For Quick Alerts
ALLOW NOTIFICATIONS  
For Daily Alerts

EMI ಮುಂದೂಡಿಕೆ ಅವಧಿ: ಬಡ್ಡಿ ಮನ್ನಾ ಮಾಡಲ್ಲ ಎಂದ ಎಸ್‌ಬಿಐ

|

ನವದೆಹಲಿ, ಜೂನ್ 13: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ಸಾಲಗಳ ಇಎಂಐ ಕಟ್ಟಲು ಆರು ತಿಂಗಳು ಮುಂದೂಡಿದ ಅವಕಾಶವನ್ನು ಆರ್‌ಬಿಐ ಕೊಟ್ಟಿದೆ. ಆದರೆ, ಈ ಆರು ತಿಂಗಳಲ್ಲಿ ಬಡ್ಡಿಯನ್ನೂ ಮನ್ನಾ ಮಾಡಬೇಕು ಎಂಬುದು ಹಲವಾರು ಕಡೆಯಿಂದ ಒತ್ತಾಯ ಕೇಳಿ ಬರುತ್ತಿದೆ.

ಈ ಬಗ್ಗೆ ಶುಕ್ರವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮರುಪಾವತಿ ನಿಷೇಧದ ಆರು ತಿಂಗಳವರೆಗೆ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜುಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು

ಸಾಲ ಮರುಪಾವತಿಯ ಮೇಲಿನ ನಿಷೇಧದ ಸಂದರ್ಭದಲ್ಲಿ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯ ಬಗ್ಗೆ ಎಸ್‌ಬಿಐ, ಬಡ್ಡಿ ಮನ್ನಾ ಮಾಡಲಾಗುವುದಿಲ್ಲ ಎಂದು ಹೇಳಿದೆ.

EMI ಮುಂದೂಡಿಕೆ ಅವಧಿ: ಬಡ್ಡಿ ಮನ್ನಾ ಮಾಡಲ್ಲ ಎಂದ ಎಸ್‌ಬಿಐ

ಬಡ್ಡಿ ಮನ್ನಾ ಕುರಿತಂತೆ ಮೂರು ದಿನಗಳಲ್ಲಿ ವಿವರವಾದ ಉತ್ತರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಪ್ರಕರಣವನ್ನು ಜೂನ್ 17 ರಂದು ಸುಪ್ರೀಂಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ.ಕೌಲ್ ಮತ್ತು ಎಮ್.ಆರ್.ಶಾ ಅವರು ಅರ್ಜಿಯ ವಿಚಾರಣೆ ನಡೆಸಿದ್ದರು.

English summary

Loan Interest Can't Be Waived, SBI Tells Supreme Court

Loan interest No Waived: State Bank Of India Tells Top Court.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X