ಮಧ್ಯಪ್ರಾಚ್ಯದ ಸಂಘರ್ಷ (Middle East Conflict) ಇದೀಗ ಭಾರತದಾದ್ಯಂತ ಪ್ರಭಾವ ಬೀರಿದೆ. ಇಸ್ರೇಲ್-ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ ಆರಂಭವಾಗಿ 3 ವಾರವಾಗಿದ್ದು, ಈ ಮಧ್ಯೆ ತೈಲ ಬೆಲೆಯಿಂದ ಹಿಡಿದು ಅನೇಕ ಉದ್ಯಮಗಳಿಗೆ ಪರಿಣಾಮ ಬೀರಿದೆ. ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷದಿಂದಾಗಿ ಇದೀಗ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG Gas Cylinder) ಪೂರೈಕೆಯಲ್ಲಿ ಭಾರೀ ಅಭಾವ ಉಂಟಾಗಿದೆ. ಈ ಹಿನ್ನೆಲೆ ಹಲವಾರು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಗ್ಯಾಸ್ ಆಧಾರಿತ ಉದ್ಯಮಗಳು ಮುಚ್ಚಿ ಹೋಗಿದೆ. ಇದೀಗ ಗ್ಯಾಸ್ ಪೂರೈಕೆಯ ಕೊರತೆಯಿಂದ ದೇಶದಲ್ಲಿ ಮತ್ತೊಂದು ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.

ಹೌದು, ಈಗಾಗಲೇ ಭಾರತದಾದ್ಯಂತ ಎಲ್‌ಪಿಜಿ ಪೂರೈಕೆಯ ಕೊರತೆಯಿಂದ ಆಹಾರ ಉದ್ಯಮಗಳು, ಹೋಟೆಲ್‌ಗಳು, ಇತರ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದವು. ಇದೀಗ ಈ ಬಿಕ್ಕಟ್ಟು ಹಾಲಿನ ಉದ್ಯಮಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಲ್‌ಪಿಜಿ ಕೊರತೆ; ಹಾಲು ಉದ್ಯಮಕ್ಕೂ ಪರಿಣಾಮ
ಹೌದು, ಈಗಾಗಲೇ ಲಕ್ಷಾಂತರ ಲೀಟರ್ ಹಾಲನ್ನು ದೇಶದಾದ್ಯಂತ ಡೈರಿ ಕಂಪನಿಗಳು ಮಾರಾಟ ಮಾಡುತ್ತವೆ, ಆದ್ರೆ ಇದೀಗ ಗ್ಯಾಸ್ ಪೂರೈಕೆಯ ಕೊರತೆಯಿಂದ ಹಾಲಿನ ಪೂರೈಕೆಯಲ್ಲೂ ಕೊರತೆ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಎಲ್‌ಪಿಜಿ ಬಿಕ್ಕಟ್ಟು ಇದೀಗ, ಹಾಲು ಉದ್ಯಮಕ್ಕೂ ಪೆಟ್ಟು ಕೊಡುವ ಆತಂಕ ಸದ್ಯ ಮನೆ ಮಾಡಿದೆ.
ಕಾರಣವೇನು?
ಡೈರಿ ಕಂಪನಿಗಳು ಪ್ರತಿನಿತ್ಯ ಲಕ್ಷಾಂತರ ಲೀಟರ್ ಹಾಲನ್ನು ಮಾರುಕಟ್ಟೆಗೆ ತರುತ್ತವೆ. ಆದರೆ ಈ ಹಾಲು ಮಾರಾಟವಾಗಬೇಕೆಂದರೆ, ಪ್ಯಾಕ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಆದ್ರೆ ಹಾಲಿನ ಪ್ಲಾಸ್ಟಿಕ್ ಪ್ಯಾಕೆಟ್‌ಗಳನ್ನು ಉತ್ಪಾದಿಸಬೇಕೆಂದರೆ ಅಗತ್ಯವಾಗಿ ಗ್ಯಾಸ್ ಬೇಕೇಬೇಕು. ಆದ್ರೆ ಇತ್ತೀಚೆಗೆ ಗ್ಯಾಸ್ ಪೂರೈಕೆ ಪ್ರಮಾಣ ಕಡಿಮೆಯಾಗಿದ್ದು, ಸದ್ಯಕ್ಕೆ ಸ್ಟಾಕ್ ಕೇವಲ 10 ದಿನಗಳಷ್ಟು ಮಾತ್ರ ಇದೆ ಎನ್ನಲಾಗಿದೆ.
ಸಮಸ್ಯೆಯಲ್ಲಿ ಹಾಲಿನ ಉದ್ಯಮ
ಸಾಮಾನ್ಯವಾಗಿ ಹಾಳಿನ ಪ್ಯಾಕೆಟ್‌ಗಳನ್ನು ತಯಾರಿಸಬೇಕೆಂದರೆ, ಫ್ಯಾಕ್ಟರಿಗಳು ಉತ್ಪಾದನೆಗಾಗಿ ಎಲ್‌ಪಿಜಿ ಅಥವಾ ಪೈಪ್‌ಲೈನ್ ಗ್ಯಾಸ್ ಅನ್ನು ಬಳಸಬೇಕಾಗುತ್ತದೆ. ಆದ್ರೆ ಇತ್ತೀಚೆಗೆ ಕೆಲವು ವಾರಗಳಿಂದ ಪಶ್ಚಿಮ ಏಷ್ಯಾದಲ್ಲಿ ಉಂಟಾದ ಸಂಘರ್ಷದಿಂದಾಗಿ, ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯಿಂದಾಗಿ ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗ ಪೂರೈಕೆಯಲ್ಲಿ ಭಾರೀ ಕೊರತೆ ಉಂಟಾಗಿದೆ. ಈ ಕಾರಣದಿಂದ ಹಾಲು ಪ್ಯಾಕ್ ಮಾಡಲು ಬಳಸುವ ಪ್ಯಾಕೆಟ್ ತಯಾರಿಕೆಗೆ ಅಡ್ಡಿಯಾಗಿದೆ. ಇನ್ನು ಮುಂಬೈ ಡೈರಿ ಉತ್ಪಾದಕರು ಈ ಕುರಿತು ಮಾತನಾಡಿದ್ದು, "ಇದೇ ರೀತಿ ಪರಿಸ್ಥಿತಿ ಮುಂದುವರೆದರೆ, 10 ದಿನಗಳ ನಂತರ ಹಾಲು ಪೂರೈಕೆಯಲ್ಲೂ ಅಡ್ಡಿಯಾಗಬಹುದು" ಎಂದು ಹೇಳಿದ್ದಾರೆ.
ಒಂದು ವೇಳೆ ಹಾಲು ಪ್ಯಾಕೇಜಿಂಗ್ ಪ್ರಮಾಣ ಕುಸಿತ ಕಂಡರೆ, ಅತ್ತ ದಿನನಿತ್ಯದ ಹಾಲು ವಿತರಣೆಯಲ್ಲೂ ತೊಂದರೆಯಾಗಬಹುದು. ಗ್ರಾಹಕರಿಗೆ ಹಾಲು ಸಿಗದೇ ಇರುವ ಸಾಧ್ಯತೆಯೂ ಹೆಚ್ಚಿದ್ದು, ಬೆಲೆ ಏರಿಕೆ ಸಮಸ್ಯೆಗಳೂ ಉದ್ಭವಿಸಬಹುದು ಎನ್ನಲಾಗಿದೆ. ಈಗಾಗಲೇ ಗ್ಯಾಸ್ ಪೂರೈಕೆಯಿಂದ ಉಂಟಾಗಿರುವ ತೊಂದರೆಯಿಂದ, ಜನಸಾಮಾನ್ಯರಂತೂ ಬುಕಿಂಗ್ ಮಾಡುವುದೇ ಕಷ್ಟವೆನಿಸಿದೆ. ಆದ್ರೆ ಇದನ್ನೇ ಲಾಭವಾಗಿಟ್ಟುಕೊಂಡು ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.


Click it and Unblock the Notifications