ನವದೆಹಲಿ, ಏಪ್ರಿಲ್ 6: ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಯಾರು ಗೊತ್ತಾ? ಅವರೇ ಬ್ರೆಜಿಲ್‌ನ ಲಿವಿಯಾ ವೊಯ್ಗ್ಟ್ ಅವರಿಗೆ ಇದೀಗ ಕೇವಲ 19 ವರ್ಷವಾಗಿದೆ. ಹೌದು ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾಗಿರುವುದು ಅಪರೂಪದ ಸಾಧನೆ. ಕಿರಿಯ ಬಿಲಿಯನೇರ್ ಗ ಳ ಕೆಲವರು ಕೆಲವು ಸ್ವಯಂ ನಿರ್ಮಿತವಾಗಿದ್ದರೆ, ಇನ್ನು ಕೆಲವರು ತಮ್ಮ ಕುಟುಂಬದಿಂದ ಪಾಲಿನಿಂದಲೋ ಸಿರಿವಂತರಾಗಿದ್ದಾರೆ.
ಫೋರ್ಬ್ಸ್ ಇತ್ತೀಚೆಗೆ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, , ಇದು ಬ್ರೆಜಿಲ್‌ನಲ್ಲಿ ವಿದ್ಯಾರ್ಥಿನಿಯಾಗಿರುವ ಲಿವಿಯಾ ವೊಯ್ಗ್ಟ್ ಅವರನ್ನು ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಎಂದು ಹೆಸರಿಸಿದೆ. ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಯುವಜನತೆಯೂ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, 25 ಕಿರಿಯ ಬಿಲಿಯನೇರ್‌ಗಳೆಲ್ಲರೂ 33 ಅಥವಾ ಅದಕ್ಕಿಂತ ಕಡಿಮೆ ವಯಸ್ಸುಳ್ಳವರಾಗಿದ್ದಾರೆ. ಇವರ ಒಟ್ಟಾರೆ ಸಂಪತ್ತು 110 ಶತಕೋಟಿ ಡಾಲರ್ ಎಂದು ಫೋರ್ಬ್ಸ್ ತಿಳಿಸಿದೆ.

ಲಿವಿಯಾ ವೊಯ್ಗ್ಟ್ ಹಿನ್ನಲೆ:
19 ವರ್ಷ ವಯಸ್ಸಿನವರಾಗಿರುವ ಲಿವಿಯಾ ವೊಯ್ಗ್ಟ್ ಅಂದಾಜು $1.1 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಭಾರತೀಯ ರೂ.ಗಳಲ್ಲಿ ಇದು 9100 ಕೋಟಿ ರೂ. ಆಗಿದೆ. ಲಿವಿಯಾ ವೊಯ್ಗ್ಟ್ ಮಾತ್ರವಲ್ಲದೇ ಅವರ 26 ವರ್ಷದ ಅಕ್ಕ ಡೋರಾ ವೊಯ್ಗ್ಟ್ ಡಿ ಅಸಿಸ್ ಕೂಡಾ ಇಬ್ಬರೂ ಫೋರ್ಬ್ಸ್ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯ ಭಾಗವಾಗಿದ್ದಾರೆ. ಅವರು $1.1 ಶತಕೋಟಿ ನಿವ್ವಳ ಸಂಪತ್ತನ್ನೂ ಹೊಂದಿದ್ದು ಅವರು 2020 ರಲ್ಲಿ ಆರ್ಕಿಟೆಕ್ಚರ್ ಪದವಿಯನ್ನು ಪಡೆದಿದ್ದಾರೆ.
2022 ರಲ್ಲಿ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಇಟಾಲಿಯನ್ ಆಗಿರುವ ಕ್ಲೆಮೆಂಟೆ ಡೆಲ್ ವೆಚಿಯೊ ಅವರಿಗಿಂತಲೂ ಕಿರಿಯೆ ಎಂಬ ಬಿರುದನ್ನು ಲಿವಿಯಾ ವೊಯ್ಗ್ಟ್ ಪಡೆದುಕೊಂಡಿದ್ದು, ಕ್ಲೆಮೆಂಟೆ ಅವರು ಲಿವಿಯಾ ಅವಗಿಂತ ಕೇವಲ ಎರಡು ತಿಂಗಳು ದೊಡ್ಡವರಾಗಿದ್ದಾರೆ.
ಲಿವಿಯಾ ಅವರು, ಎಲೆಕ್ಟ್ರಿಕಲ್ ಉಪಕರಣಗಳ ನಿರ್ಮಾಪಕ ಡಬ್ಲ್ಯೂ ಜಿ ನಲ್ಲಿ ಕೊಂಚ ಪಾಲನ್ನು ಹೊಂದಿದ್ದಾಳೆ, ಇದನ್ನು ಅವರ ದಿವಂಗತ ಅಜ್ಜ ವರ್ನರ್ ರಿಕಾರ್ಡೊ ವೊಯ್ಗ್ಟ್ ಮತ್ತು ದಿವಂಗತ ಬಿಲಿಯನೇರ್‌ಗಳಾದ ಎಗ್ಗೊನ್ ಜೊವಾ ಡಾ ಸಿಲ್ವಾ ಮತ್ತು ಗೆರಾಲ್ಡೊ ವೆರ್ನಿಂಗ್‌ಹಾಸ್ ಸಹ-ಸ್ಥಾಪಿಸಿದ್ದರು.
ಲ್ಯಾಟಿನ್ ಅಮೆರಿಕದ ಅತಿದೊಡ್ಡ ಎಲೆಕ್ಟ್ರಿಕಲ್ ಮೋಟಾರ್ ತಯಾರಕರಲ್ಲಿ ಒಬ್ಬರಾದ WEG ಯಲ್ಲಿ ಲಿವಿಯಾ ವೊಯ್ಗ್ಟ್ ಅತಿದೊಡ್ಡ ವೈಯಕ್ತಿಕ ಷೇರುದಾರರಲ್ಲಿ ಒಬ್ಬರು.
ಲಿವಿಯಾ ಪ್ರಸ್ತುತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿದ್ದು ಅವರು ಇನ್ನೂ ಕಂಪನಿಯ ಮಂಡಳಿಯ ಭಾಗವಾಗಿಲ್ಲ.
ಡಬ್ಲ್ಯೂ ಜಿ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಬಹುರಾಷ್ಟ್ರೀಯ ಕಂಪನಿಯಾಗಿದ್ದು ಅದು ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಖಾನೆಗಳನ್ನು ಹೊಂದಿದೆ. ಇದು 2022 ರಲ್ಲಿ ಸರಿಸುಮಾರು $6 ಬಿಲಿಯನ್ ಆದಾಯವನ್ನು ಹೊಂದಿತ್ತು.
ಭಾರತದಲ್ಲಿ, ಈ ವರ್ಷ ಫೋರ್ಬ್ಸ್ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಬಿಲಿಯನೇರ್‌ಗಳೆಂದರೆ ಝೆರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್.ನಿಖಿಲ್ ಕಾಮತ್ 37ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆಗಿದ್ದು, ಇವರ ಸಂಪತ್ತು 3.1 ಬಿಲಿಯನ್ ಡಾಲರ್. ಇವರ ಹಿರಿಯ ಸಹೋದರ ನಿತಿನ್ ಕಾಮತ್ ಅವರ ವಯಸ್ಸು 44. ಇವರ ಸಂಪತ್ತು 4.8 ಬಿಲಿಯನ್ ಡಾಲರ್. ಕಾಮತ್ ಸಹೋದರರ ನಿವ್ವಳ ಮೌಲ್ಯ ಕಳೆದ ಒಂದು ವರ್ಷದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.


Click it and Unblock the Notifications