ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ (Israel-Iran War) ಭಾರತದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಅತ್ತ ಕಚ್ಚಾ ತೈಲ ಬೆಲೆ, ಷೇರು ಮಾರುಕಟ್ಟೆ (Stock Market), ಇಂಧನ ಸೌಲಭ್ಯ ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾಗುತ್ತಲೇ ಇದೆ. ಇದೀಗ ಬೆಂಗಳೂರು ಸೇರಿ ದೇಶದ ಹಲವು ರಾಜ್ಯಗಳಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಶುರುವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಪ್ರಸ್ತುತ ವ್ಯತ್ಯಯವಾಗುತ್ತಿದ್ದು, ಹೋಟೆಲ್ ಬಂದ್ (Hotel Bandh) ಮಾಡಲು ಮುಂದಾಗಿದ್ದಾರೆ.

ಹೌದು, ಮಧ್ಯಪ್ರಾಚ್ಯದ ಯುದ್ಧದ ಬಿಸಿ, ಬೆಂಗಳೂರು, ಚೆನ್ನೈ ಸೇರಿ ಹಲವು ರಾಜ್ಯಗಳಿಗೂ ತಟ್ಟಿದೆ. ಇತ್ತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಬಹುದು ಎಂಬ ಚಿಂತೆಯಲ್ಲಿದ್ದರೆ, ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದರಲ್ಲೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸ್ಥಗಿತ, ಪೂರೈಕೆಯಲ್ಲಾಗುತ್ತಿರುವ ಕೊರತೆ ಹೋಟೆಲ್ ಉದ್ಯಮಕ್ಕೆ ನಷ್ಟವನ್ನುಂಟು ಮಾಡುತ್ತಿದೆ.
ಮೋದಿಗೆ ಪತ್ರ ಬರೆದ ಹೋಟೆಲ್ ಸಂಘಟನೆ ಅಧ್ಯಕ್ಷ!
ಹೌದು, ಅತ್ತ ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಸ್ಥಗಿತಗೊಳಿಸಿ ಹಲವು ದಿನಗಳಾಗಿದೆ. ಈ ಹಿನ್ನೆಲೆ ಸದ್ಯ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆ ಚೆನ್ನೈ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಎಮ್.ಕೆ ರವಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವರು ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಇನ್ನು ಪತ್ರದಲ್ಲಿ "ಆಹಾರ ಉದ್ಯಮಕ್ಕೆ (ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು) ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಸರಬರಾನ್ನು ನಿರಂತರವಾಗಿ ಮುಂದುವರೆಸಬೇಕು ಎಂದು ಮನವಿ ಮಾಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್‌ಪಿಜಿ ಕೊರತೆಯಿಂದಾಗಿ ರೆಸ್ಟೋರೆಂಟ್‌ಗಳು ಮತ್ತು ಆಹಾರ ಉದ್ಯಮಗಳಲ್ಲಿ ಬಳಸುವ ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದ್ರೆ ಇದನ್ನು ಮತ್ತ ತುರ್ತು ಸರಬರಾಜು ಮಾಡುವಂತೆ ಮನವಿ ಮಾಡಲಾಗಿದೆ. ಆಹಾರ ಉದ್ಯಮ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಅನೇಕ ಆಸ್ಪತ್ರೆಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ ಪೂರೈಕೆ ಮಾಡುವುದರ ಜೊತೆಗೆ ಐಟಿ ಪಾರ್ಕ್, ವಿದ್ಯಾರ್ಥಿಗಳು ಹೀಗೆ ಹಲವರು ಅವಲಂಬಿತರಾಗಿದ್ದಾರೆ. ಆದ್ದರಿಂದ ಎಲ್‌ಪಿಜಿ ಸರಬರಾಜಿನಲ್ಲಿ ಅಡೆತಡೆಯಾದರೆ ಎಲ್ಲರಿಗೂ ಪ್ರಭಾವ ಬೀರುತ್ತದೆ. ಆದ್ದರಿಂದ ತೈಲ ಸಂಬಂಧಿತ ಅಧಿಕಾರಿಗಳ ಜೊತೆಗೆ ಹಸ್ತಕ್ಷೇಪ ಮಾಡಿ, ಎಲ್‌ಪಿಜಿಯನ್ನು ಆಹಾರ ಉದ್ಯಮಕ್ಕೆ ಅಗತ್ಯ ವಸ್ತುವೆದು ಪರಿಗಣಿಸಿ, ಯಾವುದೇ ಅಡೆತಡೆಯಿಲ್ಲದೆ ನಿರಂತರ ಸರಬರಾಜು ಮಾಡಬೇಕು" ಎಂದು ಮನವಿ ಮಾಡಲಾಗಿದೆ.
ಸದ್ಯ ಬೆಂಗಳೂರಿನಲ್ಲೂ ಗ್ಯಾಸ್ ಪೂರೈಕೆಯ ವ್ಯತ್ಯಯದಿಂದಾಗಿ ಹೋಟೆಲ್ ಬಂದ್ ಮಾಡಲು ಸಂಘಟನೆಗಳು ಮುಂದಾಗಿದೆ. ಆದ್ದರಿಂದ ಇಂದಿನಿಂದ ಬೆಂಗಳೂರಿನಲ್ಲಿ ಹಲವು ಹೋಟೆಲ್‌ಗಳು ಬಂದ್ ಆಗಲಿದೆ ಎಂದು ಹೇಳಲಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಸರಬರಾಜು ಸ್ಥಗಿತ ಹಿನ್ನೆಲೆ ಹೋಟೆಲ್ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಈ ಹಿನ್ನೆಲೆ ತಾತ್ಕಾಲಿಕ ಬಂದ್ ಮಾಡಲು ಅಸೋಸಯೇಷನ್‌ಗಳು ಪ್ಲಾನ್ ಮಾಡಿದೆ.


Click it and Unblock the Notifications