ಪಶ್ಚಿಮ ಏಷ್ಯಾದಲ್ಲಿ ಆರಂಭವಾದ ಸಂಘರ್ಷ (Middle East Conflict) ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಇರಾನ್ ಮತ್ತು ಇಸ್ರೇಲ್, ಅಮೆರಿಕಾ ರಾಷ್ಟ್ರಗಳ ದಾಳಿ ಮೇಲೆ ಪ್ರತಿದಾಳಿಗಳನ್ನು (Iran and Israel-America War) ನಡೆಸುತ್ತಲೇ ಇದೆ. ಈ ಸಂಘರ್ಷದಿಂದಾಗಿ ಇದೀಗ ಭಾರತದಲ್ಲಿ ಹಲವು ಸೇವೆಗಳಿಗೆ ಅಡ್ಡಿಯಾಗುತ್ತಿದೆ. ಅದರಲ್ಲೂ ಅನಿಲ ಸರಬರಾಜಿನಲ್ಲಿ ಉಂಟಾದ ಅಡ್ಡಿಯಿಂದಾಗಿ, ಇದೀಗ ದೇಶದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಇದೀಗ ಈ ಅನಿಲ ಸರಬರಾಜು ಸಂಕಷ್ಟದ ನಡುವೆಯೇ, ಕೇಂದ್ರ ಸರ್ಕಾರ ನ್ಯಾಚುರಲ್ ಗ್ಯಾಸ್ (Supply Regulation) ಆರ್ಡರ್, 2026 ಅನ್ನು ಜಾರಿಗೆ ತಂದು, ಅನಿಲ ವಿತರಣೆಯಲ್ಲಿ ಹೊಸ ಆದ್ಯತೆಯ ಮೂಲಕವನ್ನು ಘೋಷಣೆ ಮಾಡಿದೆ.

ಹೌದು, ಇದೀಗ ಕೇಂದ್ರ ಸರ್ಕಾರ ಜಾರಿಗೆ ತಂದ ಆ ಒಂದು ಆದೇಶದಿಂದ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಆದೇಶದ ಪರಿಣಾಮವಾಗಿ ಬೆಂಗಳೂರಿನ ಯಲಹಂಕದ 370 ಮೆಗಾವ್ಯಾಟ್ ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರಕ್ಕೆ (Bengaluru Gas Based Power Plant) ಅನಿಲ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೇಂದ್ರದ ನಿರ್ಧಾರ, ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಅಡ್ಡಿ!
ಮಧ್ಯಪ್ರಾಚ್ಯದ ಸಂಘರ್ಷ, ಇದೀಗ ಕರ್ನಾಟಕದ ವಿದ್ಯುತ್ ಉತ್ಪಾದನೆಗೆ ದೊಡ್ಡ ಪೆಟ್ಟು ಬೀಳಲಿದೆ. ಏಕೆಂದರೆ ಬೆಂಗಳೂರಿನ ಏಕೈಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಇರುವುದೇ, ಯಲಹಂಕದಲ್ಲಿ. ಇದೀಗ ಈ ಗ್ಯಾಸ್-ಬೇಸ್ಡ್ ಪವರ್ ಪ್ಲಾಂಟ್‌ಗೆ ಅನಿಲ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರವು ನ್ಯಾಚುರಲ್ ಗ್ಯಾಸ್ (ಸಪ್ಲೈ ರೆಗ್ಯುಲೇಶನ್) ಆರ್ಡರ್, 2026 ರನ್ನು ಜಾರಿಗೆ ಂದಿದ್ದು, ಅನಿಲ ವಿತರಣೆಗೆ ಹೊಸ ಆದ್ಯತೆ ಪಟ್ಟಿಯನ್ನು ಘೋಷಿಸಿದೆ. ಆ ಪ್ರಿಣಾಮ ಇದೀಗ ಇಂದಿನಿಂದ ಅಂದರೆ ಮಾರ್ಚ್ 12, 2026 ರಿಂದ ಈ ವಿದ್ಯುತ್ ಸ್ಥಾವರಕ್ಕೆ ಗ್ಯಾಸ್ ಪೂರೈಕೆಯನ್ನು ನಿಲ್ಲಿಸಲಾಗಿದೆ.
ಸರ್ಕಾರದ ಆದ್ಯತೆ ಪಟ್ಟಿಯ್ಲಿ ದೇಶೀಯ ಪೈಪ್‌ಲೈನ್ ನ್ಯಾಚುರಲ್ ಗ್ಯಾಸ್ (PNG), ಸಿಲಿಂಡರ್‌ಗಳಿಗೆ ಬಳಸುವ ಎಲ್‌ಪಿಜಿ ಉತ್ಪಾದನೆ, ಸಾರಿಗೆಗೆ ಸಿಎನ್‌ಜಿ ಮತ್ತು ಪೈಪ್‌ಲೈನ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಫರ್ಟಿಲೈಸರ್ ಪ್ಲಾಂಟ್‌ಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆದಾರರ ನಂತರದಲ್ಲಿ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಕಡಿಮೆ ಆದ್ಯತೆ ನೀಡಲಾಗಿದೆ. ಈ ಪರಿಣಾಮ ಪ್ರಸ್ತುತ ವಿದ್ಯುತ್ ಸ್ಥಾವರಗಳು ಅನಿಲ ಪಡೆಯುವ ಸೌಲಭ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಪವರ್ ಕಟ್ ಭೀತಿ?
ಯಲಹಂಕದಲ್ಲಿರುವ ಈ ವಿದ್ಯುತ್ ಸ್ಥಾವರವನ್ನು ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (KPCL) ನಿರ್ವಹಿಸುತ್ತದೆ. ಇದು ರಾಜ್ಯದಲ್ಲಿರುವ ಏಕೈಕ ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರವಾಗಿದೆ. ಇನ್ನು ಇದೇ ಸ್ಥಾವರದಿಂದಾಗಿ ಬೆಂಗಳೂರಿನ ಅನೇಕ ವಿದ್ಯುತ್ ಅಗತ್ಯಗನ್ನು ಪೂರೈಸಲಾಗುತ್ತದೆ. 2024 ರಿಂದ ಇದು ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್-ಏಪ್ರಿಲ್ ಸಂದರ್ಭದಲ್ಲಿ ಪೀಕ್ ಲೋಡ್ ನಿಭಾಯಿಸಲು ಅನುಕೂಲಕ್ಕೆ ಬರುತ್ತದೆ. ಇದೀಗ ಗ್ಯಾಸ್ ಪೂರೈಕೆಯನ್ನು ನಿಲ್ಲಿಸಲಾಗಿದ್ದು, ಈ ಪರಿಣಾಮ ಸ್ಥಾವರ ಕೂಡಾ ಸಂಪೂರ್ಣವಾಗಿ ಮುಚ್ಚಿದೆ. ಈ ಪ್ರಭಾವ ಕರ್ನಾಟಕದ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆ ಇದೀಗ ಬೆಂಗಳೂರಿನಲ್ಲಿ ಮತ್ತೆ ಪವರ್ ಕಟ್ ಭೀತಿ ಶುರುವಾಗಿದೆ.


Click it and Unblock the Notifications