ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಕೇಂದ್ರ ಬಜೆಟ್ 2025ರಲ್ಲಿ ಕೃಷಿ ವಲಯಕ್ಕೆ ಕೆಲ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಈ ಪೈಕಿ ಪ್ರಮುಖವಾಗಿ ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆಯೂ ಒಂದು. ವಿಶೇಷವಾಗಿ ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ಈ ಸೂಪರ್‌ಫುಡ್‌ನ ದೊಡ್ಡ ಸಾಮರ್ಥ್ಯವನ್ನು ಉಲ್ಲೇಖಿಸಿದ ನಂತರ ವಿಚಾರ ವ್ಯಾಪಾಕ ಪ್ರಚಾರ ಪಡೆದಿತ್ತು.
ಅಂದಹಾಗೆ ಮಖಾನಾವನ್ನು ತಾವರೆ ಬೀಜ ಎಂದು ಹೇಳುವುದುಂಟು. ಇದು ಗೊರ್ಗಾನ್ ಸಸ್ಯದ ಬೀಜದ ಉತ್ಪನ್ನವಾಗಿದೆ, Euryale ferox ಇದು ಅದರ ವೈಜ್ಞಾನಿಕ ಹೆಸರು. ಇದು ನೀರಿನ ಲಿಲ್ಲಿ ಜಾತಿಯಾಗಿದೆ, ಆದ್ದರಿಂದ ಇದನ್ನು ಲೋಟಸ್ ಸೀಡ್ ಎಂದೂ ಕರೆಯುತ್ತಾರೆ.

ಮಖಾನಾ ಮಂಡಳಿ ಮಖಾನಾ ಬೆಳೆಗಾರರಿಗೆ ಮತ್ತು ಉದ್ಯಮಿಗಳಿಗೆ ಸಂಶೋಧನೆ, ಅಭಿವೃದ್ಧಿ ಮತ್ತು ಮಾರುಕಟ್ಟೆ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮಖಾನಾವು ಬಿಹಾರದ ಪ್ರಮುಖ ಬೆಳೆಯಾಗಿದ್ದು, ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತದೆ. ಈ ಮಂಡಳಿಯ ರಚನೆಯು ಮಖಾನಾ ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪೌಷ್ಟಿಕಾಂಶದ ಮೌಲ್ಯಕ್ಕೆ ಹೆಸರುವಾಸಿಯಾದ ಮಖಾನಾವನ್ನು ಬಿಹಾರದಲ್ಲಿ ವ್ಯಾಪಕವಾಗಿ ಉತ್ಪಾದಿಸಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಸೀತಾರಾಮನ್ ಅವರು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಯಶಸ್ಸನ್ನು ಒತ್ತಿ ಹೇಳಿದ್ದು ಇದು ಮಖಾನಾ ಉತ್ಪಾದಕರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡಿದೆ. ಹೆಚ್ಚುವರಿಯಾಗಿ, ಮಖಾನಾ ಸಂಶೋಧನಾ ಕೇಂದ್ರಕ್ಕೆ ರಾಷ್ಟ್ರೀಯ ಸಂಸ್ಥೆಯ ಸ್ಥಾನಮಾನವನ್ನು ನೀಡಲಾಗಿದೆ ಮತ್ತು ಉತ್ಪನ್ನವು ಭೌಗೋಳಿಕ ಸೂಚಕ (GI) ಟ್ಯಾಗ್ ಅನ್ನು ಪಡೆದುಕೊಂಡಿದೆ, ಅದರ ಜಾಗತಿಕ ಮನ್ನಣೆಯನ್ನು ಹೆಚ್ಚಿಸುತ್ತದೆ.
ನಿಖಿಲ್ ಕಾಮತ್ ಪೋಸ್ಟ್ ನಲ್ಲಿ ಹೇಳಿದ್ದೇನು?
ಬಜೆಟ್‌ಗೆ ಕೆಲವು ದಿನಗಳ ಮೊದಲು, ಅಂದರೆ ಜನವರಿ 17 ರಂದು, ನಿಖಿಲ್ ಕಾಮತ್ X ನಲ್ಲಿ ಮಖಾನಾದ ಬಗ್ಗೆ ಒಂದು ಒಳನೋಟವುಳ್ಳ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದರಲ್ಲಿ ಮಖಾನಾವನ್ನು 6,000 ಕೋಟಿ ರೂ. ಉದ್ಯಮವಾಗಿ ಬೆಳೆಯುವ ಸಾಮರ್ಥ್ಯವಿರುವ ಒಂದು ಸೂಪರ್‌ಫುಡ್ ಎಂದು ಬಣ್ಣಿಸಿದರು.
" ಜಗತ್ತಿಗೆ ಮಾರಾಟ ಮಾಡುವ ಒಂದು ಭಾರತೀಯ ಬ್ರ್ಯಾಂಡ್ ಆಗಿ ಇಲ್ಲಿ ನಿಜವಾಗಿಯೂ ಬಹು ದೊಡ್ಡ ಬ್ರ್ಯಾಂಡ್ ಅನ್ನು ನಿರ್ಮಿಸಲು ಅವಕಾಶವಿದೆ. ವೈಯಕ್ತಿಕವಾಗಿ, ನಾನು ಮಖಾನಾದಲ್ಲಿ ಮುಳುಗಿದ್ದೇನೆ" ಎಂದು ಕಾಮತ್ ಬರೆದುಕೊಂಡಿದ್ದರ್. ಜೊತೆಗೆ ಫಾಕ್ಸ್‌ನಟ್‌ಗಳ ಆರೋಗ್ಯ ಪ್ರಯೋಜನಗಳು ಮತ್ತು ಅವುಗಳ ಜಾಗತಿಕ ಮಾರುಕಟ್ಟೆ ಸಾಮರ್ಥ್ಯವನ್ನು ವಿವರಿಸುವ ಕೆಲವು ಇಮೇಜ್ ಗಳನ್ನು ನೀಡಿದ್ದರು.
ಇದಲ್ಲದೇ ಮಖಾನಾ ರೈತರು ಎದುರಿಸುತ್ತಿರುವ ಸವಾಲುಗಳನ್ನು ಕಾಮತ್ ಬಿಟ್ಟು ಮಾಡಿ ತೋರಿಸಿದ್ದಾರೆ. "ಮಖಾನಾವು ಹೆಚ್ಚಿನ ಇಳುವರಿ ನೀಡುವ ಬೆಳೆಯಲ್ಲ. ಮೊದಲಿಗೆ, ನೀವು ಮುಳ್ಳು ಎಲೆಗಳು ಮತ್ತು ಕೆಸರು ಕೊಳಗಳ ಮೂಲಕ ಬೀಜಗಳನ್ನು ಸಂಗ್ರಹಿಸಬೇಕು, ನಂತರ ಒಣಗಿಸಿ ಹೆಚ್ಚಿನ ಶಾಖದಲ್ಲಿ ಬೀಜಗಳನ್ನು ಕೈಯಿಂದಲೇ ಸಿಡಿಸಬೇಕು" ಎಂದು ಅವರು ಹೇಳಿದರು.
"ಈ ಎಲ್ಲದರಲ್ಲೂ, ಬಹಳಷ್ಟು ಬೆಳೆ ವ್ಯರ್ಥವಾಗುತ್ತದೆ. ಇವುಗಳಲ್ಲಿ, ಕೇವಲ 2 ಪ್ರತಿಶತ ಬೀಜಗಳು ಮಾತ್ರ ರಫ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆ. ಸಂಗ್ರಹಿಸಿದ ಬೀಜಗಳಲ್ಲಿ ಸುಮಾರು 40 ಪ್ರತಿಶತದಷ್ಟು ಮಾತ್ರ ಖಾದ್ಯವಾಗಿತ್ತದೆ "ಎಂದು ಅವರು ಕಾರ್ಯವಿಧಾನದಲ್ಲಿನ ಅಸಮರ್ಥತೆಯನ್ನು ಒತ್ತಿ ಹೇಳಿದರು ಹೆಚ್ಚುವರಿಯಾಗಿ, ಮಖಾನಾ ಸಾಂಪ್ರದಾಯಿಕವಾಗಿ ಬಿಹಾರ-ಕೇಂದ್ರಿತ ಉದ್ಯಮವಾಗಿದ್ದರೂ, ಪ್ರಸ್ತುತ ಅಸ್ಸಾಂ, ಮಣಿಪುರ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಒಡಿಶಾಕ್ಕೆ ಹರಡುತ್ತಿದೆ ಎಂದು ಕಾಮತ್ ಒತ್ತಿ ಹೇಳಿದರು.
ತಮ್ಮ ಬಜೆಟ್ ಮಂಡನೆ ಸಂದರ್ಭದಲ್ಲಿ ಸೀತಾರಾಮನ್ ಅವರು ಮಖಾನಾದಂತಹ ಪೌಷ್ಟಿಕ ಆಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಒತ್ತಿ ಹೇಳಿದರು. "ಹೆಚ್ಚುತ್ತಿರುವ ಆದಾಯದ ಮಟ್ಟಗಳೊಂದಿಗೆ, ಹಣ್ಣುಗಳ ಬಳಕೆ ಕೂಡ ಹೆಚ್ಚುತ್ತಿದೆ ಮತ್ತು ರೈತರಿಗೆ ಸಂಭಾವನೆಯು ರಾಜ್ಯಗಳ ಸಹಯೋಗದೊಂದಿಗೆ ಬೆಳೆಯುತ್ತದೆ. ಬಿಹಾರದಲ್ಲಿ ವಿಶೇಷ ಅವಕಾಶವಿದೆ - ಮಖಾನಾ ರೈತರಿಗೆ ತರಬೇತಿ ಮತ್ತು ಬೆಂಬಲ ನೀಡಲು ರಾಜ್ಯದಲ್ಲಿ ಮಖಾನಾ ಮಂಡಳಿಯನ್ನು ಸ್ಥಾಪಿಸಲಾಗುವುದು, "ಎಂದು ಅವರು ಹೇಳಿದರು.


Click it and Unblock the Notifications