ಬಸ್ ಪ್ರಯಾಣ ಮಾಡುವಾಗ ಚಿಲ್ಲರೆ ಸಮಸ್ಯೆ ಪ್ರಯಾಣಿಕರನ್ನು ಬಹುವಾಗಿ ಕಾಡಿದೆ. ಕಂಡೆಕ್ಟರ್ ಸಹ ಚಿಲ್ಲರೆ ಹೊಂದಿಸಲು ಪರದಾಡಿ ಕೊನೆಗೆ ಇಬ್ಬರನ್ನು ಸೇರಿಸಿ ಹಣವನ್ನು ನೀಡುವುದನ್ನು ನಾವೆಲ್ಲಾ ನೋಡಿದ್ದೇವೆ. ಚಿಲ್ಲರೆ ನೀಡದೆ ಅದೆಷ್ಟೋ ಬಾರಿ ಕಂಡೆಕ್ಟರ್‌ಗಳು ಮೋಸ್ ಮಾಡಿದ್ದು ಕೇಳಿರುತ್ತೀರಿ. ಇನ್ನು ಮುಂದೆ ಇಂತಹ ಯಾವುದೇ ಸನ್ನಿವೇಶಕ್ಕೆ ಪ್ರಯಾಣಿಕರು ಸಾಕ್ಷಿಯಾಗುವುದು ಕಷ್ಟ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಾಯಣಿಕರ ಬೇಕು ಬೇಡಿಕೆಗಳನ್ನು ಗಮನಿಸಿ ದಿಟ್ಟ ಕಾರ್ಯವನ್ನು ಮಾಡುತ್ತಲೇ ಇರುತ್ತದೆ. ಜನ ಸ್ನೇಹಿ ಕೆಲಸ ಮಾಡುತ್ತಿರುವ ಕೆಎಸ್‌ಆರ್‌ಟಿಸಿ, ಈಗ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ. ಈ ಮೂಲಕ ತಮ್ಮ ಬಸ್‌ಗಳಲ್ಲಿ ಡಿಜಿಟಲ್ ಸೇವೆಗಳನ್ನು ಅಳವಡಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆಯ್ದ ಬಸ್‌ಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿಸ್ತರಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಡಿಜಿಟಲ್ ಪೇಮೆಂಟ್
ದೇಶ ಹಾಗೂ ರಾಜ್ಯದಲ್ಲಿ ಡಿಜಿಟಲ್ ಪೇಮೆಂಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಹಣವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತಿದೆ. ನಿರ್ವಾಹಕ ಚಿಲ್ಲರೆ ಕೇಳಿದ್ರೆ ಡಿಜಿಟಲ್ ಪೇಮೆಂಟ್ ಮಾಡ್ಲಾ ಎಂದು ಗ್ರಾಹಕರು ಕೇಳುತ್ತಾರೆ. ಇದರಿಂದ ಸಾರಿಗೆ ಸಿಬ್ಬಂದಿ ಪೇಚೆಗೆ ಸಿಲುಕುತ್ತಾರೆ. ಈ ಸವಾಲುಗಳನ್ನು ಅರಿತ ನಿಗಮ ಈಗ ಮತ್ತೊಂದು ಯೋಜನೆಯನ್ನು ರೂಪಿಸಿದೆ. ಬಿಎಂಟಿಸಿ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಆಯ್ದ ಬಸ್‌ಗಳಲ್ಲಿ ಪ್ರಯಾಣಿಕರ ಚಿಲ್ಲರೆ ಕಿರಿಕಿರಿ ದೂರವಾಗಿಸಲು ಮುಂದಾಗಿದ್ದು, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತಂದಿದೆ.
ಈಗಾಗಲೇ ಕೆಎಸ್‌ಆರ್‌ಟಿಸಿ ಕೆಲವು ದೂರದ ಪ್ರದೇಶಗಳ ಬಸ್‌ಗಳಲ್ಲಿ ಸ್ಕ್ಯಾನ್‌ರ ವ್ಯವಸ್ಥೆಯನ್ನು ಹೊಂದಿದೆ. ಆದರೆ ಅದಕ್ಕಿಂತ ಅಪ್‌ಡೇಟ್ ವರ್ಷನ್‌ನ್ನು ಕೆಎಸ್‌ಆರ್‌ಟಿಸಿ ನೀಡಲು ಮುಂದಾಗುತ್ತಿದೆ. ಇದರಿಂದ ಪ್ರಯಾಣಿಕರು, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಹಣ ತರದೇ ಇದ್ದರೂ ಸಹ ತಮ್ಮಲ್ಲಿರುವ ಡಿಜಿಟಲ್ ಪೇಮೆಂಟ್ ಮೂಲಕ ಹಣವನ್ನು ಪವಾತಿಸಬಹದು. ಪ್ರಯಾಣಿಕರು ನಿರ್ವಾಹಕರಿಂದ ಡೈನಮಿಕ್ ಕ್ಯುಆರ್ ಕೋಡ್ ಮೂಲಕ ಟಿಕೆಟ್ ಪಡೆದು, ಗೂಗಲ್ ಪೇ, ಫೋನ್ ಪೇ, ಯಪಿಐ ಹಾಗೂ ಭೀಮ್ ಈ ನಾಲ್ಕು ಸೇವೆಗಳಲ್ಲಿ ಯಾವದಾದರೂ ಒಂದನ್ನು ಆಯ್ಕೆ ಮಾಡಿ ಪೇಮೆಂಟ್ ಮಾಡಬಹುದು.
ಇದಕ್ಕಾಗಿ ಸಂಸ್ಥೆ ನಿರ್ವಾಹಕರಿಗೆ ವಿಶೇಷ ಎಲೆಕ್ಟ್ರಿಕ್ ಟಿಕೆಟ್ ಮಷಿನ್ ನೀಡಿದೆ. ಇದರಿಂದ ಪ್ರಯಾಣಿಕ ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ ಎಂದು ತಿಳಿದು ಅವರ ಟಿಕೆಟ್ ದರವನ್ನು ನಮೂದಿಸಬಹುದಾಗಿದೆ. ಇದರಲ್ಲಿ ಹಾಫ್ ಟಿಕೆಟ್ ಹಾಗೂ ಫುಲ್ ಟಿಕೆಟ್ ಆಕ್ಷನ್ ಸಹ ಇರಲಿದೆ. ಇನ್ನು ಪ್ರಯಾಣಿಕ ಡಿಜಿಟಲ್ ಪೇಮೆಂಟ್ ಮಾಡುವುದಾಗಿ ತಿಳಿಸಿದಲ್ಲಿ ನಿರ್ವಾಹಕ ಕ್ಯೂ ಆರ್ ಕೋಡ್ ನೀಡುತ್ತಾರೆ. ಇದನ್ನು ಬಳಸಿ ಗ್ರಾಹಕ ಪೇಮೆಂಟ್ ಮಾಡಬಹುದಾಗಿದೆ.
ಈ ಸೌಲಭ್ಯದ ಬಳಕೆಗಾಗಿಯೇ ಕೆಎಸ್ಆರ್‌ಟಿಸಿ ನಿರ್ವಾಹಕರಿಗೆ ಎಲೆಕ್ಟ್ರಿಕ್ ಟಿಕೆಟ್ ಮಷಿನ್ (ಇಟಿಎಂ)ಗಳನ್ನು ನೀಡಿದೆ. ಎಲ್ಲಿಂದ, ಎಲ್ಲಿಗೆ ಪ್ರಯಾಣ ಎಂದು ವಿವರ ನೋಂದಾಯಿಸಿದ ಬಳಿಕ ಪ್ರಯಾಣಿಕರು ವಯಸ್ಕರೋ, ಮಕ್ಕಳೋ ಎಂಬ ಆಯ್ಕೆ ಬರುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications