ಹೊಸ ವರ್ಷದ ಮೊದಲ ದಿನದ ಮುಂಜಾನೆಯೇ ಎಲ್ ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಿದೆ. ಹೌದು ತೈಲಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. ಈ ಹೊಸ ಪರಿಷ್ಕೃತ ದರಗಳು ಇಂದಿನಿಂದ ಅಂದರೆ ಜನವರಿ 1 ರಿಂದಲೇ ಜಾರಿಗೆ ಬರಲಿದೆ. ಪ್ರತಿ ತಿಂಗಳ ಮೊದಲ ದಿನ ಸಾಮಾನ್ಯವಾಗಿ ತೈಲಕಂಪನಿಗಳು ಅಡುಗೆ ಅನಿಲ ದರ ಪರಿಷ್ಕರಿಸುತ್ತವೆ. ಕೆಲವೊಮ್ಮೆ ಬೆಲೆಗಳು ಏರಿಕೆಯಾದರೆ, ಕೆಲವೊಮ್ಮೆ ಇಳಿಕೆಯಾಗುತ್ತವೆ. ಆದರೆ ಈ ಬಾರಿ ತೈಲ ಕಂಪನಿಗಳು ಗುಡ್ ನ್ಯೂಸ್ ನೀಡಿದೆ
ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 14.50 ರೂಪಾಯಿ ಇಳಿಕೆಯಾಗಿದೆ. ಆದರೆ ಈ ಬೆಲೆ ಕಡಿತ ವಾಣಿಜ್ಯ ಸಿಲಿಂಡರ್‌ಗಳಿಗೆ ಅಂದರೆ 19Kg LPG ಸಿಲಿಂಡರ್‌ಗಳಿಗೆ ಮಾತ್ರ ಆಗಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಂದರೆ 14 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಪರಿಷ್ಕೃತ ದರ ದೇಶದ ಎಲ್ಲ ಪ್ರದೇಶಕ್ಕೂ ಅನ್ವಯವಾಗಲಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದರ ಕಡಿತದ ನಂತರ, LPG ಸಿಲಿಂಡರ್ ಈಗ 1804 ರೂ.ಗಳಿಗೆ ಲಭ್ಯವಿರಲಿದೆ. ಇದಕ್ಕೂ ಸಿಲಿಂಡರ್ 1818.50 ರೂ. ಗೆ ಲಭ್ಯವಿತ್ತು. ಇನ್ನು ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಶೀಲಿಸುವುದಾದರೆ ಜನವರಿ 1ರಿಂದ ಬೆಂಗಳೂರಿನಲ್ಲಿ 1804 ರೂಪಾಯಿಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಲಭ್ಯವಾಗಲಿದೆ. ಕಳೆದ ತಿಂಗಳು 1818.50 ರೂ. ದೊರಕುತ್ತಿತ್ತು.
ಅದೇ ವಾಣಿಜ್ಯ ಸಿಲಿಂಡರ್ ಈಗ ಕೋಲ್ಕತ್ತಾದಲ್ಲಿ ಪ್ರಸ್ತುತ 1911 ರೂ. ಲಭ್ಯವಿರಲಿದೆ. ಇದರ ಬೆಲೆ ಡಿಸೆಂಬರ್‌ನಲ್ಲಿ 1927 ರೂ. ನವೆಂಬರ್ ನಲ್ಲಿಯೂ 1911.50 ರೂ. ಇತ್ತು ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 16 ರೂಪಾಯಿ ಇಳಿಕೆಯಾಗಿದೆ. ಇಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನಿಂದ 1771 ರೂ.ಗೆ ಬದಲಾಗಿ 1756 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಇದರ ಬೆಲೆ ಜನವರಿ 1 ರಿಂದ ರೂ 1980.50 ರ ಬದಲು ರೂ 1966 ಆಗಿದೆ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ
2025 ರ ಮೊದಲ ದಿನವೂ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರಾಜಧಾನಿ ದೆಹಲಿಯಲ್ಲಿ, 14 ಕೆಜಿ ಅಂದರೆ ದೇಶೀಯ ಸಿಲಿಂಡರ್‌ಗಳು ಆಗಸ್ಟ್ 1, 2024 ರ ದರದಲ್ಲಿ ಮಾತ್ರ ಲಭ್ಯವಿರುತ್ತವೆ. ಇದಲ್ಲದೇ ಪಾಟ್ನಾ ಬಗ್ಗೆ ಮಾತನಾಡುವುದಾದರೆ ಇಲ್ಲಿ ಗೃಹೋಪಯೋಗಿ ಸಿಲಿಂಡರ್ ಹಳೆಯ ದರದಲ್ಲಿ ಅಂದರೆ 892.50 ರೂ.ಗೆ ದೊರೆಯಲಿದೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 829 ರೂ., ಮುಂಬೈನಲ್ಲಿ 802.50 ಮತ್ತು ಚೆನ್ನೈನಲ್ಲಿ 818.50 ರೂ. ಇದಲ್ಲದೇ ಪಾಟ್ನಾದಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 892.50 ರೂ.ಗೆ ಲಭ್ಯವಾಗಲಿದೆ. ಬೆಂಗಳೂರಿನಲ್ಲಿ 805.50 ರೂ ಲಭ್ಯವಿದೆ.
ವಿಮಾನ ಇಂಧನ ದರ ಇಳಿಕೆ
ಜನವರಿ 1, 2025 ರಿಂದ ವಿಮಾನ ಇಂಧನ (ಎಟಿಎಫ್) ದರ ಕಡಿಮೆಯಾಗಿದೆ. ಇದರಿಂದ ವಿಮಾನಯಾನ ಉದ್ಯಮಕ್ಕೆ ದೊಡ್ಡ ಉಳಿತಾಯವಾಗಿದೆ. ಏರ್ ಟರ್ಬೈನ್ ಇಂಧನ (ATF) ಎಂದೂ ಕರೆಯಲ್ಪಡುವ ಜೆಟ್ ಇಂಧನದ ಬೆಲೆಯನ್ನು ₹ 1,401/ಕಿಲೋಲೀಟರ್‌ಗೆ ₹ 90,455.47/ಕಿಲೋಲೀಟರ್‌ಗೆ ಕಡಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.ಈ ಬದಲಾವಣೆಯು ವಿಮಾನಯಾನ ಟಿಕೆಟ್ ದರಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ,


Click it and Unblock the Notifications