ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಐಟಿ ನೌಕರರಿಗೆ, ಸ್ಟಾರ್ಟ್‌ಅಪ್‌ಗಳಿಗೆ ಮಾತ್ರ ನೆಲೆಯಗದೆ, ಹೆಚ್ಚಾಗಿ ಇದು ಶ್ರೀಮಂತರಿಗೆ, ಬಿಲಿಯನೇರ್‌ಗಳಿಗೆ ತಾಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ 27 ಬಿಲಿಯೇರ್‌ಗಳು ಒಳೊಂಡಂತೆ ಭಾರತದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಅಲ್ಲದೆ 2024ರ ಮೊದಲ ತ್ರೈಮಾಸಿಕದಲ್ಲಿ ವಿಶೇಷವಾಗಿ ಉತ್ತರ ಮತ್ತು ಆಗ್ನೇಯ ಪ್ರದೇಶಗಳಲ್ಲಿ ನಗರವು ಆಸ್ತಿ ಬೆಲೆಯಲ್ಲಿ ಗಮನಾರ್ಹ ಏರಿಕೆಯನ್ನ ಕಂಡಿದೆ.
ಬಿಲಿಯನೇರ್‌ಗಳು ಮತ್ತು ಯಶಸ್ವಿ ಉದ್ಯಮಿಗಳು ವಾಸ ಮಾಡವ ಬೆಂಗಳೂರಿನ ಏಳು ಅತ್ಯಂತ ದುಬಾರಿ ವಸತಿ ಸ್ಥಳಗಳ ಬಗ್ಗೆ ತಿಳಿಯಿರಿ.
1. ಇಂದಿರಾನಗರ: ಶ್ರೀಮಂತಿಕೆಯ ಹೃದಯ
ಬೆಂಗಳೂರಿನ ಅತ್ಯಂತ ಬೇಡಿಕೆಯ ನಗರವಾಗಿರುವ ಇಂದಿರಾನಗರವು ಬೆಂಗಳೂರಿನ ಪೂರ್ವಭಾಗದಲ್ಲಿದೆ. ಅಲ್ಲದೆ ಇದು ವಸತಿ ಮತ್ತು ವಾಣಿಜ್ಯ ಪ್ರದೇಶಗಳಿಗೆ ಬೇಡಿಕೆಯ ನಗರವಾಗಿದೆ. ಈ ಇಂದಿರಾನಗರವು ಐಷಾರಾಮಿ ಬಂಗಲೆಗಳು ಮತ್ತು ಉನ್ನತ-ಮಟ್ಟದ ಅಪಾರ್ಟ್‌ಮೆಂಟ್‌ಗಳನ್ನ ಹೊಂದಿದೆ. ಈ ಪ್ರದೇಶವು ಅದರ ಶಾಪಿಂಗ್ ಕೇಂದ್ರಗಳು, ಟ್ರೆಂಡಿ ಕೆಫೆಗಳು, ಬೂಟಿಕ್‌ಗಳಿಗೆ ಹೆಸರುವಾಸಿಯಾಗಿದೆ. ಇನ್ನು ಇಂದಿರಾನಗರ ರಾತ್ರಿ ಶಾಪಿಂಗ್ ಮಡುವವರಿಗೆ ಹೇಳಿ ಮಾಡಿಸಿದಂತಿದೆ. ನಗರದಲ್ಲಿರುವ ಪ್ರಮುಖ ಪ್ರದೇಶಗಳು ನಗರವನ್ನು ಇನ್ನಷ್ಟು ಆಕರ್ಷಿಸುವಂತೆ ಮಾಡುತ್ತದೆ. ಇದು ಪ್ರಸಿದ್ಧ ವ್ಯಕ್ತಿಗಳು ವ್ಯಾಪಾರದ ಗಣ್ಯರು ಹಾಗೆ ನಗರದ ಗಣ್ಯರಿಗೆ ಆದ್ಯತೆಯ ಸ್ಥಳವಾಗಿದೆ.

2. ಕೋರಮಂಗಲ: ಬೆಂಗಳೂರಿನ ಶಕ್ತಿ ಕೇಂದ್ರ
ವಾಣಿಜ್ಯ ಮತ್ತು ವಸತಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವೆಂದರೆ ಅದು ಕೋರಮಂಗಲ ಮಾತ್ರ. ಇದು ಬೆಂಗಳೂರಿನ ಆಗ್ನೇಯ ಭಾಗದಲ್ಲಿದೆ. ಶಿಕ್ಷಣ ಸಂಸ್ಥೆಗಳು, ಕೆಲಸದ ಸ್ಥಳಗಳು ಸೇರಿದಂತೆ ಐಟಿ ಪಾರ್ಕ್‌ಗಳಿಂದಾಗಿ ಈ ಪ್ರದೇಶವ ಉದ್ಯಮಿಗಳು, ಕಾರ್ಯನಿರ್ವಾಹಕರು ಮತ್ತು ಟೆಕ್ ವೃತ್ತಿಪರರಿಗೆ ಆಕರ್ಷಕ ಪ್ರದೇಶವಾಗಿದೆ. ದುಬಾರಿ ಅಪಾರ್ಟ್‌ಮೆಂಟ್‌ಗಳಿಂದ ಹಿಡಿದು ಶ್ರೀಮಂತ ಬಂಗಲೆ ಸೇರಿದಂತೆ ಕೋರಮಂಗಲ ಶ್ರೀಮಂತರಿಗೆ ಅನುಗುಣವಾಗುವ ಎಲ್ಲಾ ರೀತಿಯ ರಿಯಲ್ ಎಸ್ಟೇಟ್ ಆಯ್ಕೆಗಳನ್ನು ಕೂಡ ನೀಡುತ್ತದೆ.ಹತ್ತು ಹಲವು ಕೆಫೆಗಳು, ರೆಸ್ಟೊರೆಂಟ್‌ಗಳು ಮತ್ತು ಶಾಪಿಂಗ್ ಕಾಂಪ್ಲೆಕ್ಸ್‌ಗಳ ಉಪಸ್ಥಿತಿಯಿಂದಾಗಿ ಈ ಉನ್ನತ-ಮಟ್ಟದ ಪ್ರದೇಶ ಮತ್ತಷ್ಟು ಆಕರ್ಷಣೆಯನ್ನು ಹೆಚ್ಚಿಸುತ್ತದೆ ಅಲ್ಲದೆ ಇದು ಹೂಡಿಕೆಗೆ ಪ್ರಮುಖ ತಾಣವಾಗಿದೆ.
3. ಸದಾಶಿವನಗರ: ಹಸಿರು ಮತ್ತು ದುಬಾರಿ ಸ್ಥಳ
ಅತ್ಯಂತ ಪ್ರತಿಷ್ಠಿತ ವಸತಿ ಪ್ರದೇಶಗಳಲ್ಲಿ ಒಂದಾಗಿರುವ ಪ್ರದೇಶವೆಂದರೆ ಅದು ಬೆಂಗಳೂರಿನ ಸದಾಶಿವನಗರ. ಇದು ಐಟಿ ಹಬ್‌ಗಳು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಇದಾಗಿದೆ. ಅಲ್ಲದೆ ಇದು ಸುತ್ತಲು ಹಸಿರಿನಿಂದ ಕೂಡಿದ್ದು, ಪ್ರಶಾಂತ ಮತ್ತು ಐಷಾರಾಮಿ ಜೀವನ ಅನುಭವವನ್ನು ಇಲ್ಲಿ ಪಡೆಯಬಹದು. ಇದು ವಿಶಾಲವಾದ ವಿಲ್ಲಾಗಳು, ಡ್ಯುಪ್ಲೆಕ್ಸ್ ಮನೆಗಳು ಮತ್ತು ಎತ್ತರದ ಅಪಾರ್ಟ್‌ಮೆಂಟ್‌ಗಳ ತಾಣವಾಗಿದೆ. ಹಾಗೆ ಇದು ಶ್ರೀಮಂತ ವ್ಯಕ್ತಿಗಳ ಆದ್ಯತೆಯ ಆಯ್ಕೆಯಾಗಿದೆ. ಈ ಪ್ರದೇಶವು ಉತ್ತಮವಾದ ಊಟದ ಆಯ್ಕೆಗಳು, ಶಾಪಿಂಗ್ ಮಾಲ್‌ಗಳು ಮತ್ತು ಉದ್ಯಾನವನಗಳು ಸೇರಿದಂತೆ ಆಧುನಿಕ ಸೌಕರ್ಯಗಳನ್ನ ನಾವಿಲ್ಲಿ ಕಾಣಬಹುದು. ಅಲ್ಲಿರುವ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಜೀವನವನ್ನು ಈ ನಗರವು ನೀಡುತ್ತದೆ.
4. ಶಾಂತಲಾ ನಗರ: ಪ್ರಧಾನ ಹೂಡಿಕೆಯ ತಾಣ
ಉದ್ಯಮಿಗಳು, ರಾಜಕಾರಣಿಗಳು ಮತ್ತು ಉನ್ನತ ವ್ಯಕ್ತಿಗಳಿಗೆ ಶಾಂತಲಾ ನಗರ ಪ್ರಮುಖ ಸ್ಥಳವಾಗಿದೆ. ಉನ್ನತ ಶಾಲೆಗಳು, ಕಾಲೇಜುಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಈ ಪ್ರದೇಶ ಹಲವಾರು ಪ್ರೀಮಿಯಂ ವಸತಿ ಯೋಜನೆಗಳನ್ನು ಹೊಂದಿದೆ. ಮತ್ತು ತಡೆರಹಿತ ಸಂಪರ್ಕವನ್ನು ಹೊಂದಿದೆ. ಇದು ಐಷಾರಾಮಿ ಜೊತೆಗೆ ಅನುಕೂಲಕ್ಕಾಗಿ ಪ್ರದೇಶಗಳನ್ನ ನೋಡುತ್ತಿರುವವರಿಗೆ ಸೂಕ್ತವಾದ ಆಯ್ಕೆಯಾಗಿದೆ. ಇಲ್ಲಿ ಮುಖ್ಯವಗ ಗಮನಿಸಬೇಕಾದುದೆಂರೆ, ನಗರದ ಅತ್ಯಂತ ಗದ್ದಲದ ಬೀದಿಗಳಲ್ಲಿ ಒಂದಾದ ಲ್ಯಾವೆಲ್ಲೆ ರಸ್ತೆ ಶಾಂತಲಾ ನಗರದ ಆಕರ್ಷಣೆಯನ್ನ ಇನ್ನು ಹೆಚ್ಚಿಸುತ್ತದೆ. ಬಂಡವಾಳದ ಮೆಚ್ಚುಗೆ ಮತ್ತು ವ್ಯಾಪಾರ ಜಿಲ್ಲೆಗಳ ಸಾಮೀಪ್ಯದ ಸಾಮರ್ಥ್ಯದಿಂದಾಗಿ ಹೂಡಿಕೆದಾರರನ್ನು ಈ ಪ್ರದೇಶ ಆಕರ್ಷಿಸುತ್ತದೆ.
5. ವೈಟ್‌ಫೀಲ್ಡ್: ಫಾರ್ಮ್‌ಲ್ಯಾಂಡ್‌ಗಳಿಂದ ಐಷಾರಾಮಿ ಜೀವನದವರೆಗೆ
ಒಂದು ಕಾಲದಲ್ಲಿ ವಿಸ್ತಾರವಾದ ಕೃಷಿಭೂಮಿಗಳಿಗೆ ಹೆಸರುವಾಸಿಯಾಗಿದ್ದ ವೈಟ್‌ಫೀಲ್ಡ್ ಇಂದು ನೆರೆಹೊರೆ ಪ್ರದೇಶಗಳಿಗೆ ಹೋಲಿಸಿದ್ರೆ ಬೆಂಗಳೂರಿನ ಅತ್ಯಂತ ದುಬಾರಿ ವಸತಿಗಳಲ್ಲಿ ಒಂದಾಗಿದೆ. IT ಉತ್ಕರ್ಷದೊಂದಿಗೆ 90ರ ದಶಕದ ಉತ್ತರಾರ್ಧದಲ್ಲಿ ಈ ಬದಲಾವಣೆ ಪ್ರಾರಂಭವಾಯಿತು. ಹಾಗೆ ಇಂದು, ವೈಟ್‌ಫೀಲ್ಡ್ ಅನೇಕ ದುಬಾರಿ ವಸತಿಗಳಿಗೆ ಸಂಕೀರ್ಣಗಳು ಮತ್ತು IT ಪಾರ್ಕ್‌ಗಳಿಗೆ ನೆಲೆಯಾಗಿದೆ. ಶಾಪಿಂಗ್ ಮಾಲ್‌ಗಳು, ಉದ್ಯಾನವನಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಊಟದ ಆಯ್ಕೆಗಳಂದಾಗಿ ಅಲ್ಲಿನ ಸ್ಥಳಗಳ ಆಸ್ತಿ ಬೆಲೆಗಳಿಗೂ ಕೂಡ ಕಾರಣವಾಗಿದೆ. ವೈಟ್‌ಫೀಲ್ಡ್ ಶ್ರೀಮಂತ ಖರೀದಿದಾರರಿಗೆ ಜನಪ್ರಿಯ ಆಯ್ಕೆಯಾಗಿದೆ. ಅಲ್ಲಿನ ಐಷಾರಾಮಿ ಜೀವನ ಮತ್ತು ಕಾರ್ಯಸ್ಥಳಗಳಿಗೆ ಅನುಕೂಲಕರ ಪ್ರದೇಶಳಿಂದಾಗಿ ಇು ಹೆಸರುವಾಸಿಯಾಗಿದೆ.
6. ರಿಚ್ಮಂಡ್ ಟೌನ್: ಇತಿಹಾಸ ಮತ್ತು ಐಷಾರಾಮಿ ಮಿಶ್ರಣ
ಐತಿಹಾಸಿಕ ವಾಸ್ತುಶಿಲ್ಪ ಮತ್ತು ಆಧುನಿಕ ಐಷಾರಾಮಿಗಳ ಮಿಶ್ರಣವನ್ನು ನೀಡುವ ಪ್ರದೇಶವೆಂದರೆ ರಿಚ್ಮಂಡ್ ಟೌನ್. ಉತ್ತಮ ಗುಣಮಟ್ಟದ ಮೂಲಸೌಕರ್ಯ, ಪ್ರೀಮಿಯಂ ವಸತಿ ಗೋಪುರಗಳು ಮತ್ತು ಅತ್ಯುತ್ತಮ ಸಂಪರ್ಕದೊಂದಿಗೆ, ರಿಚ್ಮಂಡ್ ಟೌನ್ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆಯ ವಿಳಾಸವಾಗಿದೆ. ಐಷಾರಾಮಿ ಜೀವನದ ಪ್ರಯೋಜನಗಳನ್ನು ಪಡೆಯುತ್ತಿರುವವರಿಗೆ ಹಾಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಬಯಸುವ ವೃತ್ತಿಪರರಿಗೆ ಈ ಸ್ಥಳ ಸೂಕ್ತವಾಗಿದೆ. ಸದ್ಯಕ್ಕೆ ಈ ಪ್ರದೇಶದ ಆಕರ್ಷಣೆ, ಅದರ ಪರಂಪರೆ ಮತ್ತು ಸಮಕಾಲೀನ ಜೀವನವೀಗ ಸಮತೋಲನದಲ್ಲಿದೆ, ಇದು ವಿಭಿನ್ನ ಅಭಿರುಚಿಯನ್ನು ಹೊಂದಿರುವವರಿಗೆ ಈ ಪ್ರದೇಶ ಉನ್ನತ ಆಯ್ಕೆಯಾಗಿದೆ.
7. ರಾಜಾಜಿನಗರ: ವಾಣಿಜ್ಯ ಮತ್ತು ವಸತಿ ಸ್ಥಳಗಳ ಮಿಶ್ರಣ
ರಾಜಾಜಿನಗರವು ಬೆಂಗಳೂರಿನ ವಾಯುವ್ಯ ಭಾಗದಲ್ಲಿದ್ದು, ನಗರದ ಅತ್ಯಂತ ಪ್ರಮುಖ ಮತ್ತು ದುಬಾರಿ ಉಪನಗರಗಳಲ್ಲಿ ಇದು ಒಂದಾಗಿದೆ. ವರ್ಷ ವರ್ಷಕ್ಕೆ ಈ ಪ್ರದೇಶವು ಗಮನಾರ್ಹವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದರ ಪರಿಣಾಮವಾಗಿ ಆಸ್ತಿ ಬೆಲೆ ಕೂಡ ಏರಿಕೆಯಾಗಿದೆ. ಸಿ. ರಾಜಗೋಪಾಲಾಚಾರಿ ಅವರ ಹೆಸರನ್ನೊಳಗೊಂಡ ಈ ಪ್ರದೇಶವು ವಸತಿ ಸ್ಥಳಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮಿಶ್ರಣವಾಗಿದೆ. ಜೊತೆಗೆ ಇದು ರಿಯಲ್ ಎಸ್ಟೇಟ್ ಹೂಡಿಕೆಗೆ ಪ್ರಮುಖ ಸ್ಥಳವಾಗಿದೆ. ಅತ್ಯುತ್ತಮ ಮೂಲಸೌಕರ್ಯ, ಶಾಪಿಂಗ್ ಮಾಲ್‌ಗಳು ಮತ್ತು ಮನರಂಜನಾ ಸೌಲಭ್ಯಗಳೊಂದಿಗೆ, ರಾಜಾಜಿನಗರವು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಒಂದಾಗಿದ. ಹಾಗೆ ಅನುಕೂಲಕರ ಮತ್ತು ಐಷಾರಾಮಿ ಜೀವನಶೈಲಿಯನ್ನು ಬಯಸುವ ಶ್ರೀಮಂತರನ್ನು ಇದು ಆಕರ್ಷಿಸುತ್ತದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!



Click it and Unblock the Notifications