ಭಾರತೀಯ ಅಂಚೆ ಕಚೇರಿಯಲ್ಲಿ ಸಾಕಷ್ಟು ಯೋಜನೆಗಳಿವೆ. ಅದರಲ್ಲೂ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಪ್ರಬಲಗೊಳಿಸಲು ಇಲ್ಲಿ ಇರುವುದಕ್ಕಿಂತ ಉತ್ತಮ ಯೋಜನೆ ಇನ್ನೆಲ್ಲೂ ಇಲ್ಲವೇನೋ ಅನಿಸುತ್ತದೆ. ಇಲ್ಲಿ ಎಲ್ಲಾ ವರ್ಗದವರಿಗೂ ಇರುವಂತೆ ರೈತರಿಗೂ ಒಂದು ಉತ್ತಮ ಯೋಜನೆ ಇದೆ.. ಅದು ಕಿಸಾನ್ ವಿಕಾಸ್ ಪತ್ರ ಯೋಜನೆ..ಹಣ ದುಪ್ಪಟ್ಟು ಮಾಡುವ ಗುರಿ ಹೊಂದಿದ್ದರೆ ಇದು ಸುರಕ್ಷಿತ ಹೂಡಿಕೆಯ ಯೋಜನೆಯಾಗಿದೆ. ರೈತರು ತಮ್ಮ ಹೂಡಿಕೆಯನ್ನು ಭದ್ರವಾಗಿ ಇರಿಸಿಕೊಳ್ಳಲು ಮತ್ತು ಖಚಿತ ಲಾಭ ಪಡೆಯಲು ಇದು ಸುಲಭವಾಗಿದೆ.

ಹೌದು, ಇಲ್ಲಿ ಮಾಡುವ ಹೂಡಿಕೆ ಎಂದಿಗೂ ಸುರಕ್ಷಿತ. ಏಕೆಂದರೆ ಅಂಚೆ ಕಚೇರಿಯ ಯೋಜನೆಗಳು ಸರ್ಕಾರದ ನಿಯಂತ್ರಣದಲ್ಲಿರುತ್ತವೆ. ಹೀಗಾಗಿ ಹೂಡಿಕೆದಾರರಿಗೆ 100% ಭದ್ರತೆಯನ್ನು ಒದಗಿಸಲಾಗುತ್ತದೆ. ಹಾಗೆಯೇ 115 ತಿಂಗಳ ಅವಧಿಯಲ್ಲಿ ನಿಮ್ಮ ಹೂಡಿಕೆಯು ದ್ವಿಗುಣಗೊಳ್ಳುವ ಈ ಯೋಜನೆ ಪ್ರಸ್ತುತ 7.5% ಬಡ್ಡಿದರವನ್ನು ನೀಡುತ್ತದೆ.
ಕಿಸಾನ್ ವಿಕಾಸ್ ಪತ್ರದ ಇತಿಹಾಸ ಎಂದರೇನು..?
ಕಿಸಾನ್ ವಿಕಾಸ್ ಪತ್ರ ಯೋಜನೆಯು ಭಾರತ ಸರ್ಕಾರದ ಜನಪ್ರಿಯ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು 1988ರಲ್ಲಿ ಪರಿಚಯಿಸಲಾಗಿದ್ದು, ಇದರ ಉದ್ದೇಶ ಸಾಮಾನ್ಯ ಜನರ ಹೂಡಿಕೆ ಮೇಲೆ ಉತ್ತಮ ಆದಾಯವನ್ನು ಹಿಂತಿರುಗಿಸುವುದಾಗಿದೆ. ಅಂದರೆ, ಜನಸಾಮಾನ್ಯರು, ವಿಶೇಷವಾಗಿ ರೈತರು ಹಾಗೂ ಹಳ್ಳಿಗಳಲ್ಲಿರುವ ಹೂಡಿಕೆದಾರರು ತಮ್ಮ ಉಳಿತಾಯವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿಕೊಳ್ಳಲು ಮತ್ತು ದೀರ್ಘಕಾಲದ ಆರ್ಥಿಕ ಭದ್ರತೆ ಹೊಂದಲು ಈ ಹೂಡಿಕೆಯು ಸಹಾಯ ಮಾಡುವುದು.
ಕಿಸಾನ್ ವಿಕಾಸ್ ಪತ್ರದ ಪ್ರಮುಖ ವೈಶಿಷ್ಟ್ಯ:
- ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉನ್ನತ ಬಡ್ಡಿದರ ಲಭಿಸುತ್ತದೆ. ಅಂದರೆ ಹೂಡಿಕೆದಾರರಿಗೆ ಪ್ರಸ್ತುತ ಬಡ್ಡಿದರನ ಅನುಸಾರ 7.5% ಬಡ್ಡಿ ಸಿಗುತ್ತದೆ.
- 115 ತಿಂಗಳಲ್ಲಿ ಹೂಡಿಕೆಯ ದ್ವಿಗುಣಗೊಳ್ಳುವ ಗ್ಯಾರಂಟಿ ಕೂಡ ಇದೆ. ಅಂದರೆ ₹1 ಲಕ್ಷ ಹೂಡಿಕೆ ಮಾಡಿದರೆ, 9 ವರ್ಷ 7 ತಿಂಗಳ ನಂತರ ₹2 ಲಕ್ಷ ಆಗಲಿದೆ.
- ಅಂಚೆ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಖಾತೆ ತೆರೆಯಲು ಅವಕಾಶವಿದೆ. ಹೀಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಸರ್ಕಾರದ ಮಾನ್ಯತೆ ಪಡೆದ ಬ್ಯಾಂಕಿನಲ್ಲಿ ಖಾತೆ ತೆರೆಯಬಹುದು.
- ಈ ಯೋಜನೆಯಲ್ಲಿ ಹೂಡಿಕೆಗೆ ಯಾವುದೇ ಮಿತಿಯಲ್ಲ. ಹೀಗಾಗಿ ಕನಿಷ್ಠ ₹1000 ಹೂಡಿಕೆ ಮಾಡಬಹುದು, ಆದರೆ ಗರಿಷ್ಠ ಮಿತಿ ಇಲ್ಲ
- ರ್ಕಾರ ನಿರ್ವಹಿಸುವ ಹೂಡಿಕೆ ಯೋಜನೆಯಾಗಿರುವುದರಿಂದ ಅತ್ಯಂತ ಸುರಕ್ಷಿತ ಯೋಜನೆಯಾಗಿದೆ.
- ನಿಮ್ಮ ಹೂಡಿಕೆಯ ಲಾಭವನ್ನು ನಿಗದಿತ ವ್ಯಕ್ತಿಗೆ ವರ್ಗಾಯಿಸಬಹುದು. ಅಂದರೆ ನೀವು ಆ ವ್ಯಕ್ತಿಯ ಹೆಸರನ್ನು ನಾಮ ನಿರ್ದೇಶನ ಮಾಡಬೇಕಾಗುತ್ತದೆ.
ಮುಕ್ತಾಯ ಅವಧಿ & ಹೂಡಿಕೆಯ ಮಿತಿಗಳು:
ಈ ಯೋಜನೆಯಲ್ಲಿ 115 ತಿಂಗಳಲ್ಲಿ ಹೂಡಿಕೆಗೆ ಕಡಿತಗೊಳಿಸಲಾಗುತ್ತದೆ. ಅಂದರೆ 9 ವರ್ಷ 7 ತಿಂಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ಮತ್ತು ಇದು ಹೂಡಿಕೆದಾರರಿಗೆ ಹೆಚ್ಚು ಲಾಭದಾಯಕವಾಗಿದೆ. ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ಹೂಡಿಕೆ ಮಿತಿ ಇಲ್ಲ. ಕನಿಷ್ಟ ₹1000ದಿಂದ ಪ್ರಾರಂಭಿಸಿ, ನಿಮಗೆ ಇಚ್ಛೆಯ ಪ್ರಮಾಣವನ್ನು ಹೂಡಿಕೆ ಮಾಡಬಹುದು. ಇದು ನಿಮ್ಮ ಹಣವನ್ನು ದ್ವಿಗುಣಗೊಳಿಸುವ ಹೂಡಿಕೆ ಆದ್ದರಿಂದ ದೀರ್ಘಕಾಲಿಕ ಉಳಿತಾಯಕ್ಕಾಗಿ ಸೂಕ್ತವಾಗಿದೆ.
ಅಂದರೆ ಒಬ್ಬ ವ್ಯಕ್ತಿಯು ₹5,00,000 ಹೂಡಿಕೆ ಮಾಡಿದರೆ ಅದರ ಮೊತ್ತ 115 ತಿಂಗಳ ನಂತರ ₹10,00,000ವಾಗಿ ಕೈಗೆ ಸಿಗುತ್ತದೆ. ಹಾಗೆಯೇ ₹1,00,000 ಹೂಡಿಕೆ ಮಾಡಿದರೆ ಅದೇ ಅವಧಿಯಲ್ಲಿ ₹2,00,000 ಆಗಲಿದೆ.
ಬಡ್ಡಿ ಲೆಕ್ಕಾಚಾರ ಮತ್ತು ತೆರಿಗೆ ನಿಯಮಗಳು:
ಈ ಯೋಜನೆಯಲ್ಲಿ ಬಡ್ಡಿಯನ್ನು ಸಂಯೋಜಿತ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ₹1.5 ಲಕ್ಷದವರೆಗೆ ವಿನಾಯಿತಿಯನ್ನು ಪಡೆಯಬಹುದು. ಹಾಗೆಯೇ ಮೆಚ್ಯೂರಿಟಿಯ ಆದಾಯಕ್ಕೆ ಈ ತೆರಿಗೆ ಅನ್ವಯವಾಗುತ್ತದೆ.
ಕಿಸಾನ್ ವಿಕಾಸ್ ಪತ್ರದ ಮೇಲೆ ಸಾಲ ಪಡೆಯಬಹುದೇ?
ಒಂದು ವೇಳೆ ಹಣದ ಅನಿವಾರ್ಯತೆ ಬಂದಾಗ ಸಾಲ ಪಡೆಯಲು ಯಾವುದೇ ಆಧಾರ ವಿಲ್ಲದಿದ್ದರೆ, ಹೂಡಿಕೆದಾರರು ಕಿಸಾನ್ ವಿಕಾಸ್ ಪತ್ರದ ಮೇಲೆ ಸಾಲ ಕೂಡ ಪಡೆಯಬಹುದು. ಇದರಿಂದಾಗಿ ನಿಮ್ಮ ಹಣವನ್ನು ಇತರ ತುರ್ತು ಅಗತ್ಯಗಳಿಗೆ ಬಳಸಿಕೊಳ್ಳಬಹುದು. ಸಾಮಾನ್ಯವಾಗಿ, KVP ಮೇಲೆ ನೀಡುವ ಸಾಲದ ಬಡ್ಡಿದರಗಳು ಕಡಿಮೆಯಾಗಿರುತ್ತವೆ, ಇದು ಸಾಲವನ್ನು ಹೆಚ್ಚು ಪ್ರಯೋಜನಕಾರಿಯಾಗಿಸುತ್ತದೆ.
ಯಾರಿಗೆಲ್ಲಾ ಸಿಗುತ್ತದೆ ಈ ಯೋಜನೆಯ ಉಪಯೋಗ..?
ಕಡಿಮೆ ಅಪಾಯದ ಹೂಡಿಕೆ ಹುಡುಕುತ್ತಿರುವವರು, ದೀರ್ಘಕಾಲಿಕ ನಿರ್ವಹಿತ ಉಳಿತಾಯ ಬೇಕಾದವರು, ಭವಿಷ್ಯಕ್ಕೆ ಖಚಿತ ಲಾಭ ಹುಡುಕುವವರು, ಯಾವುದೇ ಹೂಡಿಕೆ ಮಿತಿಯಿಲ್ಲದ ಹೂಡಿಕೆ ಪ್ಲ್ಯಾನ್ ಬೇಕಾದವರು ಇಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ನಮೂದನೆ ಮತ್ತು ವರ್ಗಾವಣೆ ಸೌಲಭ್ಯವಿರುವುದರಿಂದ, ಖಾತೆಯನ್ನು ನಾಮನಿರ್ದೇಶಿತ ವ್ಯಕ್ತಿಯ ಹೆಸರಿಗೆ ವರ್ಗಾಯಿಸಬಹುದು. ಅಷ್ಟೇ ಅಲ್ಲ ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಸೌಕರ್ಯವಿದೆ. ಜೊತೆಗೆ ಮರಣಾನಂತರ ನಾಮನಿರ್ದೇಶಿತ ವ್ಯಕ್ತಿಗೆ ಹಣವನ್ನು ವರ್ಗಾಯಿಸಲು ಅನುಮತಿ ಇದೆ.
ಕಡಿಮೆ ಅಪಾಯ ಮತ್ತು ಖಚಿತ ಲಾಭದೊಂದಿಗೆ ಹೂಡಿಕೆ ಮಾಡಲು ಬಯಸುವ ಎಲ್ಲರಿಗೂ KVP ಅತ್ಯುತ್ತಮ ಆಯ್ಕೆ. ನಿಮ್ಮ ಹೂಡಿಕೆಯನ್ನು ಕೇವಲ 115 ತಿಂಗಳಲ್ಲಿ ದ್ವಿಗುಣಗೊಳಿಸುವುದು, ಸಹಜವಾಗಿಯೇ ಇದು ಮಾರುಕಟ್ಟೆ ಅಸ್ಥಿರತೆಯಿಂದ ಮುಕ್ತವಾದ ಉತ್ತಮ ಹೂಡಿಕೆ ಯೋಜನೆಯಾಗಿದೆ.


Click it and Unblock the Notifications