ನವದೆಹಲಿ, ಸೆಪ್ಟೆಂಬರ್ 9: ವ್ಯಾಪಾರದ ಜಗತ್ತಿನಲ್ಲಿ ಅನೇಕ ಸ್ಪೂರ್ತಿದಾಯಕವಾಗಿರುವ ಯಶಸ್ಸು ಹಾಗೂ ವೈಫಲ್ಯಗಳ ಸ್ಟೋರಿಗಳಿವೆ. ಈ ಪೈಕಿ 99 ಸ್ಪೀಡ್ ಮಾರ್ಟ್ ರಿಟೇಲ್ ಹೋಲ್ಡಿಂಗ್ಸ್ ಸಂಸ್ಥಾಪಕರಾದ ಲೀ ಥಿಯಾಮ್ ವಾಹ್ ಅವರ ಕಥೆಯೂ ಒಂದು. ಮಲೇಷ್ಯಾದ ರಸ್ತೆಬದಿಯ ಸ್ಟಾಲ್‌ನಲ್ಲಿ ತಿಂಡಿ-ತಿನಿಸುಗಳ ಮಾರಾಟಗಾರರಾಗಿ ವಿನಮ್ರ ಆರಂಭದಿಂದ, ಲೀ ಇಂದು ರಿಟೇಲ್ ವ್ಯಾಪಾರದ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ಇದು ಅವರ ಕಠಿಣ ಪರಿಶ್ರಮ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿ ನಿಂತಿದೆ.
ಲೀ ಅವರು 60 ವರ್ಷ ವಯಸ್ಸಿನವರಾಗಿದ್ದು, ಮಲೇಷ್ಯಾದ ಇತ್ತೀಚಿನ ಇತಿಹಾಸದಲ್ಲಿ ಬಹು ನಿರೀಕ್ಷಿತವೆಂಬಂತೆ ಕೌಲಾಲಂಪುರ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಅವರ ಕಂಪನಿಯು ಚೊಚ್ಚಲ ಎಂಟ್ರಿ ಕೊಟ್ಟಿದೆ. 99 ಸ್ಪೀಡ್ ಮಾರ್ಟ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) $531 ಮಿಲಿಯನ್ ಆಗಿದ್ದು ಇದು ಏಳು ವರ್ಷಗಳಲ್ಲಿ ಮಲೇಷ್ಯಾದಲ್ಲಿ ಅತಿ ದೊಡ್ಡದಾಗಿದೆ. ಈ ಮೂಲಕ ಲೀ ಅವರು ಬಿಲಿಯನೇರ್ ಆಗಿ ಗುರುತಿಸಿಕೊಂಡಿದ್ದಾರೆ ಪ್ರತಿ ಷೇರಿಗೆ 1.65 ರಿಂಗ್‌ಗಿಟ್ ($0.38) IPO ಬೆಲೆಯಲ್ಲಿ, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಲೀ ಅವರ ಸಂಪತ್ತು ಅಂದಾಜು $3.3 ಬಿಲಿಯನ್‌ಗೆ ಆಗಿದೆ.

ಈ ಪಟ್ಟಿಯ ಮೂಲಕ ಮಲೇಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಲೀ ಹೊರಹೊಮ್ಮಿರುವುದು ಮಾತ್ರವಲ್ಲದೇ ಮಲೇಷ್ಯಾ ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ಅವರ ಗಮನಾರ್ಹ ಮೈಲಿಗಲ್ಲುಗಳನ್ನು ಗುರುತಿಸುತ್ತದೆ.
ಕಟ್ಟಡ ಕಾರ್ಮಿಕ ಮತ್ತು ಬೀದಿ ಬದಿ ವ್ಯಾಪಾರಿಯ ಮಗನಾಗಿ ಲೀ ಅವರು ಕೌಲಾಲಂಪುರ್ ಮತ್ತು ಮಲಕ್ಕಾ ಜಲಸಂಧಿಯ ನಡುವಿನ ನಗರವಾದ ಕ್ಲಾಂಗ್‌ನಲ್ಲಿ ಜನಿಸಿದರು. ಅವರ ಕುಟುಂಬದಲ್ಲಿ 11 ಮಕ್ಕಳಿದ್ದು ದಿನನಿತ್ಯದ ಜೀವನ ಸಾಗಿಸಲು ಒದ್ದಾಡುವ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಕೇವಲ ಆರು ವರ್ಷಗಳ ಕಾಲ ಮಾತ್ರ ಲೀ ಶಾಲೆಯ ಮುಖವನ್ನು ನೋಡಿದ್ದರು. ತೀವ್ರ ಬಡತನದಲ್ಲಿದ್ದ ಲೀ ಅವರು ಬಾಲ್ಯದಲ್ಲಿ ದುರಾದೃಷ್ಟವಶಾತ್ ಪೋಲಿಯೊಗೆ ತುತ್ತಾದರು. ಇದರಿಂದ ಅವರಿಗೆ ಪಾರ್ಶ್ವವಾಯು ಒಳಗಾಗಿ ನಡೆಯಲು ಅಸಾಧ್ಯವಾಯಿತು. ಇದರ ಜೊತೆ ಅನೇಕ ತೊಂದರೆಗಳನ್ನು ಎದುರಿಸಿದರು.
ಅವರ ಮೊದಲ ಚಿಲ್ಲರೆ ವ್ಯಾಪಾರವಾದ ರಸ್ತೆಬದಿಯ ಪುಟ್ಟ ಅಂಗಡಿ ಅವರಿಗಿದ್ದ ಅನಿವಾರ್ಯತೆಗಳ ಕಾರಣದಿಂದಲೇ ಹುಟ್ಟಿಕೊಂಡಿತ್ತು. "ನನಗಿದ್ದ ದೈಹಿಕ ನ್ಯೂನತೆಗಳ ಕಾರಣ್ ಯಾರೂ ನನ್ನನ್ನು ಕೆಲಸಕ್ಕೆ ನೇಮಿಸಿಕೊಳ್ಳಲಿಲ್ಲ. ಹೀಗಾಗಿ ನನಗೆ ನಾನೇ ಸಹಾಯ ಮಾಡಲೇಬೇಕಿತ್ತು" ಎಂದು 2012 ರಲ್ಲಿ ಫೋರ್ಬ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
1987 ರಲ್ಲಿ ಕಿರಾಣಿ ಅಂಗಡಿಯನ್ನು ತೆರೆದರು. ಇದಾದ ಒಂದು ದಶಕದ ನಂತರ ಅವರ ಪರಿಶ್ರಮದ ಫಲವಾಗಿ ಪಸರ್ ಮಿನಿ 99 ಎಂಬ ಹೆಸರಿನಲ್ಲಿ ಎಂಟು ಮಳಿಗೆಗಳನ್ನು ನಡೆಸತೊಡಗಿದ್ದರು.ಇವರ ಪತ್ನಿ ಎನ್‌ಜಿ ಲೀ ಟಿಯೆಂಗ್ ಅವರು 1997 ರಲ್ಲಿ ಖರೀದಿ ಕಾರ್ಯನಿರ್ವಾಹಕರಾಗಿ ವ್ಯವಹಾರಕ್ಕೆ ಸೇರಿಕೊಂಡ ಕಂಪನಿಯನ್ನು ಮತ್ತಷ್ಟು ಬೆಳೆಸಲು ಸಹಾಯ ಮಾಡಿದರು. ಅಂದಿನಿಂದ IPO ವರೆಗೆ ಪ್ರಯಾಣದವರೆಗೆ ಲೀ ದಂಪತಿಗಳು ವ್ಯವಹಾರದ ಏಕೈಕ ಮಾಲೀಕರಾಗಿದ್ದರು. ಲೀ ಅವರು ತಾವು ಹುಟ್ಟುಹಾಕಿದ ಸಂಸ್ಥೆಯಲ್ಲಿ CEO ಆಗಿ ಸೇವೆ ಸಲ್ಲಿಸಿದರು.
ಇಂದು, 99 ಸ್ಪೀಡ್ ಮಾರ್ಟ್ ಸಂಸ್ಥೆಯೂ ಮಲೇಷ್ಯಾದಲ್ಲಿ ಅತಿ ದೊಡ್ಡ ಮಿನಿ-ಮಾರ್ಟ್ ಸರಪಳಿಯಾಗಿದ್ದು, ದೇಶಾದ್ಯಂತ 2,600 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಕಂಪನಿಯ IPO ಪ್ರಾಸ್ಪೆಕ್ಟಸ್ ಪ್ರಕಾರ, ಇದು ಮಿನಿ-ಮಾರ್ಟ್ ವಿಭಾಗದಲ್ಲಿ 40% ಮಾರುಕಟ್ಟೆ ಪಾಲನ್ನು ಹೊಂದಿದೆ ಮತ್ತು ಮಲೇಷ್ಯಾದ ಒಟ್ಟಾರೆ ಕಿರಾಣಿ ಚಿಲ್ಲರೆ ಮಾರುಕಟ್ಟೆಯಲ್ಲಿ ಸುಮಾರು 12% ಅನ್ನು ಹೊಂದಿದೆ.
99 ಸ್ಪೀಡ್ ಮಾರ್ಟ್ ಏಕೈಕ ವ್ಯಾಪಾರ ಮಾತ್ರವೇ ಲೀ ಥಿಯಾಮ್ ವಾ ಅವರ ಯಶಸ್ಸಿನ ಸಾಧನೆಯಲ್ಲ. ಇವರು ತಮ್ಮ ವ್ಯಾಪಾರ ಜಗತ್ತನ್ನು ವೈವಿಧ್ಯಗೊಳಿಸಿದ್ದು, ಬರ್ಗರ್ ಕಿಂಗ್ ರೆಸ್ಟೋರೆಂಟ್‌ಗಳ ಏಕೈಕ ಮಲೇಷಿಯಾದ ಫ್ರ್ಯಾಂಚೈಸ್ ಸೇರಿದಂತೆ ಹಲವಾರು ನಿಕಟ ವ್ಯವಹಾರಗಳಲ್ಲಿ ಅವರು ಪಾಲನ್ನು ಹೊಂದಿದ್ದಾರೆ. ಲೀ ಸಂಕ್ಷಿಪ್ತವಾಗಿ ಅಲಯನ್ಸ್ ಬ್ಯಾಂಕ್ ಮಲೇಷ್ಯಾ Bhd ನಲ್ಲಿ ಅತಿ ದೊಡ್ಡ ವೈಯಕ್ತಿಕ ಷೇರುದಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದು ಒಂದು ಹಂತದಲ್ಲಿ 5% ಪಾಲನ್ನು ಹೊಂದಿದ್ದರು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications