ಭಾರತದ ಪ್ರಖ್ಯಾತ ಹಾಗೂ ನಂಬಿಕಸ್ಥ ಇನ್ಶೂರೆನ್ಸ್‌ಗಳ ಪೈಕಿ ಭಾರತ ಸರ್ಕಾರ ಅಧೀನದ ಭಾರತೀಯ ಜೀವ ವಿಮಾ ನಿಗಮ (Life Insurance Corporation of India) ಪ್ರಮುಖ ಸ್ಥಾನದಲ್ಲಿದೆ. ದೇಶದ ಅಸಂಖ್ಯಾತ ಜನರು ಎಲ್‌ಐಸಿಯಲ್ಲಿ ಸದಸ್ಯರಾಗಿದ್ದು, ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದ್ದಾರೆ. ಇದೀಗ ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಏಜೆಂಟ್‌ಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮೊದಲ ವರ್ಷದ ಏಜೆಂಟ್ ಕಮಿಷನ್ ಅನ್ನು ಶೇಕಡಾ 35 ರಿಂದ 28 ಕ್ಕೆ ಇಳಿಸಿದೆ.
ಎಲ್‌ಐಸಿಗೆ ಹೊಸ ಸದಸ್ಯರನ್ನು ಮಾಡುವ ಹಂತದಲ್ಲಿ ಏಜೆಂಟರು ಕಮಿಷನ್ ಪಡೆದುಕೊಳ್ಳುವುದು ಸಾಮಾನ್ಯ ಸಂಗತಿಯಾಗಿದ್ದರೂ ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆಯೇ ಹೊಸ ಸಮಸ್ಯೆ ನಿರ್ಮಿಸಿದೆ. ಹೊಸ ಕಮಿಷನ್ ಪಾವತಿ ನಿಯಮಗಳ ವಿಚಾರದಲ್ಲಿ ಎಲ್‌ಐಸಿ ಹೊಸ ನೀತಿ ರೂಪಿಸಿರುವುದೇ ವಿವಾದಕ್ಕೆ ಕಾರಣವಾಗಿದೆ. ಏಜೆಂಟರನ್ನು ಪ್ರತಿನಿಧಿಸುವ ಸಂಘವು ಹೊಸ ಕಮಿಷನ್ ಪಾವತಿ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಒಂದು ವೇಳೆ ಹೊಸ ನಿಯಮವನ್ನು ಹಿಂಪಡೆದುಕೊಳ್ಳದಿದ್ದರೆ ದೇಶಾದ್ಯಂತ ಇರುವ ಎಲ್‌ಐಸಿ ಕಚೇರಿಗಳ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಹೊಸ ನಿಯಮಗಳು ಏನೆನ್ನುತ್ತವೆ?
ಅಕ್ಟೋಬರ್ 1 ರಿಂದ ಜಾರಿಗೆ ಬಂದ ಹೊಸ ಉತ್ಪನ್ನ ನಿಯಮಗಳು, ವಿಶೇಷವಾಗಿ ವಿಶೇಷ ಸರೆಂಡರ್ ಚಾರ್ಜ್ ನಿಬಂಧನೆಗಳಿಂದ ಜೀವ ವಿಮಾ ಕಂಪನಿಗಳಾದ್ಯಂತ ಕಮಿಷನ್ ರಚನೆಗಳಲ್ಲಿ ಪರಿಷ್ಕರಣೆ ಅಗತ್ಯವಾಗಿದೆ. ಸಹಜವಾಗಿಯೇ ಇದು ಏಜೆಂಟರಲ್ಲಿ ತೀರಾ ಅಸಮಾಧಾನಕ್ಕೆ ಕಾರಣವಾಗಿದೆ.
ಏಜೆಂಟರು ಅಸಮಾದಾನಕ್ಕೆ ಕಾರಣಗಳು?
ಜೀವ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಭಾರತದ ಹೊಸ ಉತ್ಪನ್ನ ಮಾನದಂಡಗಳಿಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ನೀತಿಗಳನ್ನು ಮರುಪರಿಶೀಲಿಸಲಾಗಿದೆ. ಆದರೆ ಏಪ್ರಿಲ್ 1 ರ ನಂತರ ನೀಡಲಾದ ಪಾಲಿಸಿಗಳು ಈಗಾಗಲೇ ಬದ್ಧವಾಗಿವೆ. ದತ್ತಿ ಯೋಜನೆ (ಎಂಡೊಮೆಂಟ್)ಗಳಲ್ಲಿ ಏಜೆಂಟ್‌ಗಳು 25 ಪ್ರತಿಶತ ಕಮಿಷನ್‌ಗಳಿಗೆ ಅರ್ಹರಾಗಿದ್ದರು. ಹೆಚ್ಚುವರಿಯಾಗಿ, 40 ಪ್ರತಿಶತದಷ್ಟು (ಕಮಿಷನ್‌ನ) ಬೋನಸ್ ಅನ್ನು ಸಹ ಪಾವತಿಸಲಾಗಿದೆ. ಆದರೆ ಹೊಸ ನಿಯಮದ ಅನ್ವಯ ಈಗ ಮೊದಲ ವರ್ಷದ ಕಮಿಷನ್ ಶೇ.20ಕ್ಕೆ ಇಳಿದಿದೆ. ಒಟ್ಟಾರೆಯಾಗಿ, ಇದರರ್ಥ ಹೊಸ ವ್ಯವಹಾರಕ್ಕಾಗಿ ನಮ್ಮ ಕಮಿಷನ್ ಗಳಿಕೆಯು 35 ಪ್ರತಿಶತದಿಂದ 28 ಪ್ರತಿಶತಕ್ಕೆ ಇಳಿಯುತ್ತದೆ ಎಂದು ಲೈಫ್ ಇನ್ಶುರೆನ್ಸ್ ಏಜೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮಲ್ ಚಕ್ರವರ್ತಿ ಅವರು ಹೊಸ ನಿಯಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಅಲ್ಲದೆ ಕ್ಲಾಬ್ಯಾಕ್ ಷರತ್ತನ್ನು ಕೂಡ ಹೊಸ ನಿಯಮಯದಲ್ಲಿ ಅನ್ವಯಿಸಲಾಗಿದೆ. ಇದರನ್ವಯ ಒಂದು ವೇಳೆ ಪಾಲಿಸಿದಾರನು ಅವಧಿಗೂ ಮುಂಚಿತವಾಗಿ ನಿರ್ಗಮಿಸಿದರೆ ಪಾವತಿಸಿದ ಕಮಿಷನ್ ಅನ್ನು ಏಜೆಂಟ್‌ನಿಂದ ಮರುಪಡೆಯಲಾಗುತ್ತದೆ. ಸರಳ ಭಾಷೆಯಲ್ಲಿ ಉದಾಹರಣೆ ಮೂಲಕ ಹೇಳುವುದಾದರೆ ವೈದ್ಯರೊಬ್ಬರು ರೋಗಿಗೆ ಎರಡು ವರ್ಷಗಳ ಕಾಲ ಚಿಕಿತ್ಸೆ ನೀಡಿದರೆ ಮತ್ತು ನಂತರ ರೋಗಿಯು ಚಿಕಿತ್ಸೆಯಿಂದ ಸಂತೋಷವಾಗಿಲ್ಲ ಮತ್ತು ಶುಲ್ಕವನ್ನು ಹಿಂತಿರುಗಿಸಲು ಬಯಸಿದರೆ ವೈದ್ಯ ಯಾವ ರೀತಿ ವರ್ತಿಸಬಲ್ಲ ಎಂಬುದು ಏಜೆಂಟರ ಸ್ಥಿತಿಯಾಗಿದೆ ಎಂದು ಚಕ್ರವರ್ತಿ ಅವರು ತಿಳಿಸಿದ್ದಾರೆ. ಹಾಗಾಗಿ ಒಟ್ಟಾರೆಯಾಗಿ ಕಮಿಷನ್ ಪಾವತಿಯಲ್ಲಿ ಇಳಿಕೆಯಿಂದಾಗಿ ಸಹಜವಾಗಿಯೇ ಏಜೆಂಟ್‌ಗಳು ಅಸಮಾಧಾನ ಹೊರಹಾಕಿದ್ದಾರೆ.
ಏಜೆಂಟರ ಮುಂದಿನ ನಡೆಯೇನು?
ಸದ್ಯ ಎಲ್‌ಐಸಿ ಹೊಸ ನೀತಿ ನಿಯಮದ ವಿರುದ್ದ ಏಜೆಂಟರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಅಲ್ಲದೆ ಹಲವು ಇತರೆ ಹಾದಿಗಳನ್ನು ಅನುಸರಿಸುವ ಮೂಲಕ ಒತ್ತಡ ಹಾಕುವ ತಂತ್ರ ಅನುಸರಿಸಲು ಮುಂದಾಗಿದೆ. ಅದೂ ಅಲ್ಲದೆ ಅಕ್ಟೋಬರ್ 29 ರಂದು ಎಲ್ಐಸಿ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳುವುದಾಗಿ ಏಜೆಂಟರು ಮುಂದಾಗಿದ್ದಾರೆ. ಒಂದು ವೇಳೆ ನಮ್ಮ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ನಾವು ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ಯೋಜಿಸುತ್ತೇವೆ. ಅಲ್ಲದೆ ನಾವು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು ಸಂಸತ ಬಳಿ ಪ್ರತಿಭಟನೆ ನಡೆಸಲು ಯೋಜಿಸಿದ್ದೇವೆ ಎಂದು ಚಕ್ರವರ್ತಿ ಅವರು ತಿಳಿಸಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ಕ್ಲಾಬ್ಯಾಕ್ ಷರತ್ತನ್ನು ಸದ್ಯದ ಮಟ್ಟಿಗೆ ಎಲ್‌ಐಸಿ ಅಳವಡಿಸಲು ಹೋಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಕೆಲವರು ಕಾದು ನೋಡುವ ತಂತ್ರ ಕೂಡ ಅಳವಡಿಸಿದ್ದಾರೆ. ʻಪಾಲಸಿದಾರನು ಪಾಲಿಸಿಯನ್ನು ಒಪ್ಪಿಸಿದರೆ, ಮೊದಲ ವರ್ಷದಲ್ಲಿ ನಮಗೆ ಪಾವತಿಸಿದ ಕಮಿಷನ್ ಅನ್ನು ಎಲ್ಐಸಿ ಹಿಂಪಡೆಯುತ್ತದೆ. ಆದರೆ ಕ್ಲಾಬ್ಯಾಕ್ ಷರತ್ತಿನ ಅನುಷ್ಠಾನಕ್ಕೆ ನಿಗಮವು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ಹಾಗಾಗಿ ಸದ್ಯಕ್ಕೆ ನಾವು ಯಾವುದೇ ಪ್ರತಿಭಟನೆಗೆ ಮುಂದಾಗುವುದಿಲ್ಲ ಎಂದು ಮುಂಬೈ ಮೂಲದ ಹಿರಿಯ ಎಲ್‌ಐಸಿ ಏಜೆಂಟರೊಬ್ಬರು ಹೇಳಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications