ಭಾರತದ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಪ್ರಮುಖ ಬೆಳವಣಿಗೆ ಆಗಿದೆ. ಲಿಬರ್ಟಿ ಜನರಲ್ ಇನ್ಸೂರೆನ್ಸ್ ಲಿಮಿಟೆಡ್ (Liberty General Insurance Ltd.) ಇದೀಗ ಭಾರತದಲ್ಲಿ ಟೆಸ್ಲಾ ಕಂಪನಿಯ ಅಧಿಕೃತ ವಿಮಾದಾರರ ಪೈಕಿ ಒಂದಾಗಿದೆ. ಟೆಸ್ಲಾ ತನ್ನ ಆಧುನಿಕ ಎಲೆಕ್ಟ್ರಿಕ್ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಈ ಸಂದರ್ಭದಲ್ಲಿ, ಲಿಬರ್ಟಿಯ ಎಲೆಕ್ಟ್ರಿಕ್ ವಾಹನವಿಮಾ ಪರಿಹಾರಗಳು ಟೆಸ್ಲಾ ಮಾಲೀಕರಿಗೆ ವಿಶೇಷವಾಗಿ ರೂಪುಗೊಂಡ ಪೂರಕ ಸಂರಕ್ಷಣೆಯ ಅನುಭವವನ್ನು ನೀಡಲಿದೆ.

ಎಲೆಕ್ಟ್ರಿಕ್ ಮಾಲೀಕತ್ವದ ಭವಿಷ್ಯಕ್ಕೆ ಬೆಂಬಲ:
ಟೆಸ್ಲಾ ಮತ್ತು ಲಿಬರ್ಟಿ ನಡುವಿನ ಈ ಸಹಕಾರವು ಒಂದು ಸಾಂದರ್ಭಿಕ ದೃಷ್ಟಿಕೋಣವನ್ನು ಪ್ರತಿಬಿಂಬಿಸುತ್ತಿದೆ. ನವೀನ ತಂತ್ರಜ್ಞಾನ, ಡಿಜಿಟಲ್ ಪ್ಲಾಟ್‌ಫಾರ್ಮ್ ಆಧಾರಿತ ಸೇವೆ ಮತ್ತು ಶುದ್ಧ ಇಂಧನ ಮೂಲದ ವಾಹನಗಳನ್ನು ಸಮರ್ಥವಾಗಿ ರಕ್ಷಿಸುವ ಹೊಸ ಮಾರ್ಗವನ್ನು ರೂಪಿಸುವ ದೃಷ್ಟಿಕೋನ. ಟೆಸ್ಲಾ ಕಾರುಗಳ ಎಂಜಿನಿಯರಿಂಗ್ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ಪೂರಕವಾಗಿ ಬೆಂಬಲಿಸುವಂತೆ ಲಿಬರ್ಟಿಯ ವಿಮಾ ಯೋಜನೆಗಳನ್ನು ಕಲ್ಪಿಸಲಾಗಿದೆ.
ಮುಖ್ಯ ವೈಶಿಷ್ಟ್ಯಗಳು:
1. EV ಸುರಕ್ಷಿತ:
ಎಲೆಕ್ಟ್ರಿಕ್ ವಾಹನಗಳಿಗೆ ಅವಿಭಾಜ್ಯವಾದ ಚಾರ್ಜಿಂಗ್ ಪರಿಕರಗಳು..ವಾಲ್ ಮೌಂಟೆಡ್ ಯುನಿಟ್, ಕೇಬಲ್, ಅಡಾಪ್ಟರ್‌ಗಳಂತಹ ಸೌಕರ್ಯಗಳಿಗೂ ವಿಮಾ ಆವರಣೆ ಒದಗಿಸುತ್ತದೆ.
2. ಬ್ಯಾಟರಿ ಸುರಕ್ಷಿತ:
ವಾಹನದ ಪ್ರಮುಖ ಅಂಶವಾಗಿರುವ ಬ್ಯಾಟರಿ ಪಾಲಿಗೆ ವಿಶಿಷ್ಟ ವಿಮಾ ರಕ್ಷಣೆ. ದುರಸ್ತಿ ಅಥವಾ ಬದಲಾವಣೆ ವೆಚ್ಚಕ್ಕೂ ಪೂರಕ, ಸುದೀರ್ಘ ಅವಧಿಯ ಶಾಂತತೆಯ ಅನುಭವ ನೀಡುವ ವಿಶೇಷ ಆಡ್-ಆನ್ ಕವರ್.
3. ಲಿಬರ್ಟಿ ಸಂಪೂರ್ಣ ಸಹಾಯ:
ಎಲೆಕ್ಟ್ರಿಕ್ ಕಾರುಗಳಿಗಾಗಿ ಪ್ರತ್ಯೇಕವಾಗಿ ರೂಪುಗೊಂಡ ರಸ್ತೆಬದಿ ಸಹಾಯ ನೀಡುತ್ತದೆ. ತಕ್ಷಣದ ಚಾರ್ಜಿಂಗ್, ಫ್ಲಾಟ್‌ಬೆಡ್ ಟೋಯಿಂಗ್, ಹೈಡ್ರಾ ಸೇವೆ, ತಾತ್ಕಾಲಿಕ ವಾಸ್ತವ್ಯ ಹಾಗೂ ಮುಂದಿನ ಪ್ರಯಾಣ ವ್ಯವಸ್ಥೆಯನ್ನೊಳಗೊಂಡ ಸಂಪೂರ್ಣ ಪ್ಯಾಕೇಜ್.
ಟೆಸ್ಲಾ ಮಾಲೀಕರಿಗೆ ಎಕ್ಸಕ್ಲೂಸಿವ್ ವಿಮಾ ಆಯ್ಕೆ:
ಟೆಸ್ಲಾ ಮಾಲೀಕರ ವಿಶಿಷ್ಟ ಅಗತ್ಯಗಳನ್ನು ಪೂರೈಸುವಂತೆ ಪ್ರೀಮಿಯಂ ಆಡ್-ಆನ್ ಆಯ್ಕೆಗಳು ಲಭ್ಯವಿವೆ:
- ಫುಲ್ ಡಿಪ್ರಿಸಿಯೇಷನ್ ಶೀಲ್ಡ್
- ಗ್ಯಾಪ್ ವಾಲ್ಯೂ ರಕ್ಷಣೆ
- ಟೈರ್‌ಗಳು ಮತ್ತು ಇತರ ನಷ್ಟಪಡುವ ಉತ್ಪನ್ನಗಳ ವಿಮಾ
- ಕೀ ರಿಪ್ಲೇಸ್‌ಮೆಂಟ್ ಕವರ್
- ಪರ್ಸನಲ್ ಬೆಲಾಂಗಿಂಗ್ಸ್ ಕವರ್
- ಇಎಂಐ ಬೆಂಬಲ
- ಪ್ಯಾಸೆಂಜರ್ ಸಹಾಯ ಸೇವೆಗಳು
ಲಿಬರ್ಟಿ ಜನರಲ್ ಇನ್ಸೂರೆನ್ಸ್‌ನ ಸಿಇಒ ಮತ್ತು ಸಂಪೂರ್ಣ ಕಾಲದ ನಿರ್ದೇಶಕರಾದ ಪಾರಾಗ್ ವೇದ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಟೆಸ್ಲಾ ಭಾರತದ ಮಾರುಕಟ್ಟೆಗೆ ಪ್ರವೇಶಿಸುವುದು ಕೇವಲ ಒಂದು ಜಾಗತಿಕ ಕಾರು ಬ್ರ್ಯಾಂಡ್‌ನ ಆಗಮನವಲ್ಲ. ಇದು ಭವಿಷ್ಯದ ಚಲನೆಯ ಪ್ರಾರಂಭವಾಗಿದೆ ಎಂದಿದ್ದಾರೆ. ನಾವು ಟೆಸ್ಲಾ ಮಾಲೀಕರಿಗಾಗಿ ವಿನ್ಯಾಸಗೊಳಿಸಿರುವ ವಿಮಾ ಪರಿಹಾರಗಳು ಮೂಲದಿಂದಲೇ ಎಲೆಕ್ಟ್ರಿಕ್ ಚಾಲನೆಗೆ ತಕ್ಕಂತೆ ರೂಪುಗೊಂಡಿವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಲಿಬರ್ಟಿ ಜನರಲ್ ಇನ್ಸೂರೆನ್ಸ್ ತನ್ನ ಎಲ್ಲಾ ಯೋಜನೆಗಳನ್ನು ಇಲೆಕ್ಟ್ರಿಕ್ ವಾಹನಗಳ ಮುಂದಿನ ಹಂತದ ಅಗತ್ಯಗಳಿಗೆ ತಕ್ಕಂತೆ ರೂಪಿಸುತ್ತಿದೆ. ತಂತ್ರಜ್ಞಾನ ಮತ್ತು ನಂಬಿಕೆ ಒಂದೇ ಕಾಲದಲ್ಲಿ ಸಾಗಬೇಕು ಎಂಬ ನಿಲುವಿನಲ್ಲಿ, ಈ ಹೊಸ ತಂತ್ರಗಳು ಭಾರತೀಯ ವಾಹನ ಮಾಲೀಕರಿಗೆ ಹೆಚ್ಚು ಪೂರಕವಾಗುತ್ತವೆ.


Click it and Unblock the Notifications