ಬೆಂಗಳೂರು, ಜೂನ್ 14: ಒಂದು ಕಾಲವಿತ್ತು ಭಾರತದಲ್ಲಿ ನಮ್ಮ ಮಕ್ಕಳು ಬಳಸುತ್ತಿರುವ ಬಹುತೇಕ ಆಟಿಕೆಗಳು ಆಮದಾಗಿ ಬಂದವುಗಳಾಗಿತ್ತು. ಅವುಗಳಲ್ಲಿ ಹೆಚ್ಚಿನವು ಚೀನಾದಿಂದ ಬರುತ್ತಿತ್ತು. ಆ ವೇಳೆ ಒಂದು ಲೆಕ್ಕಾಚಾರದ ಪ್ರಕಾರ ಮಕ್ಕಳು ಶೇ.80ರಷ್ಟು ಆಟಿಕೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೆವು.
ಈ ವಿಚಾರವನ್ನು 2020ರ ವೇಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ "ಮನ್ ಕಿ ಬಾತ್"ನಲ್ಲಿ ಭಾರತಕ್ಕೆ ಜಗತ್ತಿನ 'ಟಾಯ್ ಹಬ್' ಆಗುವ ಎಲ್ಲ ಸಾಮರ್ಥ್ಯವೂ ಇದೆ ಎಂದು ಹೇಳಿದ್ದರು. ಜಾಗತಿಕ ಆಟಿಕೆ ಉದ್ಯಮ 7 ಲಕ್ಷ ಕೋಟಿ (ಅಂದು ರೂ.ಗಳಿಗೂ ಹಿರಿದಾಗಿದೆ. ಆದರೆ ಅದರಲ್ಲಿ ಪ್ರಸ್ತುತ ಭಾರತದ ಪಾಲು ಬಹಳ ಕಡಿಮೆ ಇದೆ.

ೈದನ್ನು ನಾವು ಹೆಚ್ಚಿಸಲು ಪ್ರಯತ್ನಿಸಬೇಕು. ಸ್ಟಾರ್ಟಪ್ಗಳು ಈ ಬಗ್ಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದರು. ಬಹುಶಃ ಅದು ಅಕ್ಷರಶಃ ನಿಜ ಆಗುವ ಕಾಲ ಬಂದೇ ಬಿಟ್ಟಿದೆ. ಯಾಕೆಂದರೆ ಇಂದು ಭಾರತೀಯ ಆಟಿಕೆ ಉದ್ಯಮವು ಅಮೇರಿಕಾ, ಇಂಗ್ಲೆಂಡ್ , ಜರ್ಮನಿ, ನೆದರ್ಲ್ಯಾಂಡ್ಸ್, ಡೆನ್ಮಾರ್ಕ್ ಮತ್ತು ಚೀನಾ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಿಗೆ ತನ್ನ ಜಾಗತಿಕ ಅಸ್ತಿತ್ವವನ್ನು ವಿಸ್ತರಿಸಿದೆ.
ಬೆಳೆಯುತ್ತಿರುವ ಭಾರತೀಯ ಆಟಿಕೆ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶಕ್ಕೆ ಅನುಗುಣವಾಗಿ ನವದೆಹಲಿಯಲ್ಲಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ (ಡಿಪಿಐಐಟಿ) ಆಯೋಜಿಸಿದ್ದ "ಫ್ಲಿಪ್‌ಕಾರ್ಟ್ ಮತ್ತು ಭಾರತೀಯ ಆಟಿಕೆ ಉದ್ಯಮದೊಂದಿಗೆ ಕಾರ್ಯಾಗಾರ"ದಲ್ಲಿ ಭಾಗವಹಿಸಿ ಮಾತನಾಡಿದ ಡಿಪಿಐಐಟಿಯ ಜಂಟಿ ಕಾರ್ಯದರ್ಶಿ ಸಂಜೀವ್" ಭಾರತ ಪ್ರಸ್ತುತ 100 ಕ್ಕೂ ಹೆಚ್ಚು ದೇಶಗಳಿಗೆ ತನ್ನ ಆಟಿಕೆ ರಪ್ತು ಮಾಡುತ್ತಿವೆ. ಆಟಿಕೆ ತಯಾರಕರ ಮುಂದಿನ ಹಂತವೆಂದರೆ ಆನ್‌ಲೈನ್ ಮಾಧ್ಯಮಗಳ ಪರಿಣಾಮಕಾರಿ ಬಳಕೆಯ ಮೂಲಕ ಅಂತರರಾಷ್ಟ್ರೀಯ ಗ್ರಾಹಕರನ್ನು ತಲುಪುವುದು" ಎಂದು ಹೇಳಿದ್ದಾರೆ.
ಭಾರತೀಯ ಆಟಿಕೆ ತಯಾರಕರು ಮತ್ತು ಇ-ಚಿಲ್ಲರೆ ದೈತ್ಯ ಫ್ಲಿಪ್‌ಕಾರ್ಟ್ ಜಂಟಿ ಕಾರ್ಯಾಗಾರವನ್ನು ಉದ್ದೇಶಿಸಿ ಸಂಜೀವ್ "ಭಾರತದ ಆಟಿಕೆ ಉದ್ಯಮದ ಯಶಸ್ಸು ಹೆಚ್ಚಾಗುತ್ತಿರುವ ರಫ್ತುಗಳಲ್ಲಿ ಪ್ರತಿಫಲಿಸುತ್ತದೆ, ಇದು ಉತ್ಪಾದನಾ ಪರಿಸರ ವ್ಯವಸ್ಥೆಯ ದೃಢತೆ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ." ಎಂದು ಹೇಳಿದರು.
ಈ ಕಾರ್ಯಾಗಾರ ಭಾರತೀಯ ಆಟಿಕೆ ಉದ್ಯಮದ ಬೆಳವಣಿಗೆಯನ್ನು ಹೆಚ್ಚಿಸಲು ಇ-ಕಾಮರ್ಸ್ ಮಾರುಕಟ್ಟೆಯಿಂದ ಉದಯೋನ್ಮುಖ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ವಿಶೇಷ ಗಮನ ಹರಿಸಲಾಯಿತು.
ಡಿಪಿಐಐಟಿಯ ಕಾರ್ಯದರ್ಶಿ, ರಾಜೇಶ್ ಕುಮಾರ್ ಸಿಂಗ್ ಮಾತನಾಡಿ" ಆಟಿಕೆ ಉದ್ಯಮಕ್ಕೆ ಅತ್ಯುತ್ತಮ ಪರಿಸರ ವ್ಯವಸ್ಥೆಯನ್ನು ರಚಿಸುವ ಬಲವಾದ ಬದ್ಧತೆಯಿಂದ ಸರ್ಕಾರವು 'ಮೇಡ್ ಇನ್ ಇಂಡಿಯಾ' ಆಟಿಕೆಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸುವ ದೀರ್ಘಾವಧಿಯ ದೃಷ್ಟಿಯೊಂದಿಗೆ ಟಾಯ್ ವಲಯವನ್ನು ಚಾಂಪಿಯನ್ ವಲಯಗಳಲ್ಲಿ ಒಂದು ಎಂದು ಗುರುತಿಸಿದೆ ಎಂದು ಹೇಳಿದ್ದಾರೆ.
ಫ್ಲಿಪ್‌ಕಾರ್ಟ್ ಮತ್ತು ಇಂಡಿಯನ್ ಟಾಯ್ ಇಂಡಸ್ಟ್ರಿಯ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಾಗಾರವು ಸ್ವದೇಶದ ಆಟಿಕೆ ತಯಾರಕರಿಗೆ ಆನ್‌ಲೈನ್ ಮಾರಾಟದ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಮಾತ್ರವಲ್ಲದೇ ಇದರಿಂದಾಗಿ "ಟಾಯ್‌ಕಾನಮಿ"(Toyconomy) ಅನ್ನು ನಿರ್ಮಿಸುವತ್ತ ಭಾರತೀಯ ಆಟಗಾರರಿಗೆ ಮುಂದಡಿ ಇಡಲು ಸಹಾಯವಾಯಿತು.
ಆಟಿಕೆ ಉದ್ಯಮದ ಅಂದಾಜಿನ ಪ್ರಕಾರ, 2014-15 ರಿಂದ 2022-23 ರ ನಡುವೆ ಆಟಿಕೆಗಳು, ಗೇಮ್ಸ್ ಮತ್ತು ಕ್ರೀಡಾ ಸಾಮಗ್ರಿಗಳ ಭಾರತೀಯ ರಫ್ತುಗಳು ಶೇಕಡಾ 239 ರಷ್ಟು ಜಿಗಿತ ಕಂಡಿದ್ದು ಇದೇ ಅವಧಿಯಲ್ಲಿ ಇವುಗಳ ಆಮದು ಶೇಕಡಾ 52 ರಷ್ಟು ಕಡಿಮೆಯಾಗಿದೆ. ಇದಲ್ಲದೆ, ವರದಿಯ ಪ್ರಕಾರ ಪ್ರಸ್ತುತ ಉದ್ಯಮದ ಮಾರುಕಟ್ಟೆ ಗಾತ್ರ USD 1.7 ಬಿಲಿಯನ್ ಆಗಿದ್ದು 2032 ರ ವೇಳೆಗೆ 10.5 ಶೇಕಡಾ ವಾರ್ಷಿಕ ಬೆಳವಣಿಗೆ ದರದೊಂದಿಗೆ USD 4 ಬಿಲಿಯನ್ ತಲುಪುವ ನಿರೀಕ್ಷೆಯಿದೆ.


Click it and Unblock the Notifications