ಹೂಡಿಕೆಯಲ್ಲಿ ಮಹಿಳೆಯರು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಹಾಗೂ ಮಹಿಳೆಯರ ಸಬಲೀಕರಣ ಮಾಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ. ಸರ್ಕಾರಿ ಉಳಿತಾಯ ಪ್ರಚಾರ ಕಾಯಿದೆ, 1873 ರ ಅಡಿಯಲ್ಲಿ, ಭಾರತ ಸರ್ಕಾರವು (GOI) ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC), 2023 ಅನ್ನು ಕೇಂದ್ರ ಬಜೆಟ್ 2023-24 ರಲ್ಲಿ ಪರಿಚಯಿಸಿದೆ.
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣ 2023-24 ರಲ್ಲಿಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಘೋಷಿಸಲಾಗಿದ್ದು, ಇದು ಮಹಿಳೆಯರು ಮತ್ತು ಬಾಲಕಿಯರಿಗಾಗಿ ಸಣ್ಣ ಉಳಿತಾಯ ಯೋಜನೆಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಇದು ಒಂದು ಬಾರಿಯ ಯೋಜನೆಯಾಗಿದ್ದು 2023 ಏಪ್ರಿಲ್ ನಿಂದ - 2025ರ ಮಾರ್ಚ್ ಅಂದರೆ ಎರಡು ವರ್ಷಗಳವರೆಗೆ ಲಭ್ಯವಿರುವ ಯೋಜನೆಯಾಗಿದೆ.

ಈ ಯೋಜನೆಯಡಿಯಲ್ಲಿ ಕೇವಲ ಮಹಿಳೆಯರು, ಹೆಣ್ಣು ಮಕ್ಕಳು ಮಾತ್ರ ಹೂಡಿಕೆ ಮಾಡಬಹುದಾಗಿದೆ. ಅಪ್ರಾಪ್ತ ಬಾಲಕಿಯರ ಪರವಾಗಿ ಅವರ ಪೋಷಕರು ಈ ಖಾತೆಯನ್ನು ತೆರೆಯಬಹುದಾಗಿದೆ.
ಯೋಜನೆಯ ಪ್ರಮುಖ ಲಕ್ಷಣಗಳು:
ಸುರಕ್ಷಿತ ಮತ್ತು ಆಕರ್ಷಕ: ಎಲ್ಲಾ ಹುಡುಗಿಯರು ಮತ್ತು ಮಹಿಳೆಯರು ತಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಬಹುದು.
ಸೀಮಿತ ಅವಧಿ: ಮಾರ್ಚ್ 31, 2025 ರೊಳಗೆ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು.
ಉತ್ತಮ ಬಡ್ಡಿ ದರ: ವಾರ್ಷಿಕ 7.5% ಬಡ್ಡಿ ದರದೊಂದಿಗೆ ನಿಮ್ಮ ಹಣವು ವೇಗವಾಗಿ ಬೆಳೆಯುತ್ತದೆ.
ನಮ್ಯತೆ: ಕನಿಷ್ಠ ₹1,000/- ನಿಂದ ಗರಿಷ್ಠ ₹2,00,000/- ವರೆಗೆ ಹೂಡಿಕೆ ಮಾಡಬಹುದು.
ಭಾಗಶಃ ಹಿಂಪಡೆಯುವಿಕೆ: ಅಗತ್ಯ ಬಿದ್ದರೆ, ಹೂಡಿಕೆ ಮಾಡಿದ ಮೊತ್ತದ 40% ವರೆಗೆ ಹಿಂಪಡೆಯಬಹುದು.
ಸುಲಭ ಹೂಡಿಕೆ: ಯೋಜನೆಯ ಅವಧಿ ಎರಡು ವರ್ಷಗಳು.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಹೇಗೆ ತೆರೆಯುವುದು?
ಹೆಣ್ಣು ಮಗುವಿನ ಪೋಷಕರು ಅಥವಾ ಮಹಿಳೆಯರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಅಂಚೆ ಕಚೇರಿಗಳು ಮತ್ತು ಅರ್ಹ ಶೆಡ್ಯೂಲ್ ಬ್ಯಾಂಕ್‌ಗಳಲ್ಲಿ ತೆರೆಯಬಹುದು .
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ತೆರೆಯಲು ಅಗತ್ಯವಿರುವ ದಾಖಲೆಗಳು:
ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆ: ಅಗತ್ಯವಿರುವ ಎಲ್ಲಾ ವಿವರಗಳನ್ನು ಪೂರ್ಣಗೊಳಿಸಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿ
ಹೊಸ ಖಾತೆದಾರರಿಗೆ KYC ಫಾರ್ಮ್:KYC ಫಾರ್ಮ್ ಅನ್ನು ಭರ್ತಿ ಮಾಡಿ
ಗುರುತಿನ ಪುರಾವೆ (ಯಾವುದೇ KYC ದಾಖಲೆ):
ಆಧಾರ್ ಕಾರ್ಡ್
ಪಾಸ್ ಪೋರ್ಟ್ ಆಳತೆಯ ಭಾವಚಿತ್ರ
ವಯಸ್ಸಿನ ಪುರಾವೆ
PAN ಕಾರ್ಡ್
ಠೇವಣಿ ಮೊತ್ತ/ಚೆಕ್‌ನೊಂದಿಗೆ ಪೇ ಇನ್ ಸ್ಲಿಪ್
ಆರು ತಿಂಗಳ ಮುಚ್ಚಬಹುದು: ಮಹಿಳಾ ಸನ್ಮಾನ್ ಪತ್ರವನ್ನು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡದೆ ಖಾತೆ ತೆರೆದ ದಿನಾಂಕದಿಂದ ಆರು ತಿಂಗಳ ನಂತರ ಮುಚ್ಚಬಹುದು. ಇಂತಹ ಸಂದರ್ಭಗಳಲ್ಲಿ, ಅಸಲು ಮೊತ್ತದ ಮೇಲೆ ಶೇಕಡಾ 5.5 ರ ಬಡ್ಡಿ ದರವು ಅನ್ವಯವಾಗುತ್ತದೆ.
ಖಾತೆದಾರರ ಮೃತಪಟ್ಟರೆ: ಖಾತೆದಾರನ ಮರಣದ ಸಂದರ್ಭದಲ್ಲಿ, ಖಾತೆಯನ್ನು ಮುಚ್ಚಬಹುದು. ಅಂತಹ ಸಂದರ್ಭದಲ್ಲಿ, ಅಸಲು ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ.
ಇತರ ಕಾರಣಗಳು: ಖಾತೆಯನ್ನು ಇತರ ಅತ್ಯಂತ ಸಹಾನುಭೂತಿಯ ಆಧಾರದ ಮೇಲೆ ಅಂದರೆ ಉದಾಹರಣೆ ಖಾತೆದಾರರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೆ, ಪೋಷಕರು ಮೃತರಾದರೆ ೈತ್ಯಾದಿ ಕಾರಣಗಳ ಸಂದರ್ಭ ಮುಚ್ಚಬಹುದು. ಈ ಕಾರಣಗಳಿದ್ದರೆ ಅಸಲು ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ.


Click it and Unblock the Notifications