ಈ 2025ನೇ ವರ್ಷ ಇತಿಹಾಸದ ಪುಟದಲ್ಲಿ ಸೇರುತ್ತದೆ. ಏಕೆಂದರೆ 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳಕ್ಕೆ, ಈ ವರ್ಷ ಸಾಕ್ಷಿಯಾಗಿದೆ. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಕೋಟ್ಯಂತರ ಜನ ಮಿಂದೆದ್ದಿದ್ದಾರೆ. ಪರಮೇಶ್ವರನಿಗೆ ತಲೆಬಾಗಿ ತ್ರಿವೇಣಿ ಸಂಗಮದಲ್ಲಿ ಪಾಪ ಕಳೆದುಕೊಂಡು, ಪುಣ್ಯದ ಹಾದಿ ಬೇಡಿದ್ದಾರೆ. ಹಲವು ದುರ್ಘಟನೆಗಳಿಗೆ ಸಾಕ್ಷಿಯಾದರೂ ಈ ವರ್ಷ ನಡೆದ ಕುಂಭಮೇಳ, ದೊಡ್ಡ ಮೈಲಿಗಲ್ಲನ್ನೇ ಸೃಷ್ಟಿಸಿದೆ.
ಇನ್ನು ಈ ಕುಂಭಮೇಳ ಧಾರ್ಮಿಕ ಆಚರಣೆಯೇ ಆಗಿದ್ದರೂ, ಆದಾಯ ಗಳಿಕೆ, ಅಭಿವೃದ್ಧಿಗೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಈ ವರ್ಷದ ಜನವರಿ 13ರಂದು ಪ್ರಾರಂಭವಾದ ಕುಂಭಮೇಳ, ಇಂದು ಸೇರಿ 45 ದಿನಗಳನ್ನು ಪೂರೈಸಿದೆ. ಶಿವರಾತ್ರಿ ದಿನವಾದ ಇಂದು ಈ ಕುಂಭಮೇಳದ ಕೊನೆಯ ದಿನ. ಇಲ್ಲಿ ಈವರೆಗೂ 65 ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡಿ, ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದರಿಂದ ಉತ್ತಮ ಆದಾಯವೂ ಗಳಿಕೆಯಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರದಿಂದ ಈ ಕುಂಭಮೇಳ, ಉತ್ತರಪ್ರದೇಶವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯತ್ತ ಮುನ್ನಡೆಸಿದೆ.

ನಿಜಕ್ಕೂ ಇದು ಇಡೀ ಜಗತ್ತೇ ತಿರುಗಿ ನೋಡುವ ಬೆಳವಣಿಗೆಯಾಗಿದೆ. ಉತ್ತರಪ್ರದೇಶದ ಗತ್ತು ಈಗ ಇಡೀ ಜಗತ್ತಿಗೆ ಗೊತ್ತು ಎನ್ನುವಂತಾಗಿದೆ. ಭಾರತೀಯರಷ್ಟೇ ಅಲ್ಲದೇ ವಿದೇಶಿಗರೂ ಈ ಕುಂಭಮೇಳಕ್ಕೆ ಮಾರುಹೋಗಿದ್ದರು. ಇಲ್ಲಿನ ಆಚರಣೆಯನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿದರು. ಇದೆಲ್ಲದರಿಂದ ಉತ್ತರ ಪ್ರದೇಶದ ಆರ್ಥಿಕತೆಯು ಬಲಿಷ್ಠವಾಗಿದೆ.
1. 3 ಲಕ್ಷ ಕೋಟಿ ರೂ. ಆದಾಯ..ಶೀಘ್ರದಲ್ಲೇ ಹೂಡಿಕೆ ಆರಂಭ..!
ಕುಂಭಮೇಳದಿಂದ ಉತ್ತರಪ್ರದೇಶದ ಆರ್ಥಿಕತೆ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಾಗಿದೆ. ಅಲ್ಲದೇ ಶೀಘ್ರದಲ್ಲೇ ರಾಜ್ಯಕ್ಕೆ ಈ ಆದಾಯದ ಕೊಡುಗೆ ಸಿಗಲಿದೆ ಎಂದು, ಯುಪಿ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಹೇಗೆಂದರೆ ವಿವಿಧ ವಲಯಗಳ ಉದ್ಯಮಿಗಳು ಈ ಭವ್ಯ ಕುಂಭಮೇಳಕ್ಕೆ ಆಗಮಿಸಿದ್ದು, 2 ಲಕ್ಷ ಕೋಟಿ ರೂ.ಗಳ ವ್ಯಾಪಾರ ಅವಕಾಶವನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಟೆಕ್ ಸ್ಟಾರ್ಟ್-ಅಪ್‌ಗಳು ಮತ್ತು ಫಿನ್‌ಟೆಕ್ ವಲಯಗಳ ಪ್ರಮುಖ ಹೂಡಿಕೆದಾರರು, ತಮ್ಮ ಮಾರುಕಟ್ಟೆ ಸ್ಥಿತಿಯನ್ನು ವಿಸ್ತರಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ.
2. ಮಹಾಕುಂಭಮೇಳ-2025 ಏಕೆ ವಿಶೇಷ..?
2025ರ ಕುಂಭಮೇಳ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗದು. ನಾಲ್ಕು ಗ್ರಹಗಳ ಅಪರೂಪದ ಜೋಡಣೆಯಿಂದಾಗಿ, 144 ವರ್ಷಗಳಿಗೊಮ್ಮೆ ಈ ಕುಂಭಮೇಳ ಆಚರಿಸಲಾಗುತ್ತದೆ. ಇದು ಎಲ್ಲ ಕುಂಭ ಕೂಟಗಳಲ್ಲಿ ಅತ್ಯಂತ ಪವಿತ್ರವಾದ ಕುಂಭವಾಗಿದೆ. ಇದು ಅರ್ಧ ಕುಂಭ ಮತ್ತು ಪೂರ್ಣ ಕುಂಭಗಳ ಮಹತ್ವವನ್ನು ಮೀರಿಸುತ್ತದೆ.
ದೇಶದಲ್ಲಿ ನಾಲ್ಕು ಪವಿತ್ರ ಸ್ಥಳಗಳಾದ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಅಥವಾ ನಾಸಿಕ್ ಪೈಕಿ, ಯಾವುದಾದರೂ ಒಂದು ಸ್ಥಳದಲ್ಲಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತಿತ್ತು. ಆದರೆ ಈ ಬಾರಿ ನಡೆದ ಕುಂಭಮೇಳ ಅವೆಲ್ಲಕ್ಕಿಂತ ಭಿನ್ನವಾಗಿದೆ. ಈ ಮಹಾಕುಂಭವು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನಡೆಯುವ ಕಾರ್ಯಕ್ರಮವಾಗಿದೆ.
3. ಮಹಾಕುಂಭಮೇಳ-2025 ಸುತ್ತ ವಿವಾದದ ಅಲೆಗಳು..!
ಇನ್ನು ಈ ಮಹಾಕುಂಭಮೇಳ ಐತಿಹಾಸಿಕ ಘಟನೆಗಳಿಗೆಷ್ಟು ಸಾಕ್ಷಿಯಾಯಿತೋ, ಅಷ್ಟೇ ವಿವಾದಗಳಿಗೂ ಗುರಿಯಾಯಿತು. ಪ್ರಯಾಗ್‌ರಾಜ್ ಮತ್ತು ದೆಹಲಿ ನಿಲ್ದಾಣಗಳಲ್ಲಿ ನಡೆದ ಕಾಲ್ತುಳಿತ ದೊಡ್ಡ ದುರಂತಕ್ಕೆ ಸಾಕ್ಷಿಯಾಯಿತು. ಎಂದರೆ ಈ ಕಾಲ್ತುಳಿತದಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡರು. ಇದನ್ನು ಉಲ್ಲೇಖಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೃತ್ಯು ಕುಂಭ ಎಂದು ಕರೆದರು.
ಅವರು ಹೇಳಿದ್ದೇನೆಂದರೆ ಕುಂಭಮೇಳಕ್ಕೆ ಇಷ್ಟೊಂದು ಜನರು ಬರುತ್ತಾರೆ ಎಂದು ತಿಳಿದ ಮೇಲೆ, ಅದಕ್ಕಾಗಿ ಒಂದು ಯೋಜನೆಯನ್ನು ರೂಪಿಸಬೇಕಿತ್ತು. ಅದನ್ನು ಮಾಡದೇ ನೀವು ಸುಳ್ಳು ಪ್ರಚಾರವನ್ನು ಹರಡಲಾಯಿತು. 144 ವರ್ಷಗಳಿಗೊಮ್ಮೆ ನಡೆಯುತ್ತದೆ ಎಂಬ ಮಾತು ಸುಳ್ಳು ಎಂದುಬಿಟ್ಟು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಸುವೇಂಧು ಅಧಿಕಾರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದರು. ಅವರು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸನಾತನ ಧರ್ಮದ ಪವಿತ್ರ ಘಟನೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಿರ್ವಹಣೆ ಮತ್ತು ಆತಿಥ್ಯ ತತ್ವಗಳನ್ನು ಅನುಸರಿಸಲಿಲ್ಲ... ಜನರು ಸತ್ತಾಗಲೂ ಅವರು ಅದನ್ನು ಮರೆಮಾಡಲು ಪ್ರಯತ್ನಿಸಿದರು, ಅದು ಗಂಭೀರ ಅಪರಾಧವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಅದನ್ನು ಹೆಸರುಗಳಿಂದ ಕರೆದರೆ, ನಾವು ಅದನ್ನು ವಿರೋಧಿಸಲು ಸಾಧ್ಯವಾಗುವುದಿಲ್ಲ" ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದರು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications