ಇಂದಿನ ಅನಿಶ್ಚಿತತೆಯ ಯುಗದಲ್ಲಿ ಯಾವ ಸಮಯದಲ್ಲಿ ಯಾವ ಅನಾಹುತ ಅಥವಾ ಯಾವ ದೊಡ್ಡ ಅನಿರೀಕ್ಷಿತ ಆಪತ್ತು ಎದುರಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸ, ಭವಿಷ್ಯದ ದೃಷ್ಟಿಯಿಂದ ಇನ್ಶೂರೆನ್ಸ್ ಕೂಡ ಅತೀ ಮುಖ್ಯವೆಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ (LIC) ನ ಇದಕ್ಕೆ ಸಂಬಂಧಿಸಿದ ಅನೇಕ ಪಾಲಿಸಿಗಳನ್ನು ಹೊಂದಿದ್ದು, ಅವುಗಳಲ್ಲಿ ʻಜೀವನ್ ಆನಂದ್ʼ (Jeevan Anand) ಪಾಲಿಸಿಯು ಜೀವ ದತ್ತಿ ಯೋಜನೆಯಾಗಿದ್ದು, ಪಾಲಿಸಿದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಜೀವನ್ ಆನಂದ್ ಪಾಲಿಸಿಯ ಬಗ್ಗೆ
ಜನತೆಯ ಭವಿಷ್ಯ ಭದ್ರತೆಯಿಂದ ಕೂಡಿರಲಿ ಎಂಬ ನಿಟ್ಟಿನಲ್ಲಿ LIC ಅನೇಕ ಪಾಲಿಸಿಗಳನ್ನು ಹೊಂದಿದ್ದು, ಅವುಗಳಲ್ಲಿ ಜೀವನ್ ಆನಂದ್ ಕೂಡ ಒಂದಾಗಿದೆ. ಈ ಪಾಲಿಸಿಯಲ್ಲಿ ಪ್ರೀಮಿಯಂ ಪಾವತಿ ಅವಧಿ ಪೂರ್ಣಗೊಂಡ ನಂತರವೂ ವಿಮಾ ರಕ್ಷಣೆಯು ಮುಂದುವರೆಯುವುದು ಮತ್ತೊಂದು ವಿಶೇಷ. ಅದೂ ಅಲ್ಲದೆ ಇಲ್ಲಿ ಪ್ರತಿದಿನಕ್ಕೆ 45 ರೂಪಾಯಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಪಾಲಿಸಿದಾರರು 35 ವರ್ಷಗಳ ಅವಧಿಯಲ್ಲಿ 24 ಲಕ್ಷ ರೂಪಾಯಿಗಳ ಮೊತ್ತವನ್ನು ಸಂಗ್ರಹಿಸಬಹುದಾಗಿದೆ. . ಅಲ್ಲದೆ ಈ ಯೋಜನೆಯ ಪಾಲಿಸಿಯು ಬೋನಸ್ ಮತ್ತು ಡೆತ್ ಬೆನಿಫಿಟ್ ಗಳನ್ನು ಮಾತ್ರ ಒಳಗೊಂಡಿಲ್ಲ. ಬದಲಾಗಿ ಹೆಚ್ಚುವರಿ ರಕ್ಷಣೆಗಾಗಿ ಆಕ್ಸಿಡೆಂಟಲ್ ಡೆತ್ ಮತ್ತು ಡಿಸಾಬಿಲಿಟಿ ರೈಡರ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಕೂಡ ನೀಡುತ್ತದೆ.

ಇದೂ ಅಲ್ಲದೆ ಇದಲ್ಲದೆ ಪಾಲಿಸಿಯು ನಮಗೆ ಸರಿಹೊಂದುವ ರೀತಿಯಲ್ಲಿ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಈ ಮೂಲಕ ಎರಡು ವರ್ಷಗಳ ನಂತರ ಪಾಲಿಸಿ ಸರೆಂಡರ್‌ಗೆ ಅವಕಾಶ ನೀಡುತ್ತದೆ. ಇನ್ನೂ ಸರಳವಾದ ಭಾಷೆಯಲ್ಲಿ ಹೇಳುವುದಾದರೆ ಎರಡು ವರ್ಷಗಳ ಬಳಿಕ ಮೆಚುರಿಟಿ ಅವಧಿಗೂ ಮುನ್ನವೇ ಪಾಲಿಸಿಯ ಅಂತ್ಯಗೊಳಿಸಲು ಕೂಡ ಅವಕಾಶವನ್ನು ಪಾಲಿಸಿದಾರರಿಗೆ ನೀಡುತ್ತದೆ. ಈ ಮೂಲಕ ಸುರಕ್ಷಿತ ಹಣಕಾಸು ಯೋಜನೆಯ ಮೇಲೆ ಗಮನ ಕೇಂದ್ರೀಕರಿಸಿ ಈ ಪಾಲಿಸಿಯು ವಿಶ್ವಾಸಾರ್ಹ ಆದಾಯ ಮತ್ತು ಸಮಗ್ರ ರಕ್ಷಣಾ ಯೋಜನೆಯನ್ನು ಒದಗಿಸುತ್ತದೆ.
5 ಲಕ್ಷ ರೂ.ಗಳ ಹೆಚ್ಚುವರಿ ಕವರ್ ಮೊತ್ತ
ಇನ್ನು ಒಂದು ವೇಳೆ ದುರದೃಷ್ಟಕರ ಅಪಘಾತ ಸಂದರ್ಭದಲ್ಲಿ ವ್ಯಕ್ತಿಯ ಸಾವು ಸಂಭವಿಸಿದರೆ ಪಾಲಿಸಿಯು ಹೆಚ್ಚುವರಿ ಕವರೇಜ್ ಮೊತ್ತದ ರೂಪವಾಗಿ 5 ಲಕ್ಷ ರೂ.ಗಳನ್ನು ಒದಗಿಸುತ್ತದೆ. ಅದೂ ಅಲ್ಲದೆ ಅಪಘಾತವು ಪಾಲಿಸಿದಾರನ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾದರೆ ಅಂಥ ಸಂದರ್ಭದಲ್ಲಿ ಕಂತುಗಳಲ್ಲಿ ವಿಮಾ ಮೊತ್ತವನ್ನು ಪಾವತಿಸುವ ಅವಕಾಶ ನೀಡುವ ಮೂಲಕ ನಿಯಮಿತ ಹಣಕಾಸಿನ ಅಗತ್ಯಗಳನ್ನು ಪೂರೈಸುವುದನ್ನು ಯೋಜನೆಯು ಖಾತರಿ ಪಡಿಸುತ್ತದೆ. ಇನ್ನೂ ವಿಶೇಷವೆಂದರೆ LIC ಜೀವನ್ ಆನಂದ್‌ನ ಹೆಚ್ಚುವರಿ ಪ್ರಯೋಜನ ವಿಚಾರದಲ್ಲಿ ಪ್ರೀಮಿಯಂ ಮೊತ್ತದ ಮೇಲೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.
LIC ಜೀವನ್ ಆನಂದ್ ಯೋಜನೆಯ ಪ್ರಮುಖ ವಿಶೇಷತೆಗಳು
*ಸಾಂಪ್ರದಾಯಿಕ ಎಂಡೋಮೆಂಟ್ ಪಾಲಿಸಿಯು ವಿಮಾ ಮೊತ್ತ ಮತ್ತು ಹೆಚ್ಚುವರಿ ಬೋನಸ್ ಒದಗಿಸುತ್ತದೆ
*ಜೀವಿತಾವಧಿಯಲ್ಲಿರುವಾಗ ಪಾವತಿಸಲಾಗುವ ಮೆಚುರಿಟಿ ಪ್ರಯೋಜನಗಳು ಮತ್ತು ಪಾಲಿಸಿಯು ಸಕ್ರಿಯವಾಗಿರುತ್ತದೆ
*ಒಂದು ವೇಳೆ ಪಾಲಿಸಿದಾರನ ನಿಧನದ ಸಂದರ್ಭದಲ್ಲಿ ವಿಮಾ ಮೊತ್ತವು ಆರಂಭದಲ್ಲಿ ನಾವು ಅನುಮೋದಿಸಿದ ನಾಮಿನಿ (nominee)ಗೆ ಹೋಗುತ್ತದೆ
*ವಿಮೆ ಮಾಡಿದ ವ್ಯಕ್ತಿಯ ಜೀವಿತಾವಧಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.
*ಆಯ್ಕೆಮಾಡಿದ ಅವಧಿಯ ಅಂತಿಮ ಹಂತದಲ್ಲಿ ಒಟ್ಟು ಮೊತ್ತವನ್ನು ಒದಗಿಸುತ್ತದೆ.
*ಜೀವ ವಿಮಾ ನಿಗಮದ ಲಾಭದಲ್ಲಿ ಪಾಲಿಸಿಯು ಸಕ್ರೀಯವಾಗಿ ಒಳಗೊಂಡಿರುತ್ತದೆ.
*ಈ ಪಾಲಿಸಿಯಲ್ಲಿ ಸೇರುವ ಕನಿಷ್ಠ ವಯೋಮಿತಿ 15 ಆಗಿದ್ದು, ಗರಿಷ್ಠ ವಯೋಮಿತಿ 50 ವರ್ಷಗಳಾಗಿವೆ.
*ಈ ಪಾಲಿಸಿಯು 15 ರಿಂದ 35 ವರ್ಷಗಳ ಅವಧಿಯನ್ನು ಹೊಂದಿದೆ
*ಪಾಲಿಸಿಯ ಮೂಲ ವಿಮಾ ಮೊತ್ತ 1 ಲಕ್ಷ ರೂ.ಗಳಾಗಿವೆ
*ಪಾಲಿಸಿ ಸೇರ್ಪಡೆಗೊಂಡ ಬಳಿಕ ಪಾಲಿಸಿದಾರರು ಮೂರು ವರ್ಷಗಳಲ್ಲಿ ಬಾಂಡ್ ಮೇಲೆ ಸಾಲ ಪಡೆದುಕೊಳ್ಳುವ ಅವಕಾಶ ನೀಡುತ್ತದೆ.
25 ಲಕ್ಷ ರೂ.ಗಳನ್ನು ಯಾವ ರೀತಿ ಪಡೆದುಕೊಳ್ಳಬಹುದು?
ಈ ಪಾಲಿಸಿಯು ಪ್ರತಿ ತಿಂಗಳು 1,358 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 35 ವರ್ಷಗಳಲ್ಲಿ 25 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುವ ಅವಕಾಶ ಒದಗಿಸುತ್ತದೆ. ಹೆಚ್ಚು ಕಡಿಮೆ ಇದು ದಿನಂಪ್ರತಿ 45 ರೂ.ಗೆ ಸಮಾನಾಗಿರುತ್ತದೆ. ಒಟ್ಟಾರೆಯಾಗಿ ಇದೊಂದು 15 ರಿಂದ 35 ವರ್ಷಗಳವರೆಗೆ ಅವಧಿ ಹೊಂದಿರುವ ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಹಾಗಾಗಿ ಈ ವಿಚಾರದಲ್ಲಿ ತಾಳ್ಮೆ ವಹಿಸುವುದು ಅತ್ಯಗತ್ಯವಾಗಿದೆ ಎಂದರೆ ತಪ್ಪಾಗಲಾರದು.
ಎರಡು ಬೋನಸ್‌ಗಳ ಪ್ರಯೋಜನ
ಈ ಯೋಜನೆಯು ಎರಡು ಬೋನಸ್‌ಗಳನ್ನು ಒಳಗೊಂಡಿದೆ. ಈ ಪ್ರಕಾರದಂತೆ ಒಂದು ಬೋನಸ್‌ನಲ್ಲಿ ೩೫ ವರ್ಷಗಳಲ್ಲಿ 5,70,500 ರೂ. ಒಟ್ಟು ಠೇವಣಿ ಮತ್ತು 5 ಲಕ್ಷ ರೂ. ಮೂಲ ವಿಮಾ ಮೊತ್ತವಾದರೆ ಮತ್ತೊಂದು ಬೋನಸ್‌ನಲ್ಲಿ ಮುಕ್ತಾಯದ ನಂತರ, ಪಾಲಿಸಿದಾರರು ಠೇವಣಿ ಮಾಡಿದ ಮೊತ್ತಕ್ಕೆ ಹೆಚ್ಚುವರಿಯಾಗಿ ರೂ 8.60 ಲಕ್ಷದ ಪರಿಷ್ಕರಣೆ ಬೋನಸ್ ಮತ್ತು ರೂ 11.50 ಲಕ್ಷದ ಅಂತಿಮ ಬೋನಸ್‌ಗೆ ಅರ್ಹರಾಗಿರುತ್ತಾರೆ. ಆದರೆ ಈ ಬೋನಸ್‌ಗಳಿಗೆ ಅರ್ಹತೆ ಪಡೆಯಲು ಪಾಲಿಸಿಯು ಕನಿಷ್ಠ 15 ವರ್ಷಗಳ ಅವಧಿಯನ್ನು ಹೊಂದಿರಬೇಕು. ಇದು ಅಲ್ಲದೆ ಒಂದು ವೇಳೆ ಅಪಘಾತದ ಸಮಯದಲ್ಲಿ ಪಾಲಿಸಿದಾರನ ಅಂಗವೈಕಲ್ಯಕ್ಕೆ ಈಡಾದರೆ ಹೊಸ ಟರ್ಮ್ ಇನ್ಶುರೆನ್ಸ್ ರೈಡರ್ ಮತ್ತು ಹೊಸ ಕ್ರಿಟಿಕಲ್ ಬೆನಿಫಿಟ್ ರೈಡರ್‌ನಂತಹ ಪ್ರಯೋಜನಗಳನ್ನು ಒದಗಿಸುತ್ತದೆ. ಅಲ್ಲದೆ ಪಾಲಿಸಿದಾರನ ದುರದೃಷ್ಟಕರ ಮರಣದ ಸಂದರ್ಭದಲ್ಲಿ ನಾಮಿನಿಯು ಮರಣದ ಬಳಿಕ ಸಿಗುವ ಪ್ರಯೋಜನದ 125 ಪ್ರತಿಶತದಷ್ಟು ಮೊತ್ತ ಪಡೆಯಲಿರುತ್ತಾರೆ. ಆದರೆ ಈ ನೀತಿಯಲ್ಲಿ ತೆರಿಗೆ ವಿನಾಯಿತಿಯ ಯಾವುದೇ ಪ್ರಯೋಜನವಿಲ್ಲ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications