ಬೆಂಗಳೂರು, ಆಗಸ್ಟ್ 18: ಹಣದುಬ್ಬರವು ಸಮಾಜದ ಪ್ರತಿಯೊಂದು ವರ್ಗವನ್ನುಕಾಡುತ್ತಿದೆ. ಅದರಲ್ಲೂ ಮಾಸಿಕ ವೇತನವನ್ನು ನಂಬಿಕೊಂಡು ಕೆಲಸ ಮಾಡುವ ವ್ಯಕ್ತಿಗಳಿಗೆ ಹಣದುಬ್ಬರದಿಂದ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯೂ ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಣದುಬ್ಬರವು ದೇಶದ ಆರ್ಥಿಕತೆಗೆ ಕಳವಳಕಾರಿಯಾಗಿರುತ್ತದೆ.
ಅಗತ್ಯ ವಸ್ತುಗಳು, ಸೇವೆಗಳು, ಇಂಧನ ಹೀಗೆ ಎಲ್ಲ ದರಗಳೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುವಂತೆ ಶಿಕ್ಷಣ ವೆಚ್ಚವೂ ಭಾರತದಲ್ಲಿ ಏರುಮುಖವಾಗಿದೆ. ಹಣದುಬ್ಬರ ಎಲ್ಲರನ್ನೂ ಹೈರಾಣಾಗಿಸಿದ್ದು ಈ ವಿಚಾರವಾಗಿ ಎಲ್ಲರೂ ಚರ್ಚೆಗಳನ್ನು ಮಾಡೋದು ಸಾಮಾನ್ಯವಾಗಿದೆ. ಆದರೆ ಶಿಕ್ಷಣ ವಲಯದಲ್ಲಿ ನಡೆಯುತ್ತಿರುವ ನಿಜವಾದ ಹಣದುಬ್ಬರವನ್ನು, ಬೆಲೆ ಏರಿಕೆಯ ವಿಚಾರ ಬಗ್ಗೆ ಯಾರು ಹೆಚ್ಚಾಗಿ ಚರ್ಚಿಸುವುದಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ಹೂಡಿಕೆ ಮಾಡುತ್ತಿರುವ ವ್ಯಕ್ತಿಯೊಬ್ಬರುಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಪೋಸ್ಟ್ ಶಿಶುವಿಹಾರ ,ಎಲ್‌ಕೆಜಿ, ಮಟ್ಟದಲ್ಲೇ ಶಾಲಾ ಶುಲ್ಕದಲ್ಲಿ ತೀವ್ರ ಏರಿಕೆಯನ್ನು ಬೊಟ್ಟು ಮಾಡುವಂತಿದೆ.

ಖಾಸಗಿ ಶಾಲೆಗಳಂತೂ ಶಿಕ್ಷಣವನ್ನು ಉದ್ಯಮದ ರೀತಿ ಪರಿಗಣಿಸಿರುವ ಪರಿಣಾಮ ದುಬಾರಿ ಶುಲ್ಕ ಪೋಷಕರ ಪಾಲಿಗೆ ಬಿಸಿತುಪ್ಪವಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವಿರಾಲ್ ಭಟ್ನಾಗರ್ ಎಂಬ ಖಾತೆಯಲ್ಲಿ , "ರಿಯಲ್ ಎಸ್ಟೇಟ್‌ಗಿಂತ ಶಿಕ್ಷಣದಲ್ಲಿ ' ನೈಜ ಹಣದುಬ್ಬರ ' ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ. ಹೈದರಾಬಾದ್‌ನಲ್ಲಿ ಎಲ್‌ಕೆಜಿ ವಾರ್ಷಿಕ ಶುಲ್ಕವು ₹ 2.3 ಲಕ್ಷದಿಂದ ₹ 3.7 ಲಕ್ಷಕ್ಕೆ ಏರಿದೆ ಎಂದು ಬರೆದುಕೊಂಡಿದ್ದಾರೆ.
"ಹೈದರಾಬಾದ್‌ನಲ್ಲಿ LKG ಶುಲ್ಕವು ₹ 2.3 ಲಕ್ಷದಿಂದ ₹ 3.7 ಲಕ್ಷಕ್ಕೆ ಏರಿದೆ. ಇದು ಕೇವಲ ಇಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಈ ರೀತಿಯ ಬೆಳವಣಿಗೆಗಳಾಗುತ್ತಿವೆ. ನಾವು ಸಾಮಾನ್ಯವಾಗಿ ಮನೆ/ ಪ್ಲ್ಯಾಟ್ ಗಳ ಬೆಲೆಗಳ ಮೇಲೆ ಕೇಂದ್ರೀಕರಿಸಿದಾಗ, ಶಿಕ್ಷಣದಲ್ಲಿ ನಿಜವಾದ ಹಣದುಬ್ಬರ ಸಂಭವಿಸಿದೆ. ಶಾಲಾ ಶುಲ್ಕಗಳು 9 ಪಟ್ಟು ಹೆಚ್ಚಾಗಿದೆ. ಕಳೆದ 30 ವರ್ಷಗಳಲ್ಲಿ ಕಾಲೇಜು ಶುಲ್ಕಗಳು 20 ಪಟ್ಟು ಹೆಚ್ಚಾಗಿದೆ, ಶಿಕ್ಷಣವು ಕೈಗೆಟುಕುವಂತಿಲ್ಲ. ಹಣದುಬ್ಬರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಾಗಿದೆ ಎಂದು ಭಟ್ನಾಗರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅವರ ಈ ಟ್ವೀಟ್ 335.4k ಲೈಕ್‌ಗಳನ್ನು ಗಳಿಸಿದ್ದು 785 ಬಾರಿ ರೀಟ್ವೀಟ್ ಆಗಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಈ ಬಗ್ಗೆ ಕಾಮೆಂಟ್ ಮಾಡಿ ಭಟ್ನಾಗರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಪೈಕಿ ಮನೋಜ್ ಅರೋರಾ ಬರೆದಿದ್ದಾರೆ, "ಆಹಾರ, ಆರೋಗ್ಯ ಮತ್ತು ಶಿಕ್ಷಣ - ಈ ಪ್ರತಿಯೊಂದು ವೆಚ್ಚಗಳು ಯಾವುದೇ ಮಧ್ಯಮ ವರ್ಗದ ಕುಟುಂಬದಲ್ಲಿ 70% ಕ್ಕಿಂತ ಹೆಚ್ಚಾಗಿರುತ್ತದೆ. ಈ ಎಲ್ಲಾ ಮೂರು ಹಣದುಬ್ಬರಗಳ ಹಣದುಬ್ಬರವು ವಾರ್ಷಿಕವಾಗಿ ಹೆಚ್ಚು ಕಡಿಮೆ 10-20% ಆಗಿರುತ್ತದೆ. ಆದರೆ ಸರ್ಕಾರದ ಹಣದುಬ್ಬರ ಕುರಿತು CPI ಹಣದುಬ್ಬರ 3-4% ಎಂದೇ ಜನತೆಗೆ ಹೇಳುತ್ತಿರುತ್ತದೆ. ನಿಮ್ಮ ಹಣಕಾಸಿನ ಸ್ವಾತಂತ್ರ್ಯದ ಪ್ರಯಾಣಕ್ಕಾಗಿ ನೀವು ಈ ಪೈಕಿ ಯಾವ ಹಣದುಬ್ಬರವನ್ನು ಪರಿಗಣಿಸುತ್ತೀರಿ ಎಂಬುದರ ಬಗ್ಗೆ ಬಹಳ ಜಾಗೃತರಾಗಿರಿ" ಎಂದು ಬರೆದುಕೊಂಡಿದ್ದಾರೆ.
ಸಿಎಂಎ ವೆಂಕಟೇಶ್ ಅವರು , "ಬೇಸರದಾಯಕ ಸಂಗತಿ ಅಂದ್ರೆ, ಈ ಕೇಂದ್ರ ಸರ್ಕಾರ ಶಿಕ್ಷಣ ಮತ್ತು ಆಸ್ಪತ್ರೆಗಳ ಬೆಲೆಯನ್ನು ನಿಯಂತ್ರಿಸದೆ ಸುಮ್ಮನೆ ಕುಳಿತು ತೆರಿಗೆಯನ್ನು ಹೆಚ್ಚಿಸುತ್ತಲೇ ಇದೆ. ಇವರು ಯಾವ ರೀತಿಯ ಪ್ರಧಾನಮಂತ್ರಿ ಮತ್ತು ಹಣಕಾಸು ಮಂತ್ರಿ . ಹಿಂದಿನ ಸರ್ಕಾರಗಳಲ್ಲಿ ನನ್ನ ಜೀವನದಲ್ಲಿ ಈ ರೀತಿ ಕೆಟ್ಟ ಆಡಳಿತ ಅನುಭವಿಸಿರಲಿಲ್ಲ. ಮುಂದಿನ 4 ರಿಂದ 5 ವರ್ಷಗಳ ಕಾಲ ಭಾರತದ ಭವಿಷ್ಯ ಕೆಟ್ಟ ಕೈಯಲ್ಲಿದೆ" ಎಂದು ಬರೆದಿದ್ದಾರೆ.
"ಈ ಸಮಸ್ಯೆ ಕೈ ಮೀರಿದೆ ಮತ್ತು ಯಾರೂ ಇದರ ಮೇಲೆ ಕಣ್ಣಿಟ್ಟಿಲ್ಲ. ಹಣಕಾಸು ಸಚಿವರೇ ಮಧ್ಯಮ ವರ್ಗವನ್ನು ನೀವು ಸಂತೋಷವಾಗಿರಿಸಲು ಬಯಸಿದರೆ, ಇದನ್ನು ಸರಿಪಡಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಿ," ಎಂದು ಮಿಹಿರ್ ಕುಲಕರ್ಣಿ ಎಂಬವರು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications