ಕ್ವಿನ್ ಸಿಟಿ ಮುಂಬರುವ ದಿನಗಳಲ್ಲಿ ಬೆಂಗಳೂರಿನ ವಾಯುವ್ಯ ಭಾಗದಲ್ಲಿ ತಲೆ ಎತ್ತಲಿದೆ. ಹೀಗಾಗಿ ಈ ಭಾಗದ ನೆಲಮಂಗಲ, ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರದಂತಹ ಪ್ರಮುಖ ಪ್ರದೇಶಗಳ ಅಭಿವೃದ್ಧಿಗೆ ಚುರುಕು ಮುಟ್ಟಲಿದೆ. 5800 ಎಕರೆ ಪ್ರದೇಶದಲ್ಲಿ ಈ ಕ್ವಿನ್ ಸಿಟಿ ನಿರ್ಮಾಣವಾಗಲಿದೆ. ಈ ಸಿಟಿಯಲ್ಲಿ ಜ್ಞಾನ, ಆರೋಗ್ಯ ಹಾಗೂ ಸಂಶೋಧನ ಘಟಕಗಳು ಕಾರ್ಯ ರೂಪಕ್ಕೆ ಬರಲಿವೆ.
ಈ ಕ್ವೀನ್ ಸಿಟಿ ದಾಬಸ್‌ಪೇಟೆ ಹಾಗೂ ದೊಡ್ಡಬಳ್ಳಾಪುರದ ವರ್ತುಲ ರಸ್ತೆಗೆ ಹೊಂದಿಕೊಂಡಂತೆ ಈ ನಗರ ಅಭಿವೃದ್ಧಿ ಆಗಲಿದ್ದು, ಉತ್ತಮ ಸಂಪರ್ಕವನ್ನು ನೀಡಲಿದೆ. ಕ್ವಿನ್ ಸಿಟಿ ಪ್ರೈಮ್ ಲೋಕೇಷನ್‌ನಲ್ಲಿ ಇದೆ. ಈ ಸ್ಥಳವು ಕೆಂಪೇಗೌಡ ವಿಮಾನನಿಲ್ದಾಣದಿಂದ ಜಸ್ಟ್ 45 ನಿಮಿಷದ ದೂರದಲ್ಲಿದ್ದು, ಬೆಂಗಳೂರು-ಪುಣೆ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇನಿಂದ ಕೇವಲ ಐದು ಕಿಲೋ ಮೀಟರ್ ದೂರದಲ್ಲಿದೆ. ಮತ್ತು, ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುತ್ತದೆ.

ಈ ಕ್ವಿನ್ ಸಿಟಿ ನಗರವು ಹಣಹೂಡಿಕೆ ದಾರರಿಗೆ ಕೈ ಬೀಸಿ ಕರೆಯುತ್ತಿದೆ. ಅಲ್ಲದೆ ಈ ನಗರ ನಿರ್ಮಾಣದಿಂದ ಹುಬ್ಬಳ್ಳಿ, ಬೆಂಗಳೂರು ಎಕ್ಸ್‌ಪ್ರೆಸ್ ರಸ್ತೆಯ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ. ಈ ನಗರವು ಹೂಡಿಕೆದಾರರು ಹಾಗೂ ಮನೆ ಕಟ್ಟುವವರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ.
ಏನೆಲ್ಲಾ ಇರಲಿದೆ?
ಈ ಕ್ವಿನ್ ಸಿಟಿ ನಗರ ಪರಿಸರ ಸ್ನೇಹಿ ಆಗಿರಲಿದೆ. ಈ ನಗರದಲ್ಲಿ 465 ಎಕರೆಗಳನ್ನು ಹೊಂದಿರುವ ಸೌರ ಫಾರ್ಮ್ ಸಿದ್ಧವಾಗಲಿದ್ದು, ಇಲ್ಲಿ ಸರಿ ಸುಮಾರು 0.69 ಮಿಲಿಯನ್ MWh ಶಕ್ತಿಯನ್ನು ಉತ್ಪಾದಿಸಬಹುದಾಗಿದೆ. ಈ ಕೇಂದ್ರ ಕ್ವಿನ್ ಸಿಟಿಗೆ ಬೇಕಾಗಿರುವ ವಿದ್ಯುತ್ ಪೂರೈಸುತ್ತದೆ. 200 ಎಕರೆಯಲ್ಲಿ ವರ್ಷಕ್ಕೆ ಏಳು ಸಾವಿರ ಟನ್ ಹಣ್ಣು ತರಕಾರಿ ಬೆಳೆಯಲಾಗುತ್ತದೆ.
ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸುವ ಮೂಲಕ ಪರಿಸರ ಸ್ನೇಹಿ ಮೂಲಸೌಲಭ್ಯಗಳ ನೆರವಿನಿಂದ ಸುಸ್ಥಿರ ಜೀವನಶೈಲಿ ಒದಗಿಸಬಹುದಾಗಿದೆ. ಮಳೆ ನೀರಿನ ಕೊಯ್ಲು ವ್ಯವಸ್ಥೆಯಿಂದ ಶೇಕಡಾ 50 ರಷ್ಟು ನೀರಿನ ಅವಶ್ಯಕತೆಯನ್ನು ಪೂರೈಸುತ್ತದೆ. ಅಲ್ಲದೆ ಈ ಪ್ರದೇಶಕ್ಕೆ ಬೇಕಾಗಿರುವ ಶೇಕಡಾ 20 ರಷ್ಟು ನೀರನ್ನು ಬೋರವೆಲ್‌ನಿಂದ ನೀಡಲು ಸಿದ್ಧತೆ ನಡೆದಿದೆ. ಭವಿಷ್ಯದ ನಗರಗಳಿಗೆ ಈ ನಗರ ಪ್ರೇರಕವಾಗಿರಲಿದೆ.
ಭವಿಷ್ಯದ ಸ್ಮಾರ್ಟ್ ಸಿಟಿ
ಈ ಕ್ವಿನ್ ಸಿಟಿ ಕೇಂದ್ರವು ಜ್ಞಾನ, ಸಂಶೋಧನೆ, ಆರೋಗ್ಯದ ಸಕ್ರಿಯ ಕೇಂದ್ರವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಈ ವಲಯಗಳಲ್ಲಿ ತನ್ನದೇ ಆದ ದಿಟ್ಟ ಹೆಜ್ಜೆಯನ್ನು ಇಡುವ ಮೂಲಕ ಈ ನಗರವು ಕರ್ನಾಟಕದ ಹೆಗ್ಗುರುತು ಆಗಲಿದೆ. ಇದರ ಇನ್ನೊಂದು ಉತ್ತಮ ಅಂಶವೆಂದರೆ, ಗಂಧದ ಮರಗಳಲ್ಲಿ ಹೂಡಿಕೆ ಮಾಡುವ ಅವಕಾಶ ನೀಡಲಾಗುತ್ತದೆ. ಗಂಧದ ಮರದ ಬೇಡಿಕೆ ಅದರತ್ತ ಜನ ತಮ್ಮ ಚಿತ್ತವನ್ನು ಕೇಂದ್ರಿ ಕರಿಸುವಂತೆ ಮಾಡುತ್ತದೆ. ಈ ಗಿಡಗಳು ಕನಿಷ್ಠ ನಿರ್ವಹಣೆಯಿಂದ ಉತ್ತಮ ಆಧಾಯವನ್ನು ನೀಡುತ್ತವೆ. ಹಸಿರು ಮತ್ತು ನವೀಕರಿಸಬಹುದಾದ ಸಂಪನ್ಮೂಲಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದವರಿಗೆ ಇದು ಒಳ್ಳೆಯ ಆಯ್ಕೆ ಆಗಿರಲಿದೆ.


Click it and Unblock the Notifications