ದೂರ ದೂರದ ಊರುಗಳಿಂದ ಅದೆಷ್ಟೋ ಮಂದಿ ಜೀವನ ಕಟ್ಟಿಕೊಳ್ಳೋಕೆ ಬರುತ್ತಾರೆ. ಅದರಲ್ಲೂ ಮಂಗಳೂರಿನಿಂದ ಬೆಂಗಳೂರಿಗೆ ಬಹಳಷ್ಟು ಮಂದಿ ಬರುತ್ತಾರೆ. ಅದೆಷ್ಟೋ ಮಂದಿ ಈಗಾಗಲೇ ಬೆಂಗಳೂರಿನಲ್ಲಿ ನೆಲೆಸಿ, ಸ್ವಂತ ಮನೆ, ಸ್ವಂತ ವ್ಯವಹಾರವನ್ನೂ ಸಹ ಶುರು ಮಾಡಿಕೊಂಡಿದ್ದಾರೆ. ಆದರೆ ಇದೀಗ ಮಂಗಳೂರಿನಿಂದ ಬೆಂಗಳೂರು (Mangaluru-Bengaluru) ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಇದೆ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು (KSRTC Mangaluru Section) ಕರಾವಳಿ ಪ್ರದೇಶದಿಂದ ಬೆಂಗಳೂರಿಗೆ ಸಂಚರಿಸುವ ಪ್ರೀಮಿಯಂ ಬಸ್‌ಗಳ ಟಿಕೆಟ್ ದರವನ್ನು ಕಡಿತಗೊಳಿಸಿದೆ.

ಹೌದು, ಇದೀಗ ಕರಾವಳಿ ಪ್ರದೇಶದಿಂದ ಬೆಂಗಳೂರಿಗೆ ಸಂಚಾರ ಮಾಡುವ ಪ್ರೀಮಿಯಂ ಬಸ್‌ಗಳ ಟಿಕೆಟ್ ದರಗಳನ್ನು ಸೋಮವಾರದಿಂದ ಕಡಿತಗೊಳಿಸಿದೆ. ಜನವರಿ-ಮಾರ್ಚ್ ಆಫ್-ಸೀಸನ್‌ನಲ್ಲಿ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಈ ದರ ಕಡಿತದ ಆದೇಶ ಹೊರಡಿಸಿದೆ. ಕೆಎಸ್ಆರ್‌ಟಿಸಿಯ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಸಾರ್ವಜನಿಕರು ಈ ಕಡಿಮೆ ದರದ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಹೇಗಿದೆ ಹೊಸ ದರ?
ದರ ಕಡಿತಗೊಂಡ ಪ್ರೀಮಿಯಂ ಎಸಿ ಬಸ್‌ಗಳ ವಿವರ ಹೀಗಿದೆ:
ಅಂಬಾರಿ ಉತ್ಸವ ಮಲ್ಟಿ-ಆಕ್ಸಲ್ ಸ್ಲೀಪರ್ ಕೋಚ್‌ಗಳಿಗೆ ಕುಂದಾಪುರ-ಬೆಂಗಳೂರು ಮಾರ್ಗದ ಬಸ್ ₹1,510, ಉಡುಪಿಗೆ ₹1,460 ಮತ್ತು ಮಂಗಳೂರಿಗೆ ₹1,350 ದರ ನಿಗದಿಪಡಿಸಲಾಗಿದೆ. ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ-ಆಕ್ಸಲ್ ಸ್ಲೀಪರ್ ಸೇವೆಗಳು ಇದೇ ಮಾರ್ಗಗಳಲ್ಲಿ ಕ್ರಮವಾಗಿ ₹1,350, ₹1,300 ಮತ್ತು ₹1,200ಕ್ಕೆ ಬುಕ್ ಮಾಡಬಹುದು. ಸಾಮಾನ್ಯವಾಗಿ ಪೀಕ್ ಸೀಸನ್‌ಗಳಲ್ಲಿ (ಏಪ್ರಿಲ್-ಜೂನ್, ಅಕ್ಟೋಬರ್-ಡಿಸೆಂಬರ್) ದರ 10-15% ಹೆಚ್ಚಾಗಿರುತ್ತದೆ, ಅದರಲ್ಲೂ ವಾರಾಂತ್ಯದಲ್ಲಿ ಸಾಮಾನ್ಯ ದರಕ್ಕಿಂತಲೂ ಹೆಚ್ಚಿರುತ್ತದೆ. ಆದ್ರೆ ಇದೀಗ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಂಪರ್ ಸುದ್ದಿ ಕೊಟ್ಟಿದೆ.
ಮಲ್ಟಿ-ಆಕ್ಸಲ್ 2 ಎಸಿ ಕೋಚ್‌ಗಳಿಗೆ ಕುಂದಾಪುರ-ಬೆಂಗಳೂರು ಮಾರ್ಗದಲ್ಲಿ ₹1,310, ಉಡುಪಿಗೆ ₹1,250 ಮತ್ತು ಮಂಗಳೂರಿಗೆ ₹1,150 ದರ ವಿಧಿಸಲಾಗುವುದು ಎಂದು ವರದಿಯಾಗಿದೆ. ಹಳೆಯ ಮಲ್ಟಿ-ಆಕ್ಸಲ್ ಬಸ್‌ಗಳ ದರಗಳು ಈ ಮಾರ್ಗಗಳಲ್ಲಿ ಕ್ರಮವಾಗಿ ₹1,110, ₹1,060 ಮತ್ತು ₹1,000ಕ್ಕೆ ಇಳಿಕೆ ಕಂಡಿದೆ.
ಹವಾನಿಯಂತ್ರಿತವಲ್ಲದ ವಿಭಾಗದಲ್ಲಿಯೂ ದರ ಕಡಿತವನ್ನು ಘೋಷಣೆ ಮಾಡಲಾಗಿದೆ. ನಾನ್-ಎಸಿ ಸ್ಲೀಪರ್ ಕೋಚ್‌ಗಳ ದರಗಳು ಈ ಮಾರ್ಗಗಳಲ್ಲಿ ಕ್ರಮವಾಗಿ ₹1,050, ₹1,000 ಮತ್ತು ₹900ಕ್ಕೆ ಇಳಿಕೆ ಕಂಡಿದೆ. ಪಲ್ಲಕ್ಕಿ ನಾನ್-ಎಸಿ ಸೇವೆಗಳ ಶುಲ್ಕವು ₹1,100, ₹1,060 ಮತ್ತು ₹950ಕ್ಕೆ ಇಳಿಕೆಯಾಗಿದ್ದರೆ, ರಾಜಹಂಸ ನಾನ್-ಎಸಿ ಆಸನ ಸೇವೆಗಳ ದರಗಳು ₹750, ₹700 ಮತ್ತು ₹650ಕ್ಕೆ ಇಳಿಕೆ ಕಂಡಿದೆ.
ವೀಕೆಂಡ್ ಬರುತ್ತಿದ್ದಂತೆ, ಯಾವುದಾದರೂ ಹಬ್ಬ ಬಂದ್ರೆ ಸಾಕು ಬಸ್‌ಗಳಿಗೆ ಡಿಮ್ಯಾಂಡೊಪ್ಪೋ ಡಿಮ್ಯಾಂಡ್. ಆದ್ರೆ ಇನ್ನೇನು ಎಲ್ಲಾ ಸೀಸನ್‌ಗಳು ಮುಗಿಯುತ್ತಾ ಬರುತ್ತಿದ್ದಂತೆ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಆ ಒಂದು ನಿರ್ಧಾರದಿಂದ, ತುರ್ತು ಊರಿಗೆ ಹೋಗೋರಿಗೆ, ರೈಲಿಗಿಂತ ಬಸ್ ಸೇವೆ ಬಯಸೋರಿಗೆ ಈ ಸೇವೆ ತುಂಬಾನೇ ಅನುಕೂಲವಾಗಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications