ನವದೆಹಲಿ, ಆಗಸ್ಟ್ 18: ಆರೋಗ್ಯ ವಿಮೆ ಕೊಳ್ಳುವ ಮೊದಲು ಹಲವಾರು ಸಂಗತಿಗಳನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ನಾವು ಇಲ್ಲಿ ನಿಮಗೊಂದಿಷ್ಟು ಸಲಹೆಗಳನ್ನು ನೀಡುತ್ತೇವೆ. ಈ ಸಲಹೆಗಳು ನೀವು ಯಾವ ಬಗೆಯ ಆರೋಗ್ಯ ವಿಮೆ ಕೊಳ್ಳಬಹುದು ಎನ್ನುವುದನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ.
ವಿಮಾದಾರರ ಬಳಿ ಚೌಕಾಸಿ ಮಾಡಿ ಪಾಲಿಸಿಯನ್ನು ಕಡಿಮೆ ರೇಟ್ಗೆ ತೆಗೆದುಕೊಂಡರೆ ಮುಂದೆ ನೀವು ಸಂಕಷ್ಟಕ್ಕೆ ಸಿಲುಕಬಹುದು. ಈಗ ಹಣ ಉಳಿಸಲು ಹೋಗಿ ಮುಂದೆ ದುಬಾರಿ ದಂಡ ತೆರಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

ಇನ್ಶೂರರ್ ಪ್ರೀಮಿಯಂ ಮೊತ್ತವನ್ನ ಕಡಿಮೆ ಮಾಡಿ ಪಾಲಿಸಿ ಕೊಡುತ್ತಾರೆ. ಆದರೆ ಇದಕ್ಕೆ ಸಿಗುವ ಫೀಚರ್ಗಳ ಬಗ್ಗೆ ಒಂದು ಸಾರಿ ಗಮನಹರಿಸಲೇಬೇಕು.. ಈ ಪಾಲಿಸಿಯಡಿ ಹಾಸ್ಪಿಟಲೈಸೇಷನ್ ಕವರ್ ಎಷ್ಟು ಅಥವಾ ಮನೆಯಲ್ಲಿ ಪಡೆಯುವ ಚಿಕಿತ್ಸೆಯ ಎಷ್ಟು ವೆಚ್ಚವನ್ನು ಪಾಲಿಸಿ ಕವರ್ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು.
ರೂಂ ರೆಂಟ್ ಲಿಮಿಟ್ (ಆಸ್ಪತ್ರೆ ಕೊಠಡಿ ಬಾಡಿಗೆ ಮಿತಿ) ಇಲ್ಲದೇ ಇರುವ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಆಸ್ಪತ್ರೆಗೆ ದಾಖಲಾಗಬೇಕಾದ ಸಂದರ್ಭ ಬಂದರೆ ರೂಂ ರೆಂಟ್ ವೆಚ್ಚವೇ ಹೆಚ್ಚಿರುತ್ತದೆ. ಕಡಿಮೆ ವೆಚ್ಚದ ಹೆಲ್ತ್ ಪ್ಲಾನ್ನಲ್ಲಿ ರೂಂ ರೆಂಟ್ಗೆ ಶೇಕಡ 1 ರಷ್ಟು ಮಾತ್ರ ವಿಮೆ ಇರುತ್ತದೆ. ಅಂದರೆ ಆಸ್ಪತ್ರೆಗೆ ಅಡ್ಮಿಟ್ ಆದರೆ 5 ಸಾವಿರ ರೂಪಾಯಿವರೆಗೆ ಮಾತ್ರ ರೂಂ ಬಾಡಿಗೆ ಸಿಗುತ್ತದೆ. ಒಂದು ವೇಳೆ ರೂಂ ರೆಂಟ್ ಜಾಸ್ತಿ ಇದ್ದರೆ ಅಥವಾ ಐಸಿಯುಗೆ ಅಡ್ಮಿಟ್ ಆದರೆ ಆಗ ಒಂದು ದಿನದ ರೂಂ ಬಾಡಿಗೆ 25 ಸಾವಿರ ರೂಪಾಯಿವರೆಗೂ ಇರುತ್ತದೆ. ಇಂಥ ಸಣದರ್ಭದಲ್ಲಿ ಕೇವಲ ಐದು ಸಾವಿರ ರೂಪಾಯಿ ಮಾತ್ರ ಕ್ಲೇಮ್ ಮಾಡಲಯ ಸಾಧ್ಯವಾಗುತ್ತದೆ. ಹೀಗಾಗಿ, ರೂಂ ರೆಂಟ್ ಮೇಲೆ ಮತ್ತು ಐಸಿಯು ವೆಚ್ಚಗಳ ಮೇಲೆ ಯಾವುದೇ ಮಿತಿಗಳು ಇರದ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಇದಾದ ನಂತರ ಪ್ರೀ ಅಂಡ್ ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚ. ಅಂದರೆ ಆಸ್ಪತ್ರೆಗೆ ದಾಖಲಾಗುವುದಕ್ಕೆ ಮೊದಲು ಮತ್ತು ನಂತರ ಭರಿಸಬೇಕಾದ ವೆಚ್ಚಗಳು. ವಿಮಾ ಪಾಲಿಸಿಯಲ್ಲಿ, ಹಾಸ್ಪಿಟಲ್ ಅಡ್ಮಿಷನ್ ಎಕ್ಸ್ಪೆನ್ಸ್ ಅಲ್ದೇ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳ ಕವರೇಜ್ ಕೂಡ ಇರಬೇಕು. ಸಾಮಾನ್ಯವಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಕೂಡ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ. ಹೀಗಾಗಿ ಹೆಲ್ತ್ ಪ್ಲಾನ್ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡಲು ಎಂಟ್ರಿ ಲೆವೆಲ್ ಬೇಸಿಕ್ ಇನ್ಶೂರೆನ್ಸ್ ಪ್ಲಾನ್ಗಳಲ್ಲಿ ಈ ವೆಚ್ಚಗಳನ್ನ ಸೇರ್ಪಡೆ ಮಾಡಿರುವುದಿಲ್ಲ.
ಡೇ ಕೇರ್ ಟ್ರೀಟ್ಮೆಂಟ್ ಆರೋಗ್ಯ ಪಾಲಿಸಿಯಲ್ಲಿ ಡೇ ಕೇರ್ ಚಿಕಿತ್ಸೆಯ ಆಯ್ಕೆ ನೀವು ಸೇರಿಸಿಕೊಳ್ಳಬೇಕು. ಆಗ 24 ಗಂಟೆ ಅವಧಿಯೊಳಗಿನ ಹಾಸ್ಪಿಟಲೈಸೇಷನ್ ವೆಚ್ಚ ಸಹ ಕ್ಲೇಮ್ ಆಗುತ್ತದೆ. ಸಣ್ಣ ಆಪರೇಷನ್ ಪ್ರೊಸೀಜರ್ ಇರುವ ಚಿಕಿತ್ಸೆಗಳಲ್ಲಿ ಅಂದ್ರೆ ಉದಾಹರಣೆಗೆ ಕಣ್ಣಿನ ಪೊರೆ, ಗಡ್ಡೆ ತೆಗೆಯೋದು ಹೀಗೆ ಇತ್ಯಾದಿಗಳಲ್ಲಿ ಒಂದೇ ದಿನಕ್ಕೆ ಡಿಸ್ಜಾರ್ಜ್ ಮಾಡುತ್ತಾರೆ. ಆಗ ಈ ಆಯ್ಕೆ ಇದ್ದರೆ ವಿಮೆಯ ಲಾಭ ಪಡೆಯಬಹುದು.
ರಿಸ್ಟೊರೇಷನ್ ಫೀಚರ್ ಸಹ ಅಷ್ಟೇ ಮುಖ್ಯವಾಗುತ್ತದೆ. ನಿಮ್ಮ ಬಳಿ ಐದು ಲಕ್ಷ ರೂಪಾಯಿ ವಿಮೆ ಇದ್ದು ಆಸ್ಪತ್ರೆ ವೆಚ್ಚ 8 ಲಕ್ಷ ರೂಪಾಯಿಯಾದರತೆ? ವಿಮಾ ಕಂಪೆನಿಗಳು ಕೊಡೋ ರೆಸ್ಟೊರೇಷನ್ ಸೌಲಭ್ಯ ಇಂತಹ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ರಿಸ್ಟೊರೇಷನ್ ಫೀಚರ್ನಿಂದಾಗಿ ಹೆಲ್ತ್ ಪ್ಲಾನ್ ಕವರೇಜ್ ಹೆಚ್ಚು ಮಾಡಿಕೊಳ್ಳಬಹುದು. 5 ಲಕ್ಷ ರೂಪಾಯಿ ಕವರೇಜ್ ಪೂರ್ತಿಯಾಗಿ ಬಳಕೆಯಾದರೆ ಕಂಪೆನಿಯು ಇನ್ನೈದು ಲಕ್ಷ ರೂಪಾಯಿಗಳವರೆಗೆ ಹೊಸದಾಗಿ ಕವರೇಜ್ ಕೊಡುತ್ತದೆ. ಇದನ್ನ ರೆಸ್ಟೋರಿಂಗ್ ಕವರೇಜ್ ಅಮೌಂಟ್ ಎಂದು ಕರೆಯುತ್ತಾರೆ. ಬಹುತೇಕ ಕಂಪೆನಿಗಳು ಈ ಸೌಲಭ್ಯವನ್ನ ವರ್ಷಕ್ಕೆ ಮೂರು ಬಾರಿ ನೀಡುತ್ತವೆ. ಇದು ಸಮ್ ಇನ್ಶೂರ್ಡ್ಗೆ ಸಮನಾಗಿರುತ್ತದೆ. ಆದರೆ ಈ ಸೌಲಭ್ಯ ಪಡೆಯಲು 10-20 ಸಾವಿರ ಹೆಚ್ಚಿನ ಮೊತ್ತ ನೀಡಬೇಕಾಗುತ್ತದೆ.
ಎಲ್ಲದಕ್ಕಿಂತ ಮುಖ್ಯವಾಗಿ ನೀವು ಕ್ಯಾಶ್ಲೆಸ್ ಹಾಸ್ಪಿಟಲ್ ನೆಟ್ವರ್ಕ್ ಬಗ್ಗೆ ತಿಳಿದುಕೊಂಡಿರಬೇಕು. ಕಡಿಮೆ ಇನ್ಶೂರೆನ್ಸ್ ಪ್ರೀಮಿಯಂ ತೆಗೆದುಕೊಂಡಿದ್ದರೆ ನಿಮಗೆ ನೆಟ್ವರ್ಕ್ ಆಸ್ಪತ್ರೆಗಳು ಕಡಿಮೆ ಇರುತ್ತವೆ. ಚಿಕಿತ್ಸೆ ಪಡೆಯಲು ಬಯಸುವ ಆಸ್ಪತ್ರೆ ಈ ಜಾಲದಲ್ಲಿ ಬರುವುದಿಲ್ಲ ಎಂದಾದರೆ ನೀವು ನಿಮ್ಮ ಜೇಬಿನಿಂದಲೇ ಅದರ ವೆಚ್ಚಗಳನ್ನ ಭರಿಸಬೇಕು. ನಂತರ ನೀವು ಟಿಪಿಎ ಅವರನ್ನು ಸಂಪರ್ಕಿಸಿ, ರೀ-ಎಂಬರ್ಸ್ಮೆಂಟ್ಗೆ ಅಪ್ಲೈ ಮಾಡಬೇಕಾಗುತ್ತದೆ. ಎಷ್ಟು ಮೊತ್ತ ಕ್ಲೇಮ್ ಮಾಡೋಕೆ ಅವಕಾಶ ಇದೆ, ಎಷ್ಟು ಮೊತ್ತ ವಾಪಸ್ ಸಿಗುತ್ತದೆ ಎನ್ನುವುದನ್ನು ಹೇಳಲು ಆಗುವುದಿಲ್ಲ.
ಕೇವಲ ಹಣ ಉಳಿಸೋದಕ್ಕೋಸ್ಕರ ನೀವು ಬೇಸಿಕ್ ಪ್ಲಾನ್ ಖರೀದಿಸಿದ್ದರೆ ನಿಮಗೆ ಪ್ರೀಮಿಯಂ ಅಗ್ಗವಾಗಿರಬಹುದು. ಆದರೆ ಕವರೇಜ್ ಸಹ ಅಷ್ಟೇ ಕಡಿಮೆ ಇರುತ್ತದೆ ಎನ್ನುವುದು ನಿಮ್ಮ ಗಮನದಲ್ಲಿ ಇರಬೇಕು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications