ನವದೆಹಲಿ, ಜುಲೈ 21: ಕೆಲವೊಮ್ಮೆ ಕಾರಣವಿಲ್ಲದ ಕಾರಣಕ್ಕೆ ದಂಡ ಕಟ್ಟಬೇಕಾದ ಸ್ಥಿತಿಯನ್ನು ನಾವೇ ತಂದುಕೊಳ್ಳುತ್ತೇವೆ. SIP ಪಾವತಿ ಮರೆತು ಬಿಡುತ್ತೇವೆ. ಇಲ್ಲವೆ ಇಎಂಐ ಮಿಸ್ ಮಾಡುತ್ತೇವೆ. ಯಾವುದೋ ಬಿಲ್ ತುಂಬುವ ದಿನಾಂಕ ಮುಂದಕ್ಕೆ ಮೂಲಕ ಹಣವನ್ನು ಹೂಡಿಕೆ ಮಾಡುತ್ತಾರೆ. ಈ ತಪ್ಪಿನಿಂದಾಗಿ ಆಕೆ ದೊಡ್ಡ ಮೊತ್ತವನ್ನೇ ತೆರಬೇಕಾಗಿ ಬರುತ್ತದೆ. ಪೇಮೆಂಟ್ ಮಿಸ್ ಮಾಡಿಕೊಂಡಿದ್ದಕ್ಕೆ ಪೆನಾಲ್ಟಿ ಕಟ್ಟಬೇಕಾಗುತ್ತದೆ. ಹಾಗಿದ್ದರೆ ಇದಕ್ಕೆ ಒಂದು ಪರಿಹಾರ ಇಲ್ಲವೆ?
ಇ-ಮ್ಯಾಂಡೇಟ್ ಫೀಚರ್ ಬಳಸಿದರೆ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಹಾಗಿದ್ದರೆ ಇ-ಮ್ಯಾಂಡೇಟ್ ಎಂದರೇನು ಎನ್ನುವುದನ್ನು8 ತಿಳಿದುಕೊಳ್ಳೋಣ.

ಆನ್ ಲೈನ್ ಮ್ಯಾಂಡೇಟ್ ಅಥವಾ ಪರ್ಮಿಶನ್ ನೀಡುವುದನ್ನೇ ಈ-ಮ್ಯಾಂಡೇಟ್ ಎಂದು ಕರೆಯಬಹುದು. ಇಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಆಟೋಮ್ಯಾಟಿಕ್ ಆಗಿ ಕಡಿತಗೊಳಿಸಲಾಗುತ್ತದೆ. ಈ ಸೌಲಭ್ಯ ಎನೇಬಲ್ ಮಾಡಿಕೊಂಡರೆ ಮರುಕಳಿಸುವ ಅಂದರೆ ರಿಕರಿಂಗ್ ಪೇಮೆಂಟ್ ಗಳಿಗೆ ಹಣ ಪಾವತಿಯಾಗುತ್ತಿರುತ್ತದೆ. ತಿಂಗಳ ನಿಗದಿತ ದಿನಾಂಕದಂದು ನಿಮ್ಮ ಖಾತೆಯಿಂದ ನಿಗದಿತ ಮೊತ್ತ ಕಡಿತವಾಗುತ್ತದೆ.
ನೀವು ಮಾಸಿಕ SIP ತೆಗೆದುಕೊಂಡಿದ್ದರೆ ಅಥವಾ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅಥವಾ EMI ಪಾವತಿಯನ್ನು ಆಟೋಮ್ಯಾಟಿಕ್ ಡೆಬಿಟ್ ಆರಿಸಿಕೊಂಡಿದ್ದರೆ ಆಗ ಸಹ ಹಣ ಪಾವತಿಯಾಗುತ್ತಿರುತ್ತದೆ. ಆದರೆ ಯಾವ ದಿನ ಆಟೋಮ್ಯಾಟಿಕ್ ಪಾವತಿ ಇದೆಯೋ ಆ ದಿನ ನಿಮ್ಮ ಖಾತೆಯಲ್ಲಿ ಹಣವಿದೆಯಾ ಅನ್ನೋದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ಈ ಸೌಲಭ್ಯ ಬಳಸಿಕೊಳ್ಳಲು ನೀವು ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ ಅಥವಾ ಫಾರ್ಮ್ ಭರ್ತಿ ಮಾಡುವ ಅಗತ್ಯವಿಲ್ಲ. ನೀವು ಒಂದೇ ಬಾರಿಗೆ ಇ-ಮ್ಯಾಂಡೇಟ್ ನೋಂದಾಯಿಸಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಮತ್ತು ಕಾರ್ಡ್ ವಿವರಗಳನ್ನು ಮಾತ್ರ ನೀವು ನೋಂದಾಯಿಸಿಕೊಳ್ಳಬೇಕು. ಈ ರೀತಿ ರಿಜಿಸ್ಟ್ರೇಶನ್ ಮಾಡಿಸಿಕೊಂಡರೆ ನಿಮ್ಮ ಮರ್ಚೆಂಟ್ ಪ್ಲಾಟ್ ಫಾರ್ಮ್ ನಲ್ಲಿ ಮರುಪಾವತಿಗಳನ್ನು ಸೆಟ್ ಮಾಡಿಕೊಳ್ಳಬಹುದು.
ನಿಮ್ಮ ಹೋಮ್ ಲೋನ್ ಮಾಸಿಕ 1600 ರೂ. EMI ಹೊಂದಿದೆ ಎಂದು ಇಟ್ಟುಕೊಳ್ಳೋಣ. ಇದನ್ನು ಪ್ರತಿ ತಿಂಗಳ 5 ನೇ ತಾರೀಕಿಗೆ ತುಂಬಬೇಕಿದೆ. ಇದಕ್ಕೆ ನೀವು ಇ-ಮ್ಯಾಂಡೇಟ್ ಮಾಡಿಕೊಂಡರೆ ನಿಗದಿತ ದಿನಾಂಕದಂದು ಅದೇ ಆಟೋಮ್ಯಾಟಿಕ್ ಆಗಿ ಡೆಬಿಟ್ ಆಗುತ್ತದೆ. ಇದು ನೀವು ಸಕಾಲಕ್ಕೆ ಪಾವತಿ ಮಾಡಲು ಜತೆಗೆ ಪೆನಾಲ್ಟಿ ಮತ್ತು ಹೆಚ್ಚುವರಿ ಶುಲ್ಕದಿಂದ ಬಚಾವಾಗಲು ಸಾಧ್ಯವಾಗುವಂತೆ ಮಾಡುತ್ತದೆ.
ಈ ಇ-ಮ್ಯಾಂಡೇಟ್ ಹಲವು ಪ್ರಯೋಜನಗಳನ್ನು ಹೊಂದಿದೆ. ಮೊದಲನೆಯದಾಗಿ ಇದು ತುಂಬಾ ಸರಳವಾಗಿದೆ. ನೀವು ಯಾವುದೇ ರಿಮೈಂಡರ್ ಇಟ್ಟುಕೊಳ್ಳಬೇಕಿಲ್ಲ. ಒಮ್ಮೆ ನೀವು ಇ-ಮ್ಯಾಂಡೇಟ್ ಗೆ ಒಕೆ ನೀಡಿದರೆ, ನೀವು ಏನನ್ನೂ ಮಾಡಬೇಕಾಗಿರುವುದಿಲ್ಲ. ಆದರೆ ಖಾತೆಯಲ್ಲಿ ಹಣವಿದೆಯೇ ಎಂದು ನೀವು ಖಚಿತಪಡಿಸಿಕೊಳ್ಳಬೇಕು.
ಪ್ರತಿ ಬಾರಿ ಪಾವತಿಯ ದಿನದಂದು ಮೊತ್ತವನ್ನು ಆಟೋಮ್ಯಾಟಿಕ್ ಆಗಿ ಕಡಿತಗೊಳಿಸಲಾಗುತ್ತದೆ. ಇದು ಸಂಪೂರ್ಣ ಉಚಿತವಾಗಿರುತ್ತದೆ. ನೀವು ವಾರ್ಷಿಕ ಶುಲ್ಕ ಸಹ ಪಾವತಿಸಬೇಕಾಗಿಲ್ಲ. ನೀವು ವಿಮಾ ಕಂತುಗಳು, SIP ಇನ್ವೆಸ್ಟ್ ಮೆಂಟ್, ಸಾಲದ EMIಗಳು ಇತ್ಯಾದಿಗಳನ್ನು ಸುಲಭವಾಗಿ ಪಾವತಿಸಬಹುದು.
ಇ-ಮ್ಯಾಂಡೇಟ್ ಒಂದು ರೀತಿಯ ಭದ್ರತೆಯನ್ನು ನೀಡುತ್ತದೆ. ಇದು NPCIನ ನ್ಯಾಶನಲ್ ಆಟೋಮ್ಯಾಟೆಡ್ ಕ್ಲೀಯರಿಂಗ್ ಹೌಸ್ ಭಾಗವಾಗಿದೆ. ಅಡ್ವಾನ್ಸ್ಡ್ ಸೆಕ್ಯೂರಿಟಿ ಫೀಚರ್ ಗಳನ್ನು ಇದು ಒಳಗೊಂಡಿದೆ.
ಇ-ಮ್ಯಾಂಡೇಟ್ ನಿಮ್ಮನ್ನು ಸಾಲದ ಬಲೆಗೆ ಬೀಳದಂತೆ ತಡೆಯುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಹೂಡಿಕೆ ಸ್ಕೀಂ ಸಹ ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ಅನುಗುಣವಾಗಿ ನೀವು ಕ್ರೆಡಿಟ್ ಕಾರ್ಡ್‌ಗಳ ಬಳಕೆ ಮಾಡಿಕೊಂಡು ಮಾಡಬಹುದು. ಆಟೋ ಡೆಬಿಟ್‌ಗಾಗಿ ನಿಮ್ಮ ಖಾತೆಯಲ್ಲಿ ನೀವು ಒಂದಿಷ್ಟು ಹಣ ಮೀಸಲಿಡಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿಯಾದ ರೀತಿ ಕಾಪಾಡಿಕೊಳ್ಳುತ್ತದೆ.


Click it and Unblock the Notifications