ಬೆಂಗಳೂರು, ಜೂನ್ 4: ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದು ಕೊಡುವ ಅಬಕಾರಿ ಇಲಾಖೆ ಕೊರೊನಾವೈರಸ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಜಾರಿದೆ. ಕಳೆದ 72 ದಿನ ನಿರಂತರವಾಗಿ ಲಾಕ್‌ಡೌನ್ ಪರಿಣಾಮ ಅಬಕಾರಿ ಇಲಾಖೆಗೆ ಹರಿದು ಬರುತ್ತಿದ್ದ ಆದಾಯ ಖೋತಾ ಆಗಿದೆ.
ಕಳೆದ ಮೇ ನಲ್ಲಿ 48 ದಿನಗಳ ಲಾಕ್‌ಡೌನ್ ಬಳಿಕ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಕೂಲ ಕಲ್ಪಿಸಿತು. ಮದ್ಯ ಮಾರಾಟದಲ್ಲಿ ಏರುಗತಿ ಕಂಡರೂ, ನಿರೀಕ್ಷಿಸಿದ ಆದಾಯ ಬಂದಿಲ್ಲ ಎಂದು ಅಬಕಾರಿ ಮೂಲಗಳು ತಿಳಿಸುತ್ತವೆ. ಬೊಕ್ಕಸಕ್ಕೆ ಹಣ ಹರಿದು ಬರಲಿ ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಕೆಲವು ಷರತ್ತುಗಳ ಮೇಲೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ, ಬಿಯರ್ ಮಾರಾಟ ಸಂಪೂರ್ಣ ಕುಸಿದಿರುವುದಾಗಿ ಅಬಕಾರಿ ಇಲಾಖೆ ಹೇಳಿದೆ.
ಕೊರೊನಾ ಹಾವಳಿಯಿಂದ ರಾಜ್ಯದಲ್ಲಿ ಬಿಯರ್ ಮಾರಾಟ ಶೇ 72 ರಷ್ಟು ಕುಸಿತ ಕಂಡಿರುವುದರಿಂದ ಬಿಯರ್ ಮಾರಾಟದಿಂದ ಬರುತ್ತಿದ್ದ ಆದಾಯ ಖೋತಾ ಆಗಿದೆ.
ಕೇವಲ 9.26 ಲಕ್ಷ ಬಿಯರ್ ಬಾಕ್ಸ್ ಮಾರಾಟ
ಲಾಕ್‌ಡೌನ್ ನಿಂದ ಜನ ಮನೆಯಲ್ಲಿದ್ದಾರೆ. ಬಾರ್, ಪಬ್‌ಗಳು ಮುಚ್ಚಿವೆ. ಇದರಿಂದ ಬಿಯರ್ ಪ್ರಿಯರು ಬಿಯರ್‌ನಿಂದ ದೂರ ಹೋದಂತಾಗಿದೆ. ಕಳೆದ ವರ್ಷದ ಮೇ 1 ರಿಂದ 31 ರವರೆಗೆ 21.31 ಲಕ್ಷ ಬಿಯರ್ ಬಾಕ್ಸ (ಕೇಸ್) ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 9.26 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿವೆ.
ಕಾರಣ ಏನು?
ಬಿಯರ್ ಮಾರಾಟದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆ ಕಾಣುವುದಕ್ಕೆ ಕೊರೊನಾ ಲಾಕ್‌ಡೌನ್ ಬಹುಮುಖ್ಯ ಕಾರಣವಾಗಿದೆ. ಬಾರ್ ರೆಸ್ಟೊರಂಟ್ ಹಾಗೂ ಪಬ್ ಗಳು ಮುಚ್ಚಿರುವುದರಿಂದ ಬಿಯರ್ ಪ್ರಿಯರು ಬಿಯರ್‌ನಿಂದ ದೂರ ಉಳಿಯುವಂತಾಗಿದೆ. ಅಲ್ಲದೇ, ಬಿಯರ್ ದರವೂ ಹೆಚ್ಚಳವಾಗಿರುವುದು ಒಂದು ಕಾರಣವಾಗಿದೆ. ದೇಶಿ ಮದ್ಯವೇ ಜಾಸ್ತಿ ಮಾರಾಟವಾಗುತ್ತಿದೆ.
ಅವಧಿ ಮೀರಿದ ಬಿಯರ್‌ಗಳನ್ನು ನಾಶಪಡಿಸಲೇಬೇಕಾಗುತ್ತದೆ
ಲಾಕ್‌ಡೌನ್ ನಿಂದ ಮದ್ಯ ಮಾರಾಟಕ್ಕೆ 48 ದಿನ ಬ್ರೇಕ್ ಬಿದ್ದಿತ್ತು. ಹೀಗಾಗಿ 3.2 ಲಕ್ಷ ಲೀಟರ್ ಬಿಯರ್ ಉಗ್ರಾಣಗಳಲ್ಲಿ ಶೇಕರಿಸಿಡಲಾಗಿತ್ತು. ಸದ್ಯ ಬಿಯರ್ ಹೆಚ್ಚು ಮಾರಾಟವಾಗುತ್ತಿಲ್ಲವಾದ್ದರಿಂದ ಅವಧಿ ಮೀರಿದ ಬಿಯರ್‌ಗಳನ್ನು ನಾಶಪಡಿಸಲೇಬೇಕಾಗುತ್ತದೆ. ಬಿಯರ್ ಬಾಟಲ್ ಅವಧಿ ಆರು ತಿಂಗಳು ಮಾತ್ರ ಆಗಿರುತ್ತದೆ.
40 ಕೋಟಿ ರುಪಾಯಿಯ ಬಿಯರ್ ನಾಶ
ಕಳೆದ ವರ್ಷ ಸುಮಾರು 40 ಕೋಟಿ ರುಪಾಯಿಯ ಬಿಯರ್ ನಾಶ ಪಡಿಸಲಾಗಿತ್ತು. ಈ ವರ್ಷ ಇದು ಇನ್ನೂ ಹೆಚ್ಚಾಗುವ ಸಂಭವವಿದೆ. ಲಾಕ್‌ಡೌನ್ ಪರಿಣಾಮವಾಗಿ ಮಾರಾಟವಾಗದೇ ಉಳಿದಿರುವ ಬಿಯರ್ ಅವಧಿ ಮುಗಿಯುತ್ತಾ ಬರುತ್ತಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications