ ಹೆಚ್ಚು ಆಟಗಾರರು ಕಣದಲ್ಲಿರಲಿದ್ದಾರೆ. ಆ ಪೈಕಿ 40 ಆಟಗಾರರ ಮೂಲ ಬೆಲೆ 2 ಕೋಟಿ. ಈ ಆಟಗಾರರನ್ನು ತಮ್ಮ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಹರಸಾಹಸ ಪಡಲಿದ್ದಾರೆ. ಇದೇ ಪಟ್ಟಿಯಲ್ಲಿ ಸ್ಟಾರ್ ಆಟಗಾರರು ಇದ್ದು ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನೂ ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿರುವ ಈ ಮಿನಿ ಹರಾಜಿನಲ್ಲಿ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಒಡೆತನದ ಕೆಕೆಆರ್ ಶ್ರೀಮಂತ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹತ್ತು, ಇಪ್ಪತ್ತಲ್ಲ, ₹64.3 ಕೋಟಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಖಜಾನೆಯಲ್ಲಿ ಇಟ್ಕೊಂಡು ಹರಾಜಿಗೆ ಬಂದಿದೆ. 13 ಪ್ಲೇಯರ್ಸ್‌ಗಳನ್ನು ಕೊಳ್ಳುವ ಅವಕಾಶ ಈ ತಂಡಕ್ಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೊರತು ಪಡಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ಬಳಿ ಅತೀ ಹೆಚ್ಚು ಹಣ ಇದೆ. ₹43.4 ಕೋಟಿಯನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ 9 ಸ್ಥಾನಗಳಿಗೆ ಈ ಹಣ ಮೀಸಲಿಟ್ಟಿದೆ.
ತಂಡಗಳ ಕೋಚಿಂಗ್ ವಿಭಾಗದಲ್ಲಿ ಹಲವು ಬದಲಾವಣೆ
ಈ ಬಾರಿ ಹಲವು ತಂಡದ ಹಿಂದಿನ ಶಕ್ತಿ ಮತ್ತು ಬೆನ್ನೆಲುಬಾದ ಕೋಚಿಂಗ್ ವಿಭಾಗದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಚಂದ್ರಕಾಂತ್ ಪಂಡಿತ್ ಅವರ ರಾಜೀನಾಮೆ ಹಿನ್ನೆಲೆ ಅಭಿಷೇಕ್ ನಾಯರ್ ಕೆಕೆಆರ್ ತಂಡದ ಮುಖ್ಯ ಕೋಚ್ ಆಗಿ ಬಡ್ತಿ ಪಡೆದಿದ್ದಾರೆ. ಇನ್ನು ನ್ಯೂಜಿಲ್ಯಾಂಡ್‌ನ ಬೆಂಕಿ ಬೌಲರ್ ಟಿಮ್ ಸೌಥಿ ಬೌಲಿಂಗ್ ಕೋಚ್ ಆಗಿ ಕೆಕೆಆರ್ ತಂಡದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸಮನ್ ಶೇನ್ ವ್ಯಾಟ್ಸನ್ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಇನ್ನು ಕರುನಾಡಿನ ಹೆಮ್ಮೆಯ ಆಟಗಾರ ರಾಹುಲ್ ದ್ರಾವಿಡ್ ನಿರ್ಗಮನದ ಹಿನ್ನೆಲೆ ಶ್ರೀಲಂಕಾ ದಂತಕತೆ ಕುಮಾರ್ ಸಂಗಕ್ಕಾರ ಮರಳಿ ರಾಜಸ್ಥಾನ ರಾಯಲ್ಸ್ ಗೂಡು ಸೇರಿದ್ದಾರೆ. ಭರತ್ ಅರುಣ್ ಲಕ್ನೋ ಸೂಪರ್ ಜೈಂಟ್ಸ್‌ನ ಬೌಲಿಂಗ್ ಕೋಚ್ ಆದರೆ ಕಾರ್ಲ್ ಕ್ರೋವೆ ಸ್ಪಿನ್ ವಿಭಾಗಕ್ಕೆ ಬಲ ತುಂಬುವ ಕೆಲಸ ಮಾಡಲಿದ್ದಾರೆ.
ತಂಡಗಳ ಆಯ್ಕೆ ಹಿಂದಿನ ತಲೆ ಯಾರ್ಯಾರದ್ದು ?
ಚೆನ್ನೈ ಸೂಪರ್ ಕಿಂಗ್ಸ್
ಮುಖ್ಯ ಕೋಚ್ - ಸ್ಟೀಫನ್ ಫ್ಲೆಮಿಂಗ್
ಕ್ಯಾಪ್ಟನ್ - ಋತುರಾಜ್ ಗಾಯಕ್‌ವಾಡ್
ಸಿಇಓ - ಕಾಶಿ ವಿಶ್ವನಾಥನ್
ಬೇರೆ ಸದಸ್ಯರು - ರೂಪಾ ಗುರುನಾಥ್
ಮುಂಬೈ ಇಂಡಿಯನ್ಸ್
ಮುಖ್ಯ ಕೋಚ್ - ಮಹೇಲಾ ಜಯವರ್ಧನೆತಂಡದ ವ್ಯವಸ್ಥಾಪಕ: ರಾಹುಲ್ ಸಾಂಘ್ವಿ
ಸಿಇಒ: ಆಶಿಶ್ ಕುಮಾರ್ ಚೌಹಾಣ್
ಮಾಲೀಕರ ಪ್ರತಿನಿಧಿ: ನೀತಾ ಅಂಬಾನಿ, ಆಕಾಶ್ ಅಂಬಾನಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮುಖ್ಯ ಕೋಚ್: ಆಂಡಿ ಫ್ಲವರ್
ಅಧ್ಯಕ್ಷ: ಪ್ರಥಮೇಶ್ ಮಿಶ್ರಾ
ಕ್ರಿಕೆಟ್ ನಿರ್ದೇಶಕ: ಮೊ ಬೊಬಟ್
ಕೋಲ್ಕತ್ತಾ ನೈಟ್ ರೈಡರ್ಸ್
ಮುಖ್ಯ ಕೋಚ್: ಅಭಿಷೇಕ್ ನಾಯರ್
ಮೆಂಟರ್ : ಡ್ವೇನ್ ಬ್ರಾವೋ
ಸಿಇಒ: ವೆಂಕಿ ಮೈಸೂರು
ಮಾಲೀಕರ ಪ್ರತಿನಿಧಿ: ಜಾನ್ವಿ ಮೆಹ್ತಾ
ರಾಜಸ್ಥಾನ್ ರಾಯಲ್ಸ್
ಮುಖ್ಯ ಕೋಚ್: ಕುಮಾರ್ ಸಂಗಕ್ಕಾರ
ಬ್ಯಾಟಿಂಗ್ ಕೋಚ್: ವಿಕ್ರಮ್ ರಾಥೋರ್
ದೆಹಲಿ ಕ್ಯಾಪಿಟಲ್ಸ್
ಮುಖ್ಯ ಕೋಚ್: ಹೇಮಾಂಗ್ ಬದಾನಿ
ಸಹಾಯ ಕೋಚ್: ವೇಣುಗೋಪಾಲ್ ರಾವ್
ಮಾಲೀಕರ ಪ್ರತಿನಿಧಿ: ಜಿಎಂ ರಾವ್
ಪಂಜಾಬ್ ಕಿಂಗ್ಸ್
ಮುಖ್ಯ ಕೋಚ್: ರಿಕಿ ಪಾಂಟಿಂಗ್
ನಾಯಕ: ಶ್ರೇಯಸ್ ಅಯ್ಯರ್
ಮಾಲೀಕರು: ಪ್ರೀತಿ ಜಿಂಟಾ, ನೆಸ್ ವಾಡಿಯಾ
ಸಿಇಒ: ಸತೀಶ್ ಮೆನನ್
ಲಕ್ನೋ ಸೂಪರ್ ಜೈಂಟ್ಸ್
ಮುಖ್ಯ ಕೋಚ್: ಜಸ್ಟಿನ್ ಲ್ಯಾಂಗರ್
ನಿರ್ದೇಶಕ: ಟಾಮ್ ಮೂಡಿ
ಸಲಹೆಗಾರ: ಕೇನ್ ವಿಲಿಯಮ್ಸನ್
ಮಾಲೀಕರು: ಸಂಜೀವ್ ಗೋಯೆಂಕಾ
ಸನ್‌ರೈಸರ್ಸ್ ಹೈದರಾಬಾದ್
ಮುಖ್ಯ ತರಬೇತುದಾರ: ಡೇನಿಯಲ್ ವೆಟ್ಟೋರಿ
ಸಿಇಒ: ಕೆ ಷಣ್ಮುಖಂ
ಮಾಲೀಕರು: ಕಾವ್ಯ ಮಾರನ್
ಗುಜರಾತ್ ಟೈಟಾನ್ಸ್
ಮುಖ್ಯ ತರಬೇತುದಾರ: ಆಶಿಶ್ ನೆಹ್ರಾ
ಬ್ಯಾಟಿಂಗ್ ತರಬೇತುದಾರ: ಪಾರ್ಥಿವ್ ಪಟೇಲ್
ಕ್ರಿಕೆಟ್ ನಿರ್ದೇಶಕ: ವಿಕ್ರಮ್ ಸೋಲಂಕಿ
ಸಿಇಒ: ಅರವಿಂದರ್ ಸಿಂಗ್
ಮಾಲೀಕರ ಪ್ರತಿನಿಧಿ: ಸಿದ್ಧಾರ್ಥ್ ಪಟೇಲ್
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)


Click it and Unblock the Notifications