ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ರಾಜ್ಯದ ಜನರಿಗೆ ಒಂದಲ್ಲಾ ಒಂದು ದರ ಏರಿಕೆ (Price Hike) ಶಾಕ್‌ಗಳೇ ಎದುರಾಗುತ್ತಿದೆ. ಅತ್ತ ಮೆಟ್ರೋ, ಬಸ್, ಹಾಲು, ನೀರಿನ ದರದಲ್ಲಿ ಈಗಾಗಲೇ ಬಹಳಷ್ಟು ದರ ಏರಿಕೆಯಾಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ದರ ಏರಿಕೆ ಶಾಕ್ ಕೊಟ್ಟಿದೆ.

ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತೊಂದು ದರ ಏರಿಕೆ ನಿರ್ಧಾರ ಮಾಡಲು ನಿರ್ಧಾರ ಕೈಗೊಂಡಿದೆ. ಇನ್ಮೇಲೆ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ಮೇಲೂ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಲಗೇಜ್ ಶುಲ್ಕವನ್ನು ಈಗಾಗಲೇ ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ (ಫೆ.16) ಈ ನೂತನ ದರ ಜಾರಿಗೆ ಬರಲಿದೆ. ಇನ್ನು ಈ ಬಗ್ಗೆ ಪ್ರಕಟಣೆ ಮೂಲಕ ಸಾರಿಗೆ ಸಂಸ್ಥೆ ಘೋಷಣೆ ಮಾಡಿದೆ.
2025 ರಲ್ಲಿ ಬಸ್ ಪ್ರಯಾಣ, ಈಗ ಲಗೇಜ್ ಶುಲ್ಕ!
ಕಳೆದ ವರ್ಷ ಅಂದರೆ 2025ರಲ್ಲಿ ಬಸ್ ಪ್ರಯಾಣ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ ಬಿಗ್ ಶಾಕ್ ಕೊಟ್ಟಿತ್ತು. ಆದ್ರೆ ಇದೀಗ 2026ರ ಆರಂಭದಲ್ಲೇ ಲಗೇಜ್ ಶುಲ್ಕ ಏರಿಕೆ ಮಾಡುವ ಮೂಲಕ ಮತ್ತೊಂದು ದರ ಏರಿಕೆ ಬಿಸಿ ಮುಟ್ಟಿಸಿದೆ.
ದರ ಏರಿಕೆಗೆ ಕಾರಣವೇನು?
ಇನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಪ್ರಕಾರ, ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳ ಹಾಗೂ ಇತರ ನಿರ್ವಹಣಾ ವೆಚ್ಚಗಳಿಂದಾಗಿ ಹೊರೆ ಹೆಚ್ಚಾಗಿದೆ. ಈ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇನ್ನು ಜನವರಿ 2025 ಎಲ್ಲಿ ಬಸ್ ಪ್ರಯಾಣ ಟಿಕೆಟ್ ದರವನ್ನು ಶೇ. 15% ರಷ್ಟು ಏರಿಕೆ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಲಗೇಜ್ ಶುಲ್ಕವನ್ನು ಪರಿಷ್ಕರಣೆ ಮಾಡಿರಲಿಲ್ಲ. ಇದೀಗ ಈ ವರ್ಷದ ಆರಂಭದಲ್ಲೇ ದರ ಏರಿಕೆ ಮಾಡಿದೆ.
ಫ್ರೀ ಲಗೇಜ್ ನಿಯಮ:
- 30 ಕೆಜಿ ವರೆಗಿನ ಲಗೇಜ್ ಸಾಗಾಟ ಉಚಿತವಾಗಿರುತ್ತದೆ.
- ಇನ್ನು ಮಕ್ಕಳಿಗೆ 15 ಕೆಜಿವರೆಗೆ ಉಚಿತ.
- ಅಂದರೆ 30 ಕೆಜಿಗಿಂತ ಹೆಚ್ಚಿನ ಲಗೇಜ್ ಸಾಗಾಟಕ್ಕೆ ಮಾತ್ರ ಹೊಸ ಶುಲ್ಕ ವಿಧಿಸಲಾಗುತ್ತದೆ.
- ಆದ್ದರಿಂದ ಈ ಹೊಸ ಶುಲ್ಕವನ್ನು ಪ್ರಯಾಣದ ಸ್ಟೇಜ್‌ಗಳ ಆಧಾರದ ಮೇಲೆ ಮಾತ್ರ ನಿಗದಿಪಡಿಸಲಾಗಿದೆ. ಆ ಪ್ರಕಾರ ಒಂದು ಸ್ಟೇಜ್ ಅಂದರೆ ಸುಮಾರು 6 ಕಿ.ಮೀ. ಆಗಿರುತ್ತದೆ.
| ಸ್ಟೇಜ್‌ವಾರು | ಶುಲ್ಕಗಳು |
| ಸ್ಟೇಜ್ 1 ರಿಂದ 5 | 6 ರೂ. |
| ಸ್ಟೇಜ್ 6 ರಿಂದ 10 | 12 ರೂ. |
| ಸ್ಟೇಜ್ 11 ರಿಂದ 15 | 20 ರೂ. |
| ಸ್ಟೇಜ್ 16 ರಿಂದ 20 | 25 ರೂ. |
| ಸ್ಟೇಜ್ 21 ರಿಂದ 25 | 28 ರೂ. |
| ಸ್ಟೇಜ್ 26 ರಿಂದ 30 | 32 ರೂ. |
| ಸ್ಟೇಜ್ 31 ರಿಂದ 35 | 37 ರೂ. |
| ಸ್ಟೇಜ್ 36 ರಿಂದ 40 | 42 ರೂ. |
| ಸ್ಟೇಜ್ 41 ರಿಂದ 45 | 45 ರೂ. |
| ಸ್ಟೇಜ್ 46 ರಿಂದ 50 | 50 ರೂ. |
ಈ ಹಿಂದೊಮ್ಮೆ, ಅಂದರೆ 2021ರ ಡಿಸೆಂಬರ್‌ನಲ್ಲಿ ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಏರಿಕೆ ಮಾಡಿತ್ತು. ಬರೋಬ್ಬರಿ 4 ವರ್ಷಗಳ ನಂತರ ಇದೀಗ ಪರಿಷ್ಕರಣೆ ಮುಂದಾಗಿದೆ.


Click it and Unblock the Notifications