ಕಳೆದ ವರ್ಷದಲ್ಲಿ ಆರಂಭವಾದ ಉದ್ಯೋಗ ಕಡಿತವು ಈ ವರ್ಷ ಕೊನೆಯಾಗುತ್ತಾ ಬಂದರೂ ನಿಂತಿಲ್ಲ. ಈಗಲೂ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡಿಕೊಳ್ಳುತ್ತಿದೆ. ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್‌ರ ಹೂಡಿಕೆಯನ್ನು ಹೊಂದಿರುವ ಥರ್ಡ್ ವೇವ್ ಕಾಫಿ ಉದ್ಯೋಗ ಕಡಿತ ಘೋಷಿಸಿದೆ.
ವಿಶೇಷ ಕಾಫಿ ಮತ್ತು ಆಹಾರ ಬ್ರ್ಯಾಂಡ್ ಆದ ಥರ್ಡ್ ವೇವ್ ಕಾಫಿ 100-120 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಮನಿಕಂಟ್ರೋಲ್‌ನ ವರದಿಯ ಪ್ರಕಾರ, ಟೆಕ್, ಫೈನಾನ್ಸ್, ಮಾರ್ಕೆಟಿಂಗ್, ಬಿಸಿನೆಸ್ ಡೆವಲಪ್‌ಮೆಂಟ್ ಮತ್ತು ಆ್ಯಪ್‌ನಂತಹ ತಂಡಗಳಾದ್ಯಂತ ಉದ್ಯೋಗಿಗಳನ್ನು ಕೈಬಿಡಲಾಗಿದೆ.

ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿರ್ಧಾರವು ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ನ ಯಶಸ್ವಿ ಸೀರಿಸ್ ಸಿ ಫಂಡಿಂಗ್ ಸುತ್ತಿನ ಹಲವಾರು ತಿಂಗಳುಗಳ ನಂತರ ಕೈಗೊಳ್ಳಲಾಗಿದೆ. ಈ ಸ್ಟಾರ್ಟ್‌ಅಪ್ ಯಶಸ್ವಿ ಸೀರಿಸ್ ಸಿ ಫಂಡಿಂಗ್ ಮೂಲಕ 35 ಮಿಲಿಯನ್ ಡಾಲರ್ ಗಳಿಸಿತು.
ವೆಸ್ಟ್‌ಬ್ರಿಡ್ಜ್ ಕ್ಯಾಪಿಟಲ್ ಮತ್ತು ಉಡಾನ್‌ನ ಸುಜೀತ್ ಕುಮಾರ್ ಭಾಗವಹಿಸುವಿಕೆಯೊಂದಿಗೆ ಖಾಸಗಿ ಇಕ್ವಿಟಿ ಸಂಸ್ಥೆಯಾದ ಕ್ರಿಯೇಜಿಸ್ ಈ ಫಂಡಿಗ್ ಅನ್ನು ಮುನ್ನಡೆಸಿದೆ. ಖಚಿತವಾಗಿ ಹೇಳುವುದಾದರೆ, ಸೆಪ್ಟೆಂಬರ್‌ನಲ್ಲಿ ಕಂಪನಿಯ ನಿಧಿಸಂಗ್ರಹಣೆಯಲ್ಲಿ ಕಾಮತ್ ಭಾಗವಹಿಸಲಿಲ್ಲ. ಸ್ಟಾರ್ಟ್‌ಅಪ್‌ನಲ್ಲಿ ಶೇಕಡ 1 ಕ್ಕಿಂತ ಕಡಿಮೆ ಪಾಲನ್ನು ಹೊಂದಿದ್ದಾರೆ.
"ಎಚ್‌ಆರ್ ಮುಖ್ಯಸ್ಥರು ಮತ್ತು ಸಂಸ್ಥಾಪಕರು ನಮ್ಮಲ್ಲಿ ಪ್ರತಿಯೊಬ್ಬರ ಬಳಿಗೆ ಬರುತ್ತಿದ್ದಾರೆ. 10-15 ನಿಮಿಷಗಳ ಕಾಲ ಮಾತನಾಡುತ್ತಿದ್ದಾರೆ. ನಿಮ್ಮನ್ನು ವಜಾಗೊಳಿಸಲಾಗಿದೆ ಎಂದು ಉದ್ಯೋಗಿಗಳಿಗೆ ತಿಳಿಸುತ್ತಿದ್ದಾರೆ," ಎಂದು ಉದ್ಯೋಗಿಯೊಬ್ಬರು ಮನಿ ಕಂಟ್ರೋಲ್‌ಗೆ ತಿಳಿಸಿದರು.
"ಇದು ಕಳೆದ ಎರಡು ದಿನಗಳಿಂದ ನಡೆಯುತ್ತಿದೆ. ಡಿಸೆಂಬರ್ 15 ರಂದು ಮತ್ತೊಂದು ಸುತ್ತು ನಡೆಯಲಿದೆ. ಸಂಸ್ಥೆಯಲ್ಲಿ ಪುನರ್ ರಚನೆ ಮಾಡಲಾಗುತ್ತಿದೆ ಎಂದು ಹೇಳಿದರೆ ಯಾರಿಗೂ ತಿಳಿದಿಲ್ಲ. ನಾವು ಕಂಪನಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾನು ಭಾವಿಸಿದೆವು," ಎಂದು ಉದ್ಯೋಗಿ ಹೇಳಿದ್ದಾರೆ.
ಈ ನಿರ್ಧಾರವು ಸಂಘಟನೆಯೊಳಗಿನ ಹಿರಿಯ ನಾಯಕರ ಮೇಲೂ ಪರಿಣಾಮ ಬೀರಿದೆ. ಥರ್ಡ್ ವೇವ್ ಕಾಫಿಯು ಕೆಲಸ ಕಳೆದುಕೊಂಡ ಉದ್ಯೋಗಿಗಳು ಕೂಡಲೇ ಕೆಲಸವನ್ನು ನಿಲ್ಲಿಸಲು ನಿರ್ಧರಿಸಿದರೆ, ಎರಡು ತಿಂಗಳ ಸಂಬಳವನ್ನು ಪಡೆಯುವ ಆಯ್ಕೆಯನ್ನು ಒದಗಿಸುತ್ತದೆ. ಕೆಲಸ ಮಾಡಿ ಬಳಿಕ ನಿಲ್ಲಿಸಲು ಬಯಸಿದರೆ ಫೆಬ್ರವರಿ ಮಧ್ಯದವರೆಗೆ ಕೆಲಸ ಮಾಡಬಹುದಾಗಿದೆ.
"ಥರ್ಡ್ ವೇವ್ ಕಾಫಿ ಪುನರ್‌ರಚನೆ ಮಾಡಲು ನಿರ್ಧಾರ ಮಾಡಿದೆ. ಇದು ಸಂಸ್ಥೆಯ ಶೇಕಡ 10 ರಷ್ಟು ಕಡಿಮೆ ಪ್ರಭಾವ ಬೀರುತ್ತದೆ. ಸಂಸ್ಥೆಯಾಗಿ ನಾವು ಇತ್ತೀಚಿನ ಫಂಡಿಂಗ್ ಬಳಿಕ ಬಲವಾದ ಸ್ಥಾನದಲ್ಲಿದ್ದೇವೆ. ನಾವು ಭಾರತದ ಅತ್ಯಂತ ಪ್ರೀತಿಯ ಕಾಫಿ ಬ್ರಾಂಡ್ ಆಗಿ ಮುಂದುವರಿಯುತ್ತೇವೆ," ಎಂದು ಕಂಪನಿಯು ಮನಿ ಕಂಟ್ರೋಲ್‌ಗೆ ತಿಳಿಸಿದೆ.
ವರದಿಯ ಪ್ರಕಾರ, ಉದ್ಯೋಗ ಕಡಿತದ ಬಗ್ಗೆ ಉದ್ಯೋಗಿಗಳಿಗೆ ಔಪಚಾರಿಕವಾಗಿ ಲಿಖಿತವಾಗಿ ತಿಳಿಸಲಾಗಿಲ್ಲ. ಬದಲಾಗಿ ಈ ಬಗ್ಗೆ ಮಾಹಿತಿ ತಿಳಿದಿರುವವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಥರ್ಡ್ ವೇವ್ ತನ್ನ ಆಫ್‌ಲೈನ್ ಆಫ್‌ಲೈನ್ ಸ್ಟೋರ್ ಅನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಹೇಳಿದ ಸಮಯದಲ್ಲಿ ಈ ನಿರ್ಧಾರ ಬಂದಿದೆ. ಕಾಫಿ ಸ್ಟಾರ್ಟಪ್ ಈಗಾಗಲೇ ಭಾರತದಲ್ಲಿ 100 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ.
ಏಂಜೆಲ್ ಮತ್ತು ಸಾಂಸ್ಥಿಕ ಹೂಡಿಕೆದಾರರ ಕ್ಲಚ್‌ನಿಂದ ಸ್ಟಾರ್ಟ್‌ಅಪ್ ಈಗಾಗಲೇ ಒಟ್ಟು 65 ಮಿಲಿಯನ್ ಡಾಲರ್ ಸಂಗ್ರಹ ಮಾಡಿದೆ. ಈ ಥರ್ಡ್ ವೇವ್ ಕಾಫಿ ಬ್ಲೂ ಟೋಕೈ, ಸ್ಲೇ ಕಾಫಿ, ಸ್ಲೀಪಿ ಔಲ್ ಕಾಫಿ, ಹಟ್ಟಿ ಕಾಪಿ ಮತ್ತು ಕೆಫೆ ಕಾಫಿ ಡೇ ಮುಂತಾದವುಗಳ ಸ್ಪರ್ಧಿಸುತ್ತಿದೆ.


Click it and Unblock the Notifications