ಪ್ರತಿಯೊಬ್ಬ ವ್ಯಕ್ತಿಯು ಆರ್ಥಿಕವಾಗಿ ಸದೃಢವಾಗಿರಲು ಮತ್ತು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಬಯಸುತ್ತಾನೆ. ಇದಕ್ಕಾಗಿ, ಅವರು ಉತ್ತಮ ಆದಾಯವನ್ನು ತರುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಹೂಡಿಕೆಗೆ ಆದಾಯವನ್ನು ನೀಡುವುದರ ಜತೆಗೆ ಜೀವ ರಕ್ಷಣೆಯನ್ನು ನೀಡುತ್ತದೆ. ಇಂದು ಭಾರತೀಯ ನಂಬಿಕೆ ಹಾಗೂ ವಿಶ್ವಾಸವನ್ನು ಗಳಿಸಿಕೊಂಡಿದ್ದು, ಯಾವು ಅಪಾಯ ಇಲ್ಲದೇ ಎಲ್‌ಐಸಿ ಅತೀ ಉತ್ತಮ ಆಯ್ಕೆ ಎಂದು ಹಲವಾರು ತಜ್ಞರುಗಳ ಅಭಿಪ್ರಾಯಪಡುತ್ತಾರೆ.
ಭಾರತೀಯ ಜೀವ ವಿಮಾ ನಿಗಮ (LIC)ವು ಅಂತಹ ಒಂದು ಯೋಜನೆಯನ್ನು ಹೊಂದಿದೆ, ಅದು LIC ಜೀವನ್ ಆನಂದ್. ಈ ಯೋಜನೆಯು ಕನಿಷ್ಠ ದೈನಂದಿನ ಉಳಿತಾಯದೊಂದಿಗೆ ದೊಡ್ಡ ಮೊತ್ತದ ನಿಧಿಯನ್ನು ಸೃಷ್ಟಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಈ ಪಾಲಿಸಿಯು ನಿಮ್ಮ ಆರ್ಥಿಕ ಭದ್ರತೆಯನ್ನು ಖಚಿತಪಡಿಸುವುದಲ್ಲದೆ, ದೀರ್ಘಾವಧಿಯ ಉಳಿತಾಯ ಯೋಜನೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯು ಹಲವಾರು ಪ್ರಯೋಜನಗಳನ್ನು ಹೊಂದಿದೆ, ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ.
ಎಲ್ಐಸಿ ಜೀವನ್ ಆನಂದ್ ಪಾಲಿಸಿ ಹೇಗೆ ಕೆಲಸ ಮಾಡುತ್ತದೆ?
ಎಲ್‌ಐಸಿಯ ನ್ಯೂ ಜೀವನ್ ಆನಂದ್ ಪ್ಲಾನ್ ಒಂದು ನಾನ್-ಲಿಂಕ್ಡ್ ಲೈಫ್ ಎಂಡೋಮೆಂಟ್ ಪ್ಲಾನ್ ಆಗಿದೆ ಅಂದರೆ ಇದು ಇದು ರಕ್ಷಣೆ ಮತ್ತು ಉಳಿತಾಯ್ ಈವೆರಡನ್ನು ಒಳಗೊಂಡ ಆಕರ್ಷಕ ಸಂಯೋಜನೆಯನ್ನು ನೀಡುತ್ತದೆ. ಪ್ರೀಮಿಯಂ ಪಾವತಿ ಅವಧಿ ಮುಗಿದ ನಂತರವೂ ಪಾಲಿಸಿದಾರರ ಜೀವಿತಾವಧಿಯಲ್ಲಿ ಸಾವಿನ ವಿರುದ್ಧ ಆರ್ಥಿಕ ರಕ್ಷಣೆಯ ಪ್ರಯೋಜನವನ್ನು ಒದಗಿಸುವುದರಿಂದ ಎಲ್‌ಐಸಿ ನ್ಯೂ ಜೀವನ್ ಆನಂದ್ ಪ್ಲಾನ್ ಜನಪ್ರಿಯತೆಯನ್ನು ಗಳಿಸಿದೆ. ಅಲ್ಲದೆ, ಪಾಲಿಸಿಯು ಹೊಂದಿಕೊಳ್ಳುವ ಪ್ರೀಮಿಯಂ ಪಾವತಿ ಆಯ್ಕೆಯನ್ನು ಒದಗಿಸುತ್ತದೆ. ಪಾಲಿಸಿದಾರರು ಎರಡು ವರ್ಷಗಳ ಕಾಲ ಪ್ರೀಮಿಯಂಗಳನ್ನು ಪಾವತಿಸಿದ ನಂತರ ಪಾಲಿಸಿಯನ್ನು ಸರೆಂಡರ್ ಮಾಡಬಹುದು.
ಪ್ರತಿದಿನದ ಕೊಡುಗೆ ಲೆಕ್ಕಾಚಾರ: 25 ವರ್ಷಗಳ ಕಾಲ ದಿನಕ್ಕೆ ₹ 80 ರೂ. ಯಂತೆ ಎತ್ತಿಟ್ಟರೆ ತಿಂಗಳಿಗೆ ₹ 2400 ಕ್ಕೆ ಸಮನಾದ ಮೊತ್ತವಾಗಿತ್ತದೆ. ಇದನ್ನು ನೀವು ಹೂಡಿಕೆ ಮಾಡಿದರೆ ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ ಮುಂದೆ ದೊಡ್ಡ ಫಂಡ್ ಒಟ್ಟುಗೂಡಿಸುವ ಪಡೆಯುವ ಹಾದಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೀರಿ.
ಹೂಡಿಕೆ ಅವಧಿ: ಕೇವಲ 2 ವರ್ಷಗಳಲ್ಲಿ, ನಿಮ್ಮ ಉಳಿತಾಯದ ಮೇಲಿನ ಬಡ್ಡಿ ಮತ್ತು ಬೋನಸ್‌ಗಳು ನಿಮ್ಮ ಹೂಡಿಕೆಯನ್ನು ಸುಮಾರು ₹7.20 ಲಕ್ಷಗಳಿಗೆ ಹೆಚ್ಚಿಸುತ್ತವೆ.
ಅಂತಿಮ ಮೆಚ್ಯೂರಿಟಿ ಮೊತ್ತ: 25 ವರ್ಷಗಳ ಅಂತ್ಯದ ವೇಳೆಗೆ, LIC ಯಿಂದ ಬಡ್ಡಿ ಮತ್ತು ಬೋನಸ್‌ಗಳೊಂದಿಗೆ, ನಿಮ್ಮ ಒಟ್ಟು ನಿಧಿ ಸುಮಾರು ₹10 ಲಕ್ಷಗಳನ್ನು ತಲುಪುತ್ತದೆ, ಇದು ಮುಂದೆ ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಲು ಸಹಾಯ ಮಾಡುತ್ತದೆ.
ಎಲ್ಐಸಿ ಜೀವನ್ ಆನಂದ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣಗಳು
ಕೈಗೆಟುಕುವ ದೈನಂದಿನ ಕೊಡುಗೆ: ದಿನಕ್ಕೆ ಕೇವಲ ₹80 (ತಿಂಗಳಿಗೆ ₹2400 ಕ್ಕಿಂತ ಸ್ವಲ್ಪ ಹೆಚ್ಚು) ನೊಂದಿಗೆ, ಒಬ್ಬರು ಹೂಡಿಕೆ ಮಾಡಬಹುದು ಇದರಿಂದ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಹಾಯವಾಗುತ್ತದೆ.
ಖಾತರಿಯ ಆದಾಯ: ನಿಮ್ಮ ಉಳಿತಾಯವು LIC ನೀಡುವ ಬಡ್ಡಿ ಮತ್ತು ಬೋನಸ್‌ಗಳ ಬಲದಿಂದ ಬೆಳೆಯುತ್ತದೆ, ನಿಮ್ಮ ಹೂಡಿಕೆಯ ಮೇಲೆ ಆಕರ್ಷಕ ಲಾಭವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
ದೀರ್ಘಕಾಲೀನ ಆರ್ಥಿಕ ಭದ್ರತೆ: ಈ ನೀತಿಯು ಕೇವಲ ಹಣವನ್ನು ಉಳಿಸುವುದರ ಮಾತ್ರವಲ್ಲದೇ ಇದು ದೀರ್ಘಾವಧಿಯಲ್ಲಿ ಆರ್ಥಿಕ ಸ್ಥಿರತೆಯನ್ನು ಭದ್ರಪಡಿಸುತ್ತದೆ
ಎಲ್ಐಸಿ ನ್ಯೂ ಜೀವನ್ ಆನಂದ್ ಪಾಲಿಸಿ: ಅರ್ಹತೆ
ಎಲ್ಐಸಿ ನ್ಯೂ ಜೀವನ್ ಆನಂದ್ ಪಾಲಿಸಿಗೆ ಕನಿಷ್ಠ ಪ್ರವೇಶ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ಪ್ರವೇಶ ವಯಸ್ಸು 50 ವರ್ಷಗಳು. ಇದರರ್ಥ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರು ಈ ಪಾಲಿಸಿಯನ್ನು ಖರೀದಿಸಲು ಸಾಧ್ಯವಿಲ್ಲ. ಅಲ್ಲದೆ, ಪಾಲಿಸಿದಾರರ ಗರಿಷ್ಠ ಮೆಚ್ಯೂರಿಟಿ ವಯಸ್ಸನ್ನು 75 ವರ್ಷಗಳಿಗೆ ನಿಗದಿಪಡಿಸಲಾಗಿದೆ.


Click it and Unblock the Notifications