ಬೆಂಗಳೂರು ವಿಮಾನ ನಿಲ್ದಾಣವು 2024ರಲ್ಲಿ ಅಧಿಕ ಪ್ರಯಾಣಿಕರನ್ನ ಹೊಂದುವ ಮೂಲಕ ದಾಖಲೆಯನ್ನ ಮಾಡಿದೆ. ಒಂದೇ ವರ್ಷದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 40 ಮಿಲಿಯನ್ ಪ್ರಯಾಣಿಕರನ್ನ ಹೊಂದುವ ಮೂಲಕ ದಾಖಲೆಯನ್ನ ಸೃಷ್ಟಿ ಮಾಡಿದೆ. ಅಲ್ಲದೆ ಬೆಂಗಳೂರು ವಿಮಾನ ನಿಲ್ದಾಣ ಜಾಗತಿಕವಾಗಿ "ದೊಡ್ಡ ವಿಮಾನ ನಿಲ್ದಾಣ" ಎಂಬ ಪಟ್ಟಿಗೆ ಸೇರ್ಪಡೆಯಾಗಿದೆ.
ಬೆಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರನ್ನ ಹೊಂದುವಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. 9% ಏರಿಕೆಯಾಗುವ ಮೂಲಕ ಈ ಬಾರಿ 40 ಮಿಲಿಯನ್‌ಗೆ ಏರಿಕೆಯಾಗಿದೆ. ಈ ಹಿಂದೆ 2023ರ ಜನವರಿ-ಡಿಸೆಂಬರ್‌ನಲ್ಲಿ ವಿಮಾನ ನಿಲ್ದಾಣವು 37.2 ಮಿಲಿಯನ್ ಪ್ರಯಾಣಿಕರನ್ನ ಹೊಂದಿತ್ತು ಎಂದು ಬಿಐಎಎಲ್ ತಿಳಿಸಿದೆ. ಅಲ್ಲದೆ ಅಕ್ಟೋಬರ್ 20, 2024 ರಂದು ಒಂದೇ ದಿನ 1,26,532 ಪ್ರಯಾಣಿಕರು ಪ್ರಯಾಣಿಸುವ ಮೂಲಕ ದಾಖಲೆಯನ್ನ ಮಾಡಿತ್ತು. ನಂತರ ಈ ವರ್ಷ ಅಧಿಕ ಪ್ರಯಾಣಿಕರನ್ನ ಹೊಂದುವ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡಿದೆ.

ಇದರ ಜೊತೆಗೆ ವಾರ್ಷಿಕವಾಗಿ ಈ ನಿಲ್ದಾಣದಲ್ಲಿ ದಿನಕ್ಕೆ 723 ಏರ್ ಟ್ರಾಫಿಕ್ ಚಲನೆಗಳು ದಾಖಲಾಗುತ್ತಿತ್ತು, ಆದ್ರೆ ವಿಮಾನ ನಿಲ್ದಾಣವು ಅಕ್ಟೋಬರ್ 17, 2024 ರಂದು ಒಂದೇ ದಿನ ಏರ್ ಟ್ರಾಫಿಕ್ ಚಲನೆಗಳ ಸರಾಸರಿ 782 ಆಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2024ರಲ್ಲಿ ಪ್ರಯಾಣಿಕರ ಸರಕು ಮತ್ತು ದಟ್ಟಣೆ ಎರಡೂ ಕೂಡ ಗಣನೀಯವಾಗಿ ಏರಿಕೆಯನ್ನ ಕಂಡಿದೆ.
2024ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಥಳಗಳಿಗೆ ಪ್ರಯಾಣಿಕರನ್ನು ಸಂಪರ್ಕಿಸುವ ಮೂಲಕ, ವರ್ಷದಲ್ಲಿ 11 ನೂತನ ದೇಶೀಯ ಮತ್ತು ನಾಲ್ಕು ಅಂತರಾಷ್ಟ್ರೀಯ ಮಾರ್ಗಗಳನ್ನ ಒಳಗೊಂಡಿದೆ. ಇನ್ನು ಈ ನೂತನ ತಾಣಗಳನ್ನ ನಾವು ಗಮನಿಸುವುದಾದ್ರೆ ಅಯೋಧ್ಯೆ, ಐಜ್ವಾಲ್, ದಿಯೋಘರ್, ನಾಂದೇಡ್ ಮತ್ತು ಲಂಕಾವಿ ಹಾಗೆ ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಮತ್ತು ಪುಣೆ ದೇಶೀಯ ಮಾರ್ಗಗಳು ಅತೀ ಹೆಚ್ಚು ಸಂಚರಿಸುವ ಮಾರ್ಗಗಳಾಗಿವೆ. ಅಂತರಾಷ್ಟ್ರೀಯ ತಾಣಗಳಲ್ಲಿ ದುಬೈ, ಸಿಂಗಾಪುರ್, ದೋಹಾ, ಅಬುಧಾಬಿ ಮತ್ತು ಲಂಡನ್ ಹೀಥ್ರೂ ಪ್ರದೇಶಗಳು ಅಂತರಾಷ್ಟ್ರೀವಾಗಿ ಸಂಚರಿಸುವ ಪ್ರಮುಖ ತಾಣಗಳಾಗಿವೆ.
ಇತ್ತೀಚಿನ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಹೇಳಿರುವ ಪ್ರಕಾರ ವಿಮಾನ ನಿಲ್ದಾಣದಲ್ಲಿ ಶೇಕಡಾ 21.1 ರಷ್ಟು ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ ಎನ್ನಲಾಗ್ತಿದೆ. ಇದರ ಜೊತೆಗೆ ಬೆಂಗಳೂರಿನಿಂದ ಇಂಡಿಗೋ ಏರ್‌ಲೈನ್ಸ್ 46 ವಾರದ ಅಂತರಾಷ್ಟ್ರೀಯ ವಿಮಾನಗಳನ್ನ ಹೊಂದಿದೆ. ಇದು ಭಾರತದ ಇತರೆ ನಿಲ್ದಾಣಗಳು ಹೊಂದುವುದಕ್ಕಿಂತ ಅಧಿಕ ಸಪ್ತಾಹಿಕ ಅಂತರಾಷ್ಟ್ರೀಯ ವಿಮಾನಗಳನ್ನ ಹೊಂದಿದೆ. ವರ್ಜಿನ್ ಅಟ್ಲಾಂಟಿಕ್ ಮತ್ತು ಮಾಂಟಾ ಏರ್‌ನಂತಹ ಹೊಸ ಏರ್‌ಲೈನ್ ಪಾಲುದಾರರು ಕೂಡ ಜಾಗತಿಕ ಸಂಪರ್ಕವನ್ನ ವಿಸ್ತರಿಸಿವೆ.
ಸರಕು ಕಾರ್ಯಾಚರಣೆಗಳಲ್ಲೂ ಕೂಡ ಬೆಂಗಳೂರು ಅಂತರಾಷ್ಟ್ರೀಯ ವಿಮಾಣ ನಿಲ್ದಾಣ ದಾಖಲೆಯ ಬೆಳವಣಿಗೆಯನ್ನ ಹೊಂದಿದೆ. 2024ರಲ್ಲಿ 4,96,227 ಮೆಟ್ರಿಕ್ ಟನ್‌ಗಳಷ್ಟು ಸರಕನ್ನ ಹೊಂದಿದೆ. ಹಿಂದಿನ ವರ್ಷ 2023ಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಶೇಕಡಾ 17ರಷ್ಟು ಎರಿಕೆಯಾಗಿದೆ. ಹಾಗೆ ಅಂತರಾಷ್ಟ್ರೀಯ ಸರಕುಗಳ ಪ್ರಮಾಣ ಕೂಡ ಶೇಕಡಾ 23ರಷ್ಟು ಏರಿಕೆಯಾಗಿ 3,13,981 ಮೆಟ್ರಿಕ್ ಟನ್ ತಲುಪಿದೆ. ಇತ್ತ ದೇಶೀಯ ಸರಕು ಕೂಡ ಶೇಕಡಾ 9ರಷ್ಟು ಹೆಚ್ಚಾಗಿದೆ. ಜುಲೈ 11, 2024ರಂದು ಒಂದೇ ದಿನ ಸರಕು ನಿರ್ವಹಣೆಯಲ್ಲಿ ವಿಮಾನ ನಿಲ್ದಾಣದ ಅತ್ಯಂತ ಜನನಿಬಿಡ ದಿನ ಎಂದು ಪರಿಗಣಿಸಿದ್ದು, 1,884 ಮೆಟ್ರಿಕ್ ಟನ್ ಸರಕುಗಳನ್ನ ಪರೀಷ್ಕರಿಸಲಾಗಿದೆ.
ಕೃಷಿ-ನಾಶವಾಗುವ ವಸ್ತುಗಳು, ಔಷಧಗಳು ಮತ್ತು ಯಂತ್ರೋಪಕರಣಗಳು ಸೇರಿದಂತೆ ಇನ್ನು ಇತರೆ ಸರಕುಗಳು ಸಿಂಗಪುರ್, ಲಂಡನ್, ಫ್ರಾಂಕ್‌ಫರ್ಟ್, ಚಿಕಾಗೊ ಮತ್ತು ಮಸ್ಕತ್ ಪ್ರದೇಶಗಳ ಮೂಲಕ ರಫ್ತಾಗುತ್ತವೆ. ಬೆಂಗಳೂರು ಏರ್‌ಪೋರ್ಟ್ ರಫ್ತಿಗಾಗಿ ಭಾರತದ ಪ್ರಮುಖ ನಿಲ್ದಾಣವಾಗಿ ಪ್ರಮುಖ ಸ್ಥಾನವನ್ನ ಪಡೆದಿದೆ. ಹಾಗೆ 2023-24ರ ಹಣಕಾಸು ವರ್ಷದಲ್ಲಿ 63,188 ಮೆಟ್ರಿಕ್ ಟನ್ ನಿರ್ವಹಿಸುವ ಮೂಲಕ ದಾಖಲೆಯನ್ನ ಮಾಡಿದೆ.
ಬೆಂಗಳೂರು ವಿಮಾನ ನಿಲ್ದಾಣವು 2024ರಲ್ಲಿ ದಾಖಲೆಯ ಪ್ರಯಾಣಿಕರನ್ನ ಹೊಂದುವ ಮೂಲಕ ದೊಡ್ಡ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಹಾಗೆ ಮುಂಬರುವ ವರ್ಷದಲ್ಲಿ ಮತ್ತಷ್ಟು ಪ್ರಯಾಣಿಕರು ಮತ್ತು ಸರಕು ವಿಭಾಗಗಳ ಬೆಳವಣಿಗೆಯನ್ನ ಮುಂದುವರೆಸಲು ಸಜ್ಜಾಗ್ತಿದೆ. ಗಮನಾರ್ಹ ಸಾಧನೆಗಳ ಮೂಲಕ ದಕ್ಷಿಣ ಭಾರತದಲ್ಲಿ ಪ್ರಮುಖ ನಿಲ್ದಾಣವಾಗಿ ಹೆಸರಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications