ಭಾರತದ ಅತಿ ದೊಡ್ಡ ಜೀವ ವಿಮಾ ಕಂಪನಿಯಾದ ಎಲ್ಐಸಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ದೀರ್ಘಾವಧಿಯ ಸರ್ಕಾರಿ ಬಾಂಡ್‌ಗಳನ್ನು ಪರಿಚಯಿಸುವಂತೆ ಕೋರಿದೆ. ಅಂದರೆ 100 ವರ್ಷಗಳ ದೀರ್ಘಾವಧಿಯ ಸರ್ಕಾರಿ ಬಾಂಡ್‌ಗಳನ್ನು ಪರಿಚಯಿಸುವಂತೆ ವಿನಂತಿಸಿಕೊಂಡಿದೆ.
ಎಲ್‌ಐಸಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ಧಾರ್ಥ ಮೊಹಾಂತಿ ಈ ವಿಚಾರದ ಕುರಿತು ಮಾತನಾಡಿದ್ದು, ಜೀವಿತಾವಧಿಯ ಪಾಲಿಸಿಗಳನ್ನು ಮಾರಾಟ ಮಾಡುವ ವಿಮಾ ಕಂಪೆನಿಗಳಿಗೆ ದೀರ್ಘಾವಧಿಯ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಅಗತ್ಯ ಎಂದು ತಿಳಿಸಿದ್ದಾರೆ. ಆರ್‌ಬಿಐ 20-30 ವರ್ಷಗಳ ಬಾಂಡ್‌ಗಳಿಗೆ ಅನುಮತಿ ನೀಡುತ್ತಿದೆ ಇದರೊಂದಿಗೆ 40 ವರ್ಷಗಳ ಬಾಂಡ್‌ಗೆ ಸಹ ಅನುಮೋದನೆ ನೀಡಿದೆ ಎಂದು ಅವರು ಈ ವೇಳೆ ತಿಳಿಸಿದ್ದಾರೆ.

ಸಿದ್ದಾರ್ಥ್ ಮೊಹಂತಿ ಅವರು ಮುಂಬೈನಲ್ಲಿ ನಡೆದ 25 ನೇ ಜಾಗತಿಕ ವಿಮಾ ಲೆಕ್ಕಪರಿಶೋಧಕರ ಸಮ್ಮೇಳನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎಲ್.ಐ.ಸಿ. 50 ವರ್ಷಗಳ ಮತ್ತು 100 ವರ್ಷಗಳವರೆಗಿನ ದೀರ್ಘಾವಧಿಯ ಬಾಂಡ್‌ಗಳನ್ನು ಪರಿಚಯಿಸುವಂತೆ ಆರ್‌ಬಿಐ ಅನ್ನು ಆಗ್ರಹಿಸಿದೆ ಎಂದು ತಿಳಿಸಿದರು.
ಅವರು ಈ ವಿಷಯದ ಬಗ್ಗೆ ಆರ್‌ಬಿಐ ಜೊತೆ ನಿಯಮಿತವಾಗಿ ಚರ್ಚೆ ನಡೆಸುತ್ತಿರುವುದಾಗಿ ಮತ್ತು ಆರ್‌ಬಿಐ ಕೂಡ ಈ ಪ್ರಸ್ತಾಪವನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತಿದೆ ಎಂದು ತಿಳಿಸಿದರು.100 ವರ್ಷಗಳ ಬಾಂಡ್‌ಗಳ ಬಗ್ಗೆ ಮಾತನಾಡುತ್ತಾ, ಜಾಗತಿಕ ಮಾರುಕಟ್ಟೆಯಲ್ಲಿ ಇಂತಹ ಬಾಂಡ್‌ಗಳು ಲಭ್ಯವಿದ್ದರೂ, ಭಾರತದಲ್ಲಿ ಅವುಗಳ ಪರಿಚಯಕ್ಕೆ ಕೆಲವು ಸವಾಲುಗಳಿವೆ ಎಂದು ತಿಳಿಸಿದರು.
ಮುಖ್ಯವಾಗಿ, ದ್ವಿತೀಯ ಮಾರುಕಟ್ಟೆಯಲ್ಲಿ (ಸೆಕೆಂಡರಿ ಮಾರ್ಕೆಟ್) ಇಂತಹ ಬಾಂಡ್‌ಗಳಿಗೆ ಸೀಮಿತ ಬೇಡಿಕೆ ಮತ್ತು ಕಡಿಮೆ ವಹಿವಾಟು ಇರುತ್ತದೆ. ಇದರಿಂದ ಹೂಡಿಕೆದಾರರಿಗೆ ತಮ್ಮ ಬಾಂಡ್‌ಗಳನ್ನು ಸುಲಭವಾಗಿ ಮಾರಾಟ ಮಾಡಲು ಕಷ್ಟವಾಗಬಹುದು.ಇದಲ್ಲದೆ, ಇಂತಹ ದೀರ್ಘಾವಧಿಯ ಬಾಂಡ್‌ಗಳ ಮೌಲ್ಯವು ಬಡ್ಡಿದರಗಳ ಬದಲಾವಣೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಬಡ್ಡಿದರಗಳು ಏರಿದರೆ, ಬಾಂಡ್‌ಗಳ ಮೌಲ್ಯವು ಕಡಿಮೆಯಾಗುತ್ತದೆ. ಇದು ಹೂಡಿಕೆದಾರರಿಗೆ ಅಪಾಯವನ್ನು ಹೆಚ್ಚಿಸಬಹುದು. ಆದರೂ, ಭಾರತೀಯ ಜೀವ ವಿಮಾ ನಿಗಮ ದೀರ್ಘಾವಧಿಯ ಹೂಡಿಕೆದಾರರಿಗೆ, ಇಂತಹ ಬಾಂಡ್‌ಗಳು ಸ್ಥಿರ ಮತ್ತು ಭರವಸೆಯ ಆದಾಯವನ್ನು ನೀಡಬಹುದು. ಆದ್ದರಿಂದ, ಆರ್‌ಬಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಅವರು ತಿಳಿಸಿದರು.
ಸರ್ಕಾರಿ ಭದ್ರತೆಗಳಲ್ಲಿ ಈಗಾಗಲೇ ಇರುವ LIC, ಬಾಂಡ್ ಮಾರುಕಟ್ಟೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿತರಣೆಗಳಲ್ಲಿ ಐದನೇ ಒಂದು ಭಾಗಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ. 100 ವರ್ಷಗಳ ಬಾಂಡ್‌ಗಳು ಕಾರ್ಯರೂಪಕ್ಕೆ ಬಮ್ದರೆ, ವಿಮಾದಾರರು ಪ್ರಮುಖ ಖರೀದಿದಾರರಾಗುವ ನಿರೀಕ್ಷೆಯಿದೆ.
ಎಲ್.ಐ.ಸಿ. ಆರೋಗ್ಯ ವಿಮಾ(LIC Eyes Health Insurance)ಕ್ಷೇತ್ರಕ್ಕೆ ಎಂಟ್ರಿ
ಭಾರತೀಯ ಜೀವ ವಿಮಾ ನಿಗಮ ದೀರ್ಘಾವಧಿಯ ಬಾಂಡ್‌ಗಳ ಪರಿಚಯಕ್ಕೆ ಒತ್ತಾಯಿಸುತ್ತಿರುವ ಜೊತೆಗೆ, ಆರೋಗ್ಯ ವಿಮಾ ಕ್ಷೇತ್ರಕ್ಕೂ ಪ್ರವೇಶಿಸಲು ಸಜ್ಜಾಗಿದೆ. ಮಾರ್ಚ್ 31ರೊಳಗೆ ಆರೋಗ್ಯ ವಿಮಾ ಕಂಪನಿಯೊಂದರಲ್ಲಿ ಪಾಲು ಖರೀದಿಸುವ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ.
ಎಲ್.ಐ.ಸಿ. ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಸಿದ್ಧಾರ್ಥ ಮೊಹಂತಿ, "ಆರೋಗ್ಯ ವಿಮೆಯಲ್ಲಿ ಎಲ್‌ಐಸಿ ಇರುವುದು ಸಹಜ ಆಯ್ಕೆಯಾಗಿದೆ. ಚರ್ಚೆ ಅಂತಿಮ ಹಂತದಲ್ಲಿದೆ" ಎಂದು ತಿಳಿಸಿದ್ದಾರೆ. ಆದರೆ, ಅವರು ಯಾವ ಕಂಪನಿಯಲ್ಲಿ ಹೂಡಿಕೆ ಮಾಡಲಾಗುವುದು ಎಂಬುದನ್ನು ಬಹಿರಂಗಪಡಿಸಲಿಲ್ಲ.
ಒಂದು ವೇಳೆ ಎಲ್‌ಐಸಿ ಆರೋಗ್ಯ ಕ್ಷೇತ್ರಕ್ಕೆ ಪಾಲು ಖರೀದಿಯ ಮೂಲಕ ಪ್ರವೇಶಿಸಿದರೆ, ಅದು ಸ್ಟಾರ್ ಹೆಲ್ತ್ ಇನ್ಶುರೆನ್ಸ್, ಆದಿತ್ಯ ಬಿರ್ಲಾ ಹೆಲ್ತ್ ಇನ್ಶುರೆನ್ಸ್, ನಿವಾ ಬುಪಾ ಹೆಲ್ತ್ ಇನ್ಶುರೆನ್ಸ್ ಮತ್ತು ಕೇರ್ ಹೆಲ್ತ್ ಇನ್ಶುರೆನ್ಸ್‌ನಂತಹ ಕಂಪನಿಗಳೊಂದಿಗೆ ಸ್ಪರ್ಧಿಸುವುದು ಖಂಡಿತಾ
ಎಲ್.ಐ.ಸಿ. ನಿಯಂತ್ರಣ ಪಾಲನ್ನು (51% ಅಥವಾ ಅದಕ್ಕಿಂತ ಹೆಚ್ಚು) ಖರೀದಿಸಲು ಆಸಕ್ತಿ ಹೊಂದಿಲ್ಲ. ಅಂತಿಮ ಹೂಡಿಕೆಯು ಮಂಡಳಿಯ ನಿರ್ಧಾರಗಳು ಮತ್ತು ಮತದಾನದ ಹಕ್ಕುಗಳನ್ನು ಅವಲಂಬಿಸಿರುತ್ತದೆ ಎಂದು ಮೊಹಂತಿ ತಿಳಿಸಿದರು.


Click it and Unblock the Notifications