ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ವಿಮಾನಗಳಿಗಿಂತ ಟ್ಯಾಕ್ಸಿಗಳದ್ದೇ ಕಾರುಬಾರು ಹೆಚ್ಚಾಗಿದೆ. ಅಂದರೆ ಕಾರ್ಯನಿರತ ಟ್ಯಾಕ್ಸಿವೇ ಹೆಚ್ಚಾಗಿರುವ ಕಾರಣ, ವಿಮಾನಗಳು ಅತಿಹೆಚ್ಚು ಸಮಯ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಟರ್ಮಿನಲ್‌ಗಳು ಮತ್ತು ರನ್‌ವೇ ನಡುವೆ ವಿಮಾನ ಚಲಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿದ, ಪ್ರಯಾಣಿಕರಿಗೆ ದೊಡ್ಡ ತಲೆ ಬಿಸಿಯಾಗಿದೆ.

ದೀರ್ಘಕಾಲ ಸರತಿ ಸಾಲಿನಲ್ಲಿ ವಿಮಾನಗಳು ನಿಂತಿದ್ದರೆ ಇಂಧನವೂ ಕೂಡ ವ್ಯರ್ಥವಾಗುತ್ತದೆ. ಇನ್ನು ಇದಕ್ಕೆ ಪರಿಹಾರವೆಂದರೆ, ವೆಸ್ಟ್ ಕ್ರಾಸ್‌ಫೀಲ್ಡ್ ಟ್ಯಾಕ್ಸಿವೇ ನಿರ್ಮಾಣ. ಪಶ್ಚಿಮ ಭಾಗದಲ್ಲಿ ಎರಡು ರನ್‌ವೇಗಳನ್ನು ಸಂಪರ್ಕಿಸುವ ಈ ವೆಸ್ಟ್ ಕ್ರಾಸ್‌ಫೀಲ್ಡ್, ದಟ್ಟಣೆ ಕಡಿಮೆ ಮಾಡಲು ಹೆಚ್ಚು ಸಹಾಯಕವಾಗುತ್ತದೆ. ಹೀಗಾಗಿ ಈ ವೆಸ್ಟ್ ಕ್ರಾಸ್‌ಫೀಲ್ಡ್ ಟ್ಯಾಕ್ಸಿವೇ 2026ರ ಡಿಸೆಂಬರ್‍ನೊಳಗೆ ಪೂರ್ಣಗೊಳ್ಳಬಹುದು ಎಂಬ ನಿರೀಕ್ಷೆ ಇದೆ.
ಇನ್ನು ಟ್ಯಾಕ್ಸಿ ಸಮಯ ಬದಲಾಯಿಸಲು ಟರ್ಮಿನಲ್, ಪಾರ್ಕಿಂಗ್ ಸ್ಥಳ ಮತ್ತು ಯಾವ ರನ್‌ವೇ ಬಳಕೆಯಲ್ಲಿದೆ ಎಂಬುದನ್ನು ಅವಲಂಬಿಸಬೇಕಾಗುತ್ತದೆ. ಈ ಬಗ್ಗೆ ಬಿಐಎಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಅವರು ತಿಳಿಸಿದ್ದಾರೆ. ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಆಗಮನಕ್ಕೇ ಒಂದು ರನ್‌ವೇ, ನಿರ್ಗಮನಕ್ಕೇ ಒಂದು ರನ್‌ವೇ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ಇನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳು ಚಲನೆಗೆ, ಸತತ 10 ರಿಂದ 12 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಇದರಿಂದ ಟರ್ಮಿನಲ್-1 ಕಡೆಯಿಂದ ದಕ್ಷಿಣ ರನ್‌ವೇ ಬಳಸುವ ವಿಮಾನಗಳು 20 ನಿಮಿಷಗಳ ಕಾಯ್ದು ವಿಳಂಬ ಎದುರಿಸಬೇಕಾಗುತ್ತಿದೆ. ಹೀಗಾಗಿ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲೆಂದೇ, , BIAL ಎರಡು ರನ್‌ವೇ ಮಿಶ್ರ ಮೋಡ್‌ನತ್ತ ಚಿತ್ತ ಹರಿಸಿದೆ. ಈ ಮೂಲಕ ಪ್ರತಿ ಟರ್ಮಿನಲ್‌ಗೂ ಅದರ ಹತ್ತಿರದ ರನ್‌ವೇಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಟ್ಯಾಕ್ಸಿ ಸಮಯವನ್ನು ಕೂಡ ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಇನ್ನು ಈ ಹೊಸ ಟ್ಯಾಕ್ಸಿವೇ ನಿರ್ಮಾಣದಿಂದ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನದ ಚಲನೆಯನ್ನು ಕೂಡ ಮತ್ತಷ್ಟು ಸುಲಭ ಮಾಡಬಹುದಾಗಿದೆ. ಅಲ್ಲದೇ ನೆಲದ ಪರಿಚಲನೆ ಕೂಡ ಸುಧಾರಿಸಬಹುದಾಗಿದೆ. ಇದರ ಜೊತೆಗೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಮತ್ತು ಮಿಲಿಟರಿ ಏರ್ ಟ್ರಾಫಿಕ್ ಮೂಲಕ ಎರಡೂ ರನ್‌ವೇಗಳಿಂದ, ಆಗಮನ ಮತ್ತು ನಿರ್ಗಮನವನ್ನು ಏಕಕಾಲದಲ್ಲಿ ಅನುಸರಿಸಬಹುದಾಗಿದೆ. ಈ ಯೋಜನೆಯಲ್ಲಿ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸುತ್ತದೆ.
ಹಾಗೆಯೇ ಈಗಾಗಲೇ ಉತ್ತರ ರನ್‌ವೇಗಾಗಿ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಕೂಡ ಪೂರ್ಣಗೊಂಡಿದೆ. ಜೊತೆಗೆ ದಕ್ಷಿಣ ರನ್‌ವೇ ಕೆಲಸ ಇನ್ನೇನು ಏಪ್ರಿಲ್ 2025ರ ಒಳಗೆ ಪೂರ್ಣಗೊಳ್ಳಬಹುದು ಎಂಬ ನಿರೀಕ್ಷೆಯಿದೆ. ಇನ್ನು ವಿಮಾನ ನಿಲ್ದಾಣದಲ್ಲಿ ರನ್‌ವೇಗಳ ಈ ಕೂಲಂಕುಷ ಪರೀಕ್ಷೆ, ದಕ್ಷತೆಯನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ಒಂದಾಗಿದೆ. ಇನ್ನು ಈ ಹೊಸ ವಾಯುಪ್ರದೇಶದ ಕಾರ್ಯವಿಧಾನಗಳನ್ನು ಜಾರಿಗೆ ತರಬೇಕೆಂದರೆ, ಯಲಹಂಕ ಏರ್‍ಫೋರ್ಸ್ ಹಾಗೂ ಹೆಚ್‌ಎಎಲ್ ಸೇರಿದಂತೆ ಇತರೆ ಏಜೆನ್ಸಿಗಳ ಅಗತ್ಯ ಕೂಡ ಇದೆ.
ಇನ್ನು ಎರಡು ರನ್‌ವೇ ಮಿಶ್ರ ಮೋಡ್‌ನಿಂದ, ಪ್ರತಿ ಟರ್ಮಿನಲ್‌ಗೂ ರನ್‌ವೇ ಲಿಂಕ್ ಆಗಲಿರುವ ಕಾರಣ, ಪ್ರಯಾಣಿಕರಿಗೂ ಸುಲಭವಾಗಲಿದೆ. ಅಂದರೆ ಸದ್ಯಕ್ಕೆ ಇರುವ ಎರಡೇ ರನ್‌ವೇಗಳ ಮೂಲಕ ಆಗಮನ ನಿರ್ಗಮನ ಮಾಡುತ್ತಿರುವ ಪ್ರಯಾಣಿಕರು, ಹೆಚ್ಚು ಶ್ರಮಿಸುವ ಅಗತ್ಯವಿರುವುದಿಲ್ಲ. ತಾವು ವಿಮಾನ ಹತ್ತುವ ಹಾಗೂ ಇಳಿಯುವ ಮಾರ್ಗದ ಟರ್ಮಿನಲ್ ಬಳಿಯೇ ರನ್‌ವೇ ಇರುವುದರಿಂದ ಅವರಿಗೆ, ಆಗಮನವೂ ಸುಲಭ ನಿರ್ಗಮನವೂ ಸುಲಭವಾಗಿರುತ್ತದೆ.
ಈ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆಯನ್ನೂ ಕಡಿಮೆ ಮಾಡಬಹುದು. ಅಲ್ಲದೇ ವಾಹನಗಳ ಕಿರಿಕಿರಿ ಇಲ್ಲದೇ ಪ್ರಯಾಣಿಕರು ಕೂಡ ಸುಗಮವಾಗಿ ಫ್ಲೈಟ್ ಹತ್ತಬಹುದು ಹಾಗೂ ಇಳಿಯಬಹುದು. ಆದರೆ ಪ್ರತಿ ಟರ್ಮಿನಲ್‌ಗೂ ಲಿಂಕ್ ಆಗುವಂತೆ ರನ್‌ವೇ ನಿರ್ಮಾಣ ಮಾಡಿದರೆ, ಈಗಿರುವುದಕ್ಕಿಂತ ಇನ್ನೂ ಹೆಚ್ಚು ಭದ್ರತೆ ಕಾಯ್ದಿರಿಸಬೇಕಾಗುತ್ತದೆ.


Click it and Unblock the Notifications