ಮನೆ ಕಟ್ಟುವುದು ಪ್ರತಿಯೊಬ್ಬ ಮನುಷ್ಯನ ಮಹತ್ವಾಕಾಂಕ್ಷೆಯ ಕನಸಾಗಿದ್ದು, ಎಲ್ಲಾ ರೀತಿಯಲ್ಲೂ ಈ ಕನಸನ್ನು ಸಾಕಾರಗೊಳಿಸಲು ಆತ ಪ್ರಯತ್ನಿಸುತ್ತಿರುತ್ತಾನೆ. ಅದೂ ಅಲ್ಲದೆ ಇದನ್ನು ಸಾಕಾರಗೊಳಿಸಲು ಹಲವು ಬ್ಯಾಂಕ್‌ಗಳು ಕೂಡ ಹಲವು ವಿಧಗಳ ಮನೆ ಸಾಲಗಳನ್ನು ಕೂಡ ಕಡಿಮೆ ಬಡ್ಡಿದರದಲ್ಲಿ ಒದಗಿಸುತ್ತದೆ.
ವಿವಿಧ ಬ್ಯಾಂಕ್‌ಗಳ ವಿವಿಧ ರೀತಿಯ ಬಡ್ಡಿದರವನ್ನು ಸಾಲ ಪಡೆದುಕೊಳ್ಳುವ ವೇಳೆ ಸರಿಯಾಗಿ ಗಮನಿಸಿ, ಹಣ ಪಡೆದುಕೊಳ್ಳುವುದು ಜಾಣತನವಾಗಿದೆ. ದೀರ್ಘ ಮತ್ತು ಕಡಿಮೆ ಅವಧಿಯ ಮನೆ ಸಾಲದ ಬಡ್ಡಿ ವಿಚಾರದಲ್ಲಿ ಸಾಲದ ಮರುಪಾವತಿಯ ಸಮಯದಲ್ಲಿ ಸಾಲಗಾರನು ಪಾವತಿಸುವ ಬಡ್ಡಿ ಮೊತ್ತವನ್ನು ನಿರ್ಧರಿಸುವಲ್ಲಿ ಗೃಹ ಸಾಲದ ಅವಧಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಲದ ಅವಧಿಯು ಕಡಿಮೆಯಿದ್ದರೆ, ಸಾಲಗಾರನು ಹೆಚ್ಚಿನ ಅವಧಿಗೆ ಹೋಲಿಸಿದರೆ ಕಡಿಮೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಗೃಹ ಸಾಲದಲ್ಲಿ ಅವಧಿ ಮುಖ್ಯ
ಸಾಲದಲ್ಲಿ ಅದರಲ್ಲೂ ವಿಶೇಷವಾಗಿ ಗೃಹ ಸಾಲದಲ್ಲಿ ಅವಧಿಯು ಏಕೆ ಮುಖ್ಯವಾಗಿದೆ ಎಂಬುದು ಕೂಡ ಮುಖ್ಯವಿಚಾರ. ಸಾಲಗಾರರು 15-30 ವರ್ಷಗಳಂತಹ ದೀರ್ಘಾವಧಿಯವರೆಗೆ ಗೃಹ ಸಾಲವನ್ನು ತೆಗೆದುಕೊಳ್ಳುತ್ತಾರೆ. ಅಂತಹ ದೀರ್ಘಾವಧಿಯಲ್ಲಿ, ಅವರು ಸಾಮಾನ್ಯವಾಗಿ ಅಸಲು ಮೊತ್ತಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತಾರೆ.
ಆದರೆ ಅವರು ತಮ್ಮ ಮಾಸಿಕ ಆದಾಯಕ್ಕೆ ಸಾಲದ ಸಮೀಕರಿಸಿದ ಮಾಸಿಕ ಕಂತುಗಳನ್ನು (EMI) ಸರಿಹೊಂದಿಸಬೇಕಾಗಿರುವುದರಿಂದ, ಅವರು ಅವಧಿಯನ್ನು ಬುದ್ಧಿವಂತಿಕೆಯಿಂದ ಆರಿಸಬೇಕಾಗುತ್ತದೆ. ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಬೆಲೆಗಳು ಸರಾಸರಿ ಸಂಬಳದ ಬೆಳವಣಿಗೆಗಿಂತ ವೇಗವಾಗಿ ಚಲಿಸುತ್ತಿರುವಾಗ, ಒಬ್ಬ ವ್ಯಕ್ತಿಯು ಹೆಚ್ಚಿನ EMI ಅನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಕಡಿಮೆ ಅವಧಿಯನ್ನು ಆರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.
ಸದ್ಯ ನಾವು ಹೇಳಹೊರಟಿರುವ ವಿಚಾರವು ದೀರ್ಘಾವಧಿಯ ಗೃಹ ಸಾಲದ ಅವಧಿಯು ಸಾಲಗಾರನ ಮೇಲೆ ಬಡ್ಡಿಯ ಹೊರೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ತಿಳಿಸುತ್ತೇವೆ. ಗೃಹ ಸಾಲದ ಬಡ್ಡಿಯನ್ನು ಕಡಿಮೆ ಮಾಡುವ ಮಾರ್ಗಗಳು ಯಾವುವು ಮತ್ತು ಬಡ್ಡಿಯಿದ್ದರೂ ಸಹ 50 ಲಕ್ಷ ಗೃಹ ಸಾಲದ ಮೇಲೆ ಅಂದಾಜು 20 ಲಕ್ಷ ರೂಪಾಯಿಗಳನ್ನು ಹೇಗೆ ಉಳಿಸಬಹುದು ಎಂಬುದನ್ನು ಈ ಮೂಲಕ ತಿಳಿಯೋಣ.
ಸಾಲದ ಅವಧಿ ಬಡ್ಡಿಯ ಹೊರೆ ಹೇಗೆ ಹೆಚ್ಚಿಸುತ್ತದೆ?
ಉದಾಹರಣೆಗೆ ಒಬ್ಬ ವ್ಯಕ್ತಿ 30 ವರ್ಷದ ಅವಧಿಗೆ ಶೇ.9.5ರ ಬಡ್ಡಿ ದರದಲ್ಲಿ ರೂ.75 ಲಕ್ಷ ಸಾಲ ಪಡೆದರೆ ಅಂದಾಜು ರೂ.1,52,03,064 ಬಡ್ಡಿ ಕಟ್ಟುತ್ತಾನೆ. ಆದರೆ ಅದೇ ಸಾಲವನ್ನು 25 ವರ್ಷ ತೆಗೆದುಕೊಂಡರೆ ಅವರ ಬಡ್ಡಿ ಮೊತ್ತ ರೂ. 1,21,58,175. ಆಗಿರುತ್ತದೆ. ಈ ಮೂಲಕ ಮರುಪಾವತಿಯಲ್ಲಿ ಆತ ಸುಮಾರು 30.50 ಲಕ್ಷ ರೂಪಾಯಿಗಳನ್ನು ಉಳಿಸುತ್ತಾನೆ. ಇನ್ನು 25 ಮತ್ತು 20 ವರ್ಷಗಳವರೆಗೆ ಶೇ.10.50 ಬಡ್ಡಿ ದರದಲ್ಲಿ ರೂ.60 ಲಕ್ಷ ಗೃಹ ಸಾಲದ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ 25 ವರ್ಷಗಳಲ್ಲಿ ಅಂದಾಜು ಬಡ್ಡಿಯು ರೂ 1,09,95,271 ಆಗಿರುತ್ತದೆ. ಆದರೆ 20 ವರ್ಷಗಳಲ್ಲಿ ಇದು ರೂ 83,76,670 ಆಗಿರುತ್ತದೆ. ಅಂದರೆ 5 ವರ್ಷಗಳ ಕಡಿಮೆ ಅವಧಿಯನ್ನು ಆಯ್ಕೆ ಮಾಡಿದರೆ ರೂ 26,18,601 ರೂ. ಮೌಲ್ಯದ ವ್ಯತ್ಯಾಸ ಗೋಚರಿಸುತ್ತದೆ.
ಗೃಹ ಸಾಲದ ಬಡ್ಡಿ ಹೇಗೆ ಕಡಿಮೆ ಮಾಡಬಹುದು
ಗೃಹ ಸಾಲ ತೆಗೆದುಕೊಳ್ಳುವ ಮೊದಲು, ನಿಮ್ಮ ಸಿಬಿಲ್ ಸ್ಕೋರ್ ಅನ್ನು ಸುಧಾರಿಸಬೇಕಾಗಿರುವುದು ಅತ್ಯಗತ್ಯ. ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿಮಗೆ ಕಡಿಮೆ ದರದಲ್ಲಿ ಗೃಹ ಸಾಲವನ್ನು ಪಡೆಯಲು ಸಹಾಯ ಮಾಡುತ್ತದೆ, ಮರುಪಾವತಿಯ ಸಮಯದಲ್ಲಿ ನಿಮಗೆ ದೊಡ್ಡ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಭಾರೀ ಡೌನ್ ಪೇಮೆಂಟ್ ಮಾಡುವ ಮೂಲಕ ಉತ್ತಮ ಆರಂಭವನ್ನು ಪಡೆಯಬಹುದು. ಇದು ನಿಮ್ಮ ಗೃಹ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತದೆ. ಸಾಲದ ಅವಧಿಯಲ್ಲಿ ಒಬ್ಬರು ಪೂರ್ವಪಾವತಿಗಳನ್ನು ಮಾಡಬಹುದು. ಹಾಗೆ ಮಾಡುವುದರಿಂದ ವ್ಯಕ್ತಿ ತಮ್ಮ EMI ಅಥವಾ ಅವಧಿಯನ್ನು ಕಡಿಮೆ ಮಾಡುವ ಆಯ್ಕೆ ಪಡೆಯುತ್ತಾನೆ. ಗೃಹ ಸಾಲದ ಸಾಲಗಾರರು ಪ್ರತಿ ವರ್ಷ ಹೆಚ್ಚುವರಿ EMI ಅನ್ನು ಪಾವತಿಸಬಹುದು ಅಥವಾ ಅವರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಲವನ್ನು ಮರುಪಾವತಿಸಲು ಪ್ರತಿ ವರ್ಷ ತಮ್ಮ EMI ಮೊತ್ತವನ್ನು ಹೆಚ್ಚಿಸಬಹುದು.
ರೂ 50 ಲಕ್ಷ ಗೃಹ ಸಾಲದಲ್ಲಿ ರೂ 20 ಲಕ್ಷ ಉಳಿಕೆ ಹೇಗೆ?
ಒಂದು ವೇಳೆ ನಾವು ರೂ 50 ಲಕ್ಷ ಗೃಹ ಸಾಲದ ಉದಾಹರಣೆಯನ್ನಾಗಿ ತೆಗೆದುಕೊಂಡರೆ 10ರಷ್ಟು ಬಡ್ಡಿದರ ಇರುತ್ತದೆ. ಸಾಲದ ಅವಧಿಯು 20 ವರ್ಷಗಳು ಮತ್ತು 25 ವರ್ಷಗಳು. ಇನ್ನು ಅಂದಾಜು EMI ರೂ 48,251 ಆಗಿದ್ದು, ಅಂದಾಜು ಬಡ್ಡಿ ರೂ 65,80,260 ಆಗಿರುತ್ತದೆ. ಇನ್ನು ಅಂದಾಜು ಮರುಪಾವತಿ ಮೊತ್ತ ರೂ 1,15,80,260 ಆಗಿದೆ. ಅಥವಾ 20 ವರ್ಷಕ್ಕೆ 50 ಲಕ್ಷ ಗೃಹ ಸಾಲದ ಮೊತ್ತವನ್ನು ಪರಿಗಣಿಸಿದರೆ ಅಂದಾಜು EMI ರೂ 45,435 ಆಗಿದ್ದು, ಅಂದಾಜು ಬಡ್ಡಿ ರೂ 86,30,511 ಆಗಿರುತ್ತದೆ ಮತ್ತು ಅಂದಾಜು ಮರುಪಾವತಿ ಮೊತ್ತ ರೂ 1,36,30,511 ಆಗಿದೆ.
ಮೊತ್ತವನ್ನು ಮ್ಯೂಚುವಲ್ ಫಂಡ್ SIP ನಲ್ಲಿ ಹೂಡಿದರೆ?
20,50,251 ರೂಗಳಲ್ಲಿ, 20 ವರ್ಷಗಳಲ್ಲಿ (240 ತಿಂಗಳುಗಳು) ಅಂದಾಜು ಮಾಸಿಕ ಮೊತ್ತವು ರೂ 8,543 ಆಗಿರುತ್ತದೆ. ಆ ಮೊತ್ತವನ್ನು ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ SIP ಮೂಲಕ ಹೂಡಿಕೆ ಮಾಡಿದರೆ ಮತ್ತು ಹೂಡಿಕೆದಾರರು ಆ ಹೂಡಿಕೆಯ ಮೇಲೆ 12 ಪ್ರತಿಶತ ವಾರ್ಷಿಕ ಬೆಳವಣಿಗೆಯನ್ನು ಪಡೆದರೆ, 20 ವರ್ಷಗಳಲ್ಲಿ ಉತ್ಪತ್ತಿಯಾಗುವ ಅಂದಾಜು ಕಾರ್ಪಸ್ 85,35,721 ರೂ. ಆಗಿರುತ್ತದೆ.


Click it and Unblock the Notifications