LIC MDs: ತಬ್ಲೇಷ್ ಪಾಂಡೆ, ಎಂ ಜಗನ್ನಾಥ್‌ ಎಲ್‌ಐಸಿಯ ನೂತನ ಎಂಡಿಗಳಾಗಿ ನೇಮಕ

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಬ್ಲೇಷ್ ಪಾಂಡೆ, ಎಂ ಜಗನ್ನಾಥ್‌ರನ್ನು ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್‌ಗಳಾಗಿ (ಎಂಡಿ) ನೇಮಕ ಮಾಡಲಾಗಿದೆ. ಮಾರ್ಚ್ 13, 2023ರಿಂದ ಜಾರಿಗೆ ಬರುವಂತೆ ಇಬ್ಬರನ್ನೂ ಎಂಡಿಗಳಾಗಿ ನೇಮಿಸಲಾಗಿದೆ. ಈ ವಾರದಲ್ಲಿ ಎಲ್‌ಐಸಿಯ ಎಂಡಿಗಳಾಗಿದ್ದ ರಾಜ್‌ ಕುಮಾರ್ ಮತ್ತು ಬಿಸಿ ಪಟ್ನಾಯಕ್ ನಿವೃತ್ತಿ ಹೊಂದಿದ್ದಾರೆ. ಆ ಸ್ಥಾನಕ್ಕೆ ಇಬ್ಬರನ್ನು ನೇಮಿಸಲಾಗಿದೆ.

"ಎಂ ಜಗನ್ನಾಥ್ ಮಾರ್ಚ್ 13, 2023ರಿಂದ ಜಾರಿಗೆ ಬರುವಂತೆ ಕಾರ್ಪೋರೇಷನ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಣೆ ಆರಂಭ ಮಾಡಿದ್ದಾರೆ," ಎಂದು ಎಲ್‌ಐಸಿ ತನ್ನ ರೆಗ್ಯೂಲಾರಿಟಿ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ. ಎಂ ಜಗನ್ನಾಥ್‌ ಹಲವಾರು ವರ್ಷಗಳಿಂದ ಎಲ್‌ಐಸಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಎಂಡಿಯಾಗಿ ನೇಮಕಗೊಳ್ಳುತ್ತಿರುವ ತಬ್ಲೇಷ್ ಪಾಂಡೆ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಿಸಿಕೊಳ್ಳಲಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ.

 ತಬ್ಲೇಷ್ ಪಾಂಡೆ, ಎಂ ಜಗನ್ನಾಥ್‌ ಎಲ್‌ಐಸಿಯ ನೂತನ ಎಂಡಿಗಳಾಗಿ ನೇಮಕ

ತಬ್ಲೇಷ್ ಪಾಂಡೆ, ಎಂ ಜಗನ್ನಾಥ್‌ ಬಗ್ಗೆ ಮಾಹಿತಿ

1988ರಲ್ಲಿ ಡೈರೆಕ್ಟ್ ರಿಕ್ರೂಟ್ ಆಫೀಸರ್ (ಡಿಆರ್‌ಒ) ಆಗಿ ಎಂ ಜಗನ್ನಾಥ್ ನೇಮಕಗೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಹಲವಾರು ಪ್ರಮುಖ ಯೋಜನೆಗಳನ್ನು, ಯಶಸ್ವಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ಸಫಲರಾಗಿದ್ದಾರೆ. ಹಾಗೆಯೇ ಎಂ ಜಗನ್ನಾಥ್ ಈ ಹಿಂದೆ ಎರ್ನಾಕುಲಂ, ಧಾರಾವಾಡ, ಬೆಂಗಳೂರಿನಲ್ಲಿ ಎಲ್‌ಐಸಿಯ ಸೀನಿಯರ್ ಡಿವಿಜಿನಲ್ ಮ್ಯಾನೇಜರ್ ಆಗಿದ್ದರು.

ಶ್ರೀಲಾಂಕದ ಕೊಲೊಂಬೊದಲ್ಲಿ 2009 ಮತ್ತು 2013ರ ನಾಲ್ಕು ವರ್ಷದ ಅವಧಿಯಲ್ಲಿ ಎಲ್‌ಐಸಿಯ ಸಿಇಒ ಮತ್ತು ಎಂಡಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು. ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಒಳಗೊಂಡ ಸೌತ್ ಸೆಂಟ್ರಲ್ ಜೋನ್, ಹೈದಾರಾಬಾದ್‌ನಲ್ಲಿ ಜೋನಲ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.

ಇನ್ನು ಸಿದ್ಧಾರ್ಥ ಮೊಹಂತಿ ಎಲ್‌ಐಸಿಯ ಮಧ್ಯಂತರ ಚೇರ್‌ಮನ್ ಆಗಿ ನೇಮಕಗೊಂಡಿದ್ದಾರೆ. ಮಾರ್ಚ್‌ 14, 2023ರಿಂದ ಜಾರಿಗೆ ಬರುವಂತೆ ಸಿದ್ಧಾರ್ಥ ಮೊಹಂತಿ ಎಲ್‌ಐಸಿಯ ಮಧ್ಯಂತರ ಚೇರ್‌ಮನ್ ಆಗಿ ನೇಮಕಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+