ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ 'ಕರ್ನಾಟಕದ ಅತಿದೊಡ್ಡ ಬ್ಯಾಂಕ್ ದರೋಡೆ ಪ್ರಕರಣ'ವಾದ ಮಂಗಳೂರಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಬೃಹತ್ ಪ್ರಮಾಣ ಬಂಗಾರ ದರೋಡೆಕೋರರ ಪಾಲಾಗದಂತೆ ಮಂಗಳೂರು ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಾರೆ.
ಅದರಲ್ಲೂ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಕೆಲವೇ ಕೆಲವು ಸುಳಿವುಗಳನ್ನು ಹಿಡಿದು ಭೇದಿಸಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ, ಇಂಥ ಪ್ರಕರಣಗಳಲ್ಲಿ ದರೋಡೆಯಾದ ಎಲ್ಲ ಚಿನ್ನಾಭರಣವೂ ರಿಕವರಿ ಆಗುವುದಿಲ್ಲ. ಕೋಟೆಕಾರು ದರೋಡೆಯಲ್ಲಿ ಕಳವಾಗಿದ್ದ 18.600 ಕೇಜಿ ಚಿನ್ನಾಭರಣ ಪೈಕಿ 18.300 ಕೆ.ಜಿಯಷ್ಟು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ದರೋಡೆ ಪ್ರಕರಣ ಜನವರಿ 17 ರಂದು ನಡೆದಿದ್ದು, ನಾಲ್ವರು ಮುಸುಕುಧಾರಿ ಮತ್ತು ಶಸ್ತ್ರಸಜ್ಜಿತ ವ್ಯಕ್ತಿಗಳು ಮಟ ಮಟ ಮಧ್ಯಾಹ್ನ ಬ್ಯಾಂಕ್‌ಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಚಿನ್ನ ಮತ್ತು ನಗದು ದೋಚಿದ್ದರು. ಕಳವಾದ ವಸ್ತುಗಳಲ್ಲಿ 18.500 ಕೆ.ಜಿ ಚಿನ್ನಾಭರಣ ಹಾಗೂ ₹11 ಲಕ್ಷ ನಗದು ಸೇರಿತ್ತು.
ಕದ್ದ ನಗದು ₹ 3.8 ಲಕ್ಷ ವಶಪಡಿಸಿಕೊಂಡಿದ್ದು, ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ ಮತ್ತು ಎರಡು ಪಿಸ್ತೂಲ್‌ಗಳು, ಒಂದು ಫೆರಾರಿ ಕಾರು ಮತ್ತು ಎರಡು ನಕಲಿ ನಂಬರ್ ಪ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ತಮಿಳುನಾಡಿನ ಮುರುಗನ್ ತೇವರ್ (36), ಯೋಸುವ ರಾಜೇಂದ್ರನ್ (35), ಕಣ್ಣನ್ ಮಣಿ (36), ಮತ್ತು ಎಂ ಷಣ್ಮುಗಸುಂದರಂ (65) ಎಂದು ಗುರುತಿಸಲಾಗಿದೆ. ಶಶಿ ಥೇವರ್ ಸೇರಿದಂತೆ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪ್ರಯತ್ನ ನಡೆಯುತ್ತಿದೆ.
ಎಣಿಕೆಯ ಸವಾಲು: ಚಿನ್ನ ರಾಶಿ ಲೆಕ್ಕಾಚಾರಕ್ಕೆ ಪೊಲೀಸರು ತಗುಲಿದ್ದುಒಂದು ದಿನ!
ದರೋಡೆಕೋರರು ಕದ್ದೊಯ್ದಿದ್ದ 14 ಕೋಟಿ ರೂಪಾಯಿ ಮೌಲ್ಯದ 18.೩00 ಕೆಜಿ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನ ತಿರುವನಲ್ವೇಲಿಯ ಪದ್ಮಶೇರಿಯ ಮುರುಗನ್ ಮನೆಯಲ್ಲಿ ಅಡಗಿಸಿಟ್ಟಿದ್ದ 3 ಮೂಟೆ ಬಂಗಾರ ವಶಕ್ಕೆ ಪಡೆದಿದ್ದಾರೆ. ಪೊಲೀಸರ ಕಾರ್ಯಾಚರಣೆಯಲ್ಲಿ ಕೆಲವು ಗಂಟೆಗಳ ವ್ಯತ್ಯಾಸವಾಗುತ್ತಿದ್ದರೂ ಈ ಎಲ್ಲಾ ಚಿನ್ನ ಹವಾಲಾ ಮಾರ್ಕೆಟ್ ಬಿಕರಿಯಾಗಿ ಹರಿದು ಹಂಚಿಹೋಗಿ ರಿಕವರಿ ಕಷ್ಟಸಾಧ್ಯವಾಗುತ್ತಿತ್ತು.
ರಾಜ್ಯದಲ್ಲೇ ಸಂಚಲ ಮೂಡಿಸಿದ್ದ ಈ ಪ್ರಕರಣ ಭೇದಿಸಲು ಮಂಗಳೂರು ಪೊಲೀಸರು ಕೇವಲ ಐದು ದಿನಗಳಲ್ಲಿ ತಮಿಳುನಾಡು, ಕೇರಳದಲ್ಲಿ 2800 ಕಿಮೀ ಉದ್ದಕ್ಕೆ ನಿದ್ದೆಯಿಲ್ಲದೆ ಕಾರಿನಲ್ಲೇ ಪ್ರಯಾಣಿಸಿದ್ದರು. ಇದೇ ವೇಳೆ, ಮಂಗಳೂರಿನಲ್ಲಿ ಹಲವಾರು ಅಧಿಕಾರಿಗಳು, ನುರಿತ ತಂತ್ರಜ್ಞರು ಆರೋಪಿಗಳ ಚಲನವಲನ ಬಗ್ಗೆ ತಿಳಿಯಲು ಟೆಕ್ನಿಕಲ್ ಸಾಕ್ಷ್ಯದ ಕಲೆಹಾಕಿದ್ದರು.
ವಶಪಡಿಸಿಕೊಂಡ ಚಿನ್ನವನ್ನು ಹೈ ಪೊಲೀಸ್ ಪ್ರೊಟೆಕ್ಷನ್ ನೊಂದಿಗೆ ಮಂಗಳೂರಿಗೆ ತಂದಿದ್ದು ಈ ರಾಶಿ ರಾಶಿ ಬಂಗಾರ ಕಂಡು ಪೊಲೀಸರೇ ದಂಗುಪಡಿದಿದ್ದು, ಗ್ರಾಹಕರು ಅಡವು ಹಾಗೂ ಸೇಪ್ಫ್ಟಿ ಲಾಕರ್ ನಲ್ಲಿಟ್ಟ ಚಿನ್ನ ದರೋಡೆಕೋರರ ವಶವಾಗಿ ಕೊನೆಗೂ ಪೊಲೀಸರ ಕೈ ಸೇರಿತ್ತು. ಬಳೆ, ನೆಕ್ಲೇಸ್, ಸರ, ಉಂಗುರಗಳು, ಕಡಗಗಳು, ಚೈನ್ ಲಾಕೆಟ್‌ಗಳು, ಕಾಲುಗೆಜ್ಜೆ, ಹವಳದ ಸರ,ಕಿವಿಯೋಲೆ ಹೀಗೆ ಹಲವು ವಿಧದ ಒಡವೆಗಳಿದ್ದು ಸುಮಾರು 2,265 ವಿವಿಧ ಚಿನ್ನಾಭರಣಗಳಿತ್ತು. ತಮಿಳುನಾಡಿನ ತಿರುನಲ್ವೇಲಿಯ ಪದ್ಮನೇರಿಯಿಂದಮಂಗಳೂರಿಗೆ 800ಕಿ.ಮೀ. ದೂರವಿದ್ದು 18 ಗಂಟೆಯ ಬಿಗಿ ಭದ್ರತೆಯೊಂದಿಗೆ ಚಿನ್ನವನ್ನು ಮರಳಿ ತರಲಾಗಿತ್ತು. ದರೋಡೆಗೈದ ಹಣದಲ್ಲಿ
ಪೈಕಿ 70 ಸಾವಿರ ರೂ.ವನ್ನು ಮುರುಗನ್ ಖರ್ಚು ಮಾಡಿದ್ದ. ವಾಪಾಸ್ ತಂದ ಎಲ್ಲಾ ಚಿನ್ನಾಭರಣಗಳ ಲೆಕ್ಕ ಹಾಕಲು ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿಗೆ ಒಂದು ದಿನವೇ ಬೇಕಾಗಿದೆ ಎನ್ನುವುದು ಪೊಲೀಸ್ ಅಧಿಕಾರಿಗಳ ಮಾತು.
ಕೃತ್ಯಕ್ಕೆ ಆರು ತಿಂಗಳ ಮೊದಲೇ ಸಂಚು:
ಮುರುಗನ್, ಯೋಸುವ ರಾಜೇಂದ್ರನ್ ಹಾಗೂ ಶಶಿ ಥೇವರ್ ಎಂಬುವರು ಮುಂಬೈನ ತಲೋಜಾ ಜೈಲಿನಲ್ಲಿ 2016ರಲ್ಲಿ ಒಟ್ಟಿಗೆ ಇದ್ದರು. ಕೋಟೆಕಾರು ಬ್ಯಾಂಕಿನಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಇರುವ ಬಗ್ಗೆ ಹಾಗೂ ಭದ್ರತಾ ವ್ಯವಸ್ಥೆ ಯಲ್ಲಿ ಲೋಪ ಇರುವ ಶಶಿ ಥೇವರ್ ಈ ತಂಡಕ್ಕೆ ಮಾಹಿತಿ ನೀಡಿದ್ದ. ಮುರುಗಂಡಿ, ಯೋಸುವ ರಾಜೇಂದ್ರನ್, ಮಣಿಕಣ್ಣನ್, ಶಶಿ ಥೇವರ್ ಹಾಗೂ ಉತ್ತರ ಭಾರತದ ಇತರ ಮೂವರನ್ನುಒಳಗೊಂಡ ತಂಡವು ಕೆ.ಸಿ.ರೋಡ್ ಸಹಕಾರ ಬ್ಯಾಂಕ್ ದರೋಡೆಗೆ ಆರು ತಿಂಗಳು ಮೊದಲೇ ಸಂಚು ರೂಪಿಸಿತ್ತು. ಇದಕ್ಕಾಗಿ 2024ರ ಆಗಸ್ಟ್ ನಲ್ಲಿ ಬಂದು ಬ್ಯಾಂಕ್ ಅನ್ನು ನೋಡಿ ಹೋಗಿದ್ದ.
ಇದಾದ ನಂತೆಅ ಅಕ್ಟೋಬರ್ ನಲ್ಲಿ ಅವರ ತಂಡದ ಕೆಲವರು ಮತ್ತೊಮ್ಮೆ ಕೆ.ಸಿ.ರೋಡ್ ಗೆ ಬಂದಿದ್ದರು. ಆ ಬಳಿಕ ನ.27 ರಂದು ಯೊಸುವಾ ರಾಜೆಂದ್ರನ್ ಮತ್ತು ಮುರುಗಂಡಿ ಮತ್ತೆ ಕೆ.ಸಿರೋಡ್ ಗೆ ಬಂದು ದರೋಡೆಗೆ ಸಂಚು ರೂಪಿಸಿದ್ದರು. ಹೆಚ್ಚಿನ ಅಸುಮಾಸಿನವರು ನಮಾಜ್ ಗೆ ತೆರಳುವುದರಿಂದ ಶುಕ್ರವಾರ ಮಧ್ಯಾಹ್ನ ಸ್ಥಳದಲ್ಲಿ ಜನ ಓಡಾಟ ಕಡಿಮೆ ಇರುವುದರಿಂದ ಕೃತ್ಯಕ್ಕೆ ಆ ದಿನವನ್ನೇ ಆಯ್ಕೆ ಮಾಡಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪ್ರಕರಣದ ಸಂಪೂರ್ನ ಮಾಹಿತಿಯನ್ನು ಎಳೆಎಳೆಯಾಗಿ ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
More From GoodReturns

Bengaluru Gold Rate: ಜಾಗತಿಕ ಉದ್ವಿಗ್ನತೆ ನಡುವೆಯೂ ಚಿನ್ನದ ಬೆಲೆ ಭಾರಿ ಇಳಿಕೆ…ದಿಢೀರ್ 32,900 ರೂ. ಕುಸಿತ!

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate India: ಯುದ್ಧದ ನಂತರ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ! ದಿಢೀರ್ 4,900 ರೂ. ಕುಸಿತ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Monday Gold Prediction: ಚಿನ್ನದ ಮೇಲೆ ಪ್ರಭಾವ ಬೀರುತ್ತ ಇಸ್ರೇಲ್-ಇರಾನ್ ವಾರ್! ಮತ್ತೆ ಬೆಲೆ ಏರಿಕೆಯಾಗುತ್ತಾ?



Click it and Unblock the Notifications