ಭಾರತದ ಅತ್ಯಂತ ದೊಡ್ಡ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (REIT) ಎನಿಸಿಕೊಂಡಿರುವ ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್, ಆಗಸ್ಟ್ 5, 2025ರಂದು ತನ್ನ 4,800 ರೂ. ಕೋಟಿ ಮೌಲ್ಯದ ಐಪಿಒವನ್ನು ಆರಂಭಿಸಲಿದೆ. ಈ ಪ್ರಾಥಮಿಕ ಸಾರ್ವಜನಿಕ ಕೊಡುಗೆಯು (IPO) ಆಗಸ್ಟ್ 7, 2025ರಂದು ಮುಕ್ತಾಯಗೊಳ್ಳಲಿದೆ. ಹೂಡಿಕೆದಾರರು ಪ್ರತಿ ಯೂನಿಟ್‌ಗೆ 95 ರೂ. ಇಂದ 100 ರೂ. ಬೆಲೆ ಬ್ಯಾಂಡ್‌ನಲ್ಲಿ ಬಿಡ್‌ಗಳನ್ನು ಸಲ್ಲಿಸಬಹುದಾಗಿದೆ.

ಐಪಿಒಗೆ ಆಗಸ್ಟ್ 4, 2025ರಂದು (ಸೋಮವಾರ) ಆಂಕರ್ ಹೂಡಿಕೆದಾರರಿಂದ ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಕನಿಷ್ಠ ಬಿಡ್ ಗಾತ್ರ 15,000 ರೂ. ಆಗಿದ್ದು, ಇದು ಕನಿಷ್ಠ ಹೂಡಿಕೆ ಮೊತ್ತವಾಗಿದೆ. ಪ್ರಮುಖ ಮತ್ತು ಕಾರ್ಯತಂತ್ರದ ಹೂಡಿಕೆದಾರರನ್ನು ಹೊರತುಪಡಿಸಿ, ಬಿಡ್ಡರ್‌ಗಳು ಕನಿಷ್ಠ 150 ಯೂನಿಟ್‌ಗಳಿಗೆ ಮತ್ತು ನಂತರ 150 ಯೂನಿಟ್‌ಗಳ ಗುಣಕಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್‌ನ ಈ ಐಪಿಒ ಸಂಪೂರ್ಣವಾಗಿ ಹೊಸ ಹಂಚಿಕೆಯಾಗಿದೆ. ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್) 2014 (REIT ನಿಯಮಗಳು) ಮತ್ತು ಜುಲೈ 11, 2025ರ REIT ಮಾಸ್ಟರ್ ಸರ್ಕ್ಯುಲರ್‌ಗೆ ಅನುಸಾರವಾಗಿ, ಒಟ್ಟು ಹಂಚಿಕೆಯ 75% ಸಾಂಸ್ಥಿಕ ಹೂಡಿಕೆದಾರರಿಗೆ (ಕಾರ್ಯತಂತ್ರದ ಹೂಡಿಕೆದಾರರ ಭಾಗವನ್ನು ಹೊರತುಪಡಿಸಿ) ಅನುಪಾತದ ಆಧಾರದ ಮೇಲೆ ಲಭ್ಯವಿರುತ್ತದೆ. ಉಳಿದ 25% ಸಾಂಸ್ಥಿಕವಲ್ಲದ (ಸಾಮಾನ್ಯ) ಹೂಡಿಕೆದಾರರಿಗೆ (ಕಾರ್ಯತಂತ್ರದ ಹೂಡಿಕೆದಾರರ ಭಾಗವನ್ನು ಹೊರತುಪಡಿಸಿ) ಹಂಚಿಕೆಗೆ ಲಭ್ಯವಾಗಲಿದೆ.
ಸತ್ವ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು BREP ಏಷ್ಯಾ SG L&T ಹೋಲ್ಡಿಂಗ್ (NQ) PTE. ಲಿಮಿಟೆಡ್ (ಬ್ಲ್ಯಾಕ್‌ಸ್ಟೋನ್ ಸಂಸ್ಥೆಯ ಪೋರ್ಟ್‌ಫೋಲಿಯೊ ಕಂಪನಿ) ಈ REIT ನ ಪ್ರಾಯೋಜಕ ಸಂಸ್ಥೆಗಳಾಗಿವೆ. ಆಕ್ಸಿಸ್ ಟ್ರಸ್ಟಿ ಸರ್ವಿಸ್ ಲಿಮಿಟೆಡ್ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದು, ನಾಲೆಡ್ಜ್ ರಿಯಾಲ್ಟಿ ಆಫೀಸ್ ಮ್ಯಾನೇಜ್ಮೆಂಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮ್ಯಾನೇಜರ್ ಜವಾಬ್ದಾರಿ ನಿರ್ವಹಿಸಲಿದೆ. ಈ ಹಿಂದೆ, ಈ ಸಂಸ್ಥೆಯನ್ನು ಟ್ರಿನಿಟಿ ಆಫೀಸ್ ಮ್ಯಾನೇಜ್ಮೆಂಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಎಂದು ಗುರುತಿಸಲಾಗಿತ್ತು.
ಸತ್ವ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಬಿಜಯ್ ಅಗರ್ವಾಲ್ ಈ ಐಪಿಒ ಕುರಿತು ಮಾತನಾಡಿದರು. "ಮೂವತ್ತು ವರ್ಷಗಳ ಹಿಂದೆ, ಭಾರತವು ವಿಶ್ವ ದರ್ಜೆಯ ಕಚೇರಿ ಮೂಲಸೌಕರ್ಯವನ್ನು ಹೊಂದಿರಬೇಕು ಎಂಬ ದೃಷ್ಟಿಕೋನದೊಂದಿಗೆ ಸತ್ವ ಸಂಸ್ಥೆಯನ್ನು ಪ್ರಾರಂಭಿಸಲಾಗಿತ್ತು. ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್ ಆ ದೃಷ್ಟಿಕೋನದ ಒಂದು ಪರಾಕಾಷ್ಠೆಯಾಗಿದೆ" ಎಂದು ಅವರು ಹೇಳಿದರು. "ಬ್ಲ್ಯಾಕ್‌ಸ್ಟೋನ್‌ನೊಂದಿಗಿನ ನಮ್ಮ ಪಾಲುದಾರಿಕೆಯು ಕೇವಲ ಪ್ರಮಾಣದಲ್ಲಿ ಮಾತ್ರವಲ್ಲದೆ, ಸರಿಯಾದ ಸಹಯೋಗವು ಅಸಾಧಾರಣವಾದುದನ್ನು ಹೇಗೆ ಸೃಷ್ಟಿಸುತ್ತದೆ ಮತ್ತು ಎಲ್ಲಾ ಹೂಡಿಕೆದಾರರಿಗೆ ಪ್ರೀಮಿಯಂ ಕಚೇರಿ ರಿಯಲ್ ಎಸ್ಟೇಟ್ ಅನ್ನು ಹೇಗೆ ಪ್ರವೇಶಿಸುವಂತೆ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ" ಎಂದು ಅವರು ವಿವರಿಸಿದರು.
ಬ್ಲ್ಯಾಕ್‌ಸ್ಟೋನ್ ರಿಯಲ್ ಎಸ್ಟೇಟ್‌ನ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಆಶೀಶ್ ಮೊಹ್ತಾ, "ನಮ್ಮ ದೀರ್ಘಕಾಲದ ಪಾಲುದಾರರಾದ ಸತ್ವ ಜೊತೆ ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್ ಅನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ತಿಳಿಸಿದರು. "ಬ್ಲ್ಯಾಕ್‌ಸ್ಟೋನ್ 2011ರಲ್ಲಿ ಪ್ರಾರಂಭವಾಗಿ ಭಾರತದಲ್ಲಿ ಕಚೇರಿ ಕಟ್ಟಡಗಳ ಅತಿದೊಡ್ಡ ಮಾಲೀಕರಾಗಿ ಬೆಳೆದಿದೆ. ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್ ಭಾರತೀಯ ಕಚೇರಿ ಮಾರುಕಟ್ಟೆಯಲ್ಲಿ ನಮ್ಮ ನಂಬಿಕೆ ಮತ್ತು ಹೂಡಿಕೆದಾರರಿಗೆ ಬಲವಾದ ಅವಕಾಶಗಳನ್ನು ಒದಗಿಸುವ ಬದ್ಧತೆಗೆ ಸಾಕ್ಷಿಯಾಗಿದೆ" ಎಂದು ಅವರು ಅಭಿಪ್ರಾಯಪಟ್ಟರು.
ಒಟ್ಟು ಆಸ್ತಿ ಮೌಲ್ಯ (GAV) ಮತ್ತು ನಿವ್ವಳ ಕಾರ್ಯಾಚರಣೆ ಆದಾಯ (NOI) ಎರಡರಲ್ಲೂ ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್ ಭಾರತದ ಅತಿದೊಡ್ಡ REIT ಆಗುವ ನಿರೀಕ್ಷೆಯಿದೆ. ಮಾರ್ಚ್ 31, 2025ರ ಹೊತ್ತಿಗೆ, ಸಂಸ್ಥೆಯ ಪೋರ್ಟ್‌ಫೋಲಿಯೊ 29 ಗ್ರೇಡ್ A ಕಚೇರಿ ಆಸ್ತಿಗಳನ್ನು ಒಳಗೊಂಡಿದ್ದು, ಇದು 46.3 ಮಿಲಿಯನ್ ಚದರ ಅಡಿ (msf) ವಿಸ್ತೀರ್ಣವನ್ನು ಹೊಂದಿದೆ. ಇದರಲ್ಲಿ 37.1 msf ಪೂರ್ಣಗೊಂಡ ಪ್ರದೇಶ ಮತ್ತು 9.2 msf ನಿರ್ಮಾಣ ಹಂತದಲ್ಲಿರುವ / ಭವಿಷ್ಯದ ಅಭಿವೃದ್ಧಿ ಪ್ರದೇಶ ಸೇರಿವೆ.
ಸಂಸ್ಥೆಯ ಆಸ್ತಿಗಳು ಆರು ಪ್ರಮುಖ ನಗರಗಳಾದ ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ, ಗುರುಗ್ರಾಮ್ ಮತ್ತು ಅಹಮದಾಬಾದ್‌ನ ಗಿಫ್ಟ್ ಸಿಟಿಯಲ್ಲಿ ನೆಲೆಗೊಂಡಿವೆ. ಈ ಆಸ್ತಿಗಳನ್ನು ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮತ್ತು ಪ್ರಮುಖ ದೇಶೀಯ ಸಂಸ್ಥೆಗಳನ್ನು ಒಳಗೊಂಡ ವೈವಿಧ್ಯಮಯ ಬಾಡಿಗೆದಾರರಿಗೆ ಲೀಸ್‌ಗೆ ನೀಡಲಾಗಿದೆ.
ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿರೀಶ್ ಗೊಡ್‌ಬೊಲೆ ಮಾತನಾಡುತ್ತಾ, "ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್‌ನ ಪ್ರಾರಂಭ ಭಾರತದ ಕಚೇರಿ ವಲಯಕ್ಕೆ ಮಹತ್ವದ ಮೈಲಿಗಲ್ಲು" ಎಂದು ಬಣ್ಣಿಸಿದರು. "ಇದು ಇಂದಿನ ಬಾಡಿಗೆದಾರರ ಹೊಸ ಅಗತ್ಯಗಳಿಗೆ ಅನುಗುಣವಾಗಿ ಅತ್ಯುತ್ತಮ ವೇದಿಕೆಯನ್ನು ನಿರ್ಮಿಸುವಲ್ಲಿ ಬ್ಲ್ಯಾಕ್‌ಸ್ಟೋನ್ ಮತ್ತು ಸತ್ವದ ಕಾರ್ಯಶೈಲಿಯ ಸಾಮರ್ಥ್ಯಗಳು ಮತ್ತು ಕಾರ್ಯತಂತ್ರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಕಚೇರಿ ಬಾಡಿಗೆದಾರರಿಗೆ ಜಾಗತಿಕ ಕೇಂದ್ರವಾಗಿ ಬೆಳೆಯುತ್ತಿರುವ ಭಾರತದ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ಅವರು ಹೇಳಿದರು.
ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಆಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್, BofA ಸೆಕ್ಯುರಿಟೀಸ್ ಇಂಡಿಯಾ ಲಿಮಿಟೆಡ್, ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್, ಐಐಎಫ್ಎಲ್ ಕ್ಯಾಪಿಟಲ್ ಸರ್ವೀಸಸ್ ಲಿಮಿಟೆಡ್ (ಹಿಂದೆ ಐಐಎಫ್ಎಲ್ ಸೆಕ್ಯುರಿಟೀಸ್ ಲಿಮಿಟೆಡ್), ಜೆಎಂ ಫೈನಾನ್ಷಿಯಲ್ ಲಿಮಿಟೆಡ್, ಮಾರ್ಗನ್ ಸ್ಟಾನ್ಲಿ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಈ ಐಪಿಒ ಹಂಚಿಕೆಯ ಪ್ರಮುಖ ಲೀಡ್ ಮ್ಯಾನೇಜರ್‌ಗಳಾಗಿವೆ. Kfin ಟೆಕ್ನಾಲಜೀಸ್ ಲಿಮಿಟೆಡ್ ಹಂಚಿಕೆಯ ರಿಜಿಸ್ಟ್ರಾರ್ ಆಗಿದ್ದು, ಐಪಿಒ ಬಳಿಕ ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್‌ನ ಯೂನಿಟ್‌ಗಳು ಬಿಎಸ್‌ಇ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾದಲ್ಲಿ ಲಿಸ್ಟ್ ಆಗಲಿವೆ.


Click it and Unblock the Notifications