ಖಾಸಗಿ ಬ್ಯಾಂಕ್ ಆದ ಕೋಟಕ್ ಮಹೀಂದ್ರಾ ಬ್ಯಾಂಕ್ ನಿವ್ವಳ ಲಾಭವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಕೋಟಕ್ ಮಹೀಂದ್ರಾ ಬ್ಯಾಂಕ್ ನಿವ್ವಳ ಲಾಭವು ಬರೋಬ್ಬರಿ ಶೇಕಡ 67ರಷ್ಟು ಏರಿಕೆಯಾಗಿದೆ. ಹಣಕಾಸು ವರ್ಷ 2022-23ರ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು 2,071 ಕೋಟಿ ರೂಪಾಯಿ ಆಗಿದೆ. ಆದರೆ ಹಣಕಾಸು ವರ್ಷ 2023-24ರಲ್ಲಿ ನಿವ್ವಳ ಲಾಭವು ಶೇಕಡ 67ರಷ್ಟು ಏರಿ, 3,452 ಕೋಟಿ ರೂಪಾಯಿಗೆ ತಲುಪಿದೆ.
ಇನ್ನು ನಿವ್ವಳ ಬಡ್ಡಿ ಆದಾಯವು (ಎನ್‌ಐಐ) ಕೂಡಾ ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ವರ್ಷದಿಂದ ವರ್ಷಕ್ಕೆ ಎನ್‌ಐಐ ಶೇಕಡ 33ರಷ್ಟು ಏರಿಕೆಯಾಗಿದೆ, ಈ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಮಾರ್ಜಿನ್ ಶೇಕಡ 5.57ರಷ್ಟಿದೆ. ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಎನ್‌ಐಐ ಈ ಹಿಂದಿನ ವರ್ಷದ 4,697 ಕೋಟಿ ರೂಪಾಯಿಯಿಂದ 6,234 ಕೋಟಿ ರೂಪಾಯಿಗೆ ತಲುಪಿದೆ.

ಕಾರ್ಯಾತ್ಮಕ ಲಾಭ ಶೇಕಡ 78ರಷ್ಟು ಏರಿಕೆ
ಕಾರ್ಯಾತ್ಮಕ ಲಾಭವು ಈ ತ್ರೈಮಾಸಿಕದಲ್ಲಿ 4,950 ಕೋಟಿ ರೂಪಾಯಿ ಆಗಿದೆ. ಇದು ವರ್ಷದಿಂದ ವರ್ಷಕ್ಕೆ ಸುಮಾರು ಶೇಕಡ 78ರಷ್ಟು ಏರಿಕೆಯಾಗಿದೆ. ಒಟ್ಟು ಅನುತ್ಪಾದಕ ಆಸ್ತಿಗಳು (non-performing assets/ NPA) ಶೇಕಡ 1.77ರಷ್ಟಿದೆ, ಈ ಹಿಂದಿನ ತ್ರೈಮಾಸಿಕದಲ್ಲಿ ಶೇಕಡ 2.24ರಷ್ಟಿದೆ. ಇನ್ನು ಎನ್‌ಪಿಎ ಶೇಕಡ 0.40ಕ್ಕೆ ಇಳಿಕೆಯಾಗಿದೆ. ಈ ಹಿಂದಿನ ವರ್ಷದಲ್ಲಿ ಶೇಕಡ 0.62ರಷ್ಟಿತ್ತು.
ಇನ್ನು ಪ್ರೋವಿಜನ್ಸ್ ಆಂಡ್ ಕಾಂಟಿಂಜೆನ್ಸಿಗಳು ದುಪ್ಪಟ್ಟಾಗಿದೆ. ಹಣಕಾಸು ವರ್ಷ 2023ರ ಮೊದಲ ತ್ರೈಮಾಸಿಕದಲ್ಲಿ 147.57 ಕೋಟಿ ರೂಪಾಯಿಯಷ್ಟಿದ್ದು, ಇದು ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 23.59 ಕೋಟಿ ರೂಪಾಯಿಯಷ್ಟು ಜಿಗಿತ ಕಂಡು 364.31 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಡೆಪಾಸಿಟ್‌ಗಳ ಲೆಕ್ಕಾಚಾರ ಹೇಗಿದೆ ನೋಡಿ
ಇನ್ನು ಬ್ಯಾಲೆನ್ಸ್ ಶೀಟ್ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಕೋಟಕ್ ಬ್ಯಾಂಕ್‌ನ ಅಡ್ವಾನ್‌ಗಳು ಶೇಕಡ 19ರಷ್ಟು ಏರಿಕೆಯಾಗಿದ್ದು, 3,37, 031 ಕೋಟಿಗೆ ತಲುಪಿದೆ. 2022ರಲ್ಲಿ ಇದೇ ಅವಧಿಯಲ್ಲಿ 282,665 ಕೋಟಿ ರೂಪಾಯಿ ಆಗಿದೆ. ಸರಾಸರಿ ಕರೆಂಟ್ ಡೆಪಾಸಿಟ್ ಶೇಕಡ 8ರಷ್ಟು ಜಿಗಿದು 59,431ಕ್ಕೆ ಏರಿಕೆಯಾಗಿದೆ, ಆದರೆ ಈ ಹಿಂದೆ 55,081 ಕೋಟಿ ರೂಪಾಯಿಗೆ ತಲುಪಿದೆ.
ಸರಾಸರಿ ಸೇವಿಂಗ್ಸ್ ಡೆಪಾಸಿಟ್ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 119,817 ಕೋಟಿ ರೂಪಾಯಿ ಆಗಿದೆ, ಜೂನ್ 30, 2022ರಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ 121,521 ಕೋಟಿ ರೂಪಾಯಿ ಆಗಿದೆ. ಟರ್ಮ್ ಡೆಪಾಸಿಟ್ ಶೇಕಡ 40ರಷ್ಟು ಜಿಗಿತವಾಗಿದ್ದು, 130,035 ಕೋಟಿ ರೂಪಾಯಿಯಿಂದ 182,047 ಕೋಟಿ ರೂಪಾಯಿಗೆ ತಲುಪಿದೆ.


Click it and Unblock the Notifications