ಬ್ಯಾಂಕ್ ಖಾತೆಗೆ ಹೆಸರಿಸಬಹುದಾದ ನಾಮಿನಿಗಳ ಸಂಖ್ಯೆ ಹೆಚ್ಚಳ ಸೇರಿ ನಿಯಮಗಳಲ್ಲಿ ಹಲವು ಬದಲಾವಣೆ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ- 2024 ಅನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದರನ್ವಯ ಇನ್ಮುಂದೆ ಬ್ಯಾಂಕ್ ಖಾತೆ ಹೊಂದಿರುವವರು ನಾಲ್ವರನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುವುದು ಸೇರಿ ಹಲವು ಸಂಗತಿಗಳಲ್ಲಿ ಬದಲಾವಣೆ ತರಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಇನ್ನು ಕಳೆದ ಆರು ದಶಕದಿಂದಲೂ ಕಂಪನಿಗಳ ನಿರ್ದೇಶಕರ ಆಸ್ತಿ ಮೌಲ್ಯದ ಮಿತಿ ಹೆಚ್ಚಿಸಿರಲಿಲ್ಲ. ಮಿತಿಯನ್ನು ಹೆಚ್ಚಳ ಮಾಡುವ ಅವಕಾಶವನ್ನು ಹಾಗೂ ಸಬ್ ಸ್ಯಾನ್ಸಿಯಲ್ ಇಂಟರೆಸ್ಟ್ ಅನ್ನು ಮರುವ್ಯಾಖ್ಯಾನ ಮಾಡುವ ಪ್ರಸ್ತಾವವನ್ನು ಕೂಡ ಮಸೂದೆ ಒಳಗೊಂಡಿದೆ. ಯಾವುದೇ ಕಂಪನಿಯಲ್ಲಿ ನಿರ್ದೇಶಕರು 75 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಆಸ್ತಿಯ ಒಡೆತನ ಹೊಂದಿದ್ದರೆ ಅದನ್ನು ಸಬ್‌ಸ್ಮಾನ್ನಿಯಲ್ ಇಂಟರೆಸ್ಟ್ ಎಂದು ನಿರ್ಧರಿಸಲಾಗುತ್ತದೆ. ಅಂತಹ ನಿರ್ದೇಶಕರಿಗೆ ಸಾಲ ನೀಡಲು ಆಡಳಿತ ಮಂಡಳಿಯ ಅನುಮೋದನೆ ಪಡೆಯುವುದು ಕಡ್ಡಾಯವಾಗಲಿದೆ. ಇನ್ನು ಪ್ರಸ್ತಾವಿತ ತಿದ್ದುಪಡಿಯು ನಿರ್ದೇಶಕರು 12 ಕೋಟಿ ಮೊತ್ತದ ಷೇರುಗಳ ಒಡೆತನ ಅಥವಾ ಮಾಲಿಕತ್ವ ಹೊಂದಲು ಅವಕಾಶ ನೀಡುತ್ತದೆ.

ನಾಲ್ಕು ನಾಮನಿರ್ದೇಶಿತರ ಹೊಂದಲು ಅವಕಾಶ
ಪ್ರಸ್ತುತ ಒಂದು ಬ್ಯಾಂಕ್ ಖಾತೆಗೆ ಒಬ್ಬರು ನಾಮಿನಿಯನ್ನಷ್ಟೇ ಹೆಸರಿಸಲು ಅವಕಾಶವಿತ್ತು. ಈ ತಿದ್ದುಪಡಿಯಿಂದ ಇನ್ಮುಂದೆ ಖಾತೆದಾರರು ತಮ್ಮ ಬ್ಯಾಂಕ್ ಖಾತೆಗೆ ನಾಲ್ವರು ವಾರಸುದಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ತಿದ್ದುಪಡಿಯಿಂದ ಠೇವಣಿದಾರರಿಗೆ ಮತ್ತು ಅವರ ಕಾನೂನು ಉತ್ತರಾಧಿಕಾರಿಗಳಿಗೆ ಹೆಚ್ಚಿನ ಅನುಕೂಲವನ್ನು ನೀಡುವ ಗುರಿ ಹೊಂದಿದೆ. ವಿಶೇಷವಾಗಿ ಠೇವಣಿಗಳು, ಸುರಕ್ಷತಾ ಲಾಕರ್‌ಗಳಿಗೆ ಸಂಬಂಧಿಸಿದಂತೆ ಇವು ಹೆಚ್ಚು ಸಹಕಾರಿಯಾಗಲಿದೆ. ಮೊದಲ ನಾಮಿನಿ ಹಣವನ್ನು ಕ್ಲೈಮ್ ಮಾಡಲು ಲಭ್ಯವಿಲ್ಲದಿದ್ದರೆ, ಎರಡನೇ ನಾಮಿನಿಯನ್ನು ಕರೆಯಲಾಗುವುದು,ಬಳಿಕ ಮೂರನೆಯವರು ಹೀಗೆ ಸಾಗುತ್ತದೆ.
ಇನ್ನು ಈ ಮಸೂದೆಯು ಬ್ಯಾಂಕ್ ಖಾತೆದಾರರು ತಮ್ಮ ಖಾತೆಗಳಲ್ಲಿ ನಾಲ್ಕು ನಾಮನಿರ್ದೇಶಿತರನ್ನು ಹೊಂದಲು ಅನುಮತಿ ನೀಡುತ್ತದೆ. ನಿರ್ದೇಶಕತ್ವಗಳಿಗೆ ಗಣನೀಯ ಬಡ್ಡಿ ಮರುವ್ಯಾಖ್ಯಾನಕ್ಕೆ ಸಂಬಂಧಿಸಿದ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ. ಇದು ಪ್ರಸ್ತುತ ಮಿತಿಯಾದ 5 ಲಕ್ಷ ರೂ.ಗೆ ಬದಲಾಗಿ 2 ಕೋಟಿ ರೂ.ಗೆ ಹೆಚ್ಚಾಗಬಹುದು. ಇದು ಸಂವಿಧಾನದ (ತೊಂಬತ್ತೇಳನೇ ತಿದ್ದುಪಡಿ) ಕಾಯಿದೆ 2011 ಕ್ಕೆ ಹೊಂದಿಕೆಯಾಗುವಂತೆ ಸಹಕಾರಿ ಬ್ಯಾಂಕ್‌ಗಳಲ್ಲಿನ ನಿರ್ದೇಶಕರ (ಅಧ್ಯಕ್ಷರು ಮತ್ತು ಪೂರ್ಣ ಸಮಯದ ನಿರ್ದೇಶಕರನ್ನು ಹೊರತುಪಡಿಸಿ) ಎಂಟು ವರ್ಷಗಳಿಂದ 10 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ. ಒಮ್ಮೆ ಜಾರಿಗೆ ಬಂದ ನಂತರ, ಮಸೂದೆಯು ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು ರಾಜ್ಯ ಸಹಕಾರಿ ಬ್ಯಾಂಕ್‌ನ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಶಾಸನಬದ್ಧ ಲೆಕ್ಕ ಪರಿಶೋಧಕರಿಗೆ ಪಾವತಿಸಬೇಕಾದ ಸಂಭಾವನೆಯನ್ನು ನಿರ್ಧರಿಸುವಲ್ಲಿ ಬ್ಯಾಂಕ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲು ಮಸೂದೆಯು ಪ್ರಯತ್ನಿಸುತ್ತದೆ. ಅಲ್ಲದೆ ಎರಡನೇ ಮತ್ತು ನಾಲ್ಕನೇ ಶುಕ್ರವಾರದ ಬದಲಿಗೆ ಪ್ರತೀ ತಿಂಗಳ 15 ಮತ್ತು ಕೊನೆಯ ದಿನಕ್ಕೆ ನಿಯಂತ್ರಕ ಅನುಸರಣೆಗಾಗಿ ಬ್ಯಾಂಕ್‌ಗಳಿಗೆ ವರದಿ ಮಾಡುವ ದಿನಾಂಕಗಳನ್ನು ಮರು ವ್ಯಾಖ್ಯಾನಿಸಲು ಇದು ಪ್ರಯತ್ನಿಸುತ್ತದೆ. ಉದ್ದೇಶಿತ ತಿದ್ದುಪಡಿಗಳು ಬ್ಯಾಂಕಿಂಗ್ ವಲಯದಲ್ಲಿ ಆಡಳಿತವನ್ನು ಬಲಪಡಿಸುತ್ತದೆ ಮತ್ತು ಹೂಡಿಕೆದಾರರ ನಾಮನಿರ್ದೇಶನ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುತ್ತದೆ ಎಂದು ಸೀತಾರಾಮನ್ ಅವರು ತಿಳಿಸಿದ್ದಾರೆ. ಇನ್ನು ಠೇವಣಿದಾರರು ಸತತ ಅಥವಾ ಏಕಕಾಲಿಕ ನಾಮನಿರ್ದೇಶನ ಸೌಲಭ್ಯದ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ ಲಾಕರ್ ಹೊಂದಿರುವವರು ಸತತ ನಾಮನಿರ್ದೇಶನವನ್ನು ಮಾತ್ರ ಹೊಂದಿರುತ್ತಾರೆ. "ನಮ್ಮ ಬ್ಯಾಂಕ್‌ಗಳನ್ನು ಸುರಕ್ಷಿತವಾಗಿ, ಸ್ಥಿರವಾಗಿ, ಆರೋಗ್ಯಕರವಾಗಿರಿಸುವುದು ಉದ್ದೇಶವಾಗಿದೆ ಮತ್ತು 10 ವರ್ಷಗಳ ನಂತರ ನೀವು ಫಲಿತಾಂಶವನ್ನು ನೋಡುತ್ತಿದ್ದೀರಿ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಸ್ಥಿರವಾಗಿರುವ ಬ್ಯಾಂಕ್‌ಗಳು
ಇನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ತೀವ್ರವಾಗಿ ವಿರೋಧಿಸಿದರೂ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರದ ನಿಲುವುಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಸೀತಾರಾಮನ್, 2014 ರಿಂದ ಸರ್ಕಾರ ಮತ್ತು ಆರ್‌ಬಿಐ ಅತ್ಯಂತ ಜಾಗರೂಕತೆಯಿಂದ ಬ್ಯಾಂಕ್‌ಗಳು ಸ್ಥಿರವಾಗಿದೆ ಎಂದು ಹೇಳಿದರು. ನಮ್ಮ ಬ್ಯಾಂಕ್‌ಗಳನ್ನು ಸುರಕ್ಷಿತವಾಗಿ, ಸ್ಥಿರವಾಗಿ, ಆರೋಗ್ಯಕರವಾಗಿರಿಸುವುದು ಮತ್ತು 10 ವರ್ಷಗಳ ನಂತರ ನೀವು ಫಲಿತಾಂಶವನ್ನು ನೋಡುತ್ತಿದ್ದೀರಿ ಎಂದು ಸರ್ಕಾರ ಕಳೆದ 10 ವರ್ಷಗಳಲ್ಲಿ ತೆಗೆದುಕೊಂಡ ಆರ್ಥಿಕ ನೀತಿಗಳನ್ನು ಬೊಟ್ಟು ಮಾಡಿ ತಿಳಿಸಿದರು. ಪ್ರಸ್ತಾವಿತ ತಿದ್ದುಪಡಿಗಳು ಬ್ಯಾಂಕಿಂಗ್ ವಲಯದಲ್ಲಿ ಆಡಳಿತವನ್ನು ಬಲಪಡಿಸುತ್ತದೆ ಮತ್ತು ಹೂಡಿಕೆದಾರರ ನಾಮನಿರ್ದೇಶನ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications