ಆಗರ್ಭ ಸಿರಿವಂತರು ಅಂದ ಕ್ಷಣ ನಮಗೆ ಎಲೋನ್ ಮಸ್ಕ್, ಜೆಫ್ ಬೆಜೋಸ್, ಬಿಲ್ ಗೇಟ್ಸ್, ಮುಖೇಶ್ ಅಂಬಾನಿ ಹೀಗೆ ಕೆಲವು ಪ್ರಮುಖರ ಹೆಸರು ನೆನಪಾಗುತ್ತದೆ. ಆದರೆ ಜಾಗತಿಕವಾಗಿಯೇ ಅಗ್ರಸ್ಥಾನದಲ್ಲಿರುವ ಈ ಸಿಇಒ ಹೆಸರು ನೀವು ಕೇಳಿರಲು ಸಾಧ್ಯವಿಲ್ಲ..ಅವರೇ ಬ್ಲ್ಯಾಕ್‌ರಾಕ್‌ನ ಸಿಇಒ ಲ್ಯಾರಿ ಫಿಂಕ್.
ಲ್ಯಾರಿ ಫಿಂಕ್ ಅವರು ವಿಶ್ವದ ಅತಿದೊಡ್ಡ ಆಸ್ತಿ ನಿರ್ವಹಣಾ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ. 2024ರ ಡಿಸೆಂಬರ್‌ನಲ್ಲಿ, ಈ ಕಂಪನಿಯ ಆಸ್ತಿ ಮೌಲ್ಯ 11.5 ಟ್ರಿಲಿಯನ್ ಡಾಲರ್‌ಗಳಷ್ಟು ಅಗಾಧವಾಗಿತ್ತು. ಅಂದರೆ ಹಲವು ದೇಶಗಳ ಒಟ್ಟು ಆರ್ಥಿಕ ಉತ್ಪಾದನೆಗಿಂತಲೂ ಇದು ಹೆಚ್ಚು! ಆದರೆ, ಇಷ್ಟೊಂದು ದೊಡ್ಡ ಸಾಮ್ರಾಜ್ಯವನ್ನು ನಿರ್ವಹಿಸುತ್ತಿದ್ದರೂ ಫಿಂಕ್ ಅವರ ಹೆಸರು ಜನಸಾಮಾನ್ಯರಿಗೆ ಹೆಚ್ಚು ಪರಿಚಿತವಾಗಿಲ್ಲ.ಇವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಗಣ್ಯರಾಗಿದ್ದಾರೆ .

12.808 ಟ್ರಿಲಿಯನ್ ಡಾಲರ್‌ಗಳಷ್ಟು ಮೌಲ್ಯ ಹೊಂದಿರುವ ಬ್ಲ್ಯಾಕ್‌ರಾಕ್ ವಿಶ್ವದ 102ನೇ ಅತಿ ದೊಡ್ಡ ಕಂಪನಿಯಾಗಿದೆ. ಇದರ ಮೌಲ್ಯ ಅಮೆರಿಕ ಸಂಯುಕ್ತ ಸಂಸ್ಥಾನದ ಅರ್ಧದಷ್ಟು ಆರ್ಥಿಕ ಉತ್ಪಾದನೆಗೆ ಸಮಾನವಾಗಿದೆ. ಇದರಿಂದ ಈ ಕಂಪನಿಯ ಪ್ರಭಾವ ಎಷ್ಟು ದೊಡ್ಡದು ಎಂದು ಅರ್ಥವಾಗುತ್ತದೆ. ಫಿಂಕ್ ಅವರ ಪ್ರಭಾವ ವಿವಿಧ ಕ್ಷೇತ್ರಗಳಲ್ಲಿ ಮತ್ತು ವಿಶ್ವದಾದ್ಯಂತ ಹರಡಿದೆ. ಆದರೆ ಅವರು ಪ್ರಚಾರದಿಂದ ದೂರ ಉಳಿಯುವ ವ್ಯಕ್ತಿಯಾಗಿದ್ದಾರೆ. ಆದರೆ ಅವರು ನಿಯಂತ್ರಿಸುವ ಸಂಪತ್ತು ಮಾತ್ರ ಅಗಾಧ.!
ಆರ್ಥಿಕ ಬಿಕ್ಕಟ್ಟು ತುರ್ತು ಸರಿಪಡಿಸಿದವರು.!
2008ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಲ್ಯಾರಿ ಫಿಂಕ್ ಅವರು ವಹಿಸಿದ ನಿರ್ಣಾಯಕ ಪಾತ್ರವು ಅವರನ್ನು ಜಾಗತಿಕ ಹಣಕಾಸು ವಲಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿತು. ಜೆಪಿ ಮೋರ್ಗನ್‌ನ ಜೇಮ್ಸ್ ಡೈಮನ್ ಮತ್ತು ಮಾರ್ಗನ್ ಸ್ಟ್ಯಾನ್ಲಿಯ ಜಾನ್ ಮ್ಯಾಕ್ ಅವರಂತಹ ವಾಲ್ ಸ್ಟ್ರೀಟ್ ದಿಗ್ಗಜರು ಅಪಾರ ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿದ್ದಾಗ, ಫಿಂಕ್ ಅವರೊಬ್ಬ ಗೋ-ಟು ಸಲಹೆಗಾರಂತೆ ಕಂಡು ಅವರನ್ನೇ ಸಂಪರ್ಕಿಸುತ್ತಿದ್ದರು. ಬಿಕ್ಕಟ್ಟಿನ ಸಮಯದಲ್ಲಿ ಯುಎಸ್ ಟ್ರೆಷರಿ ಮತ್ತು ನ್ಯೂಯಾರ್ಕ್ ಫೆಡರಲ್ ರಿಸರ್ವ್ ಬ್ಯಾಂಕ್‌ನಿಂದ ಅವರ ಪರಿಣತೆಯ ಸಲಹೆ ಕೋರಲಾಗಿತ್ತು.
ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್: ಲ್ಯಾರಿ ಫಿಂಕ್ ಅವರ ದೃಷ್ಟಿಕೋನ
ವಿಶ್ವ ಆರ್ಥಿಕ ವೇದಿಕೆಯ ದಾವೋಸ್‌ನಲ್ಲಿ ಬ್ಲೂಮ್‌ಬರ್ಗ್‌ನೊಂದಿಗೆ ನಡೆದ ಸಂಭಾಷಣೆಯಲ್ಲಿ ಲ್ಯಾರಿ ಫಿಂಕ್ ಬಿಟ್‌ಕಾಯಿನ್ ಬಗ್ಗೆ ಸಾಕಷ್ಟು ಸಕಾರಾತ್ಮಕ ದೃಷ್ಟಿಕೋನವನ್ನು ವ್ಯಕ್ತಪಡಿಸಿದರು. ಅವರು ಬಿಟ್‌ಕಾಯಿನ್‌ನ ಬೆಲೆ 700,000 ಯುಎಸ್ಡಿಯನ್ನು ತಲುಪಬಹುದು ಎಂದು ಭವಿಷ್ಯ ನುಡಿದಿದ್ದು, ಇದು "ಭಯದ ಕರೆನ್ಸಿ" ಯಾಗಿ ಅಂತರ್ಗತವಾದ ಆಕರ್ಷಣೆಯನ್ನು ಹೊಂದಿದೆ.
ನನಗೂ ಮೊದ ಮೊದಲು ಕ್ರಿಪ್ಟೋ ಬಗ್ಗೆ ಭಯವಿತ್ತು. ಆದರೆ ಕ್ರಿಪ್ಟೋ ಬಗ್ಗೆ ಅಧ್ಯಯನ ಮಾಡುತ್ತಿದ್ದಂತೆ, ಕ್ರಿಪ್ಟೋವು ಭಯದ ಕರೆನ್ಸಿಯಾಗಿದೆ ಎಂಬುದು ನನಗೆ ಸ್ಪಷ್ಟವಾಯಿತು. ಆದರೆ ಅದರಲ್ಲಿ ತಪ್ಪೇನಿಲ್ಲ. ನೀವು ಕರೆನ್ಸಿ ಮೌಲ್ಯ ಕುಸಿತ ಅಥವಾ ನಿಮ್ಮ ದೇಶದ ಆರ್ಥಿಕ ಅಥವಾ ರಾಜಕೀಯ ಸ್ಥಿರತೆಯ ಬಗ್ಗೆ ಹೆದರುತ್ತಿದ್ದರೆ, ನೀವು ಬಿಟ್‌ಕಾಯಿನ್‌ನಂತಹ ಸಾರ್ವತ್ರಿಕ ಕರೆನ್ಸಿಯನ್ನು ಹೊಂದಬಹುದು, ಅದು ನಿಖರವಾಗಿ ಈ ಸ್ಥಳೀಯ ಭಯಗಳನ್ನು ನಿವಾರಿಸುತ್ತದೆ. ಇದರ ಅರ್ಥವೆಂದರೆ ಆರ್ಥಿಕ ಅನಿಶ್ಚಿತತೆಗಳನ್ನು ನಿಭಾಯಿಸಲು ಬಿಟ್‌ಕಾಯಿನ್‌ನ ಬೆಳೆಯುತ್ತಿರುವ ಪ್ರಸ್ತುತತೆಯ ಜೊತೆಗೆ, ಜಾಗತಿಕ ಹಣಕಾಸು ವೇದಿಕೆಯಲ್ಲಿ ಭವಿಷ್ಯದಲ್ಲಿ ಭರವಸೆಯನ್ನು ಹೊಂದುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.
ತೆರೆಮರೆಯ ಹಿಂದಿನ ಪ್ರಭಾವಿ ವ್ಯಕ್ತಿ ಲ್ಯಾರಿ ಫಿಂಕ್
ತನ್ನ ಅಪಾರ ಪ್ರಭಾವದ ಹೊರತಾಗಿಯೂ, ಲ್ಯಾರಿ ಫಿಂಕ್ ಸಾಮಾನ್ಯ ಜನರಿಗೆ ಅಪರಿಚಿತ ವ್ಯಕ್ತಿಯಾಗಿಯೇ ಉಳಿದಿದ್ದಾರೆ. 2010ರಲ್ಲಿ ವ್ಯಾನಿಟಿ ಫೇರ್ ಪತ್ರಿಕೆ ವರದಿ ಮಾಡಿದಂತೆ, ವಾಷಿಂಗ್ಟನ್ ಮತ್ತು ವಾಲ್ ಸ್ಟ್ರೀಟ್‌ನ ಹಿರಿಯ ವಲಯಗಳಲ್ಲಿ ಫಿಂಕ್ ಅವರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಅವರು ಹಣಕಾಸು ಕ್ಷೇತ್ರದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಆದರೆ, ಈ ಎಲ್ಲಾ ಪ್ರಭಾವದ ಹೊರತಾಗಿಯೂ, ಅವರು ಸಾರ್ವಜನಿಕ ಗಮನದಿಂದ ದೂರವಾಗಿಯೇ ಇದ್ದಾರೆ. ಹಾಗಾಗಿ ಅವರನ್ನು ಹೆಚ್ಚಾಗಿ "ತೆರೆಮರೆಯ ಹಿಡನ್ ಬಿಲಿಯನೇರ್" ಎಂದು ಕರೆಯಲಾಗುತ್ತದೆ.


Click it and Unblock the Notifications