ಕಿಸಾನ್ ದಿವಸ್ ಅಥವಾ ರಾಷ್ಟ್ರೀಯ ರ್ರೈತ ದಿನಾಚರಣೆಯನ್ನು ಇಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಅನ್ನದಾತರ ಕೊಡುಗೆ ಅಪಾರ. ಈ ದಿನದಂದು ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಅರಿತು ಅವುಗಳ ಲಾಭ ಪಡೆಯಿರಿ.
ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ
ಪಿಎಂ-ಕಿಸಾನ್ ಯೋಜನೆಯ ಜತೆಗೆ ರೈತರ ಆರ್ಥಿಕ ಸಹಾಯಕ್ಕಾಗಿ ಮತ್ತು ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆ ಅಂದರೆ ಅದು "ಪಿಎಂ ಕಿಸಾನ್ ಮಾನ್ ಧನ್ ಯೋಜನೆ". ಈ ದೇಶದ ಎಲ್ಲ ಅರ್ಹ ರೈತರಿಗೂ ಪಿಂಚಣಿ ಸೌಲಭ್ಯ ದೊರಕುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ ಹಾಗೂ ಆಶಯ.

ಈ ಯೋಜನೆಯು ರೈತರು 60 ವರ್ಷವನ್ನು ತಲುಪಿದ ನಂತರ ತಿಂಗಳಿಗೆ ₹ 3,000 ಕನಿಷ್ಠ ಖಚಿತವಾದ ಪಿಂಚಣಿಯ ಭರವಸೆಯನ್ನು ನೀಡುತ್ತದೆ. ಈ ಯೋಜನೆಗೂ ರೈತರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದ್ದು, 2024ರ ನವೆಂಬರ್ 25ರ ವೇಳೆಗೆ 24.66 ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.
ದೇಶದ ರೈತರ ಶ್ರೇಯೋಭಿವೃದ್ಧಿಗೆ ಸದಾ ಮಿಡಿಯುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕೃಷಿ ಕ್ಷೇತ್ರದ ಕಾಯಕಲ್ಪಕ್ಕೆ ಜಾರಿಗೆ ತಂದ ಮಹತ್ವದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪ್ರಮುಖವಾದುದು. ಅತಿವೃಷ್ಟಿ ಅಥವಾ ಅನಾವೃಷ್ಟಿ ಇರಲಿ; ಯಾವುದೇ ರೀತಿಯ ಪ್ರಾಕೃತಿಕ ವಿಪತ್ತು ಸಂಭವಿಸಿದರೂ ಮೊದಲು ತೊಂದರೆಗೀಡಾಗುವುದೇ ರೈತರು.
ಇದೇ ಕಾರಣಕ್ಕಾಗಿ ರೈತರ ಬೆಳೆಗಳಿಗೆ ವಿಮೆ ಒದಗಿಸುವ ಈ ಯೋಜನೆಯನ್ನು 2016ರ ಜನವರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇಲ್ಲಿವರೆಗೆ ಸುಮಾರು 4 ಕೋಟಿಗೂ ಹೆಚ್ಚು ರೈತರಿಗೆ ಫಸಲ್ ಬಿಮಾ ಯೋಜನೆಯಡಿ 1.65ಲಕ್ಷ ಕೋಟಿ ರೂ. ವಿಮೆ ದೊರಕಿದೆ ಗಮನಾರ್ಹ.
ಕೃಷಿಯಲ್ಲಿ ಮಣ್ಣಿನ ಆರೋಗ್ಯವೇ ಮುಖ್ಯ
ಇನ್ನು ದೇಶದ ರೈತರಿಗೆ ಕೃಷಿ ಭೂಮಿಯ ಫಲವತ್ತತೆ ಕುರಿತು ಅರಿವು ಮೂಡಿಸುವ ಸಲುವಾಗಿ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಪ್ರಾರಂಭಿಸಲಾಗಿದ್ದು, 2023-24ನೇ ಸಾಲಿನಲ್ಲಿ 36.61 ಲಕ್ಷ ಮಣ್ಣಿನ ಆರೋಗ್ಯ ಕಾರ್ಡ್ (SHC) ರೈತರಿಗೆ ವಿತರಿಸಲಾಗಿದೆ.
ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ 5 ಕೋಟಿಗೂ ಹೆಚ್ಚು ಮಣ್ಣಿನ ಸ್ಯಾಂಪಲ್ ಪರೀಕ್ಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆ ಮೂಲಕ ರೈತರು ಅತ್ಯುತ್ತಮ ಇಳುವರಿ ಪಡೆಯಬೇಕಾದರೆ ಮಣ್ಣಿನ ಆರೋಗ್ಯವೂ ಅಷ್ಟೇ ಮುಖ್ಯ ಎನ್ನುವ ಜಾಗೃತಿಯನ್ನೂ ರೈತರಿಗೆ ನೀಡುವ ಕೆಲಸವನ್ನು ಸರ್ಕಾರದ ಕಡೆಯಿಂದ ಮಾಡಲಾಗುತ್ತಿದೆ.
ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕಲ್ಪಿಸಲು ಡಿಜಿಟಲ್ ಕೃಷಿ ಯೋಜನೆಯನ್ನು ಅಭಿವೃದ್ಧಿ, ಮಾರ್ಪಡಿಸಿದ ಬಡ್ಡಿ ಸಹಾಯ ಯೋಜನೆ (MISS), ಕೃಷಿ ಮೂಲಸೌಕರ್ಯ ನಿಧಿ(AIF), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY), ಪ್ರತಿ ಹನಿ ಹೆಚ್ಚು ಬೆಳೆ( Per Drop More Crop) ಎಂಬ ಧ್ಯೇಯ ಹೊಂದಿರುವ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಕೃಷಿ ವಿಸ್ತರಣೆಯ ಉಪ-ಮಿಷನ್ (SMAE), ಕೃಷಿ ಯಾಂತ್ರೀಕರಣದ ಉಪ-ಮಿಷನ್ (SMAM), ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಮತ್ತು ಬೆಲೆ ಬೆಂಬಲ ಯೋಜನೆ(MIS-PSS), ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ಸಮಗ್ರ ಯೋಜನೆಯ ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ (PM-AASHA) ಹೀಗೆ ಅನೇಕ ಯೋಜನೆಗಳ ಮೂಲಕ ಕೃಷಿ ಉತ್ಪಾದಕತೆ ಸುಧಾರಿಸುವ ಜತೆಗೆ ರೈತರ ಹಿತಕಾಪಾಡಲು ಹಾಗೂ ಆದಾಯವನ್ನು ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳು ಅಲ್ಲದೇ ಇನ್ನು ಅನೇಕ ಯೋಜನೆಗಳು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಜೊತೆಗೆ ಆಯಾ ರಾಜ್ಯ ಸರ್ಕಾರಗಳು ಕೂಡಾ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಪರಿಚಯಿಸಿದೆ.
ಪ್ರತಿಯೊಬ್ಬ ಅರ್ಹ ರೈತರು ಪ್ರತಿಯೊಂದು ಯೋಜನೆಯ ಫಲಾನುಭವವನ್ನು ಸರಿಯಾದ ರೀತಿ ಪಡೆದುಕೊಂಡರೆ ಮಾತ್ರ ಅಂಥಹ ಯೋಜನೆಗಳು ಫಲಪ್ರದವಾಗುವುದಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ರೈತರ ಅನುಕೂಲಕ್ಕಾಗಿ ಜಾರಿಯಲ್ಲಿರುವ ಎಲ್ಲ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಸದುಪಯೋಗಪಡಿಸಿಕೊಂಡರೆ ರೈತರ ದಿನ ಅರ್ಥಪೂರ್ಣವಾಗುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications