ವಾರಾಂತ್ಯದಲ್ಲಿ ಬೆಂಗಳೂರಿನ ಅನೇಕರು ಔಟಿಂಗ್ ಹೋಗಬೇಕು ಆದರೆ ಅಲ್ಲಿ ನಗರದ ಗದ್ದಲವಿರಬಾರದು, ಪ್ರಶಾಂತವಾಗಿ ದಿನಕಳೆಯಬೇಕು ಎಂದು ಅಂದುಕೊಂಡಿರುತ್ತಾರೆ. ಇದೇ ಕಾರಣಕ್ಕೆ ಬೆಂಗಳೂರಿನಿಂದ ಕೇವಲ 40 ಕಿಮೀ ದೂರದಲ್ಲಿರುವ ರಾಮನಗರದ ಮಂಚನಬೆಲೆ ಅಣೆಕಟ್ಟು ಪ್ರದೇಶಕ್ಕೆ ತೆರಳಿ ಅನೇಕರು ಕಾಲ ಕಳೆದುಬರುತ್ತಾರೆ. ಆದರೆ ಇದೀಗ ಖುಷಿ ಸುದ್ದಿ ಏನೆಂದರೆ ಮಂಚನಬೆಲೆ ಅಣೆಕಟ್ಟನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರವು ₹ 145 ಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಪ್ರವಾಸೋದ್ಯಮ ಯೋಜನೆಯನ್ನು ಘೋಷಿಸಿದೆ.
ದೊಡ್ಡ ಆಲದ ಮರದಿಂದ ಸ್ವಲ್ಪ ಕಿಮೀ ದೂರದಲ್ಲಿ ಅರ್ಕಾವತಿ ನದಿಯ ಅಡ್ಡಲಾಗಿ ಕಟ್ಟಿರುವಂತಹ ಮಂಚನಬೆಲೆ ಅಣೆಕಟ್ಟು ಸೌಂದರ್ಯವನ್ನು ಹತ್ತಿರದಲ್ಲೇ ಇರುವ ಬೆಟ್ಟಗಳ ಮೇಲಿಂದ ಆಸ್ವಾದಿಸಬಹುದು. ಇಲ್ಲಿಗೆ ಬೆಂಗಳೂರು ಮೂಲದ ಸಾಹಸ ಗುಂಪುಗಳು ಜಲಕ್ರೀಡೆಗಳು ಮತ್ತು ಇತರ ಕ್ಯಾಂಪಿಂಗ್ ಚಟುವಟಿಕೆಗಳನ್ನು ನಡೆಸಲು ಹೆಚ್ಚಾಗಿ ಬರುತ್ತಾರೆ. ಇನ್ನು ಸಾಮಾನ್ಯ ಪ್ರವಾಸಿಗರು ಇಲ್ಲಿ ಪಿಕ್ನಿಕ್ ಗಾಗಿ ಸೇರುತ್ತಾರೆ. ಇಂತಹ ನೈಸರ್ಗಿಕ ತಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅಭಿವೃದ್ದಿಪಡಿಸಲು ಸರ್ಕಾರ ಚಿಂತಿಸಿದೆ.

72.3 ಎಕರೆ ವಿಸ್ತೀರ್ಣದ ವ್ಯಾಪಿಸಿರುವ ಈ ಯೋಜನೆಯನ್ನು ಪರಿಸರ-ಪ್ರವಾಸೋದ್ಯಮ, ಸಾಹಸ ಮತ್ತು ವಿರಾಮದ ಅನುಭವಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ವರದಿಯ ಪ್ರಕಾರ, ಮಂಚನಬೆಲೆ ಅಣೆಕಟ್ಟಿನಲ್ಲಿ ಯೋಜಿಸಲಾದ ಪ್ರವಾಸೋದ್ಯಮ ಯೋಜನೆಯು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ಗುರಿಯನ್ನು ಪ್ರಮುಖವಾಗಿ ಹೊಂದಿದೆ. ಒಕ್ಕಲಿಗರ ಪ್ರಾಬಲ್ಯವಿರುವ ರಾಮನಗರದ ಅಭಿವೃದ್ದಿ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ವಿಶೇಷ ಒಲವು ತೋರುತ್ತಾರೆ. ಶಿವಕುಮಾರ್ ಅವರ ಖಾತೆ ಜಲಸಂಪನ್ಮೂಲದ ಇಲಾಖೆ ಅಡಿಯಲ್ಲಿ ಬರುವ ಕಾವೇರಿ ನೀರಾವರಿ ನಿಗಮ ಲಿಮಿಟೆಡ್ ಮಂಚನಬೆಲೆ ಡ್ಯಾಮ್ ನ ಪ್ರವಾಸೋದ್ಯಮ ಸಂಬಂಧಿತ ಸೌಲಭ್ಯಗಳ ಅಭಿವೃದ್ದಿಗೆ ಟೆಂಡರ್ ಆಹ್ವಾನಿಸಿತ್ತು. ಸದ್ಯ ಎರಡು ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ.
ಮಂಚನಬೆಲೆ ಅಣೆಕಟ್ಟಿನ ಸುತ್ತಮುತ್ತ ಪ್ರವಾಸಿ ತಾಣದ ಪ್ರಸ್ತಾವಿತ ಅಭಿವೃದ್ಧಿಯು ಮೂರು ಮುಖ್ಯ ವಲಯಗಳನ್ನು ಒಳಗೊಂಡಿದೆ.ಆಗಮನ ವಲಯ, ಸಾಹಸ ವಲಯ ಮತ್ತು ವಿರಾಮ ವಲಯ.
ಮೊದಲನೆಯದು ಆಗಮನ ವಲಯವಾಗಿದ್ದು, ಇಲ್ಲಿ ಟಿಕೆಟ್‌ಗಳನ್ನು ಪಡೆಯುವ ಸ್ಥಳ, ಮಕ್ಕಳಿಗಾಗಿ ಆಟಿಕೆ ರೈಲು ಮತ್ತು ವಾಹನಗಳನ್ನು ನಿಲ್ಲಿಸಲು ಸುಸಜ್ಜಿತವಾದ 100 ವಾಹನಗಳಿಗೆ ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯ ಇರುತ್ತದೆ. ಎರಡನೆಯ ವಲಯ ಸಾಹಸ ಪ್ರಿಯರಿಗೆ ಸ್ವರ್ಗವಾಗಿದ್ದು, 15.3 ಎಕರೆಗಳಷ್ಟು ವಿಸ್ತಾರವಾಗಿರಲಿದೆ. ಇಲ್ಲಿ ಸ್ಕೇಟಿಂಗ್, ಗೋ-ಕಾರ್ಟಿಂಗ್, ಬೈಕಿಂಗ್, ಕುದುರೆ ಸವಾರಿ, ರಾಕ್ ಕ್ಲೈಂಬಿಂಗ್ ಮತ್ತು ಹೈ-ರೋಪ್ ಕೋರ್ಸ್ ಮತ್ತು ಇನ್ನಿತರ ರೋಮಾಂಚಕಾರಿ ಚಟುವಟಿಕೆಗಳನ್ನು ಆನಂದಿಸಬಹುದು. ಇದಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರದ ಕಿಯೋಸ್ಕ್‌ಗಳು ಮತ್ತು ಹೆಲಿಪ್ಯಾಡ್‌ನೊಂದಿಗೆ ಸಾಂಸ್ಕೃತಿಕ ಗ್ರಾಮವನ್ನು ಒಳಗೊಂಡಿರುತ್ತದೆ .
ಮೂರನೆಯ ಮತ್ತು ಅತಿದೊಡ್ಡ ವಲಯವು ವಿರಾಮ ವಲಯವಾಗಿದ್ದು, 60.4 ಎಕರೆಗಳನ್ನು ಆವರಿಸುತ್ತದೆ. ಇದು ಎಲ್ಲರಿಗೂ ಮುಕ್ತವಾಗಿರುವ ಉದ್ಯಾನವಾಗಿದೆ. ಇಲ್ಲಿ ಗುಲಾಬಿ ಉದ್ಯಾನದಂತಹ ಸುಂದರವಾದ ಉದ್ಯಾನಗಳು ಮತ್ತು ವಿಶ್ರಾಂತಿಗಾಗಿ ಸ್ಥಳಗಳಿವೆ. ಈ ಯೋಜನೆಯಲ್ಲಿ ಪರಿಸರ ಪ್ರವಾಸೋದ್ಯಮ ವಲಯವೂ ಸೇರಿದ್ದು, ಇಲ್ಲಿ ಹೋಟೆಲ್, ರೆಸಾರ್ಟ್, ಸ್ಪಾ ಮತ್ತು ರೆಸ್ಟೋರೆಂಟ್‌ಗಳಂತಹ ಸೌಲಭ್ಯಗಳು ಇರುತ್ತವೆ. ಅತಿ ಎತ್ತರದಲ್ಲಿರುವ ವೀಕ್ಷಣಾ ಡೆಕ್ ಜಲಾಶಯದ ವಿಹಂಗಮ ನೋಟವನ್ನು ಒದಗಿಸುತ್ತದೆ ಮತ್ತು ಬೆಂಗಳೂರಿನ ಸ್ಥಾಪಕ ಕೆಂಪೇಗೌಡರ ಪ್ರತಿಮೆ ಆಯೋಜಿಸುವ ಯೋಜನೆಯೂ ಇದೆ. ಇದಲ್ಲದೇ ಭವಿಷ್ಯದ ಯೋಜನೆಗಳಲ್ಲಿ ಹೌಸ್‌ಬೋಟ್‌ಗಳು ರಾತ್ರಿ ತಂಗುವ ವ್ಯವಸ್ಥೆ ಮತ್ತು ಅರ್ಕಾವತಿ ಕಣಿವೆಯ ರುದ್ರರಮಣೀಯ ನೋಟಗಳನ್ನು ಒದಗಿಸುವ ರೋಪ್‌ವೇ ಸೇರಿವೆ.
ಯೋಜನೆಯು 30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (DBFOT) ಮಾದರಿಯನ್ನು ಅನುಸರಿಸುತ್ತದೆ. ಈ ಅವಧಿ ಮುಗಿದ ನಂತರ, ಸೈಟ್ ಮತ್ತು ಸೌಲಭ್ಯಗಳನ್ನು ಕಾವೇರಿ ನೀರಾವರಿ ನಿಗಮ್ ಲಿಮಿಟೆಡ್ (CNNL) ಗೆ ಹಿಂತಿರುಗಿಸಲಾಗುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications