ನವದೆಹಲಿ, ಮಾರ್ಚ್ 19: ಭಾರತ ಎಲ್ಲಾ ವಿಭಾಗದಲ್ಲೂ ಜಾಗತಿಕ ಮಟ್ಟದಲ್ಲಿ ದೊಡ್ಡ ಮಾರುಕಟ್ಟೆ ಒದಗಿಸಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಬಂಡವಾಳಿಗರು ಮುಂದೆ ಬರುತ್ತಿದ್ದಾರೆ. ಈ ಹಿನ್ನೆಲೆ ಭಾರತದ ವಿವಿಧ ವಿಭಾಗಕ್ಕೆ ಭಾರಿ ಪ್ರಮಾಣದ ವಿದೇಶಿ ನೇರ ಬಂಡವಾಳ, ಅರ್ಥಾತ್ ಎಫ್‌ಡಿಐ ಹರಿದು ಬಂದಿದೆ. ಅದರಲ್ಲೂ ಭಾರತದ ವಿಮಾ ವಲಯ ಅಂದ್ರೆ ನಮ್ಮ ಭಾರತದ ಇನ್ಷೂರೆನ್ಸ್ ವಲಯಕ್ಕೆ ಭಾರಿ ಪ್ರಮಾಣದ ಎಫ್‌ಡಿಐ ಹರಿದು ಬಂದಿದೆ.
ಕಳೆದ 10 ವರ್ಷದಲ್ಲಿ ಭಾರತದ ಆರ್ಥಿಕ ಸ್ಥಿತಿ ಸಾಕಷ್ಟು ಬದಲಾಗಿದೆ. ಹಾಗೇ ವಿವಿಧ ವಲಯ ಅಭಿವೃದ್ಧಿ ಕಾಣುತ್ತಿದ್ದು ಹೀಗಿಯೇ ವಿಮಾ ವಲಯ ಕೂಡ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ಮತ್ತೊಂದು ಕಡೆ ದೇಶದ ವಿಮಾ ವಲಯ ಕಳೆದ 9 ವರ್ಷಗಳಲ್ಲಿ ₹54 ಸಾವಿರ ಕೋಟಿ ವಿದೇಶಿ ನೇರ ಬಂಡವಾಳ ಅಂದರೆ ಎಫ್‌ಡಿಐ ಅನ್ನು ಸ್ವೀಕಾರ ಮಾಡಿದೆ ಎನ್ನುತ್ತಿವೆ ವರದಿಗಳು. ಕೇಂದ್ರ ಸರ್ಕಾರವು ಸಾಗರೋತ್ತರ ಬಂಡವಾಳ ಹರಿವಿನ ನಿಯಮಗಳನ್ನು, ಮತ್ತಷ್ಟು ಉದಾರೀಕರಣ ಮಾಡಿದ ಹಿನ್ನೆಲೆಯಲ್ಲಿ ಇದೀಗ ವಿಮಾ ವಲಯದಲ್ಲಿ ಬಂಡವಾಳ ಹೂಡಿಕೆಯು ಹೆಚ್ಚಾಗಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

₹53,900 ಕೋಟಿ ಬಂಡವಾಳ!
ಭಾರತ ವಿಮಾ ವಲಯ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರನ್ನ ಪಡೆದಿದೆ. ಭಾರತದಲ್ಲಿ ವಿಮಾ ಸೌಲಭ್ಯಕ್ಕೆ ಲಕ್ಷಾಂತರ ಕೂಟಿ ಹೂಡಿಕೆ ಆಗುತ್ತದ್ದು. ಅದರಲ್ಲೂ ಇದೀಗ ವಿದೇಶದ ಬಂಡವಾಳ ಕೂಡ ವಿಮಾ ವಲಯಕ್ಕೆ ಭಾರಿ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ. 2014ರ ಡಿಸೆಂಬರ್ ತಿಂಗಳಿಂದ 2024 ರ ಜನವರಿ ನಡುವೆ ಒಟ್ಟಾರೆ, ₹53,900 ಕೋಟಿಯಷ್ಟು ಎಫ್‌ಡಿಐ ಬಂದಿದೆ ಎನ್ನಲಾಗಿದೆ. ಹಾಗೇ ಇಷ್ಟು ದೊಡ್ಡ ಪ್ರಮಾಣದ ಬಂಡವಾಳವನ್ನ ಈಗ ವಿಮಾ ಕಂಪನಿಗಳು ಸ್ವೀಕರಿಸಿವೆ. ಈ ಅವಧಿಯಲ್ಲಿ ವಿಮಾ ಕಂಪನಿಗಳ ಸಂಖ್ಯೆಯು, 53ರಿಂದ 70ಕ್ಕೆ ಹೆಚ್ಚಳವಾಗಿದೆ ಎಂಬುದು ಗಮನಾರ್ಹ. ಇದರ ಜೊತೆಗೆ ಭಾರತದ ವಿಮಾ ವಲಯದ ನಿರ್ವಹಣಾ ಸಂಪತ್ತಿನ ಮೌಲ್ಯವು ಕೂಡ ಹೆಚ್ಚಾಗಿದೆ.
₹60 ಲಕ್ಷ ಕೋಟಿಗೆ ಏರಿಕೆ
ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಸೆಳೆಯಲು, ಹಲವು ಕ್ರಮ ಕೈಗೊಂಡಿತ್ತು ಸರ್ಕಾರ. ಇದೀಗ ಅದರ ಫಲವಾಗಿ, ವಿಮಾ ವಲಯದಲ್ಲಿ ಚೇತರಿಕೆ ಕಂಡುಬಂದಿದೆ. ಈ ನಡುವೆ 2013-14 ರಲ್ಲಿ ₹21 ಲಕ್ಷ ಕೋಟಿ ಇದ್ದ ನಿರ್ವಹಣಾ ಸಂಪತ್ತಿನ ಮೌಲ್ಯ (ಎಯುಎಂ) ಈಗ ಸುಮಾರು ₹60 ಲಕ್ಷ ಕೋಟಿಗೆ ಏರಿಕೆ ಆಗಿದೆ ಎನ್ನಲಾಗಿದೆ. ಹಾಗೆಯೇ ವಿಮಾ ಪ್ರೀಮಿಯಂ ₹3.94 ಲಕ್ಷ ಕೋಟಿಯಿಂದ ₹10.4 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳ ಆಗಿದೆ ಎಂದು ಕೂಡ ಈಗ ಮಾಹಿತಿ ನೀಡಲಾಗಿದೆ.
ಈ ಮೂಲಕ ಭಾರತದ ಇತರ ವಲಯಗಳಿಗೆ ಈಗ ವಿದೇಶಿ ನೇರ ಬಂಡವಾಳ ಹರಿದು ಬರುವಂತೆ ಇದೀಗ ವಿಮಾ ವಲಯದಲ್ಲಿ ಕೂಡ ಕಳೆದ 9 ವರ್ಷದಲ್ಲಿ ಚೇತರಿಕೆಯು ಕಂಡುಬರುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಮಾ ವಲಯಕ್ಕೆ ಎಫ್‌ಡಿಐ ಮೂಲಕ ಹಣ ಹರಿದು ಬರುವ ನಿರೀಕ್ಷೆ ಇದೆ.


Click it and Unblock the Notifications