ಫ್ರೈಡ್ ಚಿಕನ್ ಪರಿಮಳ ಹಾಗೂ ರುಚಿಯನ್ನು ಹೋಲುವ ಟೂತ್‌ಪೇಸ್ಟ್ ಇದ್ರೆ ಹೇಗಿರಬಹುದು. ಈ ವಿಚಾರ ಕೇಳಲು ವಿಲಕ್ಷಣ ಅನ್ನಿಸಿದರೂ ಕೆಎಫ್‌ಸಿಯ ಚಿಕನ್ ಪ್ರಿಯರಿಗೆ ಈ ವಿಚಾರ ಖುಷಿಕೊಟ್ಟಿರಬಹುದು. ಹೌದು ಈ ವಿಚಾರ ನಾವು ಅಂದುಕೊಂಡಂತೆ ಕಾಲ್ಪಾನಿಕವಲ್ಲ. ಅಚ್ಚರಿ ಅಂದ್ರೆ ಈ ಪ್ರಯೋಗವನ್ನು ಮಾಡಿರುವುದು ಕೆಎಫ್‌ಸಿ (ಕೆಂಟುಕಿ ಫ್ರೈಡ್ ಚಿಕನ್).
ಫಾಸ್ಟ್ ಫುಡ್ ದೈತ್ಯ ಕೆಎಫ್‌ಸಿ, ಆಸ್ಟ್ರೇಲಿಯಾದ ದಂತ ಆರೈಕೆ ಬ್ರ್ಯಾಂಡ್ ಹಿಸ್ಮೈಲ್ ಜೊತೆ ಕೈಜೋಡಿಸಿ, ಹುಬ್ಬೇರಿಸುವಂತಹ ಉತ್ಪನ್ನವಾದ ಸೀಮಿತ ಆವೃತ್ತಿಯ ಫ್ರೈಡ್ ಚಿಕನ್-ಫ್ಲೇವರ್ಡ್ ಟೂತ್‌ಪೇಸ್ಟ್ ನ್ನು ಬಿಡುಗಡೆ ಮಾಡಿದೆ. ಅದುವೇ ಫ್ರೈಡ್ ಚಿಕನ್ (ಹುರಿದ ಕೋಳಿ) ಸುವಾಸನೆಯನ್ನು ಹೊಂದಿರುವ ಟೂತ್‌ಪೇಸ್ಟ್. ಈ ವಿಶೇಷವಾದ ಟೂತ್‌ಪೇಸ್ಟ್ ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿರಲಿದೆ. ಈ ಸೀಮಿತ ಆವೃತ್ತಿಯ ಟೂತ್‌ಪೇಸ್ಟ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಈ ವಿಶಿಷ್ಟವಾದ ಟೂತ್‌ಪೇಸ್ಟ್ ಅನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದು, ಬಿಸಿಬಿಸಿಯಾದ, ರಸಭರಿತವಾದ ಮೂಲ ಪಾಕವಿಧಾನದ ಕೆಎಫ್‌ಸಿ ಚಿಕನ್ ಫೇಸ್ ತಿಂದಾಗ ಉಂಟಾಗುವ " ಅನುಭವ"ವನ್ನು ನೀಡುವ ಉದ್ದೇಶದಿಂದ ಎಂದು ಸಂಸ್ಥೆ ಹೇಳಿದೆ.

ಈ ಟೂತ್ ಪೇಸ್ಟ್ ನಲ್ಲಿ ಹಲ್ಲುಜ್ಜಿದವರಿಗೆ ಬಾಯಿಗೆ ಬಿಸಿಬಿಸಿಯಾದ, ರುಚಿಕರವಾದ ಕೆಎಫ್‌ಸಿ ಚಿಕನ್ ತಿಂದಂತಹ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಆಶ್ಚರ್ಯವೆಂದರೆ, ಇದು ಹಲ್ಲುಗಳನ್ನು ಸ್ವಚ್ಛಗೊಳಿಸಿ, ಬಾಯಿಯನ್ನು ತಾಜಾವಾಗಿರಿಸುವ ಕಾರ್ಯವನ್ನೂ ಮಾಡುತ್ತದೆ. ಕೆಎಫ್‌ಸಿಯ 11 ಗಿಡಮೂಲಿಕೆಗಳು ಮತ್ತು ಮಸಾಲೆಗಳ ವಿಶಿಷ್ಟ ಮಿಶ್ರಣದಿಂದ ತುಂಬಿರುವ ಈ ಟೂತ್‌ಪೇಸ್ಟ್, ಬಿಸಿ, ರಸಭರಿತವಾದ ಒರಿಜಿನಲ್ ರೆಸಿಪಿ ಚಿಕನ್ ತುಂಡನ್ನು ಕಚ್ಚುವಾಗ ಸಿಗುವ "ಅದಮ್ಯ ಅನುಭವ"ವನ್ನು ನೀಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
$13 ಬೆಲೆಯ ಈ ಟೂತ್‌ಪೇಸ್ಟ್ ಹಿಸ್ಮೈಲ್‌ನ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದ್ದು ಬಿಡುಗಡೆಯಾದ ಕೆಲವೇ ಒಳಗೆ 48 ಗಂಟೆಗಳಲ್ಲಿ ಎಲ್ಲವೂ ಸೋಲ್ಡ್ ಔಟ್ ಆಗಿದ್ದು. "ಇದು ಇಲ್ಲಿಯವರೆಗಿನ ನಮ್ಮ ಅತ್ಯಂತ ಯಶಸ್ವಿ ಸೀಮಿತ-ಚಾಲಿತ ಸಹಯೋಗಗಳಲ್ಲಿ ಒಂದಾಗಿದೆ" ಎಂದು ಹಿಸ್ಮೈಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಕೋಬನ್ ಜೋನ್ಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟೂತ್‌ಪೇಸ್ಟ್‌ನ ಯಶಸ್ಸನ್ನು ಹೇಳಿಕೊಳ್ಳುತ್ತಾ, ಕೋಬನ್ ಜೋನ್ಸ್ "ಕೆಎಫ್‌ಸಿ-ರುಚಿಯ ಟೂತ್‌ಪೇಸ್ಟ್ ಆಶ್ಚರ್ಯಕರವಾದ ಮತ್ತು ಎಲ್ಲರೂ ಕುತೂಹಲದಿಂದ ಮಾತನಾಡಿಕೊಳ್ಳುವಂತ ಟೂತ್‌ಪೇಸ್ಟ್ ಆಗಿತ್ತು. ಹೀಗಾಗಿಯೇ 48 ಗಂಟೆಗಳಲ್ಲಿಯೇ ಸೋಲ್ಡ್ ಔಟ್ ಆಗಲು ಕಾರಣವಾಯಿತು. ನಾವು ಮಿತಿಗಳನ್ನು ಮೀರಲು ಇಷ್ಟಪಡುತ್ತೇವೆ, ಮತ್ತು KFC ಯ ಐಕಾನಿಕ್ ಫ್ಲೇವರ್‌ಗಳನ್ನು ದೈನಂದಿನ ಅಗತ್ಯಕ್ಕೆ ತರುವುದಕ್ಕಿಂತ ಉತ್ತಮವಾದ ಮಾರ್ಗ ಇನ್ನೊಂದಿಲ್ಲ. ನವೀನತೆಯ ಹೊರತಾಗಿಯೂ, ಟೂತ್‌ಪೇಸ್ಟ್ ಫ್ಲೋರೈಡ್-ಮುಕ್ತವಾಗಿತ್ತು. ಜೊತೆಗೆ ಬಹಳಷ್ಟು ಸಮಯದವರೆಗೆ ಮೌಖಿಕ ಆರೋಗ್ಯ ಪ್ರಯೋಜನಗಳನ್ನುನೀಡುತ್ತದೆ. ಈ ಸಹಯೋಗವು ದಿಟ್ಟ, ಅನಿರೀಕ್ಷಿತ ಮತ್ತು ಗಂಭೀರವಾಗಿ ಮೋಜಿನ ಸಂಗತಿಯಾಗಿದೆ."ಎಂದು ವಿವರಿಸಿದ್ದಾರೆ.
ಆಸ್ಟ್ರೇಲಿಯಾದ ಸಂಸ್ಥೆ "ಹಿಸ್ಮೈಲ್" ವಿಶೇಷವಾದ ಟೂತ್‌ಪೇಸ್ಟ್ ಫ್ಲೇವರ್‌ಗಳಿಗೆ ಹೆಸರುವಾಸಿಯಾಗಿದೆ. ಇದು ಐಸ್ಡ್ ಲ್ಯಾಟೆ, ಚುಪಾ ಚುಪ್ಸ್ ಕೋಲಾ ಮತ್ತು ರೆಡ್ ವೆಲ್ವೆಟ್‌ನಂತಹ ಫ್ಲೇವರ್‌ಗಳೊಂದಿಗೆ ಟೂತ್‌ಪೇಸ್ಟ್ ಅನ್ನು ಸಹ ಮಾರಾಟ ಮಾಡುತ್ತದೆ. ಇದು ಐಸ್ ಪಾಪ್, ಕುಕೀಸ್ ಮತ್ತು ಕ್ರೀಮ್, ಹ್ಯಾಝಲ್‌ನಟ್ ಸ್ಪ್ರೆಡ್ ಮತ್ತು ಸ್ಟ್ರಾಬೆರಿ ಕ್ರೀಮ್ ಯೋಚಿಯನ್ನು ಸಹ ಹೊಂದಿದೆ.
ಕೆಎಫ್‌ಸಿಯ ಫ್ರೈಡ್ ಚಿಕನ್ ಟೂತ್‌ಪೇಸ್ಟ್ ಹೇಗಿದೆ ಎಂದು ತಿಳಿಯಲು ಕುತೂಹಲವಿದ್ದ ಬಳಕೆದಾರರೊಬ್ಬರು ಅದರ ಅನುಭವವನ್ನು ಹಂಚಿಕೊಂಡಿದ್ದಾರೆ. ಕೈಲ್ ಕ್ರೂಗರ್ ಎಂಬುವವರು ಈ ಟೂತ್‌ಪೇಸ್ಟ್ ಅನ್ನು "ಅತ್ಯಂತ ವಿಚಿತ್ರವಾದ ಟೂತ್‌ಪೇಸ್ಟ್" ಎಂದು ಬಣ್ಣಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು, "ನಂಬಲು ಕಷ್ಟವಾದರೂ ಕೆಎಫ್‌ಸಿ ನಿಜವಾಗಿಯೂ ಫ್ರೈಡ್ ಚಿಕನ್ ಸುವಾಸನೆಯ ಟೂತ್‌ಪೇಸ್ಟ್ ಅನ್ನು ತಯಾರಿಸಿದೆ ಮತ್ತು ನಾನು ಅದನ್ನು ಬಳಸಿ ಹಲ್ಲುಜ್ಜಿದ್ದೇನೆ" ಎಂದು ಹೇಳಿದ್ದಾರೆ. ವೀಡಿಯೊದಲ್ಲಿ ಕಾಣುವಂತೆ, ಟೂತ್‌ಪೇಸ್ಟ್ ಮತ್ತು ಎಲೆಕ್ಟ್ರಿಕ್ ಟೂತ್‌ಬ್ರಷ್ ಕೆಎಫ್‌ಸಿ ಬಕೆಟ್ ಮಾದರಿಯ ಪ್ಯಾಕೇಜಿಂಗ್‌ನಲ್ಲಿತ್ತು. ಕರ್ನಲ್ ಸ್ಯಾಂಡರ್ಸ್ ಮತ್ತು ಕೆಎಫ್‌ಸಿ ಚಿಹ್ನೆಯಿರುವ ಟೂತ್‌ಬ್ರಷ್ ಅನ್ನು ತೋರಿಸುತ್ತಾ, "ನಾನು ಈಗಷ್ಟೇ ಕೆಂಟುಕಿ ಫ್ರೈಡ್ ಚಿಕನ್ ಫ್ಲೇವರ್‌ನ ಟೂತ್‌ಪೇಸ್ಟ್ ಅನ್ನು ಪಡೆದುಕೊಂಡಿದ್ದೇನೆ. ಇದು ಖಂಡಿತವಾಗಿಯೂ ಫ್ರೈಡ್ ಚಿಕನ್‌ನಂತೆ ರುಚಿ ಇರುತ್ತದೆ ಎಂದು ನಾನು ಅಂದುಕೊಂಡಿದ್ದೇನೆ" ಎಂದು ಕೈಲ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆದರೆ ಹಲ್ಲುಜ್ಜಿದ ಬಳಿಕ ಯಾಕೋ ಜಿಡ್ಡಿನ ರೀತಿಯ ವಾಸನೆ ಹೊಂದಿತ್ತು ಎಂದು ಹೇಳಿದ್ದಾರೆ.


Click it and Unblock the Notifications