ಸಿಲಿಕಾನ್ ಸಿಟಿ ಬೆಂಗಳೂರು ಎಲ್ಲಾ ಉದ್ಯಮಗಳನ್ನ ಸ್ವಾಗತ ಮಾಡುತ್ತದೆ. ಅದರಲ್ಲೂ ಟೆಕ್ ಸಿಟಿ ಎಂದೇ ಹೆಸರಾಗಿರುವ ಈ ಬೆಂಗಳೂರಿನಲ್ಲಿ ಸಾಕಷ್ಟು ಟೆಕ್ ಉಧ್ಯಮಗಳೇ ತುಂಬಿ ಹೋಗಿವೆ. ಇದೆಲ್ಲದರ ಮಧ್ಯೆ ಬೆಂಗಳೂರಿನಲ್ಲಿ ನೆಲೆಸಲು ಬಾಡಿಗೆ ದರಗಳು ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ ಭೂಮಾಲೀಕರೇ ಉನ್ನತ ವೃತ್ತಿಗಳನ್ನ ಹೊಂದಿದ್ದಾರೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಹೌದು ಬಾಡಿಗೆಗಳು ದಿನಕ್ಕೆ ಗಗನಕ್ಕೇರುತ್ತಿದ್ದು, ಬೆಂಗಳೂರು ನಗರದಲ್ಲಿ ಜಮೀನುದಾರರಾಗುವುದು ಉತ್ತಮ ಹಾಗೆ ಅತ್ಯಂತ ಲಾಭದಾಯಕ ಎಂದು ನೆಟಿಜನ್‌ಗಳು ಹಾಸ್ಯಮಯವಾಗಿ ಸೂಚಿಸುತ್ತಿದ್ದಾರೆ.
ಬೆಂಗಳೂರು ಬಾಡಿಗೆದಾರರ ಬಡಿಗೆ ಬಗ್ಗೆ ಎಷ್ಟು?
ಸಾಮಾಜಿಕ ಜಾಲತಾಣದ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಗ್ರೇಪ್‌ವೈನ್‌ನಲ್ಲಿ ಓರ್ವ ವ್ಯಕ್ತಿ ಪೋಸ್ಟ್ ಮಾಡುವ ಮೂಲಕ ಈ ಚರ್ಚೆ ಆರಂಭವಾಗಿದೆ. ಆಕಸ್ಮಿಕವಾಗಿ ಬೆಂಗಳೂರಿನ ನಿವಾಸಿಯೊಬ್ಬರು ಬೆಂಗಳೂರಿನಲ್ಲಿ ನೀವು ಎಷ್ಟು ಬಾಡಿಗೆ ಪಾವತಿಸುತ್ತೀರಿ? ಎಂದು ಕೇಳಿದ್ದಾರೆ. ಪ್ರೀಮಿಯಂ ವಸತಿಗೆ ಹೆಸರುವಾಸಿಯಾಗಿರುವ ಆದರ್ಶ್ ಪಾಮ್‌ನಲ್ಲಿರುವ 3BHK ಅಪಾರ್ಟ್‌ಮೆಂಟ್‌ಗಾಗಿ ಅವರು ಪ್ರತಿ ತಿಂಗಳಿಗೆ 78,000 ರೂಪಾಯಿಯನ್ನ ಪಾವತಿಸುತ್ತಿರುವುದಾಗಿ ಬಳಕೆದಾರರು ಹಂಚಿಕೊಂಡಿದ್ದಾರೆ. ಇನ್ನು ಈ ಪೋಸ್ಟ್ ಕಂಡ ನೆಟ್ಟಿಗರು ಮತ್ತಷ್ಟು ಸಂಭಾಷಣೆಯನ್ನು ಶುರು ಮಾಡಿದ್ರು, ಅನೇಕರು ತಮ್ಮ ಸ್ವಂತ ಬಾಡಿಗೆ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಅದರಲ್ಲಿ ಒಬ್ಬರು 78 ಸಾವಿರ ಅಂದರೆ ಆದರ್ಶ್ ಪಾಮ್‌ಗೆ ಉತ್ತಮ ವ್ಯವಹಾರದಂತೆ ತೋರುತ್ತಿದೆ ಎಂದರು. ಹಾಗೆ ಮತ್ತೊಬ್ಬರು ಓಹೋ 78 ಸಾವಿರ ಪ್ರತಿ ತಿಂಗಳು ತುಂಬಾ ಜಾಸ್ತಿ ಆಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಇನ್ನು ಕೆಲವು ಬಳಕೆದಾರರು ಹೆಚ್ಚಿನ ಬಾಡಿಗೆಯನ್ನು ಪಾವತಿಸುವುದಕ್ಕಿಂತ ಒಬ್ಬ ಜಮೀನುದಾರನಾಗುವುದು ಬಹಳ ಉತ್ತಮ. ಅದೇ ಒಂದು ಉದ್ಯೋಗವಾಗಿ ಬಿಟ್ಟಿದೆ ಎಂದು ತಮಾಷೆಯಾಗಿ ಸಲಹೆ ನೀಡಿದರು.
ಏರಿಕೆಯಾಗುತ್ತಲೇ ಇವೆ ಬೆಂಗಳೂರಿನ ಬಾಡಿಗೆಗಳು
ಈ ಬೆಂಗಳೂರಿನ ಬಾಡಿಗೆ ಕಥೆ ಒಂದೇ ಸಂಭಾಷಣೆಗೆ ಸೀಮಿತವಾಗಿಲ್ಲ ಹೊರತಾಗಿ ಇಡೀ ಬೆಂಗಳೂರಿನಾದ್ಯಂತ ಇದೇ ಚರ್ಚೆ ಈಗ ನಾವು ಹೆಚ್ಚು ಕೇಳಲು ಸಿಗುವುದು. ಈಗಂತು ಬಾಡಿಗೆ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ. ಇನ್ನು ಹೀಗಾಗಿ ಹಲವರಿಗೆ ಕೈಗೆಟುಕುವ ಮನೆಗಳನ್ನು ಹುಡುಕುವುದು ಕಷ್ಟವಾಗಿ ಬಿಟ್ಟಿದೆ. ಹಾಗೆ ನಾವು ಇನ್ನೊಂದು ಕಡೆ ನೋಡೋದಾದ್ರೆ ಮತ್ತೊಬ್ಬರು ತಾವು ಪಾವತಿ ಮಾಡುತ್ತಿರುವ ಬಾಡಿಗೆ ದರದ ಬಗ್ಗೆ ಹಂಚಿಕೊಂಡರು. ಬಹು ಬೇಡಿಕೆಯ ಪ್ರದೇಶವಾದ ವೈಟ್‌ಫೀಲ್ಡ್‌ನಲ್ಲಿ 3BHKಗಾಗಿ ಅವರು ಪ್ರತಿ ತಿಂಗಳು 70,000 ರೂಪಾಯಿಗಳನ್ನು ಪಾವತಿಸುತ್ತಾರೆ ಎಂದು ಅವರು ಹಂಚಿಕೊಂಡಿದ್ದಾರೆ.
ಇದು ಬರೀ ಬಾಡಿಗೆ ಸಮಸ್ಯೆ ಮಾತ್ರವಲ್ಲ ಬಾಡಿಗೆದಾರರು ಇದರ ಜೊತೆಗೆ ಬಹುಮೊತ್ತದ ಠೇವಣಿಗಳನ್ನ ಕೂಡ ನೀಡುತ್ತಿದ್ದಾರೆ. ಈ ಮೊತ್ತ ಲಕ್ಷ ರೂಪಾಯಿಗಳಿಂದಲೇ ಶುರುವಾಗಿ, ಈಗಂತು ಏರಿಕೆಯಾಗ್ತಾನೆ ಇದೆ. ಈ ಮುಂಗಡ ವೆಚ್ಚಗಳು ಹೆಚ್ಚುತ್ತಿರುವುದರಿಂದ ಸ್ವಂತ ಆಸ್ತಿ ಹೊಂದುವ ಮೂಲಕ ಈ ವ್ಯವಸ್ಥೆಯನ್ನ ಸೋಲಿಸಬಹುದು.
ಹೆಚ್ಚುತ್ತಿರುವ ಬಾಡಿಗೆ ಬೆಲೆಗಳು ಗಗನಕ್ಕೇ ಏರುತ್ತುರುವುದರಿಮದ, ಕೆಲವು ಬೆಂಗಳೂರಿನ ನಿವಾಸಿಗಳು ಆಸ್ತಿಯನ್ನು ಹೊಂದುವುದು ಅಂದರೆ ಕೇವಲ ಐಷಾರಾಮಿ ಅಲ್ಲ. ಇದು ಅಗತ್ಯ ಎಂದು ಭಾವಿಸಿದ್ದಾರೆ. ಆಸ್ತಿಗಳನ್ನ ಹೊಂದುವ ಮೂಲಕ ಈ ಬಾಡಿಗೆ ಮಾರುಕಟ್ಟೆಯಲ್ಲಿ ಆಗುವಂತಹ ಬೆಲೆ ಏರಿಕೆಯನ್ನ ನಾವು ತಪ್ಪಿಸಬಹುದು. ಇದರಿಂದಾಗಿ ಮಾಲೀಕರು ಕೂಡ ಬುದ್ಧಿ ಕಲಿಯಬಹುದು ಎನ್ನುವುದು ನೆಟ್ಟಿಗರ ಅಭಿಪ್ರಾಯವಾಗಿದೆ.
ಇನ್ನು ಈ ಪರಿಸ್ಥಿತಿ ಕೇವಲ ಮಾಸಿಕ ಬಾಡಿಗೆಯ ಪಾವತಿಸುವ ಬಗ್ಗೆ ಅಲ್ಲ. ಆದ್ರೆ ಈಗ ಬೆಂಗಳೂರಿನಲ್ಲಿ, ಅನೇಕ ಭೂಮಾಲೀಕರು ಒಂದು ವರ್ಷದ ಬಾಡಿಗೆ ಮೊತ್ತಕ್ಕಿಂತ ಹೆಚ್ಚು ಭದ್ರತಾ ಠೇವಣಿಗಳನ್ನು ಕೇಳುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ, ಬೆಂಗಳೂರಿನ ನಿವಾಸಿಯೊಬ್ಬರು ಅವರು ನೆಲೆಸಿರುವ ಅಪಾರ್ಟ್‌ಮೆಂಟ್‌ನಲ್ಲಿ 40,000 ರೂಪಾಯಿ ಬಾಡಿಗೆ ಜೊತೆಗೆ 5 ಲಕ್ಷ ರೂಪಾಯಿ ಭದ್ರತಾ ಠೇವಣಿ ಕೇಳಿರುವ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ಇನ್ನು ಈ ಪೋಸ್ಟ್ ವೇಗವಾಗಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಇಷ್ಟು ಹೆಚ್ಚಿನ ಠೇವಣಿಯ ಬಗ್ಗೆ ಆಶ್ಚರ್ಯದ ಜೊತೆಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ.
40,000 ಬಾಡಿಗೆ ಅಪಾರ್ಟ್‌ಮೆಂಟ್‌ಗೆ 5 ಲಕ್ಷ ರೂ. ಠೇವಣಿ ತುಂಬಾ ಹೆಚ್ಚು ಅಲ್ಲವೇ ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ. ಹಾಗೆ ಇದು ನಗರದ ಅನೇಕ ಬಾಡಿಗೆದಾರರ ಹತಾಶೆಯನ್ನು ಬಿಂಭಿಸುತ್ತದೆ. ಅಲ್ಲದೆ ಬೆಂಗಳೂರಿನಲ್ಲಿ ಇಂತಹ ಠೇವಣಿಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಸೆಳೆದಿದ್ದಾರೆ. ಹೀಗಾಗಿ ಬಾಡಿಗೆ ಪ್ರಕ್ರಿಯೆಯು ಕೈಗೆಟುಕುವಂತಿಲ್ಲ ಮತ್ತು ಸಮರ್ಥನೀಯವಲ್ಲ ಎನ್ನುವುದು ಎಲ್ಲರ ಅಬಿಪ್ರಾಯವಾಗಿದೆ.
ಈ ಬಾಡಿಗೆ ಬಿಕ್ಕಟ್ಟು ಹೆಚ್ಚಗುತ್ತಿದ್ದಂತೆ, ಬೆಂಗಳೂರಿನಲ್ಲಿ ಭೂಮಾಲೀಕರಾಗುವ ಕನಸು ಕೂಡ ಕೇವಲ ತಮಾಷೆಯಾಗಿ ಉಳಿದಿಲ್ಲ. ಹೆಚ್ಚುತ್ತಿರುವ ಬಾಡಿಗೆ ಬೆಲೆಗಳು ಮತ್ತು ಹೆಚ್ಚಿನ ಮುಂಗಡ ವೆಚ್ಚಗಳೊಂದಿಗೆ, ನಗರದಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಆಸ್ತಿ ಮಾಲೀಕತ್ವ ಏಕೈಕ ಮಾರ್ಗವಾಗಿದೆ ಎಂದು ಹಲವರು ನಿರೂಪಿಸಿದ್ದಾರೆ. ಈಗ ನಿರಂತರವಾಗಿ ಏರುತ್ತಿರುವ ಬಾಡಿಗೆಯ ಆರ್ಥಿಕ ಒತ್ತಡದಿಂದ ಪಾರಾಗಲು ಬಾಡಿಗೆದಾರರು ಆಸ್ತಿ ಹೊಂದುವ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.


Click it and Unblock the Notifications